ರೈತನ (farmers contribution to Nation ) ಕೊಡುಗೆ ಈ ದೇಶದ ಆರ್ಥಿಕತೆ ಮಾತು ನಮ್ಮ ಜನಜೀವನಕ್ಕೂ ಕೂಡ ದೊಡ್ಡಮಟ್ಟದ್ದಾಗಿದೆ. ಹಾಗಾಗಿ ರೈತನ ಮತ್ತು ಕೃಷಿ ಕ್ಷೇತ್ರದ ಪ್ರಾಮುಖ್ಯತೆ ಅರಿತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತನನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡಲು ಮತ್ತು ಕೃಷಿ ಕ್ಷೇತ್ರವನ್ನು ಇನ್ನಷ್ಟು ಮುನ್ನಡೆಗೆ ತರಲು ಕೃಷಿಯಲ್ಲಿ ಆಧುನಿಕತೆ ತಂದು ಈ ಮೂಲಕ ಆದಾಯ ಜೊತೆಗೆ ಇಳುವರಿ ಹೆಚ್ಚುಗೊಳಿಸಲು ಸಾಕಷ್ಟು ಯೋಜನೆಗಳ ಮೂಲಕ ನೆರವಾಗುತ್ತಿವೆ.
(Government banefits for farmer and agricuture) ಉಚಿತ ಸಹಾಯಧನಗಳು, ಬೆಳೆ ವಿಮೆ, ಸಬ್ಸಿಡಿ ರೂಪದ ಸಾಲ ಸೌಲಭ್ಯ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಯಂತ್ರೋಪಕರಣಗಳ ಖರೀದಿಗೆ ಸಹಾಯಧನ, ಉಚಿತವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆ ಕ್ರಮ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.
10ನೇ ತರಗತಿ ಪಾಸ್ ಆಗಿರುವವರಿಗೆ KSRTC, BMTC ಯಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!
ಮುಂದುವರೆದು ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲ (drought) ಉಂಟಾಗಿರುವುದರಿಂದ ರೈತರಿಗೆ ಬೆಳೆ ಹಾನಿ ಪರಿಹಾರ (crop loss Compensation) ಕೊಡಲು ಕೂಡ ನಿರ್ಧರಿಸಲಾಗಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆ ಪರಿಹಾರ ಹಣ ನೀಡಲು ತಯಾರಿಯನ್ನು ನಡೆದಿದ್ದು ಇನ್ನು ಕೆಲವೇ ದಿನಗಳಲ್ಲಿ ಹಣ ಬಿಡುಗಡೆ ಬಗ್ಗೆ ನಿರೀಕ್ಷಿಸಲಾಗುತ್ತಿದೆ.
ಈ ವರ್ಷದ ಬರಗಾಲ ಪರಿಸ್ಥಿತಿ ಅರಿತು ಯಾವುದೇ ಸರ್ಕಾರಿ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳೇ ಆಗಲಿ, ಬ್ಯಾಂಕ್ ಗಳೇ ಆಗಲಿ ರೈತರಿಗೆ ಸಾಲ ಮರುಪಾವತಿ ಮಾಡುವಂತೆ ತೊಂದರೆ ನೀಡಬಾರದು ಎಂದು ಎಚ್ಚರಿಕೆಯನ್ನು ಕೂಡ ಮುಖ್ಯಮಂತ್ರಿಗಳು ನೀಡಿದ್ದಾರೆ. ಇದರ ಜೊತೆಗೆ ಇನ್ನು ಮುಂದೆ 1 ಲಕ್ಷದವರೆಗೆ ಯಾವುದೇ ಬಡ್ಡಿ ಇಲ್ಲದೆ ರೈತರಿಗೆ ಸಾಲ (0% intrest loan) ಕೊಡಲು ಸಚಿವ ಸಂಪುಟ ಸಭೆಯ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದಾರೆ.
ಭಾರತ್, ಇಂಡಿಯನ್, HP ಗ್ಯಾಸ್ ಉಜ್ವಲ ಯೋಜನೆ 2.0 ಮೂಲಕ ಪಡೆಯಲು ಉಚಿತವಾಗಿ ಅರ್ಜಿ ಸಲ್ಲಿಸುವ ವಿಧಾನ.!
ರೈತರು ಆರ್ಥಿಕವಾಗಿ ಸಬಲರಾಗಬೇಕು (farmers financial stability) ಎನ್ನುವುದೇ ಇದರ ಉದ್ದೇಶ ಯಾಕೆಂದರೆ. ಬೆಳೆ ಬೆಳೆಯುವ ಸಲುವಾಗಿ ತಮ್ಮ ಚಟುವಟಿಕೆಗೆ ಅಗತ್ಯವಿರುವ ಹಣ ಹೊಂದಿಸಲು ಹೆಚ್ಚಿನ ಬಡ್ಡಿದರದಲ್ಲಿ ಖಾಸಗಿ ಲೇವಾದೇವಿಗಳ ಬಳಿ ಅಥವಾ ಹಣಕಾಸು ಸಂಸ್ಥೆಗಳ ಬಳಿ ಸಾಲ ತೆಗೆದುಕೊಂಡ ರೈತ ಬೆಳೆ ಹಾನಿಯಾದಾಗ ಸಾಲ ತೀರಿಸಲಾಗದೆ ಸಾಲದ ಶೂಲಕ್ಕೆ ಸಿಲುಕುತ್ತಾನೆ.
ಇದು ರೈತನಿಗೆ ಮಾತ್ರವಲ್ಲದೆ ಕುಟುಂಬಕ್ಕೂ ಕೂಡ ಕಂಟಕವಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ಬಡ್ಡಿರಹಿತವಾಗಿ ಸಾಲ (Loan) ನೀಡುವ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ 5700 ಕೋಟಿ ರೂ. ಮೀಸಲಿಟ್ಟಿದೆ ಈಗಾಗಲೇ ರೈತರಿಗೆ ಹಲವು ಯೋಜನೆಗಳಲ್ಲಿ ಬಡ್ಡಿರಹಿತವಾಗಿ ಸಾಲ ನೀಡಲಾಗುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಬೇಕು ಅಂದುಕೊಂಡಿರುವವರಿಗೆ ಮಹತ್ವದ ಸುದ್ದಿ.! ಈ ದಿನಾಂಕದಿಂದ ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ.!
ರಾಜ್ಯ ಸರ್ಕಾರವು ವಿಶೇಷವಾಗಿ ಸಣ್ಣ ಹಾಗೂ ಅತಿಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು ಈ ಬಡ್ಡಿರಹಿತ ಸಾಲ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರವು ಕಳೆದ 5 ವರ್ಷಗಳಿಂದ ರೈತರಿಗಾಗಿ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಅನುಷ್ಠಾನಗೊಳಿಸಿದೆ. ಈ ಯೋಜನೆ ಅಡಿಯಲ್ಲಿ 2022-23ರಲ್ಲಿ 32.43 ಲಕ್ಷ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಸಹಕಾರಿ ಸಂಘಗಳು ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಸಾಲ ವಿತರಣೆ ಮಾಡಲಾಗಿದೆ.
ಸರ್ಕಾರದ ಅಣತಿಯಂತೆ ರೈತರಿಗೆ ಕೃಷಿ ಸಾಲ ನೀಡುವ ಸಹಕಾರಿ ಸಂಘಗಳು ಹಾಗೂ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಆಗುವ ನಷ್ಟವನ್ನು ರಾಜ್ಯ ಸರ್ಕಾರವು ಬಡ್ಡಿ ಸಹಾಯಧನ ಅಥವಾ ಸಹಾಯ ಧನ ಮಂಜೂರು ಮಾಡುವ ಮೂಲಕ ಭರಿಸುತ್ತದೆ.
ಭಾರತ್ ಗೌರವ ಯೋಜನೆ, ಪ್ರತಿಯೊಬ್ಬರಿಗೂ ಸಿಗಲಿದೆ 5000/- ಈ ರೀತಿ ಅರ್ಜಿ ಹಾಕಿ.!
ಈ ರೀತಿ ಸಹಕಾರಿ ಸಂಘಗಳಿಂದ ಸಾಲ ನೀಡುವುದರಿಂದ ರೈತರು ಸಹ ಸುಲಭವಾಗಿ ಸಾಲ ಪಡೆದುಕೊಳ್ಳಲು ಸಹಕಾರಿಯಾಗಿದೆ. 2023-24 ರಿಂದ 2027-28ರ ವರೆಗೆ ಎಲ್ಲ ಸಹಕಾರಿ ಸಂಘಗಳಿಗೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಈ ಬಡ್ಡಿ ಸಹಾಯಧನ ಯೋಜನೆ ಅನ್ವಯವಾಗುತ್ತದೆ. ರೈತರ ಇನ್ನು ಮುಂದೆ ಇವುಗಳಲ್ಲಿ ಗರಿಷ್ಟ 1 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು.