ತಹಶೀಲ್ದಾರ್ ಸೇರಿ 384 KAS ಹುದ್ದೆಗಳಿಗೆ ಅರ್ಜಿ ಆಹ್ವಾನ, KPSCಯಿಂದ ಅಧಿಕೃತ ಅಧಿಸೂಚನೆ ಪ್ರಕಟ.!

 

WhatsApp Group Join Now
Telegram Group Join Now

ಕೆಲ ದಿನಗಳ ಹಿಂದೆಯಷ್ಟೇ ಎಂದಿನಂತೆ ಈ ವರ್ಷವೂ ಕೂಡ UPSC ಯಿಂದ ಸಿವಿಲ್ ಸರ್ವಿಸ್ ಎಕ್ಸಾಮಿನೇಷನ್ ನೋಟಿಫಿಕೇಶನ್ ಬಿಡುಗಡೆಯಾಗಿತ್ತು. ದೇಶದಾದ್ಯಂತ ಇರುವ ಲಕ್ಷಾಂತರ ವಿದ್ಯಾರ್ಥಿಗಳು ಕಾಯುವ ನೋಟಿಫಿಕೇಶನ್ ಇದಾಗಿತ್ತು ಇನ್ನು ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಸಲು ನೀಡಿದ್ದ ಕೊನೆಯ ಗಡುವು ಮುಗಿಯುತ್ತಿದೆ.

ಹಾಗೆಯೇ ರಾಜ್ಯ ಮಟ್ಟದಲ್ಲಿ ನಡೆಯುವ KPSC ಪರೀಕ್ಷೆಗಳ ಮೇಲು ಕೂಡ ಇಂಥಹದ್ದೇ ನಿರೀಕ್ಷೆ ಇರುತ್ತದೆ. ಆದರೆ ಕಳೆದ 3-4 ವರ್ಷಗಳಿಂದ KAS ನೇಮಕಾತಿಗೆ ನೋಟಿಫಿಕೇಶನ್ ಆಗಿರಲಿಲ್ಲ ಎನ್ನುವ ನೋ’ವು ಕಾಡುತ್ತಿತ್ತು. ಅಂತಿಮವಾಗಿ ಈ ವರ್ಷ KAS ನೋಟಿಫಿಕೇಶನ್ ಕೂಡ ಆಗಿದ್ದು, ನಮ್ಮ ರಾಜ್ಯದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ ಹಾಗೂ ಗ್ರೂಪ್ ಬಿ ವರ್ಗದ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುವ ಅಭ್ಯರ್ಥಿಗಳಿಗೆ ಬಹಳ ದೊಡ್ಡ ಅವಕಾಶವಾಗಿದೆ.

ಈ ಸುದ್ದಿ ಓದಿ:- ಸಾರ್ವಜನಿಕರ ಗಮನಕ್ಕೆ, ಮಾರ್ಚ್ 1 ರಿಂದ 5 ಹೊಸ ರೂಲ್ಸ್ ಜಾರಿ.!

ಹೇಗೆ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು? ಯಾವ ರೀತಿ ನಿಮ್ಮ ನೇಮಕಾತಿ ನಡೆಯುತ್ತದೆ? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏನು ಇತ್ಯಾದಿ ವಿವರ ಹೀಗಿದೆ ನೋಡಿ.
ನೇಮಕಾತಿ ನಡೆಸುವ ಸಂಸ್ಥೆ:- ಕರ್ನಾಟಕ ಲೋಕಸೇವಾ ಆಯೋಗ (KPSC)
ಒಟ್ಟು ಹುದ್ದೆಗಳ ಸಂಖ್ಯೆ:- 384

ಹುದ್ದೆಗಳ ವಿವರ:-
* ಗ್ರೂಪ್ ಎ ಅಧಿಕಾರಿ – 159 ಹುದ್ದೆಗಳು
* ಗ್ರೂಪ್ ಬಿ ಅಧಿಕಾರಿ – 225 ಹುದ್ದೆಗಳು

ಉದ್ಯೋಗ ಸ್ಥಳ:- ಕರ್ನಾಟಕದಾದ್ಯಂತ…

ಅರ್ಜಿ ಸಲ್ಲಿಸಲು ಕೇಳಲಾಗುವ ಶೈಕ್ಷಣಿಕ ವಿದ್ಯಾರ್ಹತೆ:- ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ವಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
* B.E, MBBS, LLB ಈ ರೀತಿ ವೃತ್ತಿಪರ ಕೋರ್ಸ್ ಗಳನ್ನು ಪೂರ್ತಿಗೊಳಿಸಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.

ಈ ಸುದ್ದಿ ಓದಿ:-ಸಾರ್ವಜನಿಕರಿಗೆ ಸಿಹಿ ಸುದ್ದಿ, ವಿದ್ಯುತ್ ದರ ಮತ್ತಷ್ಟು ಇಳಿಕೆ ಎಷ್ಟು ಅಂತ ನೋಡಿ.!

ವಯೋಮಿತಿ ಮತ್ತು ಪರೀಕ್ಷಾ ಪ್ರಯತ್ನಗಳ ವಿವರ :-

* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷಗಳು
* ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 38 ವರ್ಷಗಳು ಮತ್ತು ಗರಿಷ್ಟ 5 ಬಾರಿ ಪ್ರಯತ್ನಗಳನ್ನು ಕೊಡಬಹುದು
* ಗರಿಷ್ಠ ವಯೋಮಿತಿ 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ 41 ವರ್ಷಗಳು ಮತ್ತು ಕೊಡಬಹುದಾದ ಗರಿಷ್ಠ ಪ್ರಯತ್ನಗಳು 07 ಬಾರಿ
* ಗರಿಷ್ಟ ವಯೋಮಿತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 43 ವರ್ಷಗಳು, ಇವರು ತಮ್ಮ ವಯೋಮಿತಿ ಗಡುವು ಮುಗಿಯುವುದರ ಒಳಗೆ ಎಷ್ಟು ಪ್ರಯತ್ನಗಳನ್ನು ಬೇಕಾದರೂ ಕೊಡಬಹುದು

ಅರ್ಜಿ ಶುಲ್ಕ:-

* ಅರ್ಜಿ ಸಲ್ಲಿಸುವ ಸಮಯದಲ್ಲಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600
* 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ ರೂ.300
* ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ – 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ:-

* ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
* KPSC ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ KAS ನೋಟಿಫಿಕೇಶನ್ ಓದಿ ಅರ್ಥೈಸಿಕೊಂಡು ಆ ನಿಯಮಗಳ ಪ್ರಕಾರವಾಗಿ ಅರ್ಜಿ ಸಲ್ಲಿಸಿ.
* ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ನಮೂದಿಸಿ ಮತ್ತು ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ.

ಪ್ರಮುಖ ದಿನಾಂಕಗಳು:-

* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 04 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 03 ಏಪ್ರಿಲ್, 2024.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now