ಹಿಂದೆಲ್ಲಾ ನಮ್ಮ ದೇಶದಲ್ಲಿ ಬಾವಿ ನೀರಾವರಿ ಪದ್ಧತಿಯನ್ನೇ ಜನರು ಅವಲಂಬಿಸಿದ್ದರು. ಈಗ ಕಳೆದ ಎರಡು ದಶಕಗಳ ಹಿಂದೆಯೂ ಕೂಡ ಈಗ ತಲೆ ಎದ್ದಿರುವಷ್ಟು ಕೊಳವೆ ಬಾವಿಗಳು ಇರಲಿಲ್ಲ. ಒಂದರ್ಥದಲ್ಲಿ ಭಾರತದ ಬಾವಿ ನೀರಾವರಿ ಪದ್ಧತಿಯೇ ಸಾಂಪ್ರದಾಯಿಕ ಪದ್ಧತಿ ಮತ್ತು ಕೊಳವೆ ಬಾವಿ ಪದ್ಧತಿಯನ್ನು ಬೇರೆ ದೇಶವನ್ನು ನೋಡಿ ಅಳವಡಿಸಿಕೊಂಡಿದ್ದು ಎನ್ನುವ ಮಾತುಗಳು ಕೂಡ ಇವೆ.
ಆದರೆ ಈಗ ದೇಶದಲ್ಲಿ ಯಾವುದೇ ಒಂದು ಗ್ರಾಮದಲ್ಲಿ ಒಂದು ಬಾವಿ ನೀರಾವರಿ ಕೂಡ ನೋಡಲು ಸಾಧ್ಯವಾಗದ ರೀತಿ ಆಗಿ ಹೋಗಿರುವುದು ಬಹಳ ಬೇಸರದ ಸಂಗತಿಯಾಗಿದೆ. ಈಗ ಬಹುತೇಕ ಎಲ್ಲಾ ವಿಷಯದಲ್ಲೂ ಹಳೆಯ ಟ್ರೆಂಡ್ ಸದ್ದು ಮಾಡುತ್ತಿರುವ ಹಾಗೆ ಕೃಷಿಗೂ ಇದು ಅನ್ವಯಿಸುತ್ತಿದೆ ಎಂದೇ ಹೇಳಬಹುದು.
ಹೇಗೆ ಎಲ್ಲರೂ ಈಗ ಹೆಲ್ತ್ ಕಾನ್ಷಿಯಸ್ ಆಗಿ ಸಿರಿಧಾನ್ಯಗಳು ಮತ್ತು ಸಾವಯವ ಕೃಷಿ ಕಡೆ ಮುಖ ಮಾಡುತ್ತಿದ್ದಾರೆ ಅದೇ ರೀತಿ ಕೆಲವರ ಮನಸ್ಸು ಬಾವಿ ನೀರಾವರಿ ಪದ್ಧತಿ ಕಡೆಗೆ ತಿರುಗಿದೆ ಪರಿಣಾಮವಾಗಿ ಮತ್ತೆ ಬಾವಿ ನೀರಾವರಿ ಪದ್ಧತಿ ಮುನ್ನಲೆಗೆ ಬರುತ್ತಿದೆ.
ಈ ಸುದ್ದಿ ಓದಿ:- ಒಂದು ವರ್ಷದಲ್ಲಿ ಒಂದು ರೇಷನ್ ಕಾರ್ಡ್’ಗೆ ಇಷ್ಟು ಗ್ಯಾಸ್ ಮಾತ್ರ ಬುಕ್ ಮಾಡಲು ಅವಕಾಶ.! ಕೇಂದ್ರದ ಹೊಸ ನಿಯಮ.!
ಈಗಿನ ಕಾಲದ ಯುವಕರು ಕೃಷಿ ಕಡೆ ಮುಖ ಓದಿದ ಮಾತ್ರಕ್ಕೆ ಕೃಷಿ ಅಸಡ್ಡೆ ನೋಡುತ್ತಿದ್ದಾರೆ ಎನ್ನುವ ಮಾತನ್ನು ಸುಳ್ಳು ಮಾಡಿ ಲಕ್ಷಗಟ್ಟಲೆ ಸಂಬಳ ಬರುತ್ತಿದ್ದ ಉದ್ಯೋಗವನ್ನು ಬಿಟ್ಟು ಸಿಟಿ ಬಿಟ್ಟು ಹಳ್ಳಿಗಳಿಗೆ ಹೋಗಿ ಹಸುಗಳನ್ನು ಸಾಕುತ್ತಾ ಬೆಳೆ ಬೆಳೆಯುತ್ತಿರುವ ಯುವಕರ ಸಂಖ್ಯೆಯು ಬೆಳೆಯುತ್ತಿದೆ ಮತ್ತು ಹಾಗೆಯೇ ಎಲ್ಲವೂ ಬದಲಾಗುತ್ತಾ ನಿಧಾನವಾಗಿ ಕೃಷಿಯಲ್ಲೂ ಕೂಡ ಕೊಳವೆಬಾವಿ ಬಿಟ್ಟು ಈಗ ಬಾವಿ ನೀರಾವರಿ ಕಡೆಗೆ ಜನರು ವಾಲುತ್ತಿದ್ದಾರೆ.
ಬಾವಿ ನೀರಾವರಿ ಪದ್ಧತಿಯಿಂದ ಸಿಗುತ್ತಿರುವ ಒಂದು ಪ್ಲಸ್ ಪಾಯಿಂಟ್ ಏನೆಂದರೆ, ಕೊಳವೆ ಬಾವಿ ತೆರೆಯುವಾಗ ಹೆಚ್ಚೆಂದರೆ ಡ್ರಿಲ್ ಮಾಡುವ ಎರಡು ಫೀಟ್ ಸುತ್ತಳತೆಯಲ್ಲಿ ನೀರಿನ ಸೆಲೆ ಇದ್ದರೆ ಮಾತ್ರ ಅವರ ಲಕ್ ಚೆನ್ನಾಗಿದ್ದರೆ ನೀರು ಸಿಗುತ್ತದೆ ಇಲ್ಲವಾದರೆ ಇಲ್ಲ, ಆದರೆ ಬಾವಿ ನೀರಾವರಿ ಪದ್ಧತಿಯಲ್ಲಿ 50 ಫೀಟ್ ಸುತ್ತಳತೆಯಲ್ಲಿ 50 ಫೀಟ್ ಆಳಕ್ಕೆ ಬಾವಿ ತೆಗೆಯುವುದರಿಂದ ನೀರಿನ ಸೆಲೆ ಸಿಗುವ ಚಾನ್ಸಸ್ ಅಧಿಕವಾಗಿರುತ್ತದೆ.
ಈಗಾಗಲೇ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲೀ ಬಾವಿ ನೀರಾವರಿ ಮಾಡಿ ಯಶಸ್ವಿ ಆಗಿರುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಕೇವಲ ಐದು ದಿನಗಳಲ್ಲಿ ಬಾವಿ ತೆರೆದು ಕೊಡುವ ಟೀಂ ಕೂಡ ಕರ್ನಾಟಕದಲ್ಲಿ ತಯಾರಾಗಿದೆ. ಇವರ ಬಳಿಯೇ ಬಾವಿ ತೋಡಲು ಬೇಕಾದ ಎಲ್ಲಾ ಯಂತ್ರೋಪಕರಣಗಳು ಇದ್ದು, JCB, ರೋಲರ್ ಕಲ್ಲುಗಳನ್ನು ಸಿಕ್ಕಿದರೆ ಬ್ಲಾಸ್ಟ್ ಮಾಡುವ ಯಂತ್ರ ಕೆಲಸಗಳು ಇದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ, ಮಾರ್ಚ್ 14 ರ ಒಳಗೆ ಈ ಕೆಲಸ ಮಾಡಿದೆ ಹೋದರೆ ಆಧಾರ್ ಕಾರ್ಡ್ ರದ್ದು, ಗೃಹಲಕ್ಷ್ಮಿ ಹಣ ಕೂಡ ಬರಲ್ಲ.!
ಏರಿಯಾ ಅನುಸಾರ ಎಷ್ಟು ತೆಗೆಯಬೇಕು ಎಂದು ನಿರ್ಧಾರ ಮಾಡಿ ಬಾವಿ ತೆರೆದು ಕೊಡುತ್ತಾರೆ. ಒಂದು ವೇಳೆ ಡ್ರೈ ಏರಿ ಆಗಿದ್ದರೆ ಅಗಲ ಕಡಿಮೆ ಮಾಡಿ ಆಳ ಹೆಚ್ಚು ಮಾಡಿ ಬಾವಿ ತೆರೆದು ಕೊಡುತ್ತಾರೆ. ರೈತನಿಗೆ ತಿಳಿಯದೆ ಇದ್ದರೂ ನಮಗೆ ಆರ್ಡರ್ ಕೊಟ್ಟರೆ ಸಾಕು ನಾವೇ ಅಚ್ಚುಕಟ್ಟಾಗಿ ಬಾವಿ ಮಾಡಿಕೊಡುತ್ತೇವೆ ಎನ್ನುತ್ತದೆ ಈ ಟೀಮ್ ಮತ್ತು ಕರ್ನಾಟಕದಾದ್ಯಂತ ಯಾವುದೇ ಭಾಗದಲ್ಲಿ ಒಂದು ಬಾವಿಗಾಗಿ ಕರೆಸಿದರು ಹೋಗಿ ಕೆಲಸ ಮಾಡಿ ಕೊಡುತ್ತೇವೆ ಎನ್ನುತ್ತಾರೆ ಇವರು.
40 ಎಕರೆಯಲ್ಲಿ 10 ಬೋರ್ವೆಲ್ ಪಾಯಿಂಟ್ ಆಕ್ಸಿಸಿ 9 ಫೇಲ್ ಆಗಿರುವ ರೈತನ ಜಮೀನಿನಲ್ಲಿ ಮೊದಲ ಬಾರಿಗೆ ಬಾವಿ ತೆರಿಸಿದಾಗಲೇ ಸಕ್ಸಸ್ ಆಗಿರುವ ಉದಾಹರಣೆಯು ಇದೆ. ನಿಮಗೂ ಈ ಬಾವಿ ನೀರಾವರಿ ಬಗ್ಗೆ ಇಚ್ಛೆ ಇದ್ದರೆ ಈ ಸಂಖ್ಯೆಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಿರಿ ನಂತರ ಆರ್ಡರ್ ನೀಡಿರಿ.