ಮದುವೆ ನೋಂದಣಿ ಮಾಡಿಸುವುದು ಮತ್ತು ಅದಕ್ಕೆ ಪ್ರಮಾಣ ಪತ್ರ ಪಡೆದುಕೊಳ್ಳುವುದು ಒಂದು ಒಳ್ಳೆಯ ವಿಧಾನ. ಯಾಕೆಂದರೆ ಈಗ ಅನೇಕ ಸಂದರ್ಭಗಳಲ್ಲಿ ಮದುವೆ ಪ್ರಮಾಣ ಪತ್ರವನ್ನು ಕೇಳುತ್ತಾರೆ. ಇತ್ತೀಚೆಗೆ ಹೇಳುವುದಾದರೆ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ವತಿಯಿಂದ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮದುವೆಗೆ ಅಥವಾ ಕಾರ್ಮಿಕರ ಇಬ್ಬರು ಮಕ್ಕಳ ಮದುವೆಗೆ 60 ಸಾವಿರದವರೆಗೆ ನೆರವು ಸಿಗುತ್ತದೆ.
ಇದನ್ನು ಪಡೆದುಕೊಳ್ಳಲು ಮ್ಯಾರೇಜ್ ಸರ್ಟಿಫಿಕೇಟ್ (Marriage Certificate) ಬೇಕು. ಇದಿಷ್ಟು ಮಾತ್ರವಲ್ಲದೆ ಮದುವೆ ಪ್ರಮಾಣ ಪತ್ರ ಒಂದು ಅಗತ್ಯ ದಾಖಲೆಯಾಗಿ ದಂಪತಿಗಳಿಗೆ ಇರಲೇಬೇಕು. ಇದನ್ನು ಹೇಗೆ ಪಡೆದುಕೊಳ್ಳಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಬೇಕಾಗುವ ದಾಖಲೆಗಳು:-
* ಒರಿಜಿನಲ್ ಮತ್ತು ಜೆರಾಕ್ಸ್ 1 ಸೆಟ್ ಅರ್ಜಿ ನಮೂನೆ (ಎಲ್ಲಾ ಆನ್ಲೈನ್ ಸೆಂಟರ್ ಗಳಲ್ಲಿ ಲಭ್ಯವಿರುತ್ತದೆ, ಮೂರು ಪುಟಗಳ ಅರ್ಜಿ ನಮೂನೆ ಆಗಿರುತ್ತದೆ ಇದರಲ್ಲಿ ಅರ್ಜಿದಾರರ ವಿವರಗಳನ್ನು ಟೈಪ್ ಮಾಡಬೇಕು)
* ವಧು ಮತ್ತು ವರರ ಆಧಾರ್ ಕಾರ್ಡ್
* ವಯಸ್ಸಿನ ದೃಢೀಕರಣಕ್ಕಾಗಿ ವಧು ಮತ್ತು ವರರ ಜನನ ಪ್ರಮಾಣ ಪತ್ರ ಅಥವಾ ಶಾಲಾ ಅಂಕಪಟ್ಟಿ ಅಥವಾ ಶಾಲಾ ವರ್ಗಾವಣೆ ಪತ್ರ
* ಮದುವೆ ಆಮಂತ್ರಣ ಪತ್ರಿಕೆ
* ವಧು ಮತ್ತು ವರರ ಇತ್ತೀಚಿನ 6 ಜಂಟಿ ಫೋಟೋ
* ಸಾಕ್ಷಿಗಾಗಿ ಮದುವೆಗೆ ಬಂದಿರುವ 3 ಜನ ಸಂಬಂಧಿಕರು ಅಥವಾ ಸ್ನೇಹಿತರ ಸಹಿ ಹಾಗೂ ಅವರ ಆಧಾರ್ ಕಾರ್ಡ್
* ರೂ.505 ಶುಲ್ಕ ಪಾವತಿ ಮಾಡಬೇಕು
ಎಲ್ಲಿ ಅರ್ಜಿ ಸಲ್ಲಿಸಬೇಕು:-
* ನಿಮ್ಮ ತಾಲೂಕಿನ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಅರ್ಜಿ ಸಲ್ಲಿಸಿ ನೀವು ಈ ಮ್ಯಾರೇಜ್ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು
* ನೀವು ಅರ್ಜಿ ಸಲ್ಲಿಸಿ ಸೂಕ್ತ ದಾಖಲೆಗಳನ್ನು ಕೊಟ್ಟಿದ್ದರೆ ಕೇವಲ ಮೂರು ತಾಸಿನ ಒಳಗೆ ನಿಮಗೆ ಮದುವೆ ಪ್ರಮಾಣ ಪತ್ರ ಸಿಗುತ್ತದೆ.
ಅತಿ ಮುಖ್ಯವಾದ ಅಂಶವೇನೆಂದರೆ, ಈ ವಿವಾಹ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಮದುವೆ ಆಗಿರುವ ಹುಡುಗಿಯ ವಯಸ್ಸು 18 ವರ್ಷದ ಮೇಲಿರಬೇಕು ಮತ್ತು ಮದುವೆ ಹುಡುಗನ ವಯಸ್ಸು 21 ವರ್ಷ ಮೇಲಿರಬೇಕು. ಈ ರೀತಿ ಕಾನೂನಿನ ಬದ್ಧ ವಿವಾಹಗಳಿಗೆ ವಿವಾಹ ಪ್ರಮಾಣ ಪತ್ರ ಪಡೆದುಕೊಳ್ಳಬಹುದು.
ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಇಲ್ಲದಿದ್ರೂ ದಂಡ ಬೀಳಬಾರದು ಅಂದರೆ ಈ 2 ಕೆಲಸ ಮಾಡಿ ಸಾಕು.!
ಯಾವುದೇ ಕಾರಣಕ್ಕೂ ವಿವಾಹ ಪ್ರಮಾಣ ಪತ್ರ ಪಡೆದುಕೊಳ್ಳುವುದಕ್ಕೆ ಯಾವುದೇ ಮಧ್ಯವರ್ತಿಯನ್ನು ಭೇಟಿಯಾಗಿ ಸಲಹೆ ಕೇಳಬೇಡಿ ಯಾಕೆಂದರೆ ಸರ್ಕಾರ ಎಷ್ಟು ಸರಳವಾಗಿ 505 ರೂಪಾಯಿಯಲ್ಲಿ ವಿವಾಹ ಪ್ರಮಾಣ ಪತ್ರ ನೀಡುತ್ತಿದೆ ಆದರೆ ದಲ್ಲಾಳಿಗಳು ಇದಕ್ಕೆ ರೂ.5,000 ಚಾರ್ಜ್ ಮಾಡಬಹುದು ಮತ್ತು ಬೇಕಂತಲೇ ಸಮಯ ವ್ಯರ್ಥ ಮಾಡಿ ನಿಮ್ಮನ್ನು ಅಲೆದಾಡಿಸಬಹುದು.
ವಿವಾಹ ಪ್ರಮಾಣ ಪತ್ರದಲ್ಲಿ ದಂಪತಿಗಳ ಫೋಟೋ ಹಾಗೂ ಸರ್ಕಾರದ ಸೀಲ್ ಇರುತ್ತದೆ. ಮದುವೆ ಆದ ದಿನಾಂಕ ಸೇರಿದಂತೆ ಇಬ್ಬರ ಹೆಸರು, ವಿಳಾಸ, ಸಹಿ ನೋಂದಣಿಗೆ ಅರ್ಜಿ ಸಲ್ಲಿಸಿರುವ ದಿನಾಂಕ, ಮದುವೆ ಪ್ರಮಾಣ ಪತ್ರ ಕೊಟ್ಟಿರುವ ದಿನಾಂಕ ಸೇರಿದಂತೆ ಕೆಲವು ಅಗತ್ಯ ಮಾಹಿತಿಗಳು ಇರುತ್ತವೆ.
ಈ ಸುದ್ದಿ ಓದಿ:- ಗೃಹ ನಿರ್ಮಾಣ ಅಗ್ರಿಮೆಂಟ್ ಹೇಗಿರಬೇಕು ಗೊತ್ತಾ.? ಈ ರೀತಿ ಇದ್ರೆ ನೀವು ಮೋಸ ಹೋಗಲ್ಲ.! ಮನೆ ಕಟ್ಟುವ ಆಸೆ ಇರುವವರು ತಪ್ಪದೆ ನೋಡಿ.!
ಎರಡು ಪ್ರತಿಗಳನ್ನು ನೀಡುತ್ತಾರೆ ಒಂದು ಹುಡುಗ ಹಾಗೂ ಮತ್ತೊಂದು ಹುಡುಗಿಗೆ ಮತ್ತು ತಹಶೀಲ್ದಾರ್ ಕಚೇರಿಯಲ್ಲಿ ಇದರ ಮತ್ತೊಂದು ಒರಿಜಿನಲ್ ಕಾಪಿ ಇರುತ್ತದೆ, ವಿವಾಹ ಪ್ರಮಾಣ ಪತ್ರ ಮಾಡಿಸಿಕೊಂಡು ಕಳೆದುಕೊಂಡಿದ್ದರೆ ಮತ್ತೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳುವುದಕ್ಕೂ ಕೂಡ ಅವಕಾಶ ಇರುತ್ತದೆ.