ನಿಮ್ಮ ಜಮೀನಿನ ಪಹಣಿಗೆ (RTC) ಆಧಾರ್ ಲಿಂಕ್ ಮಾಡುವುದು ಕಡ್ಡಾಯ.! ಮೊಬೈಲ್ ನಲ್ಲಿಯೇ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ರೈತರಿಗೆ (farmers) ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು (Government Services) ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಯ ಕಲಂ 4(4)(ಬಿ)(2)ರ ಅಡಿ ಪಹಣಿಗಳಿಗೆ ಆಧಾರ್ ಸೀಡ್ (Aadhar and RTC link) ಮಾಡಲು ಸರಕಾರದಿಂದ ಅನುಮತಿ ನೀಡಲಾಗಿದ್ದು, ರೈತರು ತಮ್ಮ ಜಮೀನಿನ ಪಹಣಿ ಮತ್ತು ಆಧಾರ್ ಕಾರ್ಡ್ ಕಾರ್ಡ್ ದಾಖಲೆಗಳನ್ನು ತೆಗೆದುಕೊಂಡು ಸ್ವಯಂ ಪ್ರೇರಣೆಯಿಂದ.

ಇಲಾಖೆಯ ವೆಬ್ಸೈಟ್ https://landrecords.karnataka.gov.in/service4 ನಲ್ಲಿ login ಮಾಡಿಕೊಂಡು ಆಧಾರ್ ನೊಂದಿಗೆ ಪಹಣಿ ಪತ್ರವನ್ನು ಲಿಂಕ್ ಮಾಡಿಸಿಕೊಳ್ಳಬಹುದು ಅಥವಾ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರದ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಆಧಾರ್ ಹಾಗೂ ಪಹಣಿ ಲಿಂಕ್ ಮಾಡಿಸಬಹುದು.

ಸರ್ಕಾರದಿಂದ ರೈತರಿಗೆ ಸಂಬಂಧಪಟ್ಟ ಯಾವುದೇ ಅನುದಾನ ಸಿಗಬೇಕು ಎಂದರು ಈ ನಿಯಮ ಕಡ್ಡಾಯ ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ನೀವು ಇನ್ನು ಈ ನಿಯಮದ ಪ್ರಕಾರವಾಗಿ ಪಹಣಿ ಪತ್ರಕ್ಕೆ ನಿಮ್ಮ ಆಧಾರ್ ಲಿಂಕ್ ಮಾಡಿಸದೆ ಇದ್ದಲ್ಲಿ ನೀವು ಹತ್ತಿರದ ನೆಮ್ಮದಿ ಕೇಂದ್ರ ಅಥವಾ ಯಾವುದೇ ಸೇವಾ ಸಿಂಧು ಕೇಂದ್ರಗಳಲ್ಲಿ ಕೂಡ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು.

ಈ ಸುದ್ದಿ ಓದಿ:- ಸಾರ್ವಜನಿಕರ ಗಮನಕ್ಕೆ, ಮಾರ್ಚ್ 1 ರಿಂದ 5 ಹೊಸ ರೂಲ್ಸ್ ಜಾರಿ.!

ಒಂದು ವೇಳೆ ರೈತರು ನಿಮ್ಮ ಮೊಬೈಲ್ ನಲ್ಲಿ ಆಧಾರ್ ಹಾಗೂ ಪಹಣಿ ಪತ್ರ ಲಿಂಕ್ ಮಾಡಿಸಲು ಇಚ್ಛಿಸಿದರೆ ನಾವು ಹೇಳುವ ಸುಲಭ ವಿಧಾನಗಳನ್ನು ಅನುಸರಿಸಿ.
* https://landrecords.karnataka.gov.in/ ಗೂಗಲ್ ನಲ್ಲಿ ಈ ವೆಬ್ಸೈಟ್ ಅಡ್ರೆಸ್ ಸರ್ಚ್ ಮಾಡಿ ಭೂಮಿ ನಾಗರಿಕ ಸೇವೆಗಳು (Bhoomi Citizen Services) ಮುಖಪುಟ ಓಪನ್ ಆಗುತ್ತದೆ.

* ಮೊದಲಿಗೆ ಮೊಬೈಲ್ ಸಂಖ್ಯೆ (Mobile No.) ಕೇಳಿರುತ್ತದೆ ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ ಹಾಕಿ, ಮೊಬೈಲ್ ಸಂಖ್ಯೆ ಕೆಳಗಡೆ ಒಂದು ಕ್ಯಾಪ್ಚ ಕೋಡ್ (Captcha Code) ನೀಡಿರುತ್ತದೆ ಅದನ್ನು ಕೂಡ ಎಂಟ್ರಿ ಮಾಡಿ. ಸೆಂಡ್ ಒಟಿಪಿ (Send OTP) ಆಪ್ಷನ್ ಮೇಲೆ ಕ್ಲಿಕ್ ಮಾಡಿ.

* ನೀವು ಎಂಟ್ರಿ ಮಾಡಿದ್ದ ಮೊಬೈಲ್ ಸಂಖ್ಯೆಗೆ ಆ OTP ಬಂದಿರುತ್ತದೆ. ಅದನ್ನು ಹಾಕಿ ಲಾಗಿನ್ (Login) ಆಪ್ಷನ್ ಮೇಲೆ ಕ್ಲಿಕ್ ಮಾಡಿ
* ಪಹಣಿಯೊಂದಿಗೆ ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಮಾಡಲು ಮತ್ತೊಂದು ಇಂಟರ್ಫೇಸ್ ಓಪನ್ ಆಗುತ್ತದೆ.
* ಪಹಣಿ ಪತ್ರ (Farmer) ಯಾರ ಹೆಸರಿನಲ್ಲಿದೆ ಅವರ ಆಧಾರ್ ಸಂಖ್ಯೆಯನ್ನು ಎಂಟ್ರಿ ಮಾಡಬೇಕು, ಆಧಾರ್ ನಲ್ಲಿ ಯಾವ ರೀತಿ ಹೆಸರಿದೆ ಅದೇ ರೀತಿ ಮತ್ತೊಂದು ಬಾಕ್ಸ್ ನಲ್ಲಿ ಹೆಸರನ್ನು ಕೇಳಲಾಗಿರುತ್ತದೆ ಅಲ್ಲಿ ಎಂಟ್ರಿ ಮಾಡಿ.

ಈ ಸುದ್ದಿ ಓದಿ:- ರೈತರ ಖಾತೆಗೆ ಇಂದು 2,000 ಜಮೆ ಆಗಿದೆ.! ನಿಮ್ಮ ಖಾತೆಗೂ ಹಣ ಬಂದಿದೆಯೇ ಎಂದು ಈ ರೀತಿ ಚೆಕ್ ಮಾಡಿ.!

* ನೀಡಲಾಗಿರುವ ಚೆಕ್ ಬಾಕ್ಸ್ ನಿಂದ ರೈಟ್ ಕ್ಲಿಕ್ ಮಾಡಿ Verify ಮೇಲೆ ಕ್ಲಿಕ್ ಮಾಡಿದರೆ ನೀವು ನೀಡಿದ ಮಾಹಿತಿಗಳು ಸರಿಯಾಗಿದ್ದರೆ ಆಧಾರ್ ವೇರಿಫೈಡ್ ಆಗಿದೆ ಎಂಬ ಪಾಪ್ ಆಫ್ ಮೆಸೇಜ್ ಬರುತ್ತದೆ.
* e-KYC ಪೇಜ್ ಓಪನ್ ಆಗುತ್ತದೆ.

* ಮತ್ತೊಮ್ಮೆ ಆಧಾರ್ ಸಂಖ್ಯೆ ಕೇಳಲಾಗಿರುತ್ತದೆ. ರೈತನ ಆಧಾರ್ ಸಂಖ್ಯೆ ಎಂಟ್ರಿ ಮಾಡಿ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ OTP ಆಪ್ಷನ್ ಸೆಲೆಕ್ಟ್ ಮಾಡಿ ನಂತರ Generate OTP ಕ್ಲಿಕ್ ಮಾಡಿ, ನೀವು ನೀಡಿರುವ ಮೊಬೈಲ್ ಸಂಖ್ಯೆಗೆ OTP ಬಂದಿರುತ್ತದೆ, ಅದನ್ನು ಎಂಟ್ರಿ ಮಾಡಿ Submit ಕೊಡಿ. ಎಲ್ಲವು ಸರಿ ಇದ್ದರೆ ನಿಮ್ಮ ಪ್ರೊಫೈಲ್ ಓಪನ್ ಆಗುತ್ತದೆ, ಪಕ್ಕದಲ್ಲಿ 3 dot ಇರುತ್ತದೆ ಕ್ಲಿಕ್ ಮಾಡಿ ಅದರಲ್ಲಿ link Aadhar ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿ.

* ಮುಂದಿನ ಪೇಜ್ ನಲ್ಲಿ ನೀವು ನಿಮ್ಮ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಕೇಳುತ್ತಾರೆ. ಮಾಲೀಕರ ಹೆಸರು, ಸರ್ವೆ ನಂಬರ್, ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲೆ ಸಮೇತವಾಗಿ ಸರಿಯಾಗಿ ನಮೂದಿಸಬೇಕು, ಎಲ್ಲವೂ ಸರಿ ಇದ್ದರೆ ಯಶಸ್ವಿಯಾಗಿ ಆಧಾರ್ ಪಹಣಿಗೆ ಲಿಂಕ್ ಆಗಿರುವುದಕ್ಕೆ done ಎಂದು ಪಾಪ್ ಆಫ್ ಮೆಸೇಜ್ ಬರುತ್ತದೆ.

https://youtu.be/st9ABwLapTM?si=ozbJgh0nv84Azhzg

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now