ಕರ್ನಾಟಕ ರಾಜ್ಯದಲ್ಲಿ ಇರುವ ಎಲ್ಲ ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ (aspirants) ಈಗ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಮಯ ಎಂದೇ ಹೇಳಬಹುದು. ಯಾಕೆಂದರೆ ಒಂದರ ಹಿಂದೆ ಒಂದರಂತೆ ಹಲವು ಹುದ್ದೆಗಳ ನೋಟಿಫಿಕೇಶನ್ ಆಗುತ್ತಿದ್ದು, ಇದು ಕರ್ನಾಟಕ ರಾಜ್ಯದ ಉದ್ಯೋಗ ಆಕಾಂಕ್ಷಿಗಳ ಪಾಲಿಗೆ ಬಹಳ ದೊಡ್ಡ ಸಂತಸದ ಸಂಗತಿಯಾಗಿದೆ.
ಈಗ ಮತ್ತೊಂದು ನೋಟಿಫಿಕೇಷನ್ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇನೆ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (HK & RPC) ನೇಮಕಾತಿಗಾಗಿ ಅಧಿಸೂಚನೆಯನ್ನು KPSC ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗಾಗಿ ನೋಟಿಫಿಕೇಶನ್ ಕುರಿತಾದ ಪ್ರಮುಖ ಮಾಹಿತಿ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಮಾರ್ಚ್ 25ರ ಒಳಗೆ ಎಲ್ಲಾ ಮಹಿಳೆಯರು ಪುರುಷರು ಈ ಕೆಲಸ ಮಾಡಿ, ಇಲ್ಲದಿದ್ರೆ ಗೃಹಲಕ್ಷ್ಮಿ, ಅಕ್ಕಿಹಣ, ಯುವನಿಧಿ ಸರ್ಕಾರದಿಂದ ಬರುವ ಎಲ್ಲಾ ಹಣ ಬಂದ್ ಆಗುತ್ತೆ.!
ನೇಮಕಾತಿ ಸಂಸ್ಥೆ:- ಕರ್ನಾಟಕ ಲೋಕಸೇವಾ ಆಯೋಗ (KPSC)
ಉದ್ಯೋಗ ಇಲಾಖೆ:- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR)
ಹುದ್ದೆ ಹೆಸರು:- ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO)
ಒಟ್ಟು ಹುದ್ದೆಗಳ ಸಂಖ್ಯೆ:- 247 ಹುದ್ದೆಗಳು
ಹುದ್ದೆಗಳ ವಿವರ:-
ಉಳಿಕೆ ಮೂಲ ವೃಂದ – 150 ಹುದ್ದೆಗಳು
ಹೈದರಾಬಾದ್ ಕರ್ನಾಟಕ ವೃಂದ – 97 ಹುದ್ದೆಗಳು
ಉದ್ಯೋಗ ಸ್ಥಳ:- ಕರ್ನಾಟಕದೆಲ್ಲೆಡೆ…
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು
ರೂ.37,900 ರಿಂದ ರೂ.70,850 ವೇತನ ಸಿಗುತ್ತದೆ…
ಈ ಸುದ್ದಿ ಓದಿ:- ಈ ಜಿಲ್ಲೆ ಮಹಿಳೆಯರಿಗೆ ಇಂದು ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆಯಾಗಿದೆ.! ಮೊಬೈಲ್ ನಲ್ಲೇ ಈ ರೀತಿ ಸ್ಟೇಟಸ್ ಚೆಕ್ ಮಾಡಿ ತಿಳಿದುಕೊಳ್ಳಿ.!
ಶೈಕ್ಷಣಿಕ ವಿದ್ಯಾರ್ಹತೆ:-
* UGC ಯಿಂದ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯದಲ್ಲಿ ಪದವಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST /Cat-1 ಅಭ್ಯರ್ಥಿಗಳಿಗೆ 5 ವರ್ಷಗಳು
* 2A / 2B /3A / 3B ಅಭ್ಯರ್ಥಿಗಳಿಗೆ 3 ವರ್ಷಗಳು
* ಅಂಗವಿಕಲ ಮತ್ತು ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ.
ಈ ಸುದ್ದಿ ಓದಿ:- ಕುರಿ, ಕೋಳಿ ಸಾಕಾಣಿಕೆಗೆ 25 ರಿಂದ 50 ಲಕ್ಷ ರೂಪಾಯಿಗಳ ಸಹಾಯಧನ, ಇಂದೇ ಅರ್ಜಿ ಸಲ್ಲಿಸಿ.!
ಅರ್ಜಿ ಶುಲ್ಕ:-
* ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.600
* 2A / 2B / 3A / 3B ಅಭ್ಯರ್ಥಿಗಳಿಗೆ ರೂ.300
* ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50
* SC / ST/ Cat-I / PWD ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:-
* https://kpsc.kar.nic.in/ ವೆಬ್ ಸೈಟ್ ಗೆ ಭೇಟಿ ಕೊಡಿ
* ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೇಳಲಾಗುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ದಾಖಲೆಗಳ ಸಂಖ್ಯೆಗಳನ್ನು ನಮೂದಿಸಿ
* ಅರ್ಜಿ ಶುಲ್ಕ ಪಾವತಿಸಿ, ಇ-ರಸೀದಿ ಪಡೆಯಿರಿ
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆಯಿರಿ
* ಈ ನೋಟಿಫಿಕೇಶನ್ ಕುರಿತಾದ ಯಾವುದೇ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇದೇ ವೆಬ್ಸೈಟ್ ನಲ್ಲಿ ಪಡೆಯಬಹುದು.
ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ಸಂದರ್ಶನ
ಈ ಸುದ್ದಿ ಓದಿ:- ಇನ್ಮುಂದೆ ರಸ್ತೆಯಲ್ಲಿ ಅಪಘಾ.ತವಾದ್ರೆ ಉಚಿತ ಚಿಕಿತ್ಸೆ ಸಿಗಲಿದೆ.!
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 15 ಏಪ್ರಿಲ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15 ಮೇ, 2024
* ಪರೀಕ್ಷೆ ನಡೆಯುವ ದಿನಾಂಕ – ಶೀಘ್ರದಲ್ಲಿ ಘೋಷಿಸಲಾಗುತ್ತದೆ