ಕಾಂಗ್ರೆಸ್ ಸರ್ಕಾರವು (Congress) ಚುನಾವಣೆ ಪೂರ್ವವಾಗಿ ನೀಡಿದ್ದ ಭರವಸೆಯಂತೆ ಅಧಿಕಾರಕ್ಕೆ ಬಂದ ಮೇಲೆ ಹಂತ ಹಂತವಾಗಿ ತನ್ನ 5 ಗ್ಯಾರಂಟಿ ಆಶ್ವಾಸನೆಗಳನ್ನು (Guaranty Schemes) ಕೂಡ ಈಡೇರಿಸಿದೆ. ಮೊದಲಿಗೆ ಶಕ್ತಿ ಯೋಜನೆಯಡಿ (Shakthi Yojane) ರಾಜ್ಯದಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (free travel for Women) ಅವಕಾಶ.
ಗೃಹಜ್ಯೋತಿ (Gruhajyoti) ಯೋಜನೆಯಡಿ ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (200 Unit free current), ಅನ್ನ ಭಾಗ್ಯ ಯೋಜನೆ ಪ್ರತಿ ಸದಸ್ಯರಿಗೂ 10Kg ಅಕ್ಕಿ ನೀಡಬೇಕಿತ್ತು, ಆದರೆ ದಾಸ್ತಾನು ಕೊರತೆಯಾದ ಕಾರಣ 5Kg ಅಕ್ಕಿ ಹಾಗೂ ಹೆಚ್ಚುವರಿ 5Kg ಅಕ್ಕಿ ಬದಲಿಗೆ ಪ್ರತಿ ಕೆಜಿಗೆ ರೂ.170 ರಂತೆ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ವರ್ಗಾವಣೆ.
ಈ ಸುದ್ದಿ ಓದಿ:- ನಿಮ್ಮ ಜಮೀನಿನ ಪಹಣಿಗೆ (RTC) ಆಧಾರ್ ಲಿಂಕ್ ಮಾಡುವುದು ಕಡ್ಡಾಯ.! ಮೊಬೈಲ್ ನಲ್ಲಿಯೇ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!
ಮತ್ತು ಗೃಹಲಕ್ಷ್ಮಿ (Gruhalakshmi) ಯೋಜನೆಯಡಿ ಕುಟುಂಬದ ಮುಖ್ಯಸ್ಥೆಗೆ ಪ್ರತಿ ತಿಂಗಳು ರೂ.2000 ಮತ್ತು ಯುವನಿಧಿ ಯೋಜನೆಯಡಿ (Yuvanidhi) ಪದವಿ ವಿದ್ಯಾಭ್ಯಾಸ ಮುಗಿಸಿ ಆರು ತಿಂಗಳು ಕಳೆದರೂ ಉದ್ಯೋಗ ಸಿಗದ ನಿರುದ್ಯೋಗಿಗಳಿಗೆ ರೂ.3000 ಮತ್ತು ಡಿಪ್ಲೋಮೋ ಪದವಿ ಪಡೆದ ನಿರುದ್ಯೋಗಿಗಳಿಗೆ ರೂ.1500 ಸ್ಟೈ ಫಂಡ್ ನೀಡುತ್ತಿದೆ. ಇದೆಲ್ಲ ಆದಮೇಲೆ ಹೆಚ್ಚುವರಿಯಾಗಿ 6ನೇ ಗ್ಯಾರಂಟಿ ಬಗ್ಗೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ರವರು (Minister Lakshmi Hebbalkar) ಸುಳಿವು ನೀಡಿದ್ದಾರೆ.
ಮಾಗಡಿ ಕೋಟೆ ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಗ್ಯಾರಂಟಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಆಶಾಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಶೀಘ್ರದಲ್ಲೇ ನಮ್ಮ ಸರ್ಕಾರದಿಂದ 6ನೇ ಗ್ಯಾರಂಟಿ ಘೋಷಣೆ ಮಾಡಲಾಗುವುದು ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟ ಸಭೆ ಜೊತೆ ಜೊತೆ ನಡೆಸಿ ಕೂಡಲೇ ಈ ಬಗ್ಗೆ ಕೊಡಲಿದ್ದೇವೆ ಎಂದರು.
ಈ ಸುದ್ದಿ ಓದಿ:- ತಹಶೀಲ್ದಾರ್ ಸೇರಿ 384 KAS ಹುದ್ದೆಗಳಿಗೆ ಅರ್ಜಿ ಆಹ್ವಾನ, KPSCಯಿಂದ ಅಧಿಕೃತ ಅಧಿಸೂಚನೆ ಪ್ರಕಟ.!
ಕಳೆದ 5 ವರ್ಷದಿಂದ ಸಂಸದರಾಗಿ ಡಿ.ಕೆ.ಸುರೇಶ್ ರವರು (DK Suresh) ಈ ಭಾಗದ ಜನರ ಸೇವೆ ಮಾಡಿದ್ದಾರೆ. ರಾಜಕಾರಣದಲ್ಲಿ ಅಧಿಕಾರ ಸಿಕ್ಕಾಗ ಜನಸೇವೆ ಮಾಡುವ ಗುಣ ಎಲ್ಲ ರಾಜಕಾರಣಿಗಳು ಇರುವುದಿಲ್ಲ. ಆದರೆ ಡಿಕೆ ಸುರೇಶ್ ರವರು ಆ ರೀತಿ ಇಲ್ಲ ಜನಸೇವೆಯೇ ಅವರ ಉಸಿರು. ನಮ್ಮ ಕಾಂಗ್ರೆಸ್ ಅಂದರೇ ಈ ರೀತಿ ಬದ್ಧತೆ. ನಾವು ನುಡಿದಂತೆ ನಡೆಯುತ್ತೇವೆ.
ಈ ಬಾರಿಯೂ ಕೂಡ ಪ್ರತಿಪಕ್ಷಗಳು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿದವು ನಾವು ಕೊಟ್ಟ ಮಾತಿನಂತೆ ನಡೆದುಕೊಂಡು 5 ಗ್ಯಾರೆಂಟಿಗಳನ್ನು ನಾಡಿನ ಜನತೆಗೆ ಕೊಟ್ಟಿದ್ದೇವೆ . ಈ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರದ್ದೇ ಮೇಲುಗೈ. ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಗೃಹಲಕ್ಷ್ಮಿ ಅನುಕೂಲ ಆಗಿದೆ ಎಂದರು.
ಈ ಸುದ್ದಿ ಓದಿ:- ಈ ಬಿಸಿನೆಸ್ ನಲ್ಲಿ ತಿಂಗಳಿಗೆ 1 ಲಕ್ಷ ಅಲ್ಲ 3 ಲಕ್ಷ ದುಡಿಯಬಹುದು, ಫುಲ್ ಡಿಮ್ಯಾಂಡ್ ಇರುವ ಬಿಸಿನೆಸ್.!
ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ್ದಾರೆ, ಒಬ್ಬಳು ರಾಮಭಕ್ತಳಾಗಿ ನನಗೂ ಕೂಡ ಅದು ಅಪಾರ ಸಂತೋಷ ತಂದಿದೆ. ಐದು ಸಾವಿರ ಕೋಟಿ ಗಾತ್ರದ ಬಜೆಟ್ ಅದು ಆದರೆ, ನಮ್ಮ ಸರ್ಕಾರ ಒಂದು ತಿಂಗಳಿಗೆ ಮಹಿಳೆಯರಿಗೆ 4 ಸಾವಿರ ಕೋಟಿ ನೀಡಿ ಕರ್ನಾಟಕ ರಾಜ್ಯದಲ್ಲಿ ಪ್ರಾಕ್ಟಿಕಲ್ ಆಗಿ ರಾಮರಾಜ್ಯ ಸ್ಥಾಪನೆ ಮಾಡಲು ಮುಂದಾಗಿದೆ ಎಂದು ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ಟಾಂಗ್ ಕೊಟ್ಟರು. ಮುಂದುವರಿದು ಮಾತನಾಡಿದ ಅವರು ಜನರಿಗೆ ನೀರು, ಹಾಲು, ಮಜ್ಜಿಗೆಯ ವ್ಯತ್ತಾಸ ಗೊತ್ತಿದೆ. ನಮ್ಮ ಗ್ಯಾರಂಟಿಗಳನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ ಎಂದರು.