ಹಳ್ಳಿಗಾಡಿನಲ್ಲಿ ಒಂದು ಎಕರೆ ನೀರಾವರಿ ಸೌಲಭ್ಯ ಇರುವ ಜಮೀನು ಇದ್ದರೆ ಸಾಕು ಯಾವುದೇ IT ಕಂಪನಿಗಿಂತ ಕಡಿಮೆ ಇಲ್ಲದೆ ಹೆಚ್ಚಿನ ಕೆಲಸದ ಒತ್ತಡ ಇಲ್ಲದೆ ಉತ್ತಮವಾದ ಆರೋಗ್ಯಕರ ವಾತಾವರಣದಲ್ಲಿ ಇದ್ದುಕೊಂಡು ಕೈ ತುಂಬಾ ಹಣ ಸಂಪಾದನೆ ಮಾಡಬಹುದು.
ಇದಕ್ಕೆ ಸಾಕ್ಷಿ ಎನ್ನುವಂತೆ ಮಹಿಳೆಯೊಬ್ಬರು ತನ್ನ ಒಂದು ಎಕರೆ ಜಮೀನಿನಲ್ಲಿ ತಾನೊಬ್ಬಳೆ 6-7 ಗಂಟೆ ಕೆಲಸ ಮಾಡಿ ಹತ್ತಾರು ಬಗೆಯ ತರಕಾರಿಗಳನ್ನು ಬೆಳೆದು ತಿಂಗಳಿಗೆ ಕಡಿಮೆ ಎಂದರೂ 60 ರಿಂದ 80,000 ವರೆಗೆ ಆದಾಯ ತೆಗೆದುಕೊಳ್ಳುತ್ತಿದ್ದಾರೆ. ಇದು ಖಂಡಿತವಾಗಿಯೂ ಸಾಧ್ಯವೇ ಎಂದು ಎಲ್ಲರಿಗೂ ಆಶ್ಚರ್ಯ ಎನಿಸಬಹುದು.
ಆದರೆ ಆಶ್ಚರ್ಯ ಪಡುವಂತಹ ವಿಷಯ ಏನು ಅಲ್ಲ. ಕರ್ನಾಟಕದಲ್ಲೇ ಇರುವ ನಮ್ಮ ಪ್ರಗತಿಪರ ಮಹಿಳೆಯೊಬ್ಬರು ಈ ಸಾಧನೆ ಮಾಡಿ ತೋರಿದ್ದಾರೆ. ಇವರ ಈ ಕೃಷಿ ಅನುಭವದ ಬಗ್ಗೆ ಒಂದಷ್ಟು ಮಾಹಿತಿಯನ್ನು ಇತ್ತೀಚಿಗೆ ಯೂಟ್ಯೂಬ್ ವಾಹಿನಿ ಒಂದರ ಸಂದರ್ಶನದಲ್ಲಿ ಈ ಮಹಿಳೆ ಹಂಚಿಕೊಂಡಿದ್ದರು ಇದರ ಕುರಿತು ಕೆಲ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ.
ಈ ಸುದ್ದಿ ಓದಿ:- LPG ಬಳಕೆದಾರರಿಗೆಲ್ಲಾ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ ರೂ.300 ಸಬ್ಸಿಡಿ ನೆರವು, ಪಡೆಯುವುದು ಹೇಗೆ ನೋಡಿ.!
ಏರು ಮಡಿ ಪದ್ಧತಿ ಎಂದು ಕರೆಯಲಾಗುವ ಈ ಕೃಷಿ ಪದ್ಧತಿಯಲ್ಲಿ ಒಂದು ಎಕರೆಯಲ್ಲಿ ತೊಂಡೆ, ಬೆಂಡೆ, ಬದನೆ, ಟೊಮೊಟೊ, ಕ್ಯಾರೆಟ್, ಬೀನ್ಸ್, ಮೂಲಂಗಿ ಸೇರಿದಂತೆ ಎಲ್ಲಾ ಬಗೆಯ ಬಳ್ಳಿ ತರಕಾರಿಗಳು, ಸೊಪ್ಪುಗಳು ಮುಂತಾದ 28 ಬಗೆಯ ತರಕಾರಿಗಳನ್ನು ಬೆಳೆದಿದ್ದಾರೆ. ಏರುಮಡಿ ಪದ್ಧತಿಯ ಒಂದು ಅನುಕೂಲತೆ ಏನೆಂದರೆ ಒಂದು ವೇಳೆ ನಮ್ಮ ಜಮೀನಿನ ಮಣ್ಣು ಫಲವತ್ತತೆ ಇಲ್ಲದೆ ಇದ್ದರೆ ನಾವು ಫಲವತ್ತಾದ ಬೇರೆ ಮಣ್ಣನ್ನು ತರಬಹುದು.
ಯಾಕೆಂದರೆ ಕಡಪ ಕಲ್ಲು ಅಥವಾ ಕಲ್ಲುಗಳನ್ನು ಹಾಕಿ ಇಲ್ಲಿ ಸಾಲುಗಳನ್ನು ಮಾಡಿಕೊಂಡಿರುತ್ತಾರೆ ಇದನ್ನು ಬೆಡ್ ಎಂದು ಕರೆಯಲಾಗುತ್ತದೆ. ಆ ಬೆಡ್ ನಲ್ಲಿ ಮಣ್ಣು ಗೊಬ್ಬರ ಬೆರೆಸಿ ಉಳುಮೆ ಇಲ್ಲದೆ ಒಬ್ಬ ಮಹಿಳೆಯೇ ಯಂತ್ರೋಪಕರಣಗಳ ಅವಶ್ಯಕತೆ ಇಲ್ಲದೆ ಸಣ್ಣಪುಟ್ಟ ಕುಡುಗೋಲು ಎಳಕೊಟ್ಟು ಮುಂತಾದ ಕೈನಲ್ಲಿ ಹಿಡಿದು ಮಾಡಿಕೊಳ್ಳಬಹುದಾದಂತಹ ಮುಂತಾದ ಕೃಷಿ ಸಾಧನೆಗಳನ್ನು ಬಳಸಿ ಕೃಷಿ ಮಾಡಿಸಿಕೊಳ್ಳಬಹುದು.
ಈ ಸಮಯದಲ್ಲಿ ಫಲವತ್ತತೆ ಇಲ್ಲದೆ ಇದ್ದರೆ ಹೊರಗಿನಿಂದ ಮಣ್ಣನ್ನೇ ಹಾಕಬಹುದು. ನೀರು ಕಡಿಮೆ ಬಳಕೆ ಆಗುತ್ತದೆ, ವ್ಯರ್ಥ ಆಗುವುದಿಲ್ಲ ಈ ರೀತಿ ಬಿತ್ತನೆ ಹಾಕುವುದರಿಂದ ಸೀಡ್ ವೇಸ್ಟ್ ಆಗುವುದಿಲ್ಲ ಮತ್ತು ಪ್ರತಿನಿತ್ಯವು ಗಮನ ಕೊಡಬಹುದು ಎನ್ನುವುದು ಮತ್ತಷ್ಟು ಪ್ಲಸ್ ಪಾಯಿಂಟ್ ಗಳು.
ಈ ಸುದ್ದಿ ಓದಿ:-ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!
ಕೆಲವೊಮ್ಮೆ ಕೆಲವು ತರಕಾರಿಗಳ ಜೊತೆ ಸೊಪ್ಪುಗಳನ್ನು ಬಳ್ಳಿ ತರಕಾರಿಗಳ ಜೊತೆ ಇನ್ನಷ್ಟು ತರಕಾರಿಗಳನ್ನು ಬೆಳೆದುಕೊಳ್ಳುವ ಸೌಲಭ್ಯ ಕೂಡ ಸಿಗುತ್ತದೆ ಹೀಗಾಗಿ ಸ್ಥಳಾವಕಾಶವು ಕೂಡ ಸರಿಯಾಗಿ ಬಳಕೆ ಆಗುತ್ತದೆ. ಮನಸಿದ್ದರೆ ಮಾರ್ಗ ಎನ್ನುವಂತೆ ಕಡಿಮೆ ಬಂಡವಾಳದಲ್ಲಿ , ಆಳು ಕಾಳುಗಳ ಕೊರತೆ ಯೋಚನೆ ಇಲ್ಲದೆ ಈ ರೀತಿ ಕೈ ತುಂಬಾ ಆದಾಯ ಮಾಡಬಹುದು.
ಒಂದು ತರಕಾರಿ ಬೆಳೆದ ಮೇಲೆ ಅದೇ ಜಾಗಕ್ಕೆ ಅದೇ ತರಕಾರಿ ಹಾಕುವ ಬದಲು ಬೇರೆ ತರಕಾರಿ ಹಾಕುವುದರಿಂದ ಇನ್ನು ಚೆನ್ನಾಗಿ ಇಳುವರಿ ಬರುತ್ತದೆ. ಈ ರೀತಿಯಾಗಿ ನಮಗೆ ಬೇಕಾದ ಹಾಗೆ ಎಲ್ಲ ಪ್ರಯೋಗಗಳನ್ನು ಮಾಡಬಹುದು. ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ಈ ತರಕಾರಿಗಳನ್ನು ಬೆಳೆಯಲಾಗುತ್ತದೆ. ಈ ವಿಚಾರದ ಬಗ್ಗೆ ಹಾಗೂ ಏರು ಮಡಿ ಕೃಷಿ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದರೆ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.