ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಎನ್ನುವ ದ್ಯೇಯದೊಂದಿಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಘೋಷಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು (CM Siddaramaih) ಮಾರ್ಚ್ 3, 2024ರಂದು ಬೆಂಗಳೂರಿನಲ್ಲಿ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ನೀಡಿದರು.
ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ಕೈಜೋಡಿಸಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ (PM Awas Yojana) ನಿರ್ಮಾಣವಾಗಿರುವ ಮನೆಗಳ ವಿತರಣೆ ಕಾರ್ಯಕ್ರಮ ಮಾಡಿದರು. ಯೋಜನೆಗೆ ಹಿಂದೆಯೇ ಬೆಂಗಳೂರಿನ ಕೆಲವು ಪ್ರದೇಶಗಳನ್ನು ಗುರುತಿಸಿ, ಮನೆ ಇಲ್ಲದವರಿಗೆ ಸೂರು ಕಲ್ಪಿಸುವ ಕಾರ್ಯ ನಡೆಯುತ್ತಿತ್ತು.
ಆ ಪ್ರಕಾರ ಬೆಂಗಳೂರಿನ ಕೊಳಗೇರಿ ಅಭಿವೃದ್ಧಿ ಮಂಡಳಿಯವರು 1,80,230 ಮನೆಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದರು. ಈಗ ಆ ಮನೆಗಳ ಪೈಕಿ 36,789 ಪೂರ್ಣಗೊಂಡಿದ್ದು ಎಲ್ಲಾ ಮೂಲ ಸೌಕರ್ಯಗಳು ಸಿಗುವಂತೆ ಮನೆಯನ್ನು ನಿರ್ಮಾಣ ಮಾಡಲಾಗಿದೆ.
ಈ ಸುದ್ದಿ ಓದಿ:- ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ವೇತನ 56,100 ಆಸಕ್ತರು ಅರ್ಜಿ ಸಲ್ಲಿಸಿ.!
ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಕಾಮಗಾರಿ ಪೂರ್ಣಗೊಂಡ ವಾಸಕ್ಕೆ ಅನುಕೂಲಕರವಾಗಿರುವ ಮನೆಗಳನ್ನು ಉದ್ಘಾಟನೆ ಮಾಡಿ ಫಲಾನುಭವಿಗಳಿಗೆ ಮನೆ ಹಕ್ಕು ಪತ್ರವನ್ನು ಹಸ್ತಾಂತರ ಮಾಡಿದ್ದಾರೆ ಈ ಕಾರ್ಯಕ್ರಮದಲ್ಲಿ ವಸತಿ ಸಚಿವರಾದ ಜಮೀರ್ ಅಹಮದ್ ಅವರು ಸೇರಿದಂತೆ ಅನೇಕ ಅಧಿಕಾರಿಗಳು ಭಾಗಿಯಾಗಿದ್ದರು.
ಫಲಾನುಭವಿಗಳಿಗೆ ಮನೆ ಕೀ ಮತ್ತು ಹಕ್ಕು ಪತ್ರ ವಿತರಿಸಿದ ಮುಖ್ಯಮಂತ್ರಿಗಳು ಮನೆ ನಿರ್ಮಾಣದ ಕಾರ್ಯದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ಮನೆ ನಿರ್ಮಾಣ ಮಾಡಿರುವುದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ತಿಳಿಸಿದ್ದಾರೆ.
ಮನೆಯ ಹಸ್ತಾಂತರಿಸುವ ಸಮಯದಲ್ಲಿ ಅಥವಾ ಬಿಲ್ ಪಾವತಿ ವೇಳೆ ಗುತ್ತಿಗೆದಾರರು ತೊಂದರೆಗಳನ್ನು ನೀಡಿದ್ದರೆ ತಕ್ಷಣ ಉನ್ನತ ಅಧಿಕಾರಿಗಳಿಗೆ ದೂರು ನೀಡಬೇಕು ಮುಖ್ಯಮಂತ್ರಿಗಳು ತಿಳಿಸಿದರು. ಬಳಿಕ ಕಾರ್ಯಕ್ರಮದ ಕುರಿತು ಮತ್ತು ಯೋಜನೆ ಬಗ್ಗೆ ಮಾಹಿತಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಇತ್ಯಾದಿಗಳಲ್ಲಿ ನಾಡಿನ ಸೂರು ರಹಿತ ಬಡಕುಟುಂಬಗಳಿಗೆ ನೆಮ್ಮದಿಯ ಸೂರು ಒದಗಿಸುವುದು ನಮ್ಮ ಆದ್ಯತೆಯಾಗಿದೆ.
ಈ ಸುದ್ದಿ ಓದಿ:- ಇನ್ಮುಂದೆ ವಾಟ್ಸಾಪ್ನಲ್ಲೇ ಸಿಗಲಿದೆ ಗ್ರಾಮ ಪಂಚಾಯತಿ ಸೇವೆಗಳು.! ಈ ವಾಟ್ಸಾಪ್ ನಂಬರ್ಗೆ ಹಾಯ್ ಎಂದು ಕಳುಹಿಸಿ ಸಾಕು.!
ಸರ್ವರಿಗೂ ಸೂರು ಹ್ಯಾಷ್ ಟ್ಯಾಗ್ ನೊಂದಿಗೆ
ಮುಖ್ಯಮಂತ್ರಿಗಳು ಹಂಚಿಕೊಂಡಿದ್ದಾರೆ. ಏನಿದು ಯೋಜನೆ? ಯಾರು ಅರ್ಹರು? ಏನೆಲ್ಲ ದಾಖಲೆಗಳನ್ನು ನೀಡಬೇಕಾಗುತ್ತದೆ? ಮತ್ತು ಸಿಗುವುದು ಅನುದಾನ ಎಷ್ಟು? ಎನ್ನುವ ವಿವರ ಹೀಗಿದೆ ನೋಡಿ.
ಯೋಜನೆ ಹೆಸರು:- ಪ್ರಧಾನ ಮಂತ್ರಿ ಆವಾಸ್ ಯೋಜನೆ
ಸಿಗುವ ಅನುದಾನ:-
* ಬಡ ಕುಟುಂಬಗಳು ಸ್ವಂತ ಮನೆ ನಿರ್ಮಾಣಕ್ಕೆ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ ರೂ.1,50,000 ನೆರವು ಸಿಗುತ್ತಿದೆ.
* ಫಲಾನುಭವಿಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಆಗುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಕೂಡ ರೂ. 4,00,000 ನೀಡುತ್ತಿದೆ.
ಅರ್ಜಿ ಸಲ್ಲಿಸಲು ಮನದಂಡಗಳು:-
* ಅರ್ಜಿ ದಾರರು ಕರ್ನಾಟಕದ ಮೂಲ ನಿವಾಸಿಯಾಗಿರಬೇಕು.
* ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
* ಈ ಮೊದಲು ಯಾವುದೇ ಸರ್ಕಾರಿ ಯೋಜನೆಯ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಸಹಾಯಧನ ಪಡೆದಿರಬಾರದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಆರ್ಥಿಕವಾಗಿ ನಾಲ್ಕು ವಿಭಾಗವನ್ನು ಮಾಡಲಾಗಿದೆ.
1. ಆರ್ಥಿಕವಾಗಿ ದುರ್ಬಲ ಹೊಂದಿದ ಕುಟುಂಬ
2. ಕಡಿಮೆ ಆದಾಯ ಹೊಂದಿರುವ ಕುಟುಂಬ
3. ಮಧ್ಯಮ ಆದಾಯ ಹೊಂದಿರುವ ಕುಟುಂಬ A,
4. ಮಧ್ಯಮ ಆದಾಯ ಹೊಂದಿರುವ ಕುಟುಂಬ B ಎಂದು ವರ್ಗಗಳಾಗಿ ಮಾಡಲಾಗಿದೆ.
* ಅರ್ಜಿ ಸಲ್ಲಿಸುವ ಕುಟುಂಬಗಳ ಆದಾಯದ ಮಿತಿ ಪ್ರತಿ ವಿಭಾಗಕ್ಕೂ ಬೇರೆ ಬೇರೆ ರೀತಿಯಾಗಿ ಇರುತ್ತದೆ.
1. ಆರ್ಥಿಕವಾಗಿ ದುರ್ಬಲ ಹೊಂದಿದ ಕುಟುಂಬಕ್ಕೆ 3 ಲಕ್ಷ
2. ಕಡಿಮೆ ಆದಾಯ ಹೊಂದಿರುವ ಕುಟುಂಬಕ್ಕೆ 6 ಲಕ್ಷ
3. ಮಧ್ಯಮ ಆದಾಯ ಹೊಂದಿರುವ ಕುಟುಂಬ A ವರ್ಗಕ್ಕೆ 12 ಲಕ್ಷ
4. ಮಧ್ಯಮ ಆದಾಯ ಹೊಂದಿರುವ ಕುಟುಂಬ B ವರ್ಗಕ್ಕೆ 18 ಲಕ್ಷ
* ಯೋಜನೆ ನೆರವು ಪಡೆಯಲು ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರಿ ಹೊಂದಿರಬಾರದು.
* ಅರ್ಜಿದಾರನ ಹೆಸರಿನಲ್ಲಿ ಸ್ವಂತ ಮನೆ ಇರಬಾರದು ಮತ್ತು ಬಾಡಿಗೆ ಮನೆಯಲ್ಲಿ ಇರುವ ಬಗ್ಗೆ ನಿಖರವಾದ ದಾಖಲೆಗಳನ್ನು ಸಲ್ಲಿಸಬೇಕು.
ಬೇಕಾಗುವ ದಾಖಲೆಗಳು:-
* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
* ಮನೆ ಬಾಡಿಗೆ ಕಟ್ಟಿದ ಬಿಲ್ ಅಥವಾ ಬಾಡಿಗೆ ಅಗ್ರಿಮೆಂಟ್
* ಆದಾಯ ಮತ್ತು ಜಾತಿ ಪ್ರಮಾಣಪತ್ರ
* ಇನ್ನಿತ್ಯಾದಿ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ?
* ಯಾವುದೇ ಸೇವಾ ಸಿಂಧು ಕೇಂದ್ರಗಳಲ್ಲಿ ದಾಖಲೆಗಳನ್ನು ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
* ಸರ್ಕಾರದ ಅಧಿಕೃತ ವೆಬ್ಸೈಟ್ ಗಳಲ್ಲಿ ಹೆಚ್ಚಿನ ಮಾಹಿತಿ ಪಡೆಯಿರಿ.