ರಾಜ್ಯದಲ್ಲಿ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು (Congress Government) ಗೆದ್ದು ಅಧಿಕಾರ ಸ್ಥಾಪಿಸಿದ ನಂತರ ತಾನು ಕೊಟ್ಟಿದ್ದ ವಾಗ್ದಾನದಂತೆ ಪಂಚ ಖಾತ್ರಿ ಗ್ಯಾರೆಂಟಿ ಯೋಜನೆಗಳಲ್ಲಿ (Guaranty Schemes) ಮೊದಲನೇಯದಾದ ಗೃಹಜ್ಯೋತಿ ಯೋಜನೆಯನ್ನು (Gruhajyothi Scheme) ಕಳೆದ ಜುಲೈ ತಿಂಗಳಿನಲ್ಲಿ ಜಾರಿಗೆ ತಂದಿತ್ತು.
ಗೃಹಜ್ಯೋತಿ ಯೋಜನೆ ಮೂಲಕ ಬಾಡಿಗೆ ಮನೆಯವರು ಸೇರಿದಂತೆ ಕರ್ನಾಟಕದ ಪ್ರತಿಯೊಂದು ಕುಟುಂಬಕ್ಕೂ ಕೂಡ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (free Current) ಸಿಗುತ್ತಿದೆ. ಆ ಪ್ರಕಾರವಾಗಿ ಗ್ರಾಹಕರು ಕಳೆದ ಒಂದು ವರ್ಷದಲ್ಲಿ ಬಳಸಿದ ಸರಾಸರಿ ವಿದ್ಯುತ್ ಬಳಕೆ ಮೇಲೆ 10% ಬದುಕು ಉಚಿತವಾಗಿ ವಿದ್ಯುತ್ ಬಳಕೆ ಮಾಡಿ ಶೂನ್ಯ ಬಿಲ್ ಪಡೆಯುತ್ತಿದ್ದಾರೆ.
ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಲ್ಲಿ ಇದೆ ಇತ್ತೀಚಿಗೆ ಇದರಲ್ಲಿ ಕೆಲ ಮಾರ್ಪಾಡು ಕೂಡ ಮಾಡಲಾಗಿತ್ತು. ಈ ರೀತಿ ಸರಾಸರಿ ಯೂನಿಟ್ ಮೇಲೆ 10% ಹೆಚ್ಚು ವಿದ್ಯುತ್ ಕೊಡುವುದರ ಬದಲು 10 ಯೂನಿಟ್ ಮಾತ್ರ ಉಚಿತವಾಗಿ ನೀಡಿದರೆ ಈಗ ಸರಾಸರಿಯಲ್ಲಿ ಕಡಿಮೆ ವಿದ್ಯುತ್ ಬಳಕೆ ಮಾಡಿದವರಿಗೆ ಹೆಚ್ಚು ಅನುಕೂಲವಾಗುತ್ತದೆ.
ಈ ಸುದ್ದಿ ಓದಿ:- ಆಧಾರ್ ಲಿಂಕ್ ಆಗದ ಬೆಳೆ ಹಾನಿ ರೈತರ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಈ ರೀತಿ ಚೆಕ್ ಮಾಡಿ ಲಿಂಕ್ ಮಾಡಿ.!
ಮತ್ತು ಉಚಿತ ವಿದ್ಯುತ್ ಎಂದು ಹೆಚ್ಚು ಬಳಕೆ ಮಾಡಿ ವಿದ್ಯುತ್ ಪೋಲು ಮಾಡುತ್ತಿರುವವರಿಗೆ ಕಡಿವಾಣ ಬೀಳುತ್ತದೆ ಎಂದು ಈ ನಿರ್ಧಾರಕ್ಕೆ ಬಂದು ಆದೇಶಕ್ಕೆ ಮಾಡಲಾಗಿದೆ. ಇದಾದ ನಂತರ ಮತ್ತೊಮ್ಮೆ ರಾಜ್ಯದಲ್ಲಿ ವಿದ್ಯುತ್ ಕುರಿತಾದ ಮತ್ತೊಂದು ಪ್ರಮುಖವಾದ ಸುದ್ದಿ ಇದೆ ಮತ್ತೊಮ್ಮೆ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಬಿಲ್ ಕಡಿಮೆ ಮಾಡುವಂತಹ ಕ್ರಮ ಕೈಗೊಂಡಿದೆ.
ವಿಷಯ ಏನೆಂದರೆ, ಸರಾಸರಿ 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರ ಮೇಲೆ ವಿಧಿಸಲಾಗುವ ವಿದ್ಯುತ್ ದರವನ್ನು ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಇಂತಹ ಗ್ರಾಹಕರು ಬಳಸುವ ವಿದ್ಯುತ್ ನ ಪ್ರತಿ ಯೂನಿಟ್ ಮೇಲೆ 1 ರೂ. 10 ಪೈಸೆಯನ್ನು ಇಳಿಕೆ ಮಾಡಲು ತೀರ್ಮಾನಿಸಲಾಗಿದೆ.
ಅದೇ ರೀತಿ, 100 ಯೂನಿಟ್ ಗಿಂತಲೂ ಹೆಚ್ಚು ವಾಣಿಜ್ಯ ಬಳಕೆ ಮಾಡುವ ಬಳಕೆದಾರರಿಗೆ ಪ್ರತಿ ಯೂನಿಟ್ ಮೇಲೆ 1 ರೂ. 25 ಪೈಸೆಯಷ್ಟು ಕಡಿಮೆ ಮಾಡಲು ಮತ್ತು ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ವಿಧಿಸಲಾಗುವ ವಿದ್ಯುತ್ ಚಾರ್ಜ್ ಮೇಲೆ ಪ್ರತಿ ಯೂನಿಟ್ ಗೆ 40 ಪೈಸೆ ಕಡಿಮೆ ಮಾಡುವಂತೆ ಖಾಸಗಿ ಏತ ನೀರಾವರಿ ಬಳಕೆದಾರರಿಗೆ ಪ್ರತಿ ಯೂನಿಟ್ ಮೇಲೆ 2 ರೂಪಾಯಿ ಇಳಿಕೆ ಮಾಡಲು ನಿರ್ಧರಿಸಿ ಆದೇಶ ಹೊರಡಿಸಲಾಗಿದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 2000 ಮತ್ತು ಅಕ್ಕಿ ಹಣ ಪಡೆಯಲಾಗದ ಮಹಿಳೆಯರು ಹೀಗೆ ಮಾಡಿ ಸಂಪೂರ್ಣ ಎಲ್ಲಾ ಕಂತಿನ ಹಣ ಬರುತ್ತೆ.!
ಈ ಹೊಸ ನಿಯಮವು 100 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡುವವರಿಗೆ ಮಾತ್ರ ಅನ್ವಯವಾಗಲಿದೆ ಮತ್ತು ಈ ನೂತನ ನಿಯಮದ ಪ್ರಕಾರದ ನಿಗದಿಪಡಿಸಿರುವ ಹೊಸ ದರವು ಮಾರ್ಚ್ 1ರಿಂದಲೇ ಅನ್ವಯವಾಗುತ್ತದೆ.
ನೂತನ ವಿದ್ಯುತ್ ದರ:-
* ಎಲ್ ಟಿ ಡೊಮೆಸ್ಟಿಕ್ ಲೈಟಿಂಗ್ – 100 ಯೂನಿಟ್ ಗಿಂತ ಹೆಚ್ಚಿನ ಬಳಕೆಗಾಗಿ ಪ್ರತಿ ಯೂನಿಟ್ ಗೆ 110 ಪೈಸೆ ಕಡಿಮೆ.
* ಹೆಚ್ ಟಿ (ಕಮರ್ಷಿಯಲ್) – ಪ್ರತಿ ಯೂನಿಟ್ 1 ರೂ. 25 ಪೈಸೆ.
* ಹೆಚ್ ಟಿ ಇಂಡಸ್ಟ್ರಿಯಲ್ – ಪ್ರತಿ ಯೂನಿಟ್ ಗೆ 50 ಪೈಸೆ ಇಳಿಕೆ.
* ಹೆಚ್ ಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು – ಪ್ರತಿ ಯೂನಿಟ್ ಗೆ 40 ಪೈಸೆ ಇಳಿಕೆ.
* ಹೆಚ್ ಟಿ ಖಾಸಗಿ ಏತ ನೀರಾವರಿ – ಪ್ರತಿ ಯೂನಿಟ್ ಗೆ 200 ಪೈಸೆ ಕಡಿಮೆ.