ಭಾರತೀಯ ರೈಲ್ವೆ ಮಂಡಳಿ (RRB) ವತಿಯಿಂದ ಪ್ರತಿ ವರ್ಷ ಕೂಡ ನೇಮಕಾತಿ ನಡೆಯುತ್ತದೆ. ದೇಶದ ಲಕ್ಷಾಂತರ ಸರ್ಕಾರಿ ಹುದ್ದೆ ಆಕಾಂಕ್ಷಿಗಳು ಈ ನೇಮಕಾತಿ ಅಧಿಸೂಚನೆಗಾಗಿ ಕಾಯುತ್ತಿರುತ್ತಾರೆ. ಈಗ ಇವರೆಲ್ಲರಿಗೂ ಸಿಹಿ ಸುದ್ದಿ ಇದೆ ಅದೇನೆಂದರೆ, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ (Recruitment) ಅರ್ಹರಿದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.
ನೋಟಿಫಿಕೇಷನ್ ಗಳಲ್ಲಿ ಕೇಳಲಾಗಿರುವ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ನಾವು ಸಹ ಈ ಅಂಕಣದಲ್ಲಿ ನೇಮಕಾತಿ ಕುರಿತ ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಒಂದು ವರ್ಷದಲ್ಲಿ ಒಂದು ರೇಷನ್ ಕಾರ್ಡ್’ಗೆ ಇಷ್ಟು ಗ್ಯಾಸ್ ಮಾತ್ರ ಬುಕ್ ಮಾಡಲು ಅವಕಾಶ.! ಕೇಂದ್ರದ ಹೊಸ ನಿಯಮ.!
ನೇಮಕಾತಿ ಇಲಾಖೆ:- ಭಾರತೀಯ ರೈಲ್ವೆ ಇಲಾಖೆ
ಹುದ್ದೆ ಹೆಸರು:- ಟೆಕ್ನಿಷಿಯನ್
ಒಟ್ಟು ಹುದ್ದೆಗಳ ಸಂಖ್ಯೆ:- 9144 ಹುದ್ದೆಗಳು
ಹುದ್ದೆಗಳ ವಿವರ:-
* ಟೆಕ್ನಿಷಿಯನ್ (ಗ್ರೇಡ್ 1) ಸಿಗ್ನಲ್ – 1092
* ಟೆಕ್ನಿಷಿಯನ್ (ಗ್ರೇಡ್ 3) – 8052
ಉದ್ಯೋಗ ಸ್ಥಳ:-
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಭಾರತದಾದ್ಯಂತ ಯಾವುದೇ ಸ್ಥಳದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು
ವೇತನ ಶ್ರೇಣಿ:-
* ಟೆಕ್ನಿಷಿಯನ್ (ಗ್ರೇಡ್-1) ಸಿಗ್ನಲ್ – ರೂ.29200 ರಿಂದ ಆರಂಭ
* ಟೆಕ್ನಿಷಿಯನ್ (ಗ್ರೇಡ್ 3) – ರೂ.19900 ರಿಂದ ಆರಂಭ
* ಇತರೆ ಸರ್ಕಾರಿ ಸೌಲಭ್ಯಗಳು ಸಿಗುತ್ತವೆ.
ಈ ಸುದ್ದಿ ಓದಿ:-ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ, ಅಂಚೆ ಕಚೇರಿಯ ಈ ಯೋಜನೆಯಲ್ಲಿ 5 ಲಕ್ಷ ಹಾಕಿದ್ರೆ 10 ಲಕ್ಷ ಗ್ಯಾರಂಟಿ.!
ಶೈಕ್ಷಣಿಕ ವಿದ್ಯಾರ್ಹತೆ:-
* ಟೆಕ್ನಿಷಿಯನ್ (ಗ್ರೇಡ್-1) ಸಿಗ್ನಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ B.Sc (ಫಿಸಿಕ್ಸ್/ ಇಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮೆಷನ್ ಟೆಕ್ನಾಲಜಿ/ ಇನ್ಟ್ರುಮೆಂಟೆಂಷನ್) ಅಥವಾ ಡಿಪ್ಲೊಮಾ (ಇಂಜಿನಿಯರಿಂಗ್) ಉತ್ತೀರ್ಣರಾಗಿರಬೇಕು.
* ಟೆಕ್ನಿಷಿಯನ್ (ಗ್ರೇಡ್ 3) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ SSLC ಜೊತೆಗೆ ಆಯಾ ಟ್ರೇಡ್ ಗಳಲ್ಲಿ ITI ಕೂಡ ಉತ್ತೀರ್ಣರಾಗಿರಬೇಕು.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಟೆಕ್ನಿಷಿಯನ್ (ಗ್ರೇಡ್-1) ಸಿಗ್ನಲ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 36 ವರ್ಷಗಳು
* ಟೆಕ್ನಿಷಿಯನ್ (ಗ್ರೇಡ್ 3) ಹುದ್ದೆಗಳಿಗೆ ಗರಿಷ್ಠ ವಯೋಮಿತಿ 33 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* RRB ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ, ನೋಟಿಫಿಕೇಶನ್ ಓದಿಕೊಂಡು ಅರ್ಥೈಸಿಕೊಳ್ಳಿ
* ಅರ್ಜಿ ಸಲ್ಲಿಸಲು ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಸ್ವ ವಿವಗಳನ್ನು ಭರ್ತಿ ಮಾಡಿ ಕೇಳಲಾಗುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ಅವುಗಳ ಸಂಖ್ಯೆ ನಮೂದಿಸಿ
* ಅರ್ಜಿ ಸಲ್ಲಿಕೆ ಒಮ್ಮೆಲೆ ಯಶಸ್ವಿಯಾದ ಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ
ಅರ್ಜಿ ಶುಲ್ಕ:-
* ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್/ UPI ಆಧಾರಿತವಾಗಿ ಶುಲ್ಕ ಪಾವತಿಸಬಹುದು.
* SC / ST, ಮಾಜಿ ಸೈನಿಕ, ಮಹಿಳಾ, ತೃತೀಯ ಲಿಂಗಿಗಳು, ಅಲ್ಪಸಂಖ್ಯಾತ, EBC ಅಭ್ಯರ್ಥಿಗಳಿಗೆ – ರೂ.250
* ಉಳಿದ ಅಭ್ಯರ್ಥಿಗಳಿಗೆ – ರೂ.500
* ಅರ್ಜಿ ಸಲ್ಲಿಕೆ ಯಶಸ್ವಿಯಾದ ಮೇಲೆ ತಪ್ಪದೆ ಇ-ರಶೀದಿ ಪಡೆದುಕೊಳ್ಳಬೇಕು.
ಆಯ್ಕೆ ವಿಧಾನ:-
* ಕಂಪ್ಯೂಟರ್ ಆಧಾರಿತ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ವೈದ್ಯಕೀಯ ಪರೀಕ್ಷೆ
* ಸಂದರ್ಶನ.
ಈ ಸುದ್ದಿ ಓದಿ:-ವಾಟರ್ ಆಪಲ್ ಕೃಷಿ ಮಾಡಿ ಯಶಸ್ವಿಯಾದ ರೈತ 5 ಮರದಲ್ಲಿ 6 ಲಕ್ಷ ಲಾಭ ಇಲ್ಲಿದೆ ನೋಡಿ ಪೂರ್ತಿ ವಿವರ…
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 09 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 08 ಏಪ್ರಿಲ್, 2024