ಅಗ್ರಿಕಲ್ಚರ್ ಕೂಡ ಈಗ ಯಾವುದೇ ಬಿಝಿನೆಸ್ ಗಿಂತ ಕಡಿಮೆ ಇಲ್ಲ. ರೈತ ಮನಸ್ಸು ಮಾಡಿದರೆ ತನ್ನ ಭೂಮಿಯಲ್ಲಿ ಬಂಗಾರದ ಬೆಳೆ ತೆಗೆಯಬಹುದು. ವರ್ಷಕ್ಕೆ ಯಾವುದೇ ಸಾಫ್ಟ್ವೇರ್ ಕಂಪನಿ ಉದ್ಯೋಗಿಗೂ ಕಡಿಮೆ ಇಲ್ಲದಂತೆ ದುಡಿದು ತೋರಿಸಬಹುದು. ನಮ್ಮ ಕರ್ನಾಟಕದಲ್ಲೂ ಕೂಡ ಅಂತಹ ಫಲವತ್ತಾದ ಭೂಮಿ ಇದ್ದು, ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಮಣ್ಣಿನಿಂದಲೇ ಕೋಟ್ಯಾಂತರ ಹಣ ಗಳಿಸಿರುವ ಯುವ ರೈತರು ಇದ್ದಾರೆ.
ಉದ್ಯೋಗ ಮುಗಿಸಿ ಕೆಲಸಕ್ಕೆ ಸೇರಬೇಕು ಎನ್ನುವ ಮನಸ್ಥಿತಿಯಲ್ಲಿದ್ದ ಯುವಜನತೆ ಕೂಡ ಈಗ ಕೃಷಿಗೆ ಸಿಗುತ್ತಿರುವ ಬೆಲೆ ನೋಡಿ ತಮ್ಮ ಹಳ್ಳಿಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಕೆಲವು ವಿಶೇಷ ಬೆಳೆಗಳಿದ್ದು ಒಮ್ಮೆ ಇವುಗಳನ್ನು ಚೆನ್ನಾಗಿ ಬೆಳೆಸಿದರೆ ಸಾಕು ಶಾಶ್ವತವಾಗಿ ಆದಾಯ ಪಡೆಯಬಹುದು ಅಂತಹ ಬೆಳೆ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ.
ತೆಂಗು, ಅಡಿಕೆ, ಸೀಬೆ ದಾಳಿಂಬೆಯಂತ ಹಣ್ಣುಗಳ ಕೃಷಿ ಮಾತ್ರವಲ್ಲದೆ ಡ್ರೈ ಫ್ರೂಟ್ ಕೂಡ ಇಂತಹದ್ದೇ ಆದಾಯ ಕೊಡುವ ಕೃಷಿ ಆಗಿದೆ. ಪ್ರಪಂಚದಾದ್ಯಂತ ಡ್ರೈ ಫ್ರೂಟ್ ಗೆ ಎಷ್ಟು ಡಿಮ್ಯಾಂಡ್ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಮ್ಮ ದೇಶದಲ್ಲಿ ಕೂಡ ಬಹಳ ದೊಡ್ಡ ಪ್ರಮಾಣದಲ್ಲಿ ಡ್ರೈ ಫ್ರೂಟ್ ಆಮದು ಮಾಡಿಕೊಳ್ಳುತ್ತೇವೆ ಅದರಲ್ಲೂ ಖರ್ಜೂರಕ್ಕಾಗಿ ಅರಬ್ ದೇಶಗಳನ್ನು ಅವಲಂಬಿಸಿದ್ದೇವೆ.
ಈ ಸುದ್ದಿ ನೋಡಿ:- 2024 ರಲ್ಲಿ ಜಮೀನು ಅಥವಾ ಮನೆಯಲ್ಲಿ ಬೋರ್ ವೆಲ್ ಕೊರೆಸಿದರೆ ಎಷ್ಟು ಖರ್ಚಾಗಲಿದೆ ಗೊತ್ತಾ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!,
ನಮ್ಮ ದೇಶದಲ್ಲಿ ಗುಜರಾತ್ ಹಾಗೂ ರಾಜಸ್ಥಾನದ ಭೂಮಿಯಲ್ಲಿ ಅತಿ ಹೆಚ್ಚು ಖರ್ಜೂರ ಬೆಳೆಯಲಾಗುತ್ತದೆ ಮತ್ತು ಅಲ್ಲಿನ ಭೂಮಿ ಇದಕ್ಕೆ ಹೊಂದಿಕೊಂಡಿದೆ ಅದಕ್ಕಾಗಿ ಇವರು ಅಷ್ಟು ಲಾಭ ಪಡೆಯುತ್ತಾರೆ ಎಂದು ತಪ್ಪು ತಿಳಿದುಕೊಂಡಿದ್ದೇವೆ. ಕರ್ನಾಟಕದಲ್ಲಿ ಕೂಡ ಖರ್ಜೂರದ ಮರಗಳನ್ನು ಬೆಳೆಸಬಹುದು.
ಈ ಖರ್ಜೂರದ ಕೃಷಿ ಬಗ್ಗೆ ಹೇಳುವುದಾದರೆ ಒಂದು ಎಕರೆಯಲ್ಲಿ ನೂರು ಖರ್ಜೂರದ ಗಿಡಗಳನ್ನು ನೆಡಬಹುದು. ಎರಡು ಅಡಿ ಅಂತರದಲ್ಲಿ ಈ ರೀತಿ ಮರಗಳನ್ನು ಬೆಳೆದು ಎರಡು ವರ್ಷ ಅವುಗಳನ್ನು ಸಾಕಿದರೆ ಸಾಕು ಫಲ ಕೊಡಲು ಶುರು ಮಾಡುತ್ತದೆ. ಆರು ತಿಂಗಳವರೆಗೆ ನಿತ್ಯವೂ ನೀರಾವರಿ ಮಾಡಬೇಕು ಆದರೆ ದೊಡ್ಡ ಪ್ರಮಾಣದಲ್ಲಿ ನೀರು ಬೇಕು ಎನ್ನುವ ಟೆನ್ಶನ್ ಬೇಡ.
ಹನಿ ನೀರಾವರಿ ಅಥವಾ ನೀವೇ ಬಕೆಟ್ಗಳಲ್ಲಿ ನೀರು ಹಾಕಿ ಕೂಡ ಈ ಮರಗಳನ್ನು ತೆಂಗಿನ ಮರಗಳಂತೆ ಪೋಷಿಸಬಹುದು ಸುಮಾರು 7 ಅಡಿ ಎತ್ತರದವರೆಗೆ ಈ ಮರಗಳು ಬೆಳೆಯುತ್ತವೆ ಮತ್ತು ಒಮ್ಮೆ ಫಲ ಕೊಡಲು ಶುರು ಮಾಡಿದರೆ ಆರಂಭದಲ್ಲಿಯೇ 150 Kg ಖರ್ಜೂರ ಒಂದೇ ಮರದಲ್ಲಿ ಸಿಗುತ್ತದೆ ಆಗ ಒಂದು ಎಕರೆಗೆ ಕಡಿಮೆ ಎಂದರೂ 20 ಲಕ್ಷ ಹಣ ಗಳಿಸಬಹುದು.
ಈ ಸುದ್ದಿ ನೋಡಿ:- IDBI ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ವೇತನ 65,000/- ಆಸಕ್ತರು ಅರ್ಜಿ ಸಲ್ಲಿಸಿ.!
ಎರಡು ಮೂರು ವರ್ಷಗಳಾದ ನಂತರ ಒಂದೇ ಮರದಲ್ಲಿ 250Kg ವರೆಗೂ ಕೂಡ ಇಳುವರಿ ತೆಗೆಯಬಹುದು ಈ ರೀತಿ ಖರ್ಜೂರದ ಕೃಷಿ ಮಾಡಲು ಬಯಸುವ ರೈತರುಗಳಿಗೆ ಈ ತಳಿಯನ್ನು ರಾಯಲ್ ಓವರ್ಸೀಸ್ ಎಕ್ಸ್ಪೋರ್ಟ್ ಎನ್ನುವ ಕಂಪನಿಯ ಸಪ್ಲೈ ಮಾಡುತ್ತದೆ. ಈ ಕಂಪನಿಯು ಒಂದು ಗಿಡಕ್ಕೆ ರೂ.2000 ಚಾರ್ಜ್ ಮಾಡುತ್ತದೆ ಇದು ದುಬಾರಿ ಎನಿಸಬಹುದು ಆದರೆ ಇದಕ್ಕೊಂದು ಕಾರಣ ಇದೆ.
ಅವರು ಕೃಷಿ ಮಾಡುವುದು ಮಾತ್ರವಲ್ಲದೆ ಆ ಮಣ್ಣು ಯಾವ ತಳಿಗೆ ಹೊಂದಿಕೊಳ್ಳುತ್ತದೆ ಎನ್ನುವುದನ್ನು ಉಚಿತವಾಗಿ ಪರೀಕ್ಷೆ ಮಾಡಿಕೊಡುತ್ತಾರೆ ಮತ್ತು ಬೆಳೆಯುವ ಹಂತದಲ್ಲಿ ಯಾವುದೇ ಸಮಸ್ಯೆ ಇದ್ದರೂ ಸ್ಥಳಕ್ಕೆ ಬಂದು ಪರಿಹಾರ ನೀಡಿತ್ತಾರೆ ಇನ್ನೊಂದು ವಿಶೇಷತೆ ಏನೆಂದರೆ ಇಳುವರಿ ಬಂದಮೇಲೆ ಅವರೇ ಬಂದು ಖರ್ಜೂರವನ್ನು ಖರೀದಿಸುತ್ತಾರೆ, ಸ್ಥಳದಲ್ಲಿ ಹಣ ಕೂಡ ಕೊಡುತ್ತಾರೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಅಥವಾ ಕಂಪನಿಯ ನಂಬರ್ ನೀಡಲಾಗಿದೆ ಸಂಪರ್ಕಿಸಿ.
ರಾಯಲ್ ಓವರ್ ಸೀಸ್ ಎಕ್ಸ್ಪೋರ್ಟ್ಸ್
6364284708