ಮನೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ ಅದರಿಂದ ಸೆರಿಹಿಡಿಯಲಾದ ಸೌರ ಶಕ್ತಿಯನ್ನು (Solar) ವಿದ್ಯುತ್ ಶಕ್ತಿಯಾಗಿ (Electricity) ಪರಿವರ್ತಿಸಿಕೊಂಡು ಗೃಹಬಳಕೆಗೂ ಉಪಯೋಗಿಸಬಹುದು ಇಷ್ಟು ಮಾತ್ರವಲ್ಲದೆ ಮಾರಾಟ ಮಾಡಿ ಲಾಭ ಕೂಡ ಮಾಡಬಹುದು. ಸಾಮಾನ್ಯ ಹಾಗೂ ಮಾಧ್ಯಮ ವರ್ಗದ ಜನತೆಗೂ ಕೂಡ ಈ ಅನುಕೂಲತೆ ಸಿಗಲಿ ಎನ್ನುವ ಕಾರಣದಿಂದಾಗಿ ಇಂತಹ ಯೋಜನೆಗಳಿಗೆ ಸರ್ಕಾರದಿಂದ (Government Scheme) ಕೂಡ ನೆರವು ನೀಡಲಾಗುತ್ತಿದೆ.
ಅಂತೆಯೇ ಬಹಳ ದಿನಗಳಿಂದ ಸರ್ಕಾರದ ವಲಯದಲ್ಲಿ ಚರ್ಚೆಯಲ್ಲಿದ್ದ ಸೌರ್ಯ ವಿದ್ಯುತ್ ಬಳಕೆಗೆ ಉತ್ತೇಜನ ನೀಡಲು ರೂಪಿಸಿರುವ ಪಿಎಂ ಸೂರ್ಯಘರ್ ಯೋಜನೆ – 2024 (PM Surya Ghar Scheme) / ಮುಫ್ತ್ ಬಿಜ್ಲಿ ಯೋಜನೆಗೆ ಈಗ ಸಚಿವ ಸಂಪುಟದ ಒಪ್ಪಿಗೆ ಕೂಡ ಸಿಕ್ಕಿದೆ. ಈ ಯೋಜನೆಯ ರೂಪರೇಶೆ ಏನು? ಇದರಿಂದ ಏನೆಲ್ಲ ಪ್ರಯೋಜನಗಳು ಸಿಗುತ್ತಿದೆ? ಎನ್ನುವ ಮಹತ್ವದ ಸುದ್ದಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇವೆ.
ಈ ಸುದ್ದಿ ಓದಿ:- ನಿಮ್ಮ ಜಮೀನಿನ ಪಹಣಿಗೆ (RTC) ಆಧಾರ್ ಲಿಂಕ್ ಮಾಡುವುದು ಕಡ್ಡಾಯ.! ಮೊಬೈಲ್ ನಲ್ಲಿಯೇ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!
ಮನೆಯ ಮಹಡಿ ಮೇಲೆ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಳ್ಳುವ ಮತ್ತು ಆ ಮೂಲಕ ಕುಟುಂಬ ಗರಿಷ್ಟ ರೂ. 78,000 ಆರ್ಥಿಕ ಲಾಭ ಪಡೆಯಬಹುದಾದ ಯೋಜನೆ ಇದಾಗಿದ್ದು, ಕೇಂದ್ರ ಸಚಿವ ಸಂಪುಟ ಇದಕ್ಕೆ ಅನುಮೋದನೆಯನ್ನು ನೀಡಿದೆ. ದೇಶಾದ್ಯಂತ ಒಟ್ಟು 1 ಕೋಟಿ ಕುಟುಂಬಗಳಿಗೆ ಈ ಯೋಜನೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ತೀರ್ಮಾನಿಸಿದ್ದು ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಳ್ಳುವ ಪ್ರತಿ ಕುಟುಂಬವು ತಿಂಗಳಿಗೆ 300 ಯುನಿಟ್ ಉಚಿತ ವಿದ್ಯುತ್ (300 Unit free Current) ಪಡೆಯಲಿದೆ.
ಇದರ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ರವರೇ (Minister Anuragh Takoor) ಮಾಹಿತಿ ಹಂಚಿಕೊಂಡಿದ್ದಾರೆ. PM ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯು ಕೇಂದ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದೆ ಈ ಯೋಜನೆಯನ್ನು ಪ್ರಧಾನಿ ಮೋದಿ (PM Narendra Modi) ಅವರು ಫೆಬ್ರವರಿ 13 ರಂದು ಉದ್ಘಾಟಿಸಿದ್ದರು.
ಈ ಸುದ್ದಿ ಓದಿ:- ತಹಶೀಲ್ದಾರ್ ಸೇರಿ 384 KAS ಹುದ್ದೆಗಳಿಗೆ ಅರ್ಜಿ ಆಹ್ವಾನ, KPSCಯಿಂದ ಅಧಿಕೃತ ಅಧಿಸೂಚನೆ ಪ್ರಕಟ.!
ಒಟ್ಟು 75,021 ಕೋಟಿ ರೂ. ವೆಚ್ಚದ ದೊಡ್ಡ ಬಜೆಟ್ ಯೋಜನೆ ಇದಾಗಿದೆ, ಈ ಯೋಜನೆಯಿಂದ ಹಲವು ರೀತಿಯ ಲಾಭಗಳು ಇವೆ ಎಂದು ಗುರುವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಸಚಿವ ಅನುರಾಗ್ ಠಾಕೂರ್ ವಿವರಿಸಿದರು.
ಈ ಯೋಜನೆಯನ್ವಯ ದೇಶಾದ್ಯಂತ 1 ಕೋಟಿ ಕುಟುಂಬವು ಪ್ರತಿ ತಿಂಗಳು 300 ಯುನಿಟ್ವರೆಗೆ ಉಚಿತ ವಿದ್ಯುತ್ ಪಡೆಯಬಹುದು, ಜೊತೆಯಲ್ಲೇ ದೇಶಾದ್ಯಂತ ಸೋಲಾರ್ ವಿದ್ಯುತ್ ಉತ್ಪಾದನಾ ಉಪಕರಣಗಳ ತಯಾರಿಕೆಗೂ ಪ್ರೋತ್ಸಾಹ ಸಿಗುತ್ತದೆ. ಈ ಉದ್ಯಮ ಯಶಸ್ವಿಯಾದರೆ ದೇಶಾದ್ಯಂತ 17 ಲಕ್ಷ ಮಂದಿಗೆ ನೇರ ಉದ್ಯೋಗ ದೊರಕುವ ನಿರೀಕ್ಷೆಯೂ ಇದೆ ಎಂದು ವಿವರಿಸಿದ್ದಾರೆ.
ಈ ಸುದ್ದಿ ಓದಿ:- ಈ ಬಿಸಿನೆಸ್ ನಲ್ಲಿ ತಿಂಗಳಿಗೆ 1 ಲಕ್ಷ ಅಲ್ಲ 3 ಲಕ್ಷ ದುಡಿಯಬಹುದು, ಫುಲ್ ಡಿಮ್ಯಾಂಡ್ ಇರುವ ಬಿಸಿನೆಸ್.!
ಈ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿ ಕುಟುಂಬಕ್ಕೆ ತಮ್ಮ ಮನೆಯ ಮಹಡಿ ಮೇಲೆ ಸೋಲಾರ್ ವಿದ್ಯುತ್ ಫಲಕ ಅಳವಡಿಕೆ ಮಾಡಿಕೊಳ್ಳಲು ಆರ್ಥಿಕ ನೆರವು ನೀಡಲಿದೆ. 2 ಕಿಲೋ ವ್ಯಾಟ್ವರೆಗೆ ವಿದ್ಯುತ್ ಉತ್ಪಾದನೆ ಮಾಡುವ ಉಪಕರಣಗಳನ್ನು ಅಳವಡಿಕೆ ಮಾಡಿಕೊಳ್ಳಲು ಪ್ರತಿ ಮನೆಗೂ ಯೋಜನಾ ವೆಚ್ಚದ 60% ರಷ್ಟು ಹಣವನ್ನು ಕೇಂದ್ರ ಸರ್ಕಾರ ಭರಿಸಲಿದೆ.
ಇನ್ನು 2 ರಿಂದ 3 ಕಿಲೋ ವ್ಯಾಟ್ವರೆಗಿನ ವಿದ್ಯುತ್ ಉತ್ಪಾದನೆಗೆ ಉಪಕರಣಗಳನ್ನು ಅಳವಡಿಕೆ ಮಾಡಿಕೊಳ್ಳಲು ಇಚ್ಛಿಸಿಕೊಳ್ಳುವವರಿಗೆ ಒಟ್ಟು ವೆಚ್ಚದ ಶೇ. 40ರಷ್ಟು ಹಣವನ್ನು ಸರ್ಕಾರ ಕೊಡಲಿದೆ. ಆದರೆ ಈ ಯೋಜನೆಗೆ 3 ಕಿಲೋ ವ್ಯಾಟ್ವರೆಗೆ ಮಾತ್ರ ಸರ್ಕಾರದ ನೆರವನ್ನು ಪಡೆಯಬಹುದು, 3 ಕಿಲೋ ವ್ಯಾಟ್ಗಿಂತಲೂ ಹೆಚ್ಚಿನ ವಿದ್ಯುತ್ ಉತ್ಪಾದಿಸಿ ಬಳಸಲು ಬಯಸುವ ಕುಟುಂಬಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿ ಓದಿ:- ಮಗಳ ಹೆಸರಲ್ಲಿ ಕೇವಲ 1,799 ರೂಪಾಯಿ ಹೂಡಿಕೆ ಮಾಡಿ ಸಾಕು 7 ಪಡೆಯಬಹುದು, LIC ಹೊಸ ಸ್ಕೀಮ್.!
ಸೌರ ವಿದ್ಯುತ್ ಫಲಕ ಹಾಗೂ ಇನ್ನಿತರ ಉಪಕರಣಗಳ ಈಗಿನ ಮಾರುಕಟ್ಟೆ ದರವನ್ನು ಲೆಕ್ಕ ಹಾಕಿ 1 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ವ್ಯವಸ್ಥೆಗೆ ಕೇಂದ್ರ ಸರ್ಕಾರದಿಂದ ರೂ.30,000 ಆರ್ಥಿಕ ನೆರವು, 2 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ವ್ಯವಸ್ಥೆಗೆ ರೂ.60,000 ಮತ್ತು 3 ಕಿಲೋ ವ್ಯಾಟ್ ಒಳಗಿನ ವಿದ್ಯುತ್ ಉತ್ಪಾದನಾ ವ್ಯವಸ್ಥೆಗೆ ರೂ.78,000 ಆರ್ಥಿಕ ನೆರವು ಸಿಗುತ್ತಿದೆ.