ಕೃಷಿ ಮಾಡುವ ರೈತನಿಗೆ ಖಂಡಿತವಾಗಿ ಹೆಚ್ಚು ತಾಳ್ಮೆ ಬೇಕು. ಯಾಕೆಂದರೆ ಬಿತ್ತನೆ ಮಾಡಿದ ಬೀಜವು ಮೊಳೆತು ಅದು ಬೆಳೆದು ಹಾಕಿದ ಬೆಳೆ ಕೈ ಸೇರುವ ಹೊತ್ತಿಗೆ ಖಂಡಿತವಾಗಿಯೂ ಬಹಳ ಸಮಯ ತಗಲುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಬೆಳೆಗಳು ವಾರ್ಷಿಕ ಬೆಳೆಗಳಾಗಿದ್ದು ಆ ಆದಾಯದಲ್ಲಿ ರೈತ ವರ್ಷಪೂರ್ತಿ ಬದುಕು ನಡೆಸಬೇಕು
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನೆ ಖರ್ಚು, ಮಕ್ಕಳ ಓದಿನ ಖರ್ಚು, ಆರೋಗ್ಯ ಖರ್ಚು ವೆಚ್ಚಗಳು ಇತ್ಯಾದಿ ಖರ್ಚುಗಳು ಹೇಳಿ ಕೇಳಿ ಬರುವುದಿಲ್ಲ. ಕೆಲವೊಮ್ಮೆ ಆ ವಾರ್ಷಿಕ ಬೆಳೆ ಕೈಕೊಟ್ಟರೆ ಮತ್ತೊಂದು ವರ್ಷದವರೆಗೆ ರೈತನಿಗೆ ಬೇರೊಂದು ಆದಾಯ ಇಲ್ಲದೆ ಸಾಲದ ಸುಳಿಯಲ್ಲಿ ಸಿಲುಕಬೇಕು ಮತ್ತು ಈ ರೀತಿ ಸಾಲ ಹೆಚ್ಚಾಗುವುದರಿಂದ ರೈತ ಆತ್ಮಹತ್ಯೆಗೂ ಶರಣಾಗುತ್ತಿದ್ದಾನೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 6 ಮತ್ತು 7ನೇ ಕಂತಿನ ಹಣ ಪಡೆಯೋಕೆ ಇಂದಿನಿಂದ ಹೊಸ ರೂಲ್ಸ್.!
ಈ ರೀತಿಯ ಸಮಸ್ಯೆಗಳಿಗೆ ಸಿಲುಕುವ ಬದಲು ರೈತನು ಜಾಗರೂಕನಾಗಿ ಬುದ್ಧಿವಂತಿಕೆಯಿಂದ ಬೆಳೆ ತೆಗೆದರೆ ಖಂಡಿತವಾಗಿಯೂ ಪ್ರತಿದಿನವೂ ಕಾಸು ಕಾಣಬಹುದು. ಅಂತಹ ಬೆಳೆಗಳು ಕೂಡ ಇವೆ. ವಾರ್ಷಿಕ ಬೆಳೆಗಳಾದರೆ ವರ್ಷ ಕಾಯಬೇಕು ಇನ್ನು ದಾಳಿಂಬೆ, ಸೀಬೆ ಇಂತಹ ಕೃಷಿ ಮಾಡಿದರೆ ಅದಕ್ಕೆ ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ ತರಕಾರಿ ಬೆಳೆದರೂ ಕೂಡ ಕನಿಷ್ಠ ನೂರು ದಿನಗಳಾದರೂ ಬೇಕು.
ಈಗ ತಿಂಗಳಿಗೆ ಆದಾಯ ಅಥವಾ ದಿನನಿತ್ಯ ಕಾಸು ಕಾಣಬೇಕು ಎಂದರೆ ರೈತ ನಿಗಿರುವ ಮಾರ್ಗ ಸೊಪ್ಪು ಬೆಳೆಯುವುದು. ಅದರಲ್ಲೂ ಪುದೀನ ಸೊಪ್ಪಿಗೆ ಈಗಿನ ಮಾರ್ಕೆಟ್ ನಲ್ಲಿ ಬಹಳಷ್ಟು ಬೇಡಿಕೆ ಇದೆ, ಪುದಿನ ಸೊಪ್ಪನ್ನು ಅಡುಗೆಗೆ ಮಾತ್ರವಲ್ಲದೆ ಇದು ಆಯುರ್ವೇದದಲ್ಲಿ ಔಷಧಿ ಕೂಡ ಆಗಿರುವುದರಿಂದ ಕೆಲ ಕಂಪನಿಗಳು ಔಷಧಿ ತಯಾರಿಕೆಗೆ ಇವುಗಳನ್ನು ಕೊಂಡುಕೊಳ್ಳುತ್ತವೆ, ಹಾಗಾಗಿ ಖಂಡಿತವಾಗಿಯೂ ಖಚಿತ ಆದಾಯ ಸಿಗುತ್ತದೆ.
ಈ ಸುದ್ದಿ ಓದಿ:- ಹೊಂ ಲೋನ್ ( ಗೃಹಸಾಲ ) ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದ್ರೆ ಈ ರೂಲ್ಸ್ ತಿಳಿದುಕೊಳ್ಳಿ.!
ಪುದಿನ ಬೆಳೆದ ರೈತರೊಬ್ಬರು ಇತ್ತೀಚೆಗೆ ಮಾಧ್ಯಮ ಒಂದರ ಸಂದರ್ಶನದಲ್ಲಿ ಹಂಚಿಕೊಂಡ ಮಾಹಿತಿಯನ್ನು ಇಂದು ನಾವು ಎಲ್ಲ ರೈತರಿಗೂ ಅನುಕೂಲವಾಗಲಿ ಎನ್ನುವ ಸದ್ದುದೇಶದಿಂದ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ಅದೇನೆಂದರೆ, ಪುದಿನವನ್ನು ಈಗ ಬೀಜ ಬಿತ್ತಿ ಬೆಳೆಯುವ ಅವಶ್ಯಕತೆ ಇಲ್ಲವಂತೆ. ಭತ್ತ ನಾಟಿ ಮಾಡುವ ರೀತಿ ಪುದಿನವನ್ನು ಹತ್ತಿರದಲ್ಲಿ ಪುದಿನ ಬೆಳೆದವರಿಂದ ಕೇಳಿ ಪಡೆದು ಗಿಡವನ್ನೆ ನೆಟ್ಟರೆ ಪುದಿನ ಬೆಳೆಯುತ್ತದೆ ಮತ್ತು ಇದು ಹಬ್ಬುತ್ತದೆ.
5-6 ಇಂಚು ಅಥವಾ 8 ಇಂಚಿನಷ್ಟು ಪುದಿನ ಬಂದಾಗ ಅದನ್ನು ಕಟಾವು ಮಾಡಿ ಮಾರಾಟ ಮಾಡುತ್ತಾರಂತೆ. ಈ ರೈತರು ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಕಟಾವು ಮಾಡಿ ಅಂದೆ ಮಾರ್ಕೆಟ್ ಗೆ ಕಳಿಸುವುದರಿಂದ ಪ್ರತಿದಿನದ ಖರ್ಚಿಗೆ ಆದಾಯ ಆಗುತ್ತದೆ ಮತ್ತು ಕೇವಲ 40 ದಿನಗಳಲ್ಲಿ ಮತ್ತೆ ಇದು ಬೆಳೆಯುವುದರಿಂದ ಪ್ರತಿ ತಿಂಗಳ ಖರ್ಚಿಗು ಕೂಡ ಪುದಿನ ಬೆಳೆ ಕೈ ಹಿಡಿಯುತ್ತದೆ ಎನ್ನುತ್ತಾರೆ ಇವರು.
ಈ ಸುದ್ದಿ ಓದಿ:- ಗ್ರಾಮ-ಒನ್ ಕೇಂದ್ರ ತೆರೆಯಲು ಸರ್ಕಾರದಿಂದ ಅರ್ಜಿ ಆಹ್ವಾನ, ಬೇಕಾಗುವ ದಾಖಲೆಗಳೇನು.? ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ನೋಡಿ ಮಾಹಿತಿ…
ಆದರೆ ಇದಕ್ಕೆ ಇರುವ ಒಂದೇ ಸವಾಲು ಇದ್ದರೆ ಪ್ರತಿನಿತ್ಯ ಕೂಡ ಈ ಪುದಿನ ಗಿಡಕ್ಕೆ ನೀರು ಹಾಯಿಸಬೇಕು. ನೀರಿನ ಸೌಲಭ್ಯ ಒಂದನ್ನು ನೋಡಿಕೊಂಡರೆ ಒಂದು ಎಕರೆಯಲ್ಲಿ ಒಬ್ಬ ರೈತ ಒಂದು ತಿಂಗಳಿಗೆ ಕನಿಷ್ಠ ರೂ.60,000 ಹಣ ದುಡಿಯಬಹುದು ಎನ್ನುತ್ತಾರೆ. ಪುದಿನ ಬೆಳೆದು ಇದರಲ್ಲಿ ಯಶಸ್ವಿ ಆಗಿರುವ ರೈತರು ಹೇಳಿದ ಮತ್ತೊಂದು ವಿಚಾರೇನೆಂದರೆ ಒಮ್ಮೆ ಈ ರೀತಿ ಪುದಿನಾ ಹಾಕಿದ ಮೇಲೆ ಎರಡು ವರ್ಷದವರೆಗೂ ಕೂಡ ಬೆಳೆ ತೆಗೆಯಬಹುದು ನಂತರ ನಿಮಗೆ ಇಷ್ಟವಿದ್ದರೆ ಉಳಿಸಿಕೊಳ್ಳಬಹುದು ಅಥವಾ ಬೇರೆ ನಾಟಿ ಮಾಡಿಸಬಹುದು.