ರೈತ ಮನಸ್ಸು ಮಾಡಿದರೆ ಆತ ಕೃಷಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದರ ಮೂಲಕ ತಾನು ಕೂಡ ಯಾವುದೇ ಸರ್ಕಾರಿ ನೌಕರರಿಗಿಂತ ಅಥವಾ ಉದ್ಯಮಿಗಿಂತ ಕಡಿಮೆ ಇಲ್ಲದಂತೆ ಆದಾಯ ಮಾಡಬಹುದು ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳನ್ನು ನಾವು ಕಂಡಿದ್ದೇವೆ. ಇಂದು ಸಮಗ್ರ ಕೃಷಿ ಪದ್ಧತಿ ಹಾಗೂ ಕೃಷಿಯಲ್ಲಿ ಆಧುನಿಕತೆ ತಂದು ಅನೇಕ ರೈತರು ಯಶಸ್ವಿಯಾಗಿದ್ದಾರೆ.
ರೈತನು ಯಾವುದರಲ್ಲಿ ಹೆಚ್ಚಿಗೆ ಲಾಭ ಇದೆ ಆ ಬೆಳೆಯನ್ನು ಹೆಚ್ಚಿನ ರಿಸ್ಕ್ ಇಲ್ಲದೆ ಅಗತ್ಯ ಕ್ರಮಗಳನ್ನು ಕೈಗೊಂಡು ಬೆಳೆಯುವುದರಿಂದ ಖಂಡಿತವಾಗಿಯೂ ಲಾಭ ಮಾಡಬಹುದು. ಆಹಾರ ಬೆಳೆಗಳ ಜೊತೆಗೆ ವಾಣಿಜ್ಯ ಬೆಳೆಗಳು ಕೂಡ ಬೆಳೆಯುವುದರಿಂದ ರೈತನು ಹೆಚ್ಚಿನ ಆದಾಯ ಹೊಂದಬಹುದು.
ಇಂದು ವಾಣಿಜ್ಯ ಬೆಳೆಗಳ ಪಟ್ಟಿಯಲ್ಲಿ ಆಗರ್ ವುಡ್ ಸೇರಿದೆ, ಈ ಕೃಷಿ ಬಗ್ಗೆ ನಮ್ಮ ಈ ಲೇಖನದ ಮೂಲಕ ರೈತರಿಗೆ ಕೆಲ ಸಂಗತಿಗಳನ್ನು ಪರಿಚಯಿಸಿಕೊಡಲು ಇಚ್ಛಿಸುತ್ತಿದ್ದೇವೆ ಅಗರ್ ವುಡ್ ನ್ನು ಅಡಿಕೆ ಬೆಳೆ ಜೊತೆ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ.
ಈ ಸುದ್ದಿ ಓದಿ:- ಮರಳು ಬೇಡ ಸಿಮೆಂಟ್ ಬೇಡ ಈ ಪ್ಲಾಸ್ಟರ್ ಮಾಡಿಸಿದರೆ ನಿಮ್ಮ ಮನೆ ಧಗ ಧಗಿಸುವ ಬೇಸಿಗೆಯಲ್ಲೂ ತಂಪಾಗಿರುತ್ತದೆ.!
ಕರ್ನಾಟಕದ ಹೆಸರಾಂತ ಅಗರ್ ಫುಡ್ ಬೆಳೆಗಾರರಲ್ಲಿ ಒಬ್ಬರಾದ ಪ್ರಗತಿಪರ ರೈತ ಸಂಪತ್ ಎನ್ನುವವರು ಖಾಸಗಿ ಯೂಟ್ಯೂಬ್ ಚಾನೆಲ್ ಸಂದರ್ಶನ ಒಂದರಲ್ಲಿ ಅಗರ್ ವುಡ್ ಕೃಷಿ ಹೇಗೆ ಮಾಡುವುದು? ಯಾವ ರೀತಿ ಮಾಡಿದರೆ ಲಾಭ? ಎಷ್ಟೆಲ್ಲಾ ರಿಸ್ಕ್ ಇರುತ್ತದೆ, ಬೇಡಿಕೆ ಹೇಗಿದೆ? ಎಲ್ಲಿ ಬಳಕೆಯಾಗುತ್ತದೆ? ಆದಾಯ ಹೇಗಿರುತ್ತದೆ? ಎನ್ನುವುದರ ಬಗ್ಗೆ ಎಲ್ಲಾ ವಿವರಿಸಿದ್ದಾರೆ.
ಅವರು ಹೇಳುವ ಪ್ರಕಾರ ಶ್ರೀಗಂಧದ ಮರಕ್ಕಿಂತಲೂ ದುಬಾರಿ ಅಗರ್ ವುಡ್ ಒಮ್ಮೆ 50 ಲಕ್ಷ ಸಾವಿರ ಮಾಡಿದರೆ 50 ಲಕ್ಷ ಆದಾಯ ಮಾಡಬಹುದು ಎನ್ನುತ್ತಾರೆ ಇವರು. ನಾನು ಈ ಅಗರ್ ಕೃಷಿ ಬಗ್ಗೆ ಚಂದನ ವಾಹಿನಿಯಲ್ಲಿ ಕೂಡ ಕಾರ್ಯಕ್ರಮ ಕೊಟ್ಟಿದ್ದೆ ಅದಾದ ಬಳಿಕ ಎಲ್ಲಾ ಕಡೆ ಇದು ಫೇಮಸ್ ಆಯ್ತು.
ಅನೇಕ ಕಡೆಗಳಿಂದ ನನಗೆ ಈ ಕೃಷಿ ಮಾಡುವುದು ಹೇಗೆ ಇದರ ತಳಿ ಕೊಡಿ ಗಿಡ ಕೊಡಿ ಎಂದು ಅನೇಕ ಜನರು ವಿಚಾರಿಸಿಕೊಂಡು ಕರೆ ಮಾಡುತ್ತಿದ್ದರು. ಆದರೆ ಅದೇ ಸಮಯಕ್ಕೆ ಮಾರ್ಕೆಟ್ ನಲ್ಲಿ ಇನ್ನು ಮುಂದೆ ಅಗರ್ ಮಾರಾಟ ಆಗೋದಿಲ್ಲ ಎನ್ನುವ ಗಾಳಿ ಸುದ್ದಿ ಹಬ್ಬಿತ್ತು. ನನ್ನ ಬಳಿಯು ಸಾಕಷ್ಟು ಮರಗಳು ಇದ್ದವು ಏನು ಮಾಡುವುದು ಎಂದು ಭಯವಾಗಿತ್ತು ದೇವರ ಮೇಲೆ ಭಾರ ಹಾಕಿ ಮುಂದುವರಿಸಿದೆ.
ಈ ಸುದ್ದಿ ಓದಿ:- ಇನ್ಮುಂದೆ ಬಡವರಿಗೆ 6 ತಿಂಗಳಲ್ಲಿ ನ್ಯಾಯ ಸಿಗುತ್ತೆ, ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಆದರೆ ಯಾವಾಗ ಏನು ಆಗುತ್ತದೆ ಎಂದು ಹೇಳಲು ಆಗುವುದಿಲ್ಲ ನಾವು ರಿಸ್ಕ್ ತೆಗೆದುಕೊಂಡರೆ ಮಾತ್ರ ಯಾವುದೇ ಕ್ಷೇತ್ರದಲ್ಲಿ ಯಶಸ್ವಿ ಆಗಲು ಸಾಧ್ಯ ಇದು ಏನು ಕೇಳುವುದಿಲ್ಲ ಗಿಡಕ್ಕೆ ಬಂಡವಾಳ ಹಾಕಿ ನೋಡಿಕೊಳ್ಳಿ ಸಾಕು ಅದರ ಪಾಡಿಗೆ ಅದು ಬೆಳೆಯುತ್ತದೆ. ನೀವು ಮಿಶ್ರ ಬೆಳೆಯಾಗಿ ಅಡಿಕೆ ಜೊತೆ ಬೆಳೆಯುವುದರಿಂದ ಅಂತಹದ್ದೇನೂ ನಷ್ಟವಾಗುವುದಿಲ್ಲ.
ಈ ಮರಗಳನ್ನು ಪರ್ಫ್ಯೂಮ್ ಫ್ಯಾಕ್ಟರಿಗಳು ಖರೀದಿಸುತ್ತಾರೆ, 10 ವರ್ಷಗಳವರೆಗೆ ಇದು ಡೊಳ್ಳು ಮರವಾಗಿರುತ್ತದೆ ಹತ್ತು ವರ್ಷ ಆದಮೇಲೆ ಇದಕ್ಕೆ ಇಂಜೆಕ್ಷನ್ ಮಾಡಲಾಗುತ್ತದೆ ನಂತರ ಅದು ಫಾರ್ಮೇಶನ್ ಆಗುತ್ತದೆ. ಅಮೆಜಾನ್ ಫಾರೆಸ್ಟ್ ಗಳಲ್ಲಿ ಮಾತ್ರ ನ್ಯಾಚುರಲ್ ಆಗಿ ಫಾರ್ಮೇಷನ್ ಆಗಿ ಫ್ರಾಗ್ನೆನ್ಸ್ ಇರುತ್ತದೆ ಉಳಿದ ಎಲ್ಲಾ ಕಡೆ ಅಗರ್ ಕೃಷಿ ಹೀಗೆ ಮಾಡುವುದು ಎನ್ನುತ್ತಾರೆ ಇವರು.
ನೀವು ಅಡಿಕೆ, ಅಗರ್ ಜೊತೆ ಜಾಯಿಕಾಯಿ ಇಂತಹ ಬೆಳೆಗಳನ್ನು ಕೂಡ ಮಿಶ್ರ ಬೆಳೆಯಾಗಿ ಸೇರಿಸುವುದರಿಂದ ರೈತನಿಗೆ ರಿಸ್ಕ್ ಪ್ರಮಾಣ ಕಡಿಮೆ ಇರುತ್ತದೆ ಎನ್ನುವ ಸಲಹೆಯನ್ನು ಕೊಡುತ್ತಾರೆ. ಅಡಿಕೆ ತೆಂಗಿನಷ್ಟು ಆಳವಾಗಿ ಅಗರ್ ಮರಗಳನ್ನು ಹಾಕಬೇಡಿ ಯಾರು ಕೂಡ ಈ ಸಲಹೆ ನೀಡುವುದಿಲ್ಲ ನೀವು ಆಳವಾಗಿ ಹಾಕಿದಷ್ಟು ವೈರಸ್ ಅಟ್ಯಾಕ್ ಆಗಿ ಗಿಡ ಕೊರೆದು ಹೋಗುತ್ತದೆ ಬೆಳೆಯುವುದಿಲ್ಲ.
ಈ ಸುದ್ದಿ ಓದಿ:- ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಬ್ಯಾಂಕ್ ಸಹಾಯಕರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ವೇತನ 87,125/-
ಈ ಬಗ್ಗೆ ಗಮನ ಇರಲಿ ಮತ್ತು ಅಗರ್ ಕೃಷಿಗೆ ಯಾವುದೇ ಲೈಸೆನ್ಸ್ ಇಲ್ಲ ಅಗರ್ ಕಡಿಯುವುದಕ್ಕೆ ಈಗ ಅನುಮತಿ ಇದೆ ಸರ್ಕಾರದವರು ಅಥವಾ ಪ್ರೈವೇಟ್ ಕಂಪನಿಯವರು ಅವರೇ ಬಂದು ತೆಗೆದುಕೊಂಡು ಹೋಗುತ್ತಾರೆ ಕಾಂಟ್ರಾಕ್ಟ್ ಇರುತ್ತದೆ.
ಮಾರ್ಕೆಟಿಂಗ್ ರಿಸ್ಕ್ ಇಲ್ಲ, ಯಾವಾಗಲೂ ಒಳ್ಳೆಯ ರೇಟ್ ಇದ್ದೇ ಇರುತ್ತದೆ ಎಲ್ಲ ರೈತರು ಮಾಡಬಹುದು ಎನ್ನುತ್ತಾರೆ. ಜೊತೆಗೆ ಇವರೇ ಇದರ ತಳಿಗಳನ್ನು ಕೂಡ ಮಾರಾಟ ಮಾಡುತ್ತಾರೆ ನಿಮಗೂ ಅಗರ್ ಕೃಷಿ ಬಗ್ಗೆ ಆಸಕ್ತಿ ಇದ್ದರೆ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.