ಇಂದಿಗೂ ಎರಡು ವಿಧಾನದಲ್ಲಿ ನೀರಿನ ಸೆಲೆಯನ್ನು ಕಂಡು ಹಿಡಿಯಲಾಗುತ್ತದೆ. Geo-Satelite ವಿಧಾನ ಮತ್ತು ಸಾಂಪ್ರದಾಯಿಕ ವಿಧಾನದ ಮೂಲಕ. Geo-Satelite ವಿಧಾನದಲ್ಲಿ GPR (Ground Penetrating Radar) ಮೂಲಕ ವಿವಿಧ ಬಗೆಯ ಆಧುನಿಕ ಉಪಕರಣಗಳನ್ನು ಬಳಸಿ ಭೂಮಿಯಲ್ಲಿ ನೀರಿನ ಸೆಲೆಯನ್ನು ಮತ್ತು ಇನ್ನಿತರ ನಾನ್ ಮೆಟಾಲಿಕ್ ಮೈನ್ ಇದ್ದರೂ ಅದನ್ನು ಪತ್ತೆ ಮಾಡಲಾಗುತ್ತದೆ.
ಬಹಳ ನಂಬಿಕಸ್ಥ ವಿಧಾನವಾಗಿದ್ದು ರೂ.10,000 ಖರ್ಚಾಗುತ್ತದೆ. ಸಾಂಪ್ರದಾಯಿಕ ವಿಧಾನದಲ್ಲೂ ತೆಂಗಿನಕಾಯಿ, ಡೌಸಿಂಗ್ ರಾಡ್, ಕೀ ಚೇನ್ ಮತ್ತು Y ಶೇಪ್ ಸ್ಟಿಕ್ ನಿಂದಲೂ ಕೂಡ ನೀರಿನ ಸೆಲೆ ಪತ್ತೆ ಮಾಡಲಾಗುತ್ತದೆ, ಇದನ್ನು ಇಂದಿಗೂ ನಂಬಿಕೆಯಿಂದ ಅನುಸರಿಸಲಾಗುತ್ತಿದ್ದು ಅಂತೆಯೇ ಉತ್ತಮ ರಿಸಲ್ಟ್ ರೇಟ್ ಕೂಡ ಇದೆ.
ಅಲ್ಲದೇ ಇದು ಬಜೆಟ್ ಫ್ರೆಂಡ್ಲಿ ವಿಧಾನ ಕೂಡ, ಅನುಭವವುಳ್ಳ ವ್ಯಕ್ತಿ ಈ ಮೇಲೆ ತಿಳಿಸಿದ ವಸ್ತುಗಳಲ್ಲಿ ಒಂದನ್ನು ಉಪಯೋಗಿಸಿ ನೀರಿನ ಸೆಲೆ ಇರುವ ಗುರುತನ್ನು ಸೂಚಿಸುತ್ತಾರೆ. ರೂ.1500 ಖರ್ಚಿನಲ್ಲಿ ಇದು ಮುಗಿಯುತ್ತದೆ. ಪಾಯಿಂಟ್ ಸೂಚಿಸಿದ ಮೇಲೆ ಡ್ರಿಲ್ ಮಾಡಲು ತಗಲುವ ವೆಚ್ಚವು ಜಮೀನು ಇರುವ ಸ್ಥಳ, ಆಳ, ಮಣ್ಣು ಯಾವ ರೀತಿ ಇದೆ, ಕಲ್ಲು ಬಂಡೆ ಈ ರೀತಿ ಬೋರೆವೆಲ್ ಕೊರೆಯುವಾಗ ಏನೆಲ್ಲಾ ಅಡ್ಡಿಯಿದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.
ಈ ಸುದ್ದಿ ಓದಿ:- IDBI ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ವೇತನ 65,000/- ಆಸಕ್ತರು ಅರ್ಜಿ ಸಲ್ಲಿಸಿ.!
ಸಾವಿರದಿಂದ ಲಕ್ಷದವರೆಗೆ ಈ ಮೇಲೆ ತಿಳಿಸಿದ ಕಾರಣಗಳ ಅನುಸಾರ ಖರ್ಚು ಬೇರೆಬೇರೆ ರೀತಿಯಲ್ಲಿ ಇರುತ್ತದೆ. ನಾವು ಬಳಸುವ ಪೈಪ್ ಮೇಲೂ ನಂತರದ ಖರ್ಚು ವೆಚ್ಚಗಳು ಡಿಪೆಂಡ್ ಆಗುತ್ತದೆ. PVC ಪೈಪ್ ಗಳು MS ಪೈಪ್ ಗಳಿಂದ ಅತ್ಯುತ್ತಮವಾಗಿದೆ ಎನ್ನುವುದು ಹಲವರ ಆಯ್ಕೆ, ಯಾವ್ ಸೈಜ್ ಗಳಲ್ಲಿ ಎಷ್ಟು ಆಳಕ್ಕೆ ಪೈಪ್ ಬಿಡಬೇಕು ಎನ್ನುವುದರ ಮೇಲೆ ರೇಟ್ ಡಿಪೆಂಡ್ ಆಗುತ್ತವೆ. ಬೋರ್ವೆಲ್ ಪೈಪ್ ಮಾತ್ರವಲ್ಲದೆ ಅದರ ಕ್ಯಾಪ್ ಗೆ ತಗಲುವ ಖರ್ಚನ್ನು ಅಲ್ಲಗಳೆಯುವಂತಿಲ್ಲ.
ಬೋರಿಂಗ್ ಕೋಸ್ಟ್ ಲೆಕ್ಕ ಹಾಕುವುದಾದರೆ ಉದಾಹರಣೆ ಹೀಗಿದೆ:-
1 ರಿಂದ 300- 300 feet – Rs.24,000
301 ರಿಂದ 400 – 100 feet – Rs.9,000
401 ರಿಂದ 500 – 100 feet – Rs.10,000
501 ರಿಂದ 600 – 100 feet – Rs.12,000
601 ರಿಂದ 700 – 100 feet – Rs.14,000
701 ರಿಂದ 800 – 100 feet – Rs.17,000
801 ರಿಂದ 900 – 100 feet – Rs.20,000
901 ರಿಂದ 1000 – 100 feet – Rs.25,000
ಕ್ಯಾಪ್ – Rs.300
ಟ್ರಾನ್ಸ್ ಪೋರ್ಟ್ ಚಾರ್ಜಸ್ – Rs.1500
ಇನ್ನಿತರೆ ಖರ್ಚು – 3,500
ಇದೆಲ್ಲ ಸೇರಿ ಇಲ್ಲಿಯವರೆಗೆ ಒಟ್ಟಾರೆಯಾಗಿ ಅಂದಾಜು Rs.1,36,300 ಆಗುತ್ತದೆ. ಇಷ್ಟಕ್ಕೆ ಮುಗಿಯುವುದಿಲ್ಲ ಇದಾದ ಮೇಲೆ ಅತಿ ಮುಖ್ಯವಾಗಿ ಬೋರ್ವೆಲ್ ಗೆ ಸಬ್ ಮೆರೀಸಿಬಲ್ ಮೋಟಾರ್ ಪಂಪ್ (Submerisible Motor Pump) ಕೂಡ ಇನ್ಸ್ಟಾಲ್ ಮಾಡಿಸಬೇಕು. ಇದು ಕೂಡ ಮೋಟರ್ ಕೆಪ್ಯಾಸಿಟಿ (HP) ಮೇಲೆ ರೇಟ್ ಚೇಂಜ್ ಆಗುತ್ತದೆ ಮತ್ತು ಇದು ಬೋರ್ವೆಲ್ ಆಳದ ಮೇಲು ಕೂಡ ಎಷ್ಟು ಹೆಚ್ ಪಿ ಇರುವ ಮೋಟರ್ ಹಾಕಿಸಬೇಕು ಎಂದು ಡಿಪೆಂಡ್ ಆಗುತ್ತದೆ.
ಈ ಸುದ್ದಿ ಓದಿ:- ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಬಿಗ್ ಅಪ್ಡೇಟ್, ಮತ್ತೊಂದು ಹೊಸ ಸೇವೆ.!
1000 ಇಂಚಿನ ಆಳವಿರುವ ಬೋರ್ವೆಲ್ ಗೆ ನೀವೇನಾದರೂ 5Hp 50Stage Motor Pump ಸೆಲೆಕ್ಟ್ ಮಾಡಿದರೆ ಇದರ ಕೋಸ್ಟ್ ಈ ರೀತಿ ಇರುತ್ತದೆ.
Pump – Rs.49,000
ಪ್ಯಾನಲ್ ಬೋರ್ಡ್ – Rs.6,500
UPVC ಪೈಪ್ – Rs.55,000
ಅಡಾಪ್ಟರ್ ಸೆಟ್ – Rs.1,500
ರೋಪ್ – Rs.8,000
ಕೇಬಲ್ – Rs.40,000
ಫಿಟ್ಟಿಂಗ್ ಮತ್ತು ಇನ್ನಿತರೆ ಸೇರಿ – Rs.8,300
ಟೋಟಲ್ – Rs.1,68,300
ಒಟ್ಟಾರೆಯಾಗಿ ಬೋರಿಂಗ್ ಖರ್ಚು Rs.1,36,300
ಮತ್ತು ಮೋಟಾರ್ ಪಂಪ್ ಚಾರ್ಜ್ Rs.1,68,300 ಖರ್ಚಾಗುತ್ತದೆ.