ಪ್ರತಿಯೊಂದು ಮನೆಗಳಲ್ಲೂ ಕೂಡ ಗೃಹಿಣಿಯರು ಹೋಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವಂತೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮಹಿಳೆಯರ ಆರೋಗ್ಯ ರಕ್ಷಣೆ ಉದ್ದೇಶದಿಂದ ಮತ್ತು ವಾತಾವರಣದಲ್ಲಿ ವಾಯುಮಾಲಿನ್ಯ ಆಗುವುದನ್ನು ತಡೆಗಟ್ಟಲು ನರೇಂದ್ರ ಮೋದಿ ಅಧ್ಯಕ್ಷತೆಯ (PM Narendra Modi) ಕೇಂದ್ರ ಸರ್ಕಾರವು 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಎನ್ನುವ ಯೋಜನೆಯನ್ನು ದೇಶದಲ್ಲಿರುವ ಬಡ ಹೆಣ್ಣು ಮಕ್ಕಳಿಗಾಗಿ ಜಾರಿಗೆ ತಂದಿದ್ದಾರೆ.
ಈ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ (free Gas Connection) ಕೊಡುವುದು, ಮಾತ್ರವಲ್ಲದೆ ಒಂದು ಗ್ಯಾಸ್ ಸ್ಟವ್, ಗ್ಯಾಸ್ ಸಿಲಿಂಡರ್, ರೆಗುಲೇಟರ್, ಲೈಟರ್ ಕೂಡ ಉಚಿತವಾಗಿ ನೀಡಲಾಗುತ್ತಿದೆ.
ಇದರೊಂದಿಗೆ ಪ್ರತಿ ಗ್ಯಾಸ್ ಬುಕ್ಕಿಂಗ್ ಮೇಲೂ ರೂ.200 ಸಬ್ಸಿಡಿ ಕೂಡ ನೀಡಲಾಗುತ್ತಿದೆ, ದೇಶದಾದ್ಯಂತ ಕೋಟ್ಯಂತರ ಕುಟುಂಬಗಳು ಸರ್ಕಾರ ಈ ನೆರವನ್ನು ಪಡೆದಿವೆ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ದೇಶದ ಎಲ್ಲಾ ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿತ್ತು.
ಈ ಸುದ್ದಿ ಓದಿ:- ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ, ಅಂಚೆ ಕಚೇರಿಯ ಈ ಯೋಜನೆಯಲ್ಲಿ 5 ಲಕ್ಷ ಹಾಕಿದ್ರೆ 10 ಲಕ್ಷ ಗ್ಯಾರಂಟಿ.!
ಅಕ್ಟೋಬರ್ 2023ರಲ್ಲಿ 200 ರೂಪಾಯಿ ಇದ್ದ ಸಬ್ಸಿಡಿ ಹಣವನ್ನು 100 ರೂಪಾಯಿಗೆ ಹೆಚ್ಚಿಗೆ ಮಾಡಿ 300 ರೂಪಾಯಿಗೆ ಏರಿಸಿದೆ. ಈ ಸೌಲಭ್ಯವನ್ನು ಪಡೆದುಕೊಳ್ಳಲು ಎಲ್ಲಾ ಗ್ರಾಹಕರು ತಪ್ಪದೆ ಇ-ಕೆವೈಸಿ (E-KYC) ಅಪ್ಡೇಟ್ ಮಾಡಿಸಬೇಕೆಂದು ಸೂಚನೆ ಕೊಟ್ಟಿದ್ದೆ.
ಈಗ ಮತ್ತೊಮ್ಮೆ ವಾರದ ಹಿಂದೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ (International Womens Day) ಅಂಗವಾಗಿ ಇದೇ ವಿಚಾರವಾಗಿ ಮಾತನಾಡಿದ ಪ್ರಧಾನಿಗಳು ಕೂಡ ಈ ಸೌಲಭ್ಯವನ್ನು ಮಾರ್ಚ್ 31, 2025 ರ ವರೆಗೂ ಕೂಡ ಮುಂದುವರಿಸುವುದಾಗಿ ಹೇಳಿ ದೇಶದ ಮಹಿಳೆಯರಿಗೆ ಮಹಿಳಾ ದಿನಾಚರಣೆ ಗಿಫ್ಟ್ ನೀಡಿದ್ದಾರೆ.
ಇದರಿಂದ ಖಂಡಿತವಾಗಿ ಎಲ್ಲರಿಗೂ ಸಂತಸವಾಗಿದೆ. ಆದರೆ ಈ ವಿಚಾರವಾಗಿ ಕೆಲವೊಂದಿಷ್ಟು ಅಂಶಗಳನ್ನು ನಾವು ಹೇಳಲೇಬೇಕು ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಕೂಡ ನೀವು ಸಬ್ಸಿಡಿ ಇಂದ ವಂಚಿತರಾಗಬಹುದು ಇದು ಹೇಗೆಂದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ನೀಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ಗ್ಯಾಸ್ ಬುಕಿಂಗ್ ಮೇಲೆ ರೂ.300 ಗಳ ಸಬ್ಸಿಡಿ ಸಿಗುತ್ತಿದೆ ನಿಜ.
ಈ ಸುದ್ದಿ ಓದಿ:- ವಾಟರ್ ಆಪಲ್ ಕೃಷಿ ಮಾಡಿ ಯಶಸ್ವಿಯಾದ ರೈತ 5 ಮರದಲ್ಲಿ 6 ಲಕ್ಷ ಲಾಭ ಇಲ್ಲಿದೆ ನೋಡಿ ಪೂರ್ತಿ ವಿವರ…
ಆದರೆ ನೀವು ಒಂದು ವರ್ಷದಲ್ಲಿ ಎಷ್ಟು ಗ್ಯಾಸ್ ಬುಕ್ ಮಾಡಬಹುದು ಎನ್ನುವ ನಿಯಮವನ್ನು ತಿಳಿದುಕೊಳ್ಳಬೇಕು ಇಲ್ಲವಾದಲ್ಲಿ ನೀವೇ ಹೆಚ್ಚುವರಿ ದಂಡವನ್ನು ಕಟ್ಟಬೇಕಾದ ಅಥವಾ ನಿಮಗೆ ಸಬ್ಸಿಡಿ ಹಣವು ಸಿಗದೇ ಹೋಗುವ ತೊಂದರೆಗಳು ಆಗಬಹುದು.
ಕೇಂದ್ರ ಸರ್ಕಾರ ವಿಧಿಸಿರುವ ನಿಯಮದ ಪ್ರಕಾರವಾಗಿ ಒಂದು ರೇಷನ್ ಕಾರ್ಡ್ ನಲ್ಲಿ ಒಂದು ವರ್ಷಕ್ಕೆ ಗರಿಷ್ಠವಾಗಿ 15 ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು ಅಷ್ಟೇ ಹೆಚ್ಚಿನ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಅವಕಾಶವಿಲ್ಲ ಹಾಗೆ ಇದರಲ್ಲಿ 12 ಗ್ಯಾಸ್ ಸಿಲಿಂಡರ್ ವರೆಗೆ ಮಾತ್ರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಸಬ್ಸಿಡಿ ಹಣ ಸಿಗುತ್ತದೆ.
ಸರ್ಕಾರದ ಯಾವುದೇ ಅನುಕೂಲತೆ ಆದರೂ ಅದನ್ನು ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು ಹೀಗಾಗಿ ಸರ್ಕಾರದ ಸೌಲಭ್ಯವು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ಅನಾವಶ್ಯಕವಾದ ಅನಿಲ ಬಳಕೆಯಿಂದ ಸಂಪನ್ಮೂಲ ವ್ಯರ್ಥವಾಗುವುದನ್ನು ಕಂಟ್ರೋಲ್ ಮಾಡುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರವು ಇಂತಹದೊಂದು ನಿರ್ಧಾರಕ್ಕೆ ಬಂದಿದೆ.