ಕರ್ನಾಟಕದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ಸರ್ಕಾರವು (Karnataka Government) ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೇ ಗ್ಯಾರಂಟಿಯೇತರವಾದ ಹಲವು ಯೋಜನೆಗಳಿಂದ ಗಮನ ಸೆಳೆಯುತ್ತಿದೆ. ಸದ್ಯಕ್ಕೀಗ ಅಂಥಹದೇ ಒಂದು ವಿಶೇಷವಾದ ಕರ್ನಾಟಕ ಭಾರತ ಗೌರವ ಯಾತ್ರೆ ಯೋಜನೆ (Karnataka Bharath Gourava Yathre) ಹೆಸರಿನಲ್ಲಿ ಆರಂಭಿಸಿದೆ.
ಈ ಯೋಜನೆಯ ಮೂಲಕ ಪ್ರವಾಸ ಮಾಡಲು ಬಯಸುವವರು ಸರ್ಕಾರದಿಂದ ರೂ.5000 ವರೆಗೆ ಸಹಾಯಧನ ಪಡೆಯಬಹುದು. ಕರ್ನಾಟಕ ಸರ್ಕಾರವು IRCTC ಲಿಮಿಟೆಡ್ ಸಹಯೋಗದೊಂದಿಗೆ ಈ ತೀರ್ಥಯಾತ್ರೆ ಪ್ರವಾಸವನ್ನು ಭಾರತ್ ಗೌರವ್ ಟೂರಿಸ್ಟ್ ರೈಲಿನಲ್ಲಿ ನಡೆಸುತ್ತಿದೆ.
ಯುವಕ ಯುವತಿಯರಿಗೆ ಸುವರ್ಣವಕಾಶ, ಉಚಿತ ಬ್ಯೂಟಿಷಿಯನ್, ಜಿಮ್ ಟ್ರೈನರ್ ಹಾಗೂ ವಿಡಿಯೋಗ್ರಫಿಗೆ ತರಬೇತಿಗೆ ಅರ್ಜಿ ಆಹ್ವಾನ.!
ಪುರಾಣ ಪ್ರಸಿದ್ಧ ಸ್ಥಳಗಳಾದ ತಿರುವನಂತಪುಂ, ಕನ್ಯಾಕುಮಾರಿ, ರಾಮೇಶ್ವರಂ ಮತ್ತು ಮಧುರೈನ ಮತ್ತು ಸುತ್ತ ಮುತ್ತಲಿನ ಪುಣ್ಯಕ್ಷೇತ್ರಗಳ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ನೀವು ಈ ಯಾತ್ರೆಯಲ್ಲಿ ನೋಡಬಹುದಾಗಿದೆ. ಈ ಯಾತ್ರೆ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.
ಯೋಜನೆಯ ಹೆಸರು:- ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ
ಪ್ರವಾಸದ ದಿನಗಳು:- 5 ರಾತ್ರಿ / 06 ಹಗಲು
ಯಾತ್ರೆ ಹೊರಡುವ ದಿನಾಂಕ:-
ಮೊದಲನೇ ಯಾತ್ರೆ: 18 ಜನವರಿ 2024 ರಿಂದ 23 ಜನವರಿ 2024.
ಎರಡನೇ ಯಾತ್ರೆ: 30 ಜನವರಿ 2024 ರಿಂದ 04 ಫೆಬ್ರವರಿ 2024.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 35,000/-
ಪ್ರವಾಸದ ಬೆಲೆ:-
* ಪ್ರತಿ ವ್ಯಕ್ತಿಗೆ 15,000 ವೆಚ್ಚ ಅಂದಾಜಿಸಲಾಗಿದೆ.
* ಇದರಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿ ಯಾತ್ರಾರ್ಥಿ ಗೆ ರೂ.5000 ಸಹಾಯಧನ ನೀಡಲಾಗುತ್ತದೆ.
ಬೋರ್ಡಿಂಗ್ ಪಾಯಿಂಟ್ ಗಳು:-
ಈ ಕೆಳಗೆ ತಿಳಿಸಿದ ರೈಲ್ವೆ ಸ್ಟೇಷನ್ ಗಳಲ್ಲಿ ನೀವು ಈ ಯೋಜನೆ ಅಡಿ ಟ್ರೈನ್ ಹತ್ತಬಹುದು
* ಬೆಳಗಾವಿ
* ಹುಬ್ಬಳ್ಳಿ
* ಹಾವೇರಿ
* ದಾವಣಗೆರೆ
* ಬೀರೂರು
* ತುಮಕೂರು
* ಬೆಂಗಳೂರು (ಯಶ್ವಂತ್ ಪುರ)
ಪ್ರವಾಸದ ಸ್ಥಳಗಳು:-
* ಕನ್ಯಾಕುಮಾರಿ – ಭಗವತಿ ದೇವಸ್ಥಾನ, ವಿವೇಕಾನಂದ ರಾಕ್ ಸ್ಮಾರಕ
* ತಿರುವನಂತಪುರಂ – ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ
* ರಾಮೇಶ್ವರಂ – ರಾಮನಾಥಸ್ವಾಮಿ ದೇವಸ್ಥಾನ
* ಮಧುರೈ – ಮೀನಾಕ್ಷಿ ದೇವಸ್ಥಾನ.
ಪ್ಯಾಕೇಜ್ ನಲ್ಲಿ ಸೇರ್ಪಡೆಯಾಗುವ ಇತರೆ ವಿಷಯಗಳು:-
* 3 AC ವರ್ಗದಲ್ಲಿ ಭಾರತ್ ಗೌರವ್ ವಿಶೇಷ ಪ್ರವಾಸಿ ರೈಲು ಮೂಲಕ ರೈಲು ಪ್ರಯಾಣ.
* ಟ್ವಿನ್/ಟ್ರಿಪಲ್ ಶೇರ್‌ನಲ್ಲಿ ನಾನ್-ಎಸಿ ರೂಮ್‌ಗಳಲ್ಲಿ ಹೋಟೆಲ್‌ಗಳಲ್ಲಿ ರಾತ್ರಿಯ ತಂಗುವಿಕೆಯನ್ನು ಒದಗಿಸಲಾಗುತ್ತದೆ.
* ಎಲ್ಲಾ ಊಟಗಳನ್ನು ಉಚಿತವಾಗಿ ನೀಡಲಾಗುತ್ತದೆ(ಸಸ್ಯಾಹಾರಿ ಮಾತ್ರ).
* AC ಅಲ್ಲದ ಬಸ್‌ಗಳ ಮೂಲಕ ಎಲ್ಲಾ ವರ್ಗಾವಣೆಗಳು ಮತ್ತು ದೃಶ್ಯವೀಕ್ಷಣೆಯ ಸ್ಥಳಗಳ ಪ್ರವೇಶ ಶುಲ್ಕವನ್ನು ಭರಿಸಲಾಗುತ್ತದೆ, ವಿಶೇಷ ಶುಲ್ಕಕ್ಕೆ ಅವರೇ ಜವಾಬ್ದಾರು.
* ಸ್ಥಳ ವಿವರಣೆಗಾಗಿ ಸೂಕ್ತ ಮಾರ್ಗದರ್ಶನನ್ನು ಕರೆಯನ್ನು ಕೂಡ ಕೊಡಲಾಗುತ್ತದೆ.
* ಪ್ರಯಾಣಿಕರಿಗೆ ಪ್ರಯಾಣ ವಿಮೆ, ರೈಲಿನಲ್ಲಿ ಭದ್ರತೆ ಒದಗಿಸುವುದರ ಜೊತೆಗೆ ಈ ಮೇಲೆ ಕೆಲಸದ ಎಲ್ಲಾ ಖರ್ಚುಗಳನ್ನು ಟ್ಯಾಕ್ಸ್ ಸಮೇತ ಪಾವತಿಸಲಾಗುತ್ತದೆ.
ಆಶ್ರಯ ಯೋಜನೆ ಸ್ವಂತ ಮನೆ ಇಲ್ಲದವರಿಗೆ ಉಚಿತ ಸೈಟ್ ಹಂಚಿಕೆ ಆಸಕ್ತರು ಅರ್ಜಿ ಸಲ್ಲಿಸಿ.!
* ಇದನ್ನು ಹೊರತುಪಡಿಸಿ ಪ್ರಯಾಣಿಕರು ದೋಣಿ ವಿಹಾರ ಅಥವಾ ಇನ್ಯಾವುದ ಕ್ರೀಡೆ ಆಡಲು ಬಯಸಿದ್ದಲ್ಲಿ ಅಥವಾ ಮೆನುವಿನಲ್ಲಿ ಇರುವ ಊಟ ಹೊರತುಪಡಿಸಿ ಬೇರೆ ಊಟ ತರಿಸಿಕೊಂಡಲ್ಲಿ ಅಥವಾ ಎಸಿ ಬಸ್ ಗಳಲ್ಲಿ ವರ್ಗಾವಣೆ ಇತ್ಯಾದಿಗಳನ್ನು ಬಯಸಿದ್ದಲ್ಲಿ ಹೆಚ್ಚಿನ ಖರ್ಚನ್ನು ಅವರೇ ಭರಿಸಬೇಕಾಗುತ್ತದೆ.
ಈ ಪ್ರವಾಸ ಯೋಜನೆಗೆ ಬುಕಿಂಗ್ ಮಾಡುವುದು ಹೇಗೆ:-
* irctc tourism ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಬುಕಿಂಗ್ ಮಾಡಬಹುದು
* ಅಥವಾ ಸುಲಭವಾಗಿ ನಾವು ಈ ಕೆಳಗೆ ನೀಡಿರುವ ಕಛೇರಿ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದು ಬುಕಿಂಗ್ ಕೂಡ ಮಾಡಬಹುದು
8595931291
8595931292
8595931294
* ಈಗಾಗಲೇ ಮೊದಲನೇ ಪ್ರವಾಸಕ್ಕೆ 650 ಸೀಟು ಬುಕಿಂಗ್ ಹಾಕಿ ಪೂರ್ತಿಯಾಗಿ ಹೋಗಿದೆ. ಎರಡನೇ ಪ್ರವಾಸವು 30 ಜನವರಿ, 2024 ರಿಂದ ಆರಂಭವಾಗಲಿದೆ ನೀವು ಎರಡನೇ ಪ್ರವಾಸಕ್ಕೆ ಬುಕಿಂಗ್ ಮಾಡಬಹುದು.