ಕರ್ನಾಟಕ ರಾಜ್ಯದಾದ್ಯಂತ ಇರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಅದರಲ್ಲೂ ಬೆಂಗಳೂರಿನಲ್ಲಿ ಇದ್ದುಕೊಂಡು ಉದ್ಯೋಗ ಮಾಡಬೇಕು ಎಂದು ಬಯಸುವವರಿಗೆ ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಸಿಹಿ ಸುದ್ದಿ ಇದೆ. ಇಲಾಖೆಯ ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಆಂಡ್ ಟೆಕ್ನಾಲಜಿ (IWST Recruitment) ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ಮಾಡಿ ಈ ಸಂಬಂಧಿತವಾದ ಅಧಿಕೃತ ಪ್ರಕಟಣೆ ಕೂಡ ಹೊರಡಿಸಿ ಸಂಪೂರ್ಣವಾಗಿ ವಿವರಿಸಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗಾಗಿ ನೋಟಿಫಿಕೇಶನ್ ಇರುವ ಪ್ರಮುಖ ಸಂಗತಿಗಳನ್ನು ತಿಳಿಸುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ (IWST)
ಹುದ್ದೆ ಹೆಸರು:-
* ತಂತ್ರಜ್ಞ (Technician)
* ಅರಣ್ಯ ರಕ್ಷಕ (Forest Guard)
ಒಟ್ಟು ಹುದ್ದೆಗಳ ಸಂಖ್ಯೆ:- 05 ಹುದ್ದೆಗಳು
ಹುದ್ದೆಗಳ ವಿವರ:-
* ತಂತ್ರಜ್ಞ – 04
* ಅರಣ್ಯ ರಕ್ಷಕ – 01
ಉದ್ಯೋಗ ಸ್ಥಳ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳು ಬೆಂಗಳೂರಿನ ಇಲಾಖೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸಬೇಕು.
ಶೈಕ್ಷಣಿಕ ವಿದ್ಯಾರ್ಹತೆ:-
* ತಂತ್ರಜ್ಞ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ PUC / ITI / ಡಿಪ್ಲೋಮೋ ಅಥವಾ ಅದಕ್ಕೆ ತತ್ಸಮನಾದ ಪರೀಕ್ಷೆಗಳನ್ನು ಉತ್ತೀರ್ಣರಾಗಿರಬೇಕು
* ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ PUC ಉತ್ತೀರ್ಣರಾಗಿರಬೇಕು.
ಈ ಸುದ್ದಿ ಓದಿ:- ಮನೆ ಕಟ್ಟಲು ಸರ್ಕಾರದಿಂದ ದೊರೆಯಲಿದೆ ಬಡ್ಡಿ ರಹಿತ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!
ವಯೋಮಿತಿ:-
* ತಂತ್ರಜ್ಞ
ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು, ಗರಿಷ್ಠ ವಯೋಮಿತಿ 30 ವರ್ಷಗಳು
* ಅರಣ್ಯ ರಕ್ಷಕ
ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು, ಗರಿಷ್ಠ ವಯೋಮಿತಿ 27 ವರ್ಷಗಳು.
ವಯೋಮಿತಿ ಸಡಿಲಿಕೆ:-
* OBC ವರ್ಗದ ಅಭ್ಯರ್ಥಿಗಳಿಗೆ 03 ವರ್ಷಗಳು
* SC / ST ವರ್ಗದ ಅಭ್ಯರ್ಥಿಗಳಿಗೆ 05 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
* ಮೊದಲಿಗೆ IWST ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ನಮೂನೆಯನ್ನು ವೆಬ್ ಸೈಟ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು
* ತುಂಬಿದ ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆ ಪ್ರತಿಗಳೊಂದಿಗೆ ಕಡೆಯ ದಿನಾಂಕದೊಳಗೆ ಈ ಕೆಳಕಂಡ ವಿಳಾಸಕ್ಕೆ ತಲುಪಿಸಬೇಕು.
ವಿಳಾಸ
ನಿರ್ದೇಶಕರು,
ICFRE-ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ, 18 ನೇ ಕ್ರಾಸ್,
ಮಲ್ಲೇಶ್ವರಂ,
ಬೆಂಗಳೂರು-560003
* ಈ ಕುರಿತ ಹೆಚ್ಚಿನ ಮಾಹಿತಿಗಾಗಿ iwst.icfre.gov.in ವೆಬ್ಸೈಟ್ ಗೆ ಭೇಟಿ ಕೊಟ್ಟು ನೋಟಿಫಿಕೇಶನ್ ನೋಡಿ
ಆಯ್ಕೆ ವಿಧಾನ:-
* ಲಿಖಿತ ಪರೀಕ್ಷೆ
* ದೈಹಿಕ ಗುಣಮಟ್ಟದ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ಸಂದರ್ಶನ
ಈ ಸುದ್ದಿ ಓದಿ:- ಇನ್ಮುಂದೆ ಬಡವರಿಗೆ 6 ತಿಂಗಳಲ್ಲಿ ನ್ಯಾಯ ಸಿಗುತ್ತೆ, ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಅರ್ಜಿ ಶುಲ್ಕ:-
* ನಿಮ್ಮ ವಿಭಾಗಕ್ಕೆ ಅನುಗುಣವಾಗುವ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಕೊನೆ ದಿನಾಂಕದೊಳಗೆ ಕಳುಹಿಸಬೇಕು
* SC / ST ಅಭ್ಯರ್ಥಿಗಳಿಗೆ ರೂ.600
* ಉಳಿದ ಅಭ್ಯರ್ಥಿಗಳಿಗೆ ರೂ.1000
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 29 ಜನವರಿ, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15 ಮಾರ್ಚ್, 2024.
* ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪದಲ್ಲಿ ನೆಲೆಸಿರುವ ಅಭ್ಯರ್ಥಿಗಳಿಗೆ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22 ಮಾರ್ಚ್, 2024