Prize money scholorship: ಈ ವಿದ್ಯಾರ್ಥಿಗಳಿಗೆ ಸಿಗಲಿದೆ 35,000 ಪ್ರೋತ್ಸಾಹ ಧನ.! ಆಸಕ್ತ ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಸಹಾಯಧನಗಳನ್ನು ನೀಡುವಂತಹ ಸ್ಕಾಲರ್ಶಿಪ್ ಯೋಜನೆಗಳು ಕೂಡ. ಒಂದು ಕರ್ನಾಟಕ ಸರ್ಕಾರದ ವಿವಿಧ ಮಂಡಳಿಗಳಿಂದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ಹೆಚ್ಚುವರಿ ಖರ್ಚುವೆಚ್ಚಗಳನ್ನು ಪೂರೈಸಿಕೊಳ್ಳಲು ಸ್ಕಾಲರ್ಷಿಪ್ ನೀಡಲಾಗುತ್ತಿದೆ.

ಹಲವಾರು ಬಗೆಯ ಸ್ಕಾಲರ್ಷಿಪ್ ಯೋಜನೆಗಳಿದ್ದು ಸದ್ಯಕ್ಕೆ ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೈಜ್ ಮನಿ (prize money scholarship 2023) ಸ್ಕಾಲರ್‌ಶಿಪ್ 2023ರ ಅರ್ಜಿಯನ್ನೂ ಹಾಕಲು ಆರಂಭ ಮಾಡಿದೆ. ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲ ದಾಖಲೆಗಳನ್ನು ಕೊಡಬೇಕು? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇನೆ.

ಯೋಜನೆಯ ಹೆಸರು: ಪ್ರೈಜ್ ಮನಿ (prize money) ವಿದ್ಯಾರ್ಥಿವೇತನ 2024

ಯೋಜನೆಯ ಉದ್ದೇಶ:- ಸಮಾಜ ಕಲ್ಯಾಣ ಇಲಾಖೆಯು ಪ್ರಥಮ ಬಾರಿಯ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿದೆ.

ಯಾರು ಅರ್ಹರು:-

* ಕರ್ನಾಟಕ ರಾಜ್ಯದ ನಿವಾಸಿಗಳಾಗಿ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ SC / ST ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
* ಮೆಟ್ರಿಕ್ ನಂತರದ ವಿದ್ಯಾಭ್ಯಾಸಕ್ಕೆ ಈ ಸ್ಕಾಲರ್ಶಿಪ್ ಪಡೆಯಬಹುದು
* ಕಳೆದ ವರ್ಷದ ಪರೀಕ್ಷೆಯಲ್ಲಿ ಪ್ರಥಮ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು.
* ಅರ್ಜಿ ಸಲ್ಲಿಸಲು ಕೇಳಲಾಗಿರುವ ಎಲ್ಲ ದಾಖಲೆಗಳನ್ನು ಒದಗಿಸಬೇಕು

ಸ್ಕಾಲರ್ಶಿಪ್ ಮೊತ್ತ:-

* PUC, ಮೂರು ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ರೂ.20,000
* ಪದವಿ ವಿದ್ಯಾರ್ಥಿಗಳಿಗೆ ರೂ.25,000
* ಯಾವುದೇ ಸ್ನಾತಕೋತ್ತರ ಪದವಿ ತರಗತಿಗಳಿಗೆ ರೂ.30,000
* Agriculture, Engineering, Veterinary, Medicine ವಿದ್ಯಾರ್ಥಿಗಳಿಗೆ ರೂ.35,000

ಬೇಕಾಗುವ ದಾಖಲೆಗಳು:-

* ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ
* ಚಾಲ್ತಿಯಲೊಲಿರುವ ಮೊಬೈಲ್ ಸಂಖ್ಯೆ
* ಚಾಲ್ತಿಯಲ್ಲಿರುವ ಇ – ಮೇಲ್ ವಿಳಾಸ
* ಸಕ್ಷಮ ಪ್ರಾಧಿಕಾರದಿಂದ ನೀಡಿದ ನಿವಾಸಿ ಪ್ರಮಾಣಪತ್ರ
* ಸಕ್ಷಮ ಪ್ರಾಧಿಕಾರದಿಂದ ನೀಡಿದ ಆದಾಯ ಪ್ರಮಾಣಪತ್ರ
* ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣ ಪತ್ರ
* ಸಕ್ಷಮ ಪ್ರಾಧಿಕಾರದಿಂದ ನೀಡಿದ PUC ಅಂಕಪಟ್ಟಿ
* ಸಕ್ಷಮ ಪ್ರಾಧಿಕಾರದಿಂದ ನೀಡಿದ SSLC ಅಂಕಪಟ್ಟಿ
* ಬ್ಯಾಂಕ್ ಪಾಸ್ ಬುಕ್ ವಿವರಗಳು
* ಅಂಗವಿಕಲರಾಗಿದ್ದರೆ ಅಂಗವೈಕಲ್ಯ ಪ್ರಮಾಣಪತ್ರ

ಅರ್ಜಿ ಸಲ್ಲಿಸುವ ವಿಧಾನ:-

* ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
* ವಿದ್ಯಾರ್ಥಿಗಳು ಮೊದಲು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ  https://swdservices.karnataka.gov.in/swprizemoney/ ಈ ವೆಬ್ ಸೈಟ್ ವಿಳಾಸಕ್ಕೆ ಭೇಟಿ ನೀಡಿ
* PUC / SSLC / ಪದವಿ / ಸ್ನಾತಕೋತರ ಪದವಿ ವಿದ್ಯಾರ್ಥಿವೇತನ ಇದರಲ್ಲಿ ನಿಮ್ಮ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಈ ಸುದ್ದಿ ಓದಿ:- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2024, ಬರೋಬ್ಬರಿ 3000 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ಇಲ್ಲಿದೆ ನೋಡಿ ಮಾಹಿತಿ.!

* ಪ್ರೈಜ್ ಮನಿ ಸ್ಕಾಲರ್‌ಶಿಪ್ ಆನ್‌ಲೈನ್ ಅರ್ಜಿ ನಮೂನೆ 2023 ಗಾಗಿ ಲಿಂಕ್ ಕ್ಲಿಕ್ ಮಾಡಿ
* ಅರ್ಜಿ ಸಲ್ಲಿಕೆ ಫಾರ್ಮೆಟ್ ಓಪನ್ ಆಗುತ್ತದೆ ಇದರಲ್ಲಿ ಕೇಳಲಾಗಿರುವ ಎಲ್ಲಾ ವೈಯಕ್ತಿಕ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ
* ಕೇಳಲಾಗುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಶಸ್ವಿ ಆದ ಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ. ಇದರಲ್ಲಿ ನೀಡಿರುವ ರೆಫರೆನ್ಸ್ ನಂಬರ್ ಪ್ರಕಾರವಾಗಿ ನೀವು ಮುಂದೆ ನಿಮ್ಮ ಅರ್ಜಿ ಸ್ಟೇಟಸ್ ಟ್ರಾಕ್ ಮಾಡಬಹುದು.

ಈ ಸುದ್ದಿ ಓದಿ:- ಇನ್ಸೂರೆನ್ಸ್ ಹಣ ಬೇಗ ತೆಗೆದುಕೊಳ್ಳುವುದು ಹೇಗೆ.? ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇನ್ಸ್ಯೂರೆನ್ಸ್ ಮಾಡಿಸಿರುವವರು ನೋಡಿ.!

* ಅರ್ಜಿ ಸಲ್ಲಿಕೆಗೆ ನೀಡಿದ ಅವಧಿ ಮುಕ್ತಾಯವಾಗಿತ್ತು ಆದರೆ ಅನೇಕ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಕಾರಣ ಮತ್ತೊಮ್ಮೆ ಅವಕಾಶ ವಿಸ್ತರಿಸಿ 29ನೇ ಫೆಬ್ರವರಿ 2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
* ನೀವು ಯಾವುದೇ ಸೇವಾ ಕೇಂದ್ರಗಳಿಗೆ ದಾಖಲೆಗಳ ಸಮೇತ ಹೋಗಿ ಕೂಡ ಅರ್ಜಿ ಸಲ್ಲಿಸಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now