ಹೈ ಟೆಕ್ ರೆಡಿಮೇಡ್ ಮನೆಗಳು ಕಡಿಮೆ ಬೆಲೆಗೆ ಲಭ್ಯ ಸ್ವಂತ ಮನೆ ನಿರ್ಮಿಸುವ ಆಸೆ ಇದ್ದವರು ನೋಡಿ

 

WhatsApp Group Join Now
Telegram Group Join Now

ಮನೆ ಎನ್ನುವುದು ಈಗ ನಾನಾ ಅರ್ಥ ಪಡೆದುಕೊಂಡಿದೆ. ನಾವು ಸಾಂಪ್ರದಾಯಿಕವಾಗಿ ವಾಸಿಸಲು ನಮ್ಮ ಇಚ್ಛೆಯಂತೆ ಕಟ್ಟಿಸಿಕೊಳ್ಳುವ ಮನೆ, ಜೊತೆಗೆ ಫಾರ್ಮ್ ಹೌಸ್ ಗಳಲ್ಲಿ ಮನೆ, ರೆಸಾರ್ಟ್ ಗಳಲ್ಲಿ ಮನೆ ಅಥವಾ ನಾವು ಯಾರಿಗೋ ಉಚಿತವಾಗಿ ಮನೆ ಕಟ್ಟಿಸಿಕೊಳ್ಳಲು ಮತ್ತೊಂದು ರೂಪದಲ್ಲಿ ಮನೆ ಕಟ್ಟಿಸಿ ಕೊಡುವುದು ಈ ರೀತಿ ನಾನಾ ವಿಧದ ಮನೆಗಳು ರೆಡಿ ಆಗುತ್ತಿವೆ.

ಇದರಲ್ಲಿ ಇಂದು ನಾವು ಒಂದು ರೆಡಿಮೇಡ್ ಮನೆ ಬಗ್ಗೆ ತಿಳಿಸುತ್ತಿದ್ದೇವೆ. ಲ್ಯಾಂಡ್ ಕ್ರಾಫ್ಟ್ (Landcraft) ಎನ್ನುವ ಕಂಪನಿಯೊಂದು ರೆಡಿಮೇಡ್ ಮನೆಯನ್ನು ಭಾರತದಾದ್ಯಂತ ಡೆಲಿವರಿ ಮಾಡುತ್ತಿದೆ ಇದನ್ನು ಮಾಡ್ಯೂಲಾರ್ ಹೋಮ್ಸ್ (Modular Homes) ಎಂದು ಕರೆಯುತ್ತಾರೆ. ಫಾರ್ಮ್ ಹೌಸ್ ಗಳಲ್ಲಿ ರೆಸಾರ್ಟ್ ಗಳಲ್ಲಿ ಈ ಮನೆಗಳನ್ನು ರೆಡಿಮೇಡ್ ಆಗಿ ಇನ್ಸ್ಟಾಲ್ ಮಾಡಬಹುದು.

ಎಷ್ಟು ಖರ್ಚಾಗುತ್ತದೆ? ಆರ್ಡರ್ ಮಾಡುವುದು ಹೇಗೆ? ಮನೆ ಹೇಗಿರುತ್ತದೆ ಎಲ್ಲಾ ಸೌಕರ್ಯಗಳು ಇರುತ್ತವೆಯಾ? ಬಾಳಿಕೆ ಎಷ್ಟು? ಎನ್ನುವ ವಿವರ ಹೀಗಿದೆ ನೋಡಿ. ಇವುಗಳನ್ನು ಫ್ರೀ ಫ್ಯಾಬ್ರಿಕೇಟೆಡ್ ಹೋಮ್ಸ್ (Pre fabricated homes) ಕಾರ್ಟೇಜ್ ಹೋಮ್ಸ್ ಎಂದು ಕೂಡ ಕರೆಯುತ್ತಾರೆ ಇದು 200Sq.ft ಇರುತ್ತದೆ.

ಈ ಸುದ್ದಿ ನೋಡಿ:- ಕೃಷಿ ಉಪಕರಣ ಖರೀದಿಸಲು ಸರ್ಕಾರದಿಂದ ಶೇಕಡಾ 90% ಸಬ್ಸಿಡಿ.!

6 ರಿಂದ 8 ಲಕ್ಷ ಬಜೆಟ್ ಮನೆ ದೊಡ್ಡದಾದಂತೆ ಬೆಲೆ ಕೂಡ ಹೆಚ್ಚುತ್ತಾ ಹೋಗುತ್ತದೆ ಭಾರತದಾದ್ಯಂತ ಯಾವುದೇ ಕಡೆ ಆರ್ಡರ್ ಕೇಳಿದರೂ ಕಂಪನಿಯವರು ಬಂದು ಒಂದರಿಂದ ಒಂದೂವರೆ ತಿಂಗಳೊಳಗೆ ಕೆಲಸ ಮುಗಿಸಿ ಕೊಡುತ್ತಾರೆ. ಮನೆ ಒಳಗೆ ಒಂದು ಬೆಡ್ರೂಮ್ ಒಂದು ಅಟ್ಯಾಚ್ ಬಾತ್ ರೂಮ್ ಇರುತ್ತದೆ ಕಿಚನ್ ವ್ಯವಸ್ಥೆ ಇರುವುದಿಲ್ಲ, ಬೇಕಿದ್ದವರು ಆರ್ಡರ್ ಮಾಡಿದರೆ ಅದನ್ನು ಕೂಡ ಮಾಡಿಕೊಡುತ್ತಾರೆ.

ಮನೆ ಹೇಗಿರುತ್ತದೆ ಎಂದರೆ ಕೆಳಗಡೆ ಸಿಮೆಂಟ್ ಲೆಗ್ ಇರುತ್ತದೆ, ಫೌಂಡೇಶನ್ ರೀತಿ ಗಟ್ಟಿಯಾಗಿರುತ್ತದೆ ಲೆಗ್ ಕಬ್ಬಿಣದ್ದಾಗಿರುತ್ತದೆ. ನಂತರ ಕಂಪ್ಲೀಟ್ ಮೆಟಲ್ ಫ್ರೇಮ್ ಅದರ ಮೇಲೆ ಮನೆ ನಿಂತಿರುತ್ತದೆ. ಮನೆ ಸುತ್ತ ಔಟರ್ ಹೇಗಿರುತ್ತದೆ ಎಂದರೆ ಮಾಡ್ಯುಲರ್ ಹೋಮ್ ಶೀಟ್ ನಿಂದ ಮಾಡಿರುತ್ತಾರೆ, ಈ ಶೀಟ್ ಕೇರಳದಿಂದ ತರಿಸಲಾಗಿರುತ್ತದೆ ಇದು ಬೇಡ ಎಂದರೆ PVC, UPVC, ವುಡ್ ಶೀಟ್ ಗಳನ್ನು ಕೂಡ ಬಳಸಬಹುದು.

ಬೇರೆ ಬೇರೆ ಡಿಸೈನ್ ಕೂಡ ಇರುತ್ತದೆ, ನಿಮ್ಮ ಆಸಕ್ತಿ ಅನುಸಾರ ಆರಿಸಬಹುದು. ವೆದರ್ ಪ್ರೂಫ್ (weather Proof home) ಆಗಿರುತ್ತದೆ ಮನೆ ಕೂಲ್ ಫೀಲ್ ಕೊಡುತ್ತದೆ. ಪ್ಲಂಬಿಂಗ್ ವ್ಯವಸ್ಥೆಯು ಅಚ್ಚುಕಟ್ಟಾಗಿರುತ್ತದೆ ವಾಟರ್ ಕನೆಕ್ಷನ್ ಇನ್ಪುಟ್, ವಾಟರ್ ಕನೆಕ್ಷನ್ ಔಟ್ಪುಟ್, ಬಾತ್ರೂಮ್ ಕನೆಕ್ಷನ್ ಇನ್ಪುಟ್ ಬಾತ್ರೂಮ್ ಕನೆಕ್ಷನ್ ಎಲ್ಲವೂ ಇರುತ್ತದೆ. ಫೌಂಡೇಶನ್ ನಲ್ಲಿಯೇ ಮೋಟರ್ ಮತ್ತು ಇದೆಲ್ಲವೂ ಕವರ್ ಆಗಿರುತ್ತದೆ.

ಈ ಸುದ್ದಿ ನೋಡಿ:- ಪ್ರಧಾನ ಮಂತ್ರಿ ಆವಾಸ್ ಯೋಜನಯಡಿ 36,789 ಮನೆ ಹಂಚಿಕೆ.! ಸ್ವಂತ ಮನೆ ಇಲ್ಲದವರು ಅರ್ಜಿ ಸಲ್ಲಿಸಿ.!

ಸುತ್ತಲು ಮೆಟಲ್ ಫ್ರೇಮ್ ರನ್ ಆಗಿರುತ್ತದೆ, UPVC ಮೇನ್ ಡೋರ್ (UPVC Mainroad) ಮತ್ತು ಮನೆ ಮುಂದೆ ಕುಳಿತುಕೊಳ್ಳುವುದಕ್ಕೆ ಬಾಲ್ಕನಿ ಕೂಡ ಮಾಡಲಾಗಿರುತ್ತದೆ. ಇದಕ್ಕೆ ವುಡನ್ ಫ್ರೇಮ್ ರೇಲಿಂಗ್ (Wooden Frame Railing) ಇರುತ್ತದೆ. ಈ ಮನೆಗಳು ಹೇಗಿರುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತೆ ಯಾರಿಗಾದರೂ ಈ ರೀತಿಯ ಮನೆಗಳನ್ನು ತಮ್ಮ ಫಾರ್ಮ್ ಹೌಸ್ ಗಳಲ್ಲಿ ಮಾಡಿಕೊಳ್ಳಬೇಕು ಎನ್ನುವ ಇಚ್ಛೆ ಇದ್ದರೆ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ ಅಥವಾ ಈ ವೆಬ್ ಸೈಟ್ ಗೆ ಭೇಟಿ ಕೊಡಿ.

ಸಹಾಯವಾಣಿ:
09947512000

ವೆಬ್ಸೈಟ್ ವಿಳಾಸ:-
https://www.loomcraftsprefab.com/

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now