ಡ್ರೈ ಫ್ರೂಟ್ ಗಳ (Dry fruits) ಪ್ರಾಮುಖ್ಯತೆ ಏನು? ಇದರ ಸೇವನೆ ಆರೋಗ್ಯದ ಎಷ್ಟು ಉತ್ತಮ ಪರಿಣಾಮ ಬೀರುತ್ತದೆ? ಇದರ ಸೇವನೆ ಯಾಕೆ ಮುಖ್ಯ? ಈ ರೀತಿ ಡ್ರೈ ಫ್ರೂಟ್ ಗಳಿಂದ ಆಹಾರ ಮಾತ್ರವಲ್ಲದೆ ಬೇರೆ ಏನೆಲ್ಲಾ ತಯಾರಿಸುತ್ತಾರೆ. ಕಾಸ್ಮೆಟಿಕ್ ಗಳಲ್ಲಿ, ಮೆಡಿಸನ್ ಗಳಲ್ಲಿ ಆಹಾರ ಪದಾರ್ಥಗಳಲ್ಲಿ ಬಳಸುವ ಡ್ರೈ ಫ್ರೂಟ್ ಬೆಲೆ ಎಷ್ಟು ದುಬಾರಿ ಇತ್ಯಾದಿ ಮಾಹಿತಿಗಳು ಗೊತ್ತೇ ಇವೆ.
ನಮಗೆ ಗೊತ್ತಿರುವ ಡ್ರೈ ಫ್ರೂಟ್ ಗಳೆಂದರೆ ದ್ರಾಕ್ಷಿ, ಗೋಡಂಬಿ , ಬಾದಾಮಿ, ಪಿಸ್ತಾ, ಖರ್ಜೂರ, ಕೊಬ್ಬರಿ, ವಾಲ್ ನಟ್ ಇನ್ನೊಂದೆರಡು ಅಷ್ಟೇ ಆದರೆ ಪ್ರಪಂಚದಾದ್ಯಂತ ಬೇಡಿಕೆ ಇರುವ, ಡ್ರೈ ಫ್ರೂಟ್ ಗಳಲ್ಲೇ ಅತಿ ಹೆಚ್ಚು ದುಬಾರಿಯಾದ ಮತ್ತೊಂದು ಬಗೆ ಇದೆ. ಇದರ ಹೆಸರು ಮೆಕಾಡಾಮಿಯಾ (Macadamia).
ಇದು ಎಷ್ಟು ದುಬಾರಿ ಎಂದರೆ ಒಂದು Kgಗೆ ರೂ.4,000 – ರೂ.5,000 ಬೆಲೆ ಬಾಳುತ್ತದೆ ಮತ್ತು ಒಂದು ಮೆಕಡಾಮಿಯಾ ಕಾಯಿಯೇ 40 ಗ್ರಾಂ ಬರುತ್ತದೆ. ನೋಡುವುದಕ್ಕೆ ವಾಲ್ನಟ್ ರೀತಿ ಕಾಣುವ ದುಂಡಗಿರುವ ಇದು ಮೊದಲು ಹಸಿರು ಬಣ್ಣದ ಲೇಯರ್ ಹೊಂದಿರುತ್ತದೆ.
ಈ ಸುದ್ದಿ ಓದಿ:- ಒಂದು ಹೆಕ್ಟರ್ ಹೊಲದಲ್ಲಿ ಒಂದು ಗುಂಟೆ ಜಾಗ ನೀಡಿದರೆ ರೈತನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ.!
ಇದನ್ನು ಕಟಾವು ಮಾಡಿ ಮಾರಾಟ ಮಾಡುವುದಾದರೆ ಹಸಿರು ಬಣ್ಣದ ಲೇಯರ್ ತೆಗೆದು ಶೇಖರಿಸಬೇಕು ಆಗ ಬ್ರೌನ್ ಕಲರ್ ಲೇಯರ್ ಕಾಣುತ್ತದೆ. ಅದರ ಒಳಗೆ ಕಡಲೆ ಬೀಜ ಬಾದಾಮಿ ರೀತಿ ಸೆಲ್ ಪೂರ್ತಿ ಮೆಕಡಾಮಿಯ ತುಂಬಿಕೊಂಡಿರುತ್ತದೆ, ರುಚಿ ಕೂಡ ಅತ್ಯದ್ಭುತವಾಗಿರುತ್ತದೆ.
ಒಮ್ಮೆ ತಿಂದರೆ ತಿನ್ನುತ್ತಲೇ ಇರಬೇಕು ಎನಿಸುತ್ತದೆ ಬಾಯಿಗೆ ಹಾಕಿದರೆ ಶೇಷವು ಉಳಿಯದಂತೆ ಪೂರ್ತಿ ಕರಗಿ ಹೋಗುತ್ತದೆ ಈ ಮೆಕಡಾಮಿಯ ಡ್ರೈ ಫ್ರೂಟ್ ಆಗಿ, ಐಸ್ ಕ್ರೀಮ್ ಗಳಲ್ಲಿ, ಕಾಸ್ಮೆಟಿಕ್ ಗಳಲ್ಲಿ, ಫ್ಲೇವರ್ ಆಗಿ ಮೆಡಿಸನ್ ಗಳಲ್ಲಿ ಬಳಕೆ ಆಗುತ್ತದೆ. ಬಹಳ ಹೇರಳವಾದ ಪೋಷಕಾಂಶ ಇರುವುದರಿಂದ ತಿನ್ನಲು ಸಿಗುವುದು ಹೆಚ್ಚು ಎನ್ನಬಹುದು. ವಿದೇಶದಲ್ಲಿ ಬಹಳ ಬೇಡಿಕೆ ಇದೆ.
ಅಷ್ಟೇ ಅಲ್ಲದೆ ಇದರ ಶೆಲ್ ಕೂಡ ತೆಂಗಿನಕಾಯಿ ಚಿಪ್ಪಿನ ರೀತಿ ಬಳಕೆ ಆಗುತ್ತದೆ ಪ್ರಪಂಚದಾದ್ಯಂತ ಇದಕ್ಕೆ ಬೇಡಿಕೆ ಇದ್ದು ನಮ್ಮ ರಾಜ್ಯದಲ್ಲಿ ದಕ್ಷಿಣ ಭಾಗದಲ್ಲಿ ಮಾತ್ರ ಇದನ್ನು ಬೆಳೆಯುವುದಕ್ಕೆ ಉತ್ತಮವಾದ ವಾತಾವರಣ ಇದೆ. ಇಂದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡಿನ ಅನೇಕ ರೈತರು ಈ ಮೆಕಡಾಮಿಯ ಕೃಷಿ ಮಾಡಿ ಕೈ ತುಂಬಾ ಆದಾಯ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿ:- ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ಹೇಗಿದೆ ನೋಡಿ.! ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!
Kg ಗೆ ರೂ.4,000 ದಿಂದ ರೂ.5,000 ಇರುವುದರಿಂದ ಕೋಟಿಗಟ್ಟಲೆ ಆದಾಯವನ್ನು ನೋಡುತ್ತಿದ್ದಾರೆ. ಒಂದು ಎಕರೆಗೆ 350 ಗಿಡಗಳನ್ನು ನೆಡೆಯಬಹುದು ಇದರ ತಳಿ ಸಿಗುವ ನರ್ಸರಿ ವಿಳಾಸವನ್ನು ಕೂಡ ಲೇಖನದ ಕೆಳಗೆ ಕೊಡುತ್ತೇವೆ. ಒಂದು ಅಡಿ, ಎರಡು ಅಡಿ, ಮೂರು ಅಡಿ ಈ ರೀತಿ ನೀವು ಬಯಸುವ ಎತ್ತರ ಹಾಗೂ ನೀವು ಬೆಳೆಯಲು ಇಚ್ಚಿಸುವ ತಳಿ ಆಧಾರದ ಮೇಲೆ ಬೆಲೆ ನಿರ್ಧಾರ ಆಗುತ್ತದೆ.
ಒಂದು ಗಿಡಕ್ಕೆ 250 ರೂಪಾಯಿ ಇಂದ ಸಾವಿರದವರೆಗೂ ಕೂಡ ಬೆಲೆ ಇದೆ. ಬಹಳ ದುಬಾರಿಯಾದ ಕೃಷಿ ಎಂದು ಕರೆಸಿಕೊಂಡಿರುವ ಈ ಕೃಷಿಯನ್ನು ಈಗಾಗಲೇ ನಮ್ಮ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯೂ ರೈತರು ಅಳವಡಿಸಿಕೊಂಡಿದ್ದಾರೆ. ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಇದರ ಕುರಿತಾದ ಯಾವುದೇ ವಿವರ ಬೇಕಿದ್ದರೂ ಅಥವಾ ಗಿಡಗಳು ಕಡಿಮೆ ಪ್ರಮಾಣದಲ್ಲಿ ಬೇಕಿದ್ದರೆ ಈ ಕೆಳಕಂಡ ಸಂಖ್ಯೆಗಳಿಗೆ ಸಂಪರ್ಕಿಸಿ. ಮಂಜುಗೌಡ – 8618834969