ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾದ ಕಾಂಗ್ರೆಸ್ (Congress) ಸರ್ಕಾರ ತಾನು ನೀಡಿದ್ದ ವಾಗ್ದಾನದಂತೆ ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೇ ಯೋಜನೆಯಾಗಿ ಜೂನ್ ತಿಂಗಳಿನಿಂದಲೇ ರಾಜ್ಯದ ಗಡಿ ಒಳಗೆ ಕರ್ನಾಟಕದ ಮಹಿಳೆಯರಿಗೆ ಕರ್ನಾಟಕ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್ ಗಳನ್ನು ಉಚಿತ ಪಯಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಯು (Shakthi Yojane) ಜಾರಿಗೆ ತಂದಿತು.
ಆರಂಭದ ದಿನಗಳಲ್ಲಿ ಅನೇಕ ಗೊಂದಲಗಳು ಹಾಗೂ ಸಮಸ್ಯೆಗಳು ಆದರೂ ಈಗ ಯಶಸ್ವಿಯಾಗಿ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ಆರೋಪದ ನಡುವೆ ರಾಜ್ಯ ಸರ್ಕಾರವು ತಾವು ನೀಡಿರುವ ಈ ಯೋಜನೆಯಿಂದ ಮಹಿಳೆಯರು ಧಾರ್ಮಿಕ ಸ್ಥಳಕ್ಕೆ, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು, ಸಾಮಾಜಿಕ ಕಾರ್ಯಕ್ರಮಗಳಿಗ ಪಾಲ್ಗೊಳ್ಳುವುದು ಹೆಚ್ಚಾಗುತ್ತಿದೆ ಎಂದು ಸಮರ್ಥಿಸಿಕೊಂಡಿದೆ.
ರಾಜ್ಯದಲ್ಲಿ ನೀಡಿರುವ ಶಕ್ತಿ ಯೋಜನೆಯು ದೇಶದ ಎಲ್ಲರ ಗಮನ ಸೆಳೆದಿರುವುದಂತೂ ಸುಳ್ಳಲ್ಲ. ಶಕ್ತಿ ಯೋಜನೆ ಒಂದು ಮಾದರಿ ಯೋಜನೆ ಎನಿಸಿಕೊಳ್ಳುವ ಮಟ್ಟಕ್ಕೆ ಈಗ ಯಶಸ್ವಿಯಾಗಿದೆ. ಅಂಕಿ ಅಂಶಗಳ ಪ್ರಕಾರ ಇದುವರೆಗೂ 259 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಮತ್ತು ನಿಗಮವು ಕೂಡ ಯಾವುದೇ ಸಮಸ್ಯೆ ಇಲ್ಲದೆ ಸಂಬಾಳಿಸಿಕೊಂಡು ಹೋಗುತ್ತಿದೆ.
ಇದರ ನಡುವೆ ರಾಜ್ಯ ಸರ್ಕಾರದಿಂದ ಈ ರೀತಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಸದ್ಯಕ್ಕೆ ಈಗ ಮಹಿಳೆಯರಿಗೆ ಶೂನ್ಯ ದರ ಟಿಕೆಟ್ ನೀಡಿ ಉಚಿತ ಪ್ರಯಾಣ ಮಾಡುವ ಅವಕಾಶ ಸಿಕ್ಕಿದ್ದರೂ ಕೂಡ ಬಸ್ ಗಳಲ್ಲಿ ಮಹಿಳೆಯರು ಸೀಟ್ ಗಾಗಿ ಜ’ಗ’ಳ ಮಾಡಿಕೊಳ್ಳುವ ಮತ್ತು ಸೀಟ್ ಗಾಗಿ ನೂಕು ನುಗ್ಗಲಿನಲ್ಲಿ ಸಿಕ್ಕು ಹಾನಿ ಮಾಡಿಕೊಳ್ಳುತ್ತಿರುವ ದೂರುಗಳು ಕೇಳಿ ಬರುತ್ತಿವೆ.
ಶಕ್ತಿ ಯೋಜನೆಗೆ ಯಾವುದೇ ರೀತಿಯ ನೆಗೆಟಿವ್ ಮಾರ್ಕ್ ಬರಬಾರದು ಎಂದು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ಮಹತ್ವದ ತೀರ್ಮಾನಕ್ಕೆ ಬಂದಿದೆ ಸಾಮಾನ್ಯವಾಗಿ ಬಸ್
ಗಳಲ್ಲಿ ಮಹಿಳೆಯರಿಗಾಗಿ ಎರಡು ಮೂರು ಸೀಟ್ ಗಳು ಮೀಸಲಾಗಿರುತ್ತದೆ.
ಆದರೆ ಈಗ ಶಕ್ತಿ ಯೋಜನೆ ಬಂದ ಮೇಲೆ ಉಚಿತ ಪ್ರಯಾಣ ಇರುವುದರಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ ಹೀಗಾಗಿ ಈ ಸಮಸ್ಯೆ ಆಗುತ್ತಿದೆ ಎನ್ನುವುದನ್ನು ಪರಿಗಣಿಸಿ ಮಹಿಳೆಯರಿಗಾಗಿ ಪ್ರತ್ಯೇಕ ಬಸ್ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಹಿಂದೆ BMTC ನಲ್ಲಿ ಪಿಂಕ್ ಬಸ್ (Pink Bus) ವ್ಯವಸ್ಥೆ ಇತ್ತು, ಅದೇ ಮಾದರಿಯಲ್ಲಿ ಶಕ್ತಿ ಯೋಜನೆಗೂ ಬಸ್ ತಲು ಸರ್ಕಾರ ಚಿಂತಿಸುತ್ತಿದೆ.
ಬೆಂಗಳೂರಿನಲ್ಲಿ ಪ್ರತಿದಿನ ಉಚಿತವಾಗಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ 60 ರಿಂದ 63 ಲಕ್ಷ ಎಂದು ಅಂದಾಜಿಸಿ ಇವರಿಗಾಗಿ ಮೊದಲು ಪಿಂಕ್ ಬಸ್ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಮತ್ತು ಶೀಘ್ರವೇ KSRTC ಸೇರಿದಂತೆ ನಾಲ್ಕು ನಿಗಮಗಳಡಿಯಲ್ಲಿ ಪ್ರತ್ಯೇಕ ಪಿಂಕ್ ಬಸ್ ಸೇವೆ ಆರಂಭಿಸಲು ಚರ್ಚೆಯಾಗಿದೆ.
ಈ ರೀತಿ ಉಚಿತ ಬಸ್ ಗಳನ್ನು ಪ್ರತ್ಯೇಕವಾಗಿ ಮಹಿಳೆಯರಿಗೆ ಮೀಸಲಿಟ್ಟರೆ ಹಣ ಕೊಟ್ಟು ಪ್ರಯಾಣ ಮಾಡುವವರಿಗೂ ಸ್ವಲ್ಪ ಅನುಕೂಲವಾಗಬಹುದು ಇಂದು ಭಾವಿಸಿ ರಾಜ್ಯಕ್ಕೆ ಕೋಟ್ಯಂತರ ರೂಪಾಯಿ ಬಜೆಟ್ ನಲ್ಲಿ ಸಾವಿರ ಬಸ್ ಖರೀದಿ ಮಾಡಲು ಒಪ್ಪಿಗೆ ಆಗಿದೆ ಮತ್ತು ಆರಂಭಿಕವಾಗಿ ನೂರು ಬಸ್ ಗಳು ರಸ್ತೆಗಿಳಿದಿವೆ.