ಹೆಣ್ಣು ಮಕ್ಕಳ (Girl Child) ಭವಿಷ್ಯದ ಉದ್ದೇಶದಿಂದ ಹೂಡಿಕೆ ಮಾಡುವ ಪೋಷಕರಿಗೆ ಕೇಂದ್ರ ಸರ್ಕಾರವು (Government) ಘೋಷಿಸಿರುವ ಸುಕನ್ಯ ಸಮೃದ್ಧಿ ಯೋಜನೆಯು (SSY) ದೇಶದಾದ್ಯಂತ ಜನಪ್ರಿಯವಾಗಿದೆ. ಈಗ ದೇಶದ ನಂಬಿಕಸ್ಥ ವಿಮಾ ಸಂಸ್ಥೆಯಾದ LIC ಕೂಡ ಇದನ್ನೇ ಹೋಲುವಂತಹ ಮತ್ತೊಂದು ವಿಶೇಷ ಯೋಜನೆಯನ್ನು ಪರಿಚಯಿಸಿದೆ.
ದಿನಕ್ಕೆ ಕೇವಲ ರೂ.151 ಹೂಡಿಕೆ ಮಾಡಿ 31 ಲಕ್ಷ ಹಣ ರಿಟರ್ನ್ ಪಡೆಯಬಹುದಾದ ಯೋಜನೆಯಾಗಿದೆ. ಈ ಯೋಜನೆ ಹೆಸರು LIC ಜೀವನ್ ಲಕ್ಷ್ಯ ಯೋಜನೆ (LIC Jeevan Lakshya Scheme) ಎಂಬುದಾಗಿದ್ದು, ವಿಶೇಷವಾಗಿ ಹೆಣ್ಣು ಮಕ್ಕಳ ಮದುವೆಯ ಖರ್ಚಿಗಾಗಿ ಎಂಬ ದೂರ ದೃಷ್ಟಿಯಿಂದ ಹೂಡಿಕೆ ಮಾಡುತ್ತಿದ್ದ ಯೋಜನೆ ಆಗಿರುವುದರಿಂದ ಕನ್ಯಾದಾನ ಪಾಲಿಸಿ (Kanyadana Policy) ಎಂದು ಕೂಡ ಹೆಸರುವಾಸಿಯಾಗಿದೆ
ಈ ಸುದ್ದಿ ಓದಿ:- 1 ಎಕರೆಯಲ್ಲಿ ತಿಂಗಳಿಗೆ ರೂ.60,000 ಆದಾಯ ಕೊಡುವ ಕೃಷಿ. ಈ ಬೆಳೆ ಹಾಕಿದರೆ ಪ್ರತಿದಿನವೂ ಕೂಡ ರೈತ ಕಾಸು ಕಾಣಬಹುದು.!
ಪ್ರತಿಯೊಂದು ಹೆಣ್ಣು ಮಕ್ಕಳ ಪೋಷಕರ ಕೂಡ ಈ ಯೋಜನೆ ಬಗ್ಗೆ ತಿಳಿದುಕೊಳ್ಳಲಿ ಎನ್ನುವ ಉದ್ದೇಶದಿಂದ ಈ ಅಂಕಣದಲ್ಲಿ ಕೆಲ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
ಯೋಜನೆಯ ಹೆಸರು:- LIC ಜೀವನ್ ಲಕ್ಷ್ಯ ಯೋಜನೆ
ಯೋಜನೆಯ ಕುರಿತ ಪ್ರಮುಖ ಅಂಶಗಳು:-
* ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಪೋಷಕರ ವಯಸ್ಸು 30 ವರ್ಷಕ್ಕಿಂತ ಮೇಲಿರಬೇಕು ಮತ್ತು ಹೆಣ್ಣು ಮಗುವಿಗೆ 1 ವರ್ಷ ತುಂಬಿರಬೇಕು
* ಈ ಯೋಜನೆಯ ಮೆಚುರಿಟಿ ಅವಧಿ 13 ವರ್ಷದಿಂದ 25 ವರ್ಷದವರೆಗೆ ಇರುತ್ತದೆ ಆದರೆ ಯೋಜನೆ ಆರಂಭಿಸುವಾಗಲೇ ನೀವು ಮೆಚುರಿಟಿ ಅವಧಿ ಬಗ್ಗೆ ಮೆಚುರಿಟಿ ಬಗ್ಗೆ ತೀರ್ಮಾನಿಸಬೇಕು. ಉದಾಹರಣೆಗೆ ನಿಮ್ಮ ಮಗುವಿಗೆ 1 ವರ್ಷ ವಯಸ್ಸು ಇರುವಾಗಲೇ ನೀವು ಯೋಜನೆ ಖರೀದಿಸಿ 25 ವರ್ಷ ಮೆಚ್ಯುರಿಟಿ ಯೋಜನೆ ಸೆಲೆಕ್ಟ್ ಮಾಡಿದ್ದರೆ ನೀವು ಕೇವಲ 22 ವರ್ಷ ಹೂಡಿಕೆ ಮಾಡಿದರೆ ಸಾಕು ಇನ್ನು 3 ವರ್ಷ ಪ್ರೀಮಿಯಂ ಪಾವತಿಸುವ ಅವಶ್ಯಕತೆ ಇರುವುದಿಲ್ಲ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 6 ಮತ್ತು 7ನೇ ಕಂತಿನ ಹಣ ಪಡೆಯೋಕೆ ಇಂದಿನಿಂದ ಹೊಸ ರೂಲ್ಸ್.!
* ಪ್ರತಿ ದಿನ ಕನಿಷ್ಠ ರೂ.151 ಪಾವತಿಸಿದರೆ ಮೆಚುರಿಟಿ ಅವಧಿಯಲ್ಲಿ 31 ಲಕ್ಷದವರೆಗೆ ಹಣ ಗಳಿಸಬಹುದು, ರೂ.121 ಪಾವತಿಸಿದರೆ 27 ಲಕ್ಷ ರಿಟರ್ನ್ ಪಡೆಯಬಹುದು. ಆದರೆ ಇಷ್ಟೇ ಪ್ರೀಮಿಯಂ ಪಾವತಿಸಬೇಕು ಎನ್ನುವ ಕಂಡೀಷನ್ ಇಲ್ಲ ನೀವು ಯೋಜನೆ ಸಹಿ ಹಾಕಿ ಒಪ್ಪಿಕೊಳ್ಳುವ ಸಮಯದಲ್ಲಿ ಎಷ್ಟು ಪ್ರೀಮಿಯಂ ಕಟ್ಟಲು ಬಯಸುತ್ತೀರಾ ಎನ್ನುವುದನ್ನು ನಿರ್ಧರಿಸಬಹುದು ಮತ್ತು ಅದರ ಆಧಾರದ ಮೇಲೆ ನಿಮಗೆ ಮೆಚುರಿಟಿ ಅವರಲ್ಲಿ ಎಷ್ಟು ರಿಟರ್ನ್ ಸಿಗುತ್ತದೆ ಎನ್ನುವುದು ನಿರ್ಧಾರ ಆಗುತ್ತದೆ.
* ಈ ಪ್ರೀಮಿಯಂ ನ್ನು ತಿಂಗಳಿಗೊಮ್ಮೆ ಪಾವತಿಸಿದರೆ ಸಾಕು
* ಇದು ಜೀವ ವಿಮೆ ಯೋಜನೆಯನ್ನು (Life Insurance) ಕೂಡ ಒಳಗೊಂಡಿದೆ ಒಂದು ವೇಳೆ ಹೆಣ್ಣು ಮಗುವಿನ ತಂದೆ ಮೃ’ತಪಟ್ಟರೆ ಕಂಪನಿಯು 10 ಲಕ್ಷ ವಿಮೆ ನೀಡುತ್ತದೆ
LIC ಜೀವನ್ ಲಕ್ಷ್ಯ ಯೋಜನೆ ಪಾವತಿಸಲು ಬೇಕಾಗುವ ದಾಖಲೆಗಳು:-
* ಹೆಣ್ಣು ಮಗಳ ಜನನ ಪ್ರಮಾಣ ಪತ್ರ
* ಪೋಷಕರ ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಭಾವಚಿತ್ರ
* ಮೊಬೈಲ್ ಸಂಖ್ಯೆ
ಈ ಸುದ್ದಿ ಓದಿ:- ಹೊಂ ಲೋನ್ ( ಗೃಹಸಾಲ ) ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದ್ರೆ ಈ ರೂಲ್ಸ್ ತಿಳಿದುಕೊಳ್ಳಿ.!
ಯೋಜನೆ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ನಿಮ್ಮ ಪರಿಚಯದ LIC ಏಜೆಂಟ್ ಅಥವಾ ಹತ್ತಿರದಲ್ಲಿರುವ LIC ಕಚೇರಿಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಬಹುದು ಅಥವಾ LIC ಅಧಿಕೃತ ವೆಬ್ಸೈಟ್ ಗಳಲ್ಲಿ ಹುಡುಕುವ ಮೂಲಕ ಮಾಹಿತಿ ಪಡೆಯಬಹುದು.