ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವಕಾಶ ಕಟ್ಟಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಯಾಕೆಂದರೆ ಬ್ಯಾಂಕ್ ನಲ್ಲಿ ಉತ್ತಮ ವೇತನದ ಜೊತೆಗೆ ಕೆಲಸದ ಒತ್ತಡವು ಕಡಿಮೆ ಇರುತ್ತದೆ ಮತ್ತು ಜನಸಾಮಾನ್ಯರಿಗೆ ಸೇವೆ ಮಾಡಿದ ಸಮಾಧಾನವು ಸಿಗುತ್ತದೆ. ಇಂತಹ ಒಂದು ಉದ್ಯೋಗವಕಾಶಕ್ಕೆ ಪದವಿ ಮಾಡಿದವರು ಮಾತ್ರವಲ್ಲದೇ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದರು ಕೂಡ ಆಸೆಪಟ್ಟು ಅರ್ಜಿ ಸಲ್ಲಿಸುವವರು ಇದ್ದಾರೆ.
ನಮ್ಮ ದೇಶದಲ್ಲಿ ನೂರಾರು ಬಗೆಯ ಬ್ಯಾಂಕುಗಳು ಇತ್ತು ಬೃಹತ್ ಉದ್ಯೋಗವಕಾಶಗಳು ಇಂತಹ ಬ್ಯಾಂಕ್ ಗಳಿಂದ ಸೃಷ್ಟಿಯಾಗುತ್ತಿವೆ. ನೀವು ಕೂಡ ಈ ರೀತಿ ಬ್ಯಾಂಕ್ ಗಳಲ್ಲಿ ಹುದ್ದೆ ಪಡೆಯಬೇಕು ಎನ್ನುವ ಆಸಕ್ತಿ ಹೊಂದಿದ್ದರೆ ಈಗ IDBI ಬ್ಯಾಂಕ್ ಅವಕಾಶ ನೀಡುತ್ತಿವೆ. IDBI ನಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಇರುವ ನಿಬಂಧನೆಗಳು ಏನು? ಇತ್ಯಾದಿ ಸಂಪೂರ್ಣ ಮಾಹಿತಿಯ ಬಗ್ಗೆ ಈ ಅಂಕಣದಲ್ಲಿ ವಿಷಯ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಬಿಗ್ ಅಪ್ಡೇಟ್, ಮತ್ತೊಂದು ಹೊಸ ಸೇವೆ.!
ನೇಮಕಾತಿ ಸಂಸ್ಥೆ:- ಇಂಡಸ್ಟ್ರಿಯಲ್ ಡೆವಲಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI)
ಒಟ್ಟು ಹುದ್ದೆಗಳ ಸಂಖ್ಯೆ:- 500
ಹುದ್ದೆಗಳ ವಿವರ:-
ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು – 500
ಉದ್ಯೋಗ ಸ್ಥಳ:- ಭಾರತದಾದ್ಯಂತ…
ಶೈಕ್ಷಣಿಕ ವಿದ್ಯಾರ್ಹತೆ:-
ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿಯ ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾಭ್ಯಾಸ ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ಬಯೋಮಿತಿ 18 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 25 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ:-
* ಅರ್ಜಿ ಸಲ್ಲಿಸಲು ಆಸಕ್ತಿ ಇರುವವರು ಮೊದಲಿಗೆ www.idbibank.in ವೆಬ್ಸೈಟ್ ಗೆ ಭೇಟಿ ಕೊಡಿ, ನೇಮಕಾತಿ ಕುರಿತಾಗಿ ಬ್ಯಾಂಕ್ ಹೊರಟಿಸಿರುವ ನೋಟಿಫಿಕೇಶನ್ ಓದಿ ಅರ್ಥೈಸಿಕೊಂಡು ಕೇಳಲಾಗಿರುವ ಅರ್ಹತೆಗಳನ್ನು ಪೂರೈಸುವವರಾದರೆ ಮುಂದುವರೆಯಿರಿ
* ಅರ್ಜಿ ಸಲ್ಲಿಸುವುದಕ್ಕೆ ನೀಡಿರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಕರೆಂಟ್ ಓಪನಿಂಗ್ಸ್ ಗೆ ಹೋಗಿ ಅಲ್ಲಿ ನಿಮಗೆ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಸಿಗುತ್ತದೆ.
* ನಿಮ್ಮ ಹೆಸರು, ವಿಳಾಸ, ಆಧಾರ್ ಸಂಖ್ಯೆ, ಲಿಂಗ, ಶೈಕ್ಷಣಿಕ ಅರ್ಹತೆ ಎಲ್ಲವನ್ನೂ ಭರ್ತಿ ಮಾಡಿ. ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ನಿಗದಿತ ಶುಲ್ಕ ಪಾವತಿಸಿ ಮತ್ತೊಮ್ಮೆ ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಕೊನೆಯಲ್ಲಿ Submit ಕೊಡಿ
ಆಯ್ಕೆ ವಿಧಾನ:-
* ಕಂಪ್ಯೂಟರ್ ಬೇಸ್ಡ್ ಕಾಂಪಿಟೇಟಿವ್ ಎಕ್ಸಾಮ್ ಇರುತ್ತದೆ
* ಈ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಸಂದರ್ಶನ ನಡೆಸಲಾಗುತ್ತದೆ
* ಅಂತಿಮ ಸುತ್ತಿನಲ್ಲಿ ದಾಖಲೆಗಳ ಪರಿಶೀಲನೆ ಮಾಡಿ ಸೂಕ್ತ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು.
ಅರ್ಜಿ ಶುಲ್ಕ:-
* ಆನ್ಲೈನ್ ಮೂಲಕವೇ ಅರ್ಜಿ ಶುಲ್ಕ ಪಾವತಿ ಮಾಡಬೇಕು (Credit Card / Debit Card / Net Banking)
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.200
* ಸಾಮಾನ್ಯ ಅಭ್ಯರ್ಥಿಗಳಿಗೆ ರೂ.1000
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 12 ಫೆಬ್ರವರಿ 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 26 ಫೆಬ್ರವರಿ 2024
* ಪರೀಕ್ಷೆ ನಡೆಯುವ ದಿನಾಂಕ – 17 ಮಾರ್ಚ್ 2024
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಅರ್ಜಿದಾರನ ಆಧಾರ್ ಕಾರ್ಡ್
* ಇತ್ತೀಚಿನ ಭಾವಚಿತ್ರ ಮತ್ತು ಸಹಿ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
* SSLC, PUC ಮತ್ತು ಪದವಿ ಅಂಕಪಟ್ಟಿಗಳು
* ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು