ರೇಷನ್ ಕಾರ್ಡ್ ಆಧಾರಿತ ಸೇವೆಗಳು, ರೇಷನ್ ಕಾರ್ಡ್ ಆಧಾರಿತವಾದ ಗ್ಯಾರಂಟಿ ಯೋಜನೆಗಳು, ರೇಷನ್ ಕಾರ್ಡ್ ತಿದ್ದುಪಡಿ, ಹೊಸ ರೇಷನ್ ಕಾರ್ಡಿಗೆ ಅರ್ಜಿ ಇತ್ಯಾದಿ ವಿಚಾರಗಳು ಹೊಸ ಸರ್ಕಾರ ಸ್ಥಾಪನೆಯಾದಾಗಲಿಂದ ರಾಜ್ಯದಾದ್ಯಂತ ಹೆಚ್ಚು ಚರ್ಚೆಯಲ್ಲಿರುವ ವಿಷಯವಾಗಿದೆ ಇದನ್ನು ಹೊರತುಪಡಿಸಿ ಕೂಡ ರೇಷನ್ ಕಾರ್ಡ್ (Ration Card) ಒಂದು ಅಗತ್ಯ ಗುರುತಿನ ಚೀಟಿ ಆಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ರೇಷನ್ ಕಾರ್ಡ್ ಗಳ ಮೂಲಕ ವೈದ್ಯಕೀಯ ಶುಲ್ಕಗಳಲ್ಲಿ ಹಾಗೂ ಶಿಕ್ಷಣದ ಖರ್ಚು ವೆಚ್ಚಗಳಲ್ಲಿ ರಿಯಾಯಿತಿ ಪಡೆಯಬಹುದು ಮತ್ತು ಬಡತನ ರೇಖೆಗಿಂತ ಕೆಳಗಿರುವ (BPL / AAY) ರೇಷನ್ ಕಾರ್ಡ್ ಪಡೆದ ರೈತರು ಕಾರ್ಮಿಕರು ಇನ್ನಿತರ ವರ್ಗದವರು ಸರ್ಕಾರ ಇನ್ನಷ್ಟು ಯೋಜನೆಗಳಿಗೆ ಪಾತ್ರರಾಗುತ್ತಾರೆ ಹಾಗಾಗಿ ರೇಷನ್ ಕಾರ್ಡ್ ಸದಾ ಚರ್ಚೆಯಲ್ಲಿರುವ ವಿಷಯವಾಗಿದೆ.
ಈ ಸುದ್ದಿ ನೋಡಿ:- ನಿಮ್ಮ ಯಾವುದೇ ಆಸ್ತಿಯ ಐಡಿ, ಆಸ್ತಿಯ ನಂಬರ್ ಹಾಗೂ ವಿವರಗಳನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳುವ ವಿಧಾನ.!
ಗ್ಯಾರೆಂಟಿ ಯೋಜನೆಗಳು ಜಾರಿಯಾದ ಮೇಲೆ ಇವುಗಳ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಗಳಲ್ಲಿ ಒಂದೇ ರೀತಿಯ ಹೆಸರು ಇರಬೇಕಾದ ಕಾರಣ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕಾಗಿ ಮತ್ತು ರೇಷನ್ ಕಾರ್ಡ್ ನಲ್ಲಿ ಹೆಸರು ಇಲ್ಲದೆ ಇರುವವರು ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾದವರ.
ಹೊಸ ಸದಸ್ಯರ ಹೆಸರನ್ನು ಸೇರಿಸುವುದಕ್ಕೆ ಮತ್ತು ಮ’ರ’ಣ ಹೊಂದಿದ ಸದಸ್ಯರ ಹೆಸರನ್ನು ತೆಗೆದುಹಾಕಿಸಿ ರೇಷನ್ ಕಾರ್ಡ್ ದಾಖಲೆಯನ್ನು ನಿಯಮಗಳ ಪ್ರಕಾರವಾಗಿ ವ್ಯವಸ್ಥಿತವಾಗಿ ಮಾಡಿಕೊಂಡು ಚಾಲ್ತಿಯಲ್ಲಿಡಲು ಆಸಕ್ತಿ ತೋರುತ್ತಿದ್ದಾರೆ. ಸರ್ಕಾರವು ಕೂಡ ಈಗಾಗಲೇ ಹಲವಾರು ಬಾರಿ ಆನ್ಲೈನ್ನಲ್ಲಿ ರೇಷನ್ ಕಾರ್ಡ್ ಗಳಲ್ಲಿರುವ ಕೆಲವು ಸಮಸ್ಯೆಗಳನ್ನು ತಿದ್ದುಪಡಿ ಮಾಡಿಸಿಕೊಂಡು (Rationcard Correction) ಸರ್ಕಾರ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಂತೆ ಮಾಡಲು ಅನುಕೂಲತೆ ಮಾಡಿಕೊಟ್ಟಿದೆ.
ಈ ಸುದ್ದಿ ನೋಡಿ:- ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಅರ್ಜಿ ಆಹ್ವಾನ. ಹಳೆ ಕಾರ್ಡ್ ರಿನೀವಲ್ ಗೂ ಅವಕಾಶ.! ಏನೆಲ್ಲಾ ದಾಖಲೆಗಳು ಬೇಕು.? ಎಲ್ಲಿ ಅರ್ಜಿ ಹಾಕಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಆದರೆ ಕಾಲಾವಕಾಶ ಕಡಿಮೆ ಅಥವಾ ಸರ್ವರ್ ಹೊಡೆತದ ಕಾರಣದಿಂದಾಗಿ ಸಂಪೂರ್ಣವಾಗಿ ಈ ಪ್ರಕ್ರಿಯೆ ಪೂರ್ತಿಗೊಂಡಿಲ್ಲ. ಹಾಗಾಗಿ ಪದೇಪದೇ ಜನಸಾಮಾನ್ಯರಿಂದ ಈ ಬಗ್ಗೆ ಆ’ಕ್ರೋ’ಶ ಹಾಗೂ ಹೆಚ್ಚಿನ ಸಮಯವಕಾಶ ಕೊಡುವಂತೆ ಮನವಿ ಕೇಳಿ ಬರುತ್ತಲೇ ಇದೆ. ಈಗ ಮತ್ತೊಮ್ಮೆ ಆಹಾರ ಇಲಾಖೆ ಕಡೆಯಿಂದ ಮತ್ತೊಂದು ಅವಕಾಶ ಸಿಗುತ್ತಿದ್ದು 7 & 8 ಫೆಬ್ರವರಿ, 2024ರಂದು ಕರ್ನಾಟಕದ ಕೆಲವು ಆಯ್ದ ಜಿಲ್ಲೆಗಳಿಗೆ ವೈದ್ಯಕೀಯ ಕಾರಣಗಳಿಗಾಗಿ (Medical Emergency) ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಯಾವ ಜಿಲ್ಲೆಯವರಿಗೆ ಯಾವ ದಿನಾಂಕದಂದು ಮತ್ತು ಯಾವ ಸಮಯದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ತಪ್ಪದೆ ಈ ಮಾಹಿತಿಯನ್ನು ಹೆಚ್ಚಿನ ಜನರೊಂದಿಗೆ ಶೇರ್ ಮಾಡಿ.
ಈ ಸುದ್ದಿ ನೋಡಿ:- ಮದುವೆ ಹೆಣ್ಣಿನ ಮೇಕಪ್ ಮಾಡುತ್ತಾ 1 ಕೋಟಿ ದುಡಿದ ಸಾಮಾನ್ಯ ಗೃಹಿಣಿ.! ನೂರಾರು ಹೆಣ್ಣು ಮಕ್ಕಳಿಗೆ ಉದ್ಯೋಗಕ್ಕೆ ದಾರಿ ತೋರಿಸಿದ ಸಾಹಸಿ.!
ದಿನಾಂಕ:- 07 ಫೆಬ್ರವರಿ, 2024
ಸಮಯ:- ಮಧ್ಯಾಹ್ನ 01:00 ರಿಂದ 04:00 ರವರೆಗೆ
ಅವಕಾಶ:- ಕಲ್ಬುರ್ಗಿ ಮತ್ತು ಬೆಂಗಳೂರು ವಿಭಾಗ ವ್ಯಾಪ್ತಿಗೆ ಬರುವ ಜಿಲ್ಲೆಗಳು
* ಬಳ್ಳಾರಿ
* ಬೀದರ್
* ಚಿಕ್ಕಬಳ್ಳಾಪುರ
* ಚಿತ್ರದುರ್ಗ
* ದಾವಣಗೆರೆ
* ಕಲ್ಬುರ್ಗಿ
* ಕೋಲಾರ
* ಕೊಪ್ಪಳ
* ರಾಯಚೂರು
* ರಾಮನಗರ
* ಶಿವಮೊಗ್ಗ
* ತುಮಕೂರು
* ಯಾದಗಿರಿ
* ವಿಜಯನಗರ
ದಿನಾಂಕ:- 08 ಫೆಬ್ರವರಿ, 2024
ಸಮಯ:- ಮಧ್ಯಾಹ್ನ 01:00 ರಿಂದ ಸಂಜೆ 04:00 ರವರೆಗೆ
ಅವಕಾಶ:- ಬೆಳಗಾವಿ ಮತ್ತು ಮೈಸೂರು ವಿಭಾಗದ ಜಿಲ್ಲೆಗಳು
* ಬಾಗಲಕೋಟೆ
* ಬೆಳಗಾವಿ
* ಚಾಮರಾಜನಗರ
* ಚಿಕ್ಕಮಗಳೂರು
* ದಕ್ಷಿಣ ಕನ್ನಡ
* ಧಾರವಾಡ
* ಗದಗ
* ಹಾಸನ
* ಹಾವೇರಿ
* ಕೊಡಗು
* ಮಂಡ್ಯ
* ಮೈಸೂರು
* ಉಡುಪಿ
* ಉತ್ತರ ಕನ್ನಡ
* ವಿಜಯಪುರ.
ಈ ಸುದ್ದಿ ನೋಡಿ:- ಇನ್ಮುಂದೆ ಗೃಹಲಕ್ಷ್ಮಿ ಹಣ ಪಡೆಯೋಕೆ 4 ಹೊಸ ನಿಯಮ ಜಾರಿಗೆ ತಂದ ಸರ್ಕಾರ.! ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ಹಣ.!
ಸ್ಥಳ:- ಗ್ರಾಹಕರು ಹತ್ತಿರದಲ್ಲಿರುವ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಮಾತ್ರ ದಾಖಲೆಗಳ ಸಮೇತ ಹೋಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ, ಯಾವುದೇ ಖಾಸಗಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.