Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕೇಂದ್ರ ಸರ್ಕಾರವು (Central Government) ಮಹಿಳೆಯರಿಗಾಗಿ (for womens) ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ. ಇದೆ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬೇಕು ಮತ್ತು ಸಮಾಜದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎನ್ನುವುದು ಈ ಯೋಜನೆಗಳ ಉದ್ದೇಶಗಳಾಗಿವೆ.
ಕಳೆದ ವರ್ಷ ಜಾರಿಗೆ ತಂದ ನಾರಿ ಶಕ್ತಿ ಯೋಜನೆ ದೇಶದ ಎಲ್ಲ ಮಹಿಳೆಯರ ಮನ ಗೆದ್ದಿದೆ ಹಾಗೆ ಹಣಕಾಸಿನ ವಿಚಾರವಾಗಿ ಕೂಡ ಪ್ರತಿಸಲ ಬಜೆಟ್ ಮಂಡನೆ (Budget) ಆದಾಗಲು ಮಹಿಳೆಯರಿಗಾಗಿ ವಿಶೇಷ ಪಾಲು ಇರುತ್ತದೆ. 2023-24ನೇ ಸಾಲಿನಲ್ಲಿ ಘೋಷಣೆಯಾಗಿದ್ದ ಮಹಿಳಾ ಸಮ್ಮಾನ್ ಯೋಜನೆಯು (Mahila Samman Scheme) ಈ ವರ್ಷವೂ ಮುಂದುವರೆದಿದ್ದು.
ಈ ಸುದ್ದಿ ಓದಿ:- ಈ ಜಿಲ್ಲೆ ಮಹಿಳೆಯರಿಗೆ ಇಂದು ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆಯಾಗಿದೆ.! ಮೊಬೈಲ್ ನಲ್ಲೇ ಈ ರೀತಿ ಸ್ಟೇಟಸ್ ಚೆಕ್ ಮಾಡಿ ತಿಳಿದುಕೊಳ್ಳಿ.!
ಇದರ ಜೊತೆಗೆ 2024-25 ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಮಾನ್ಯ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರು (Finance Minister Nirmala Sitaraman) ಲಕ್ಪತಿ ದೀದಿ (Lakpati Didi Scheme) ಎನ್ನುವ ಮತ್ತೊಂದು ಯೋಜನೆಯನ್ನು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ (Women Empowrment) ಅನುಷ್ಠಾನಗೊಳಿಸಿದ್ದಾರೆ.
ಏನಿದು ಯೋಜನೆ? ಯಾರು ಇದರ ಪ್ರಯೋಜನ ಪಡೆಯಬಹುದು ಮತ್ತು ಇದರಿಂದ ಸಿಗುತ್ತಿರುವ ಪ್ರಯೋಜನಗಳು ಏನು? ಇತ್ಯಾದಿ ವಿವರ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಈ ಸುದ್ದಿ ಓದಿ:-ಮಾರ್ಚ್ 25ರ ಒಳಗೆ ಎಲ್ಲಾ ಮಹಿಳೆಯರು ಪುರುಷರು ಈ ಕೆಲಸ ಮಾಡಿ, ಇಲ್ಲದಿದ್ರೆ ಗೃಹಲಕ್ಷ್ಮಿ, ಅಕ್ಕಿಹಣ, ಯುವನಿಧಿ ಸರ್ಕಾರದಿಂದ ಬರುವ ಎಲ್ಲಾ ಹಣ ಬಂದ್ ಆಗುತ್ತೆ.!
ಯೋಜನೆಯ ಹೆಸರು:- ಲಕ್ಪತಿ ದೀದಿ ಯೋಜನೆ…
ಯೋಜನೆಯ ಉದ್ದೇಶ:-
ಕೇಂದ್ರ ಸರ್ಕಾರವು ಸ್ವಸಹಾಯ ಗುಂಪುಗಳಲ್ಲಿ (SSG) ಸಕ್ರಿಯರಾಗಿರುವ ಮಹಿಳೆಯರ ಆದಾಯವನ್ನು ಒಂದು ಲಕ್ಷಕ್ಕೆ ಇರಿಸಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಿದೆ.
ಯಾರು ಪ್ರಯೋಜನವನ್ನು ಪಡೆಯಬಹುದು:-
* ಪ್ರಸ್ತುತ ಮಾಹಿತಿಯ ಪ್ರಕಾರ ನಮ್ಮ ದೇಶದಲ್ಲಿ 83 ಲಕ್ಷ ಸ್ವಸಹಾಯ ಗುಂಪುಗಳು ನೋಂದಣಿಯಾಗಿವೆ, 9 ಕೋಟಿ ಮಹಿಳೆಯರು ಈ ಸ್ವ ಸಹಾಯ ಗುಂಪುಗಳ ಭಾಗವಾಗಿದ್ದಾರೆ. ಇವರೆಲ್ಲರನ್ನು ಆರ್ಥಿಕವಾಗಿ ಚೇತನ ಗೊಳಿಸುವ ಉದ್ದೇಶದಿಂದ ವಿವಿಧ ತರಬೇತಿಗಳನ್ನು ನೀಡಿ ಉದ್ಯೋಗವಕಾಶ ಕಲ್ಪಿಸಿಕೊಟ್ಟು ಮತ್ತು ಇವರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ವೇದಿಕೆ ಮಾಡಿಕೊಡುವವರೆಗೂ ಕೂಡ ಜವಾಬ್ದಾರಿಯನ್ನು ಸರ್ಕಾರ ಹೊಂದಿಕೊಂಡಿದೆ.
ಈ ಸುದ್ದಿ ಓದಿ:-ಪಶುಪಾಲನಾ ಇಲಾಖೆಯಲ್ಲಿ 1,100ಕ್ಕೂ ಹೆಚ್ಚು ಹುದ್ದೆಗಳಿಗೆ ಅವಕಾಶ, SSLC / PUC ಆದವರು ಅರ್ಜಿ ಸಲ್ಲಿಸಿ.! ವೇತನ 25,000
* ಮಹಿಳೆಯರಿಗೆ ಕೊಳಾಯಿ, ಡ್ರೋನ್ಗಳ ಕಾರ್ಯಾಚರಣೆ, LED ಬಲ್ಬ್ಗಳ ತಯಾರಿಕೆ ಮುಂತಾದ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಬಳಿಕ ಮಹಿಳೆಯರು ತಮ್ಮ ಸ್ವಂತ ಕೆಲಸವನ್ನು ಪ್ರಾರಂಭಿಸುವ ಮೂಲಕ ಸ್ವಾವಲಂಬಿಯಾಗಬಹುದು.
* ಯೋಜನೆಯ ಮುಖ್ಯ ಭಾಗ ಎಂದರೆ ಮಹಿಳೆಯರಿಗೆ 1-5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲು ಸರ್ಕಾರ ನಿರ್ಧರಿಸಿದೆ.
ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಸ್ವಸಹಾಯ ಗುಂಪುಗಳು ಸರ್ಕಾರದಿಂದ ಸಿಗುವ ಈ ಅನುದಾನವನ್ನು ಉಪಯೋಗಿಸಿಕೊಂಡು ಮತ್ತು ತರಬೇತಿಗಳಲ್ಲಿ ಭಾಗಿಯಾಗಿ ಉತ್ಪನ್ನಗಳನ್ನು ತಯಾರು ಮಾಡಿದರೆ ಡಿಪಾರ್ಟ್ಮೆಂಟ್ ಸ್ಟೋರ್ ಹಾಗೂ ಮೇಳಗಳಲ್ಲಿ ಈ ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಕಾರ ಅವಕಾಶ ಮಾಡಿಕೊಡುತ್ತದೆ. ಈ ಮಹಿಳೆಯರ ಆದಾಯವನ್ನು ಲಕ್ಷಕ್ಕೆ ಇರಿಸುವುದು ಸರ್ಕಾರದ ಗುರಿಯಾಗಿದೆ.
ಈ ಸುದ್ದಿ ಓದಿ:-ಕುರಿ, ಕೋಳಿ ಸಾಕಾಣಿಕೆಗೆ 25 ರಿಂದ 50 ಲಕ್ಷ ರೂಪಾಯಿಗಳ ಸಹಾಯಧನ, ಇಂದೇ ಅರ್ಜಿ ಸಲ್ಲಿಸಿ.!
ಲಕ್ಪತಿ ದೀದಿ ಯೋಜನೆಗೆ ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ಆದಾಯ ಪ್ರಮಾಣಪತ್ರ
* ವಿಳಾಸ ಪುರಾವೆ
* ಬ್ಯಾಂಕ್ ಖಾತೆ ವಿವರಗಳು
* ನೋಂದಾಯಿತ ಮೊಬೈಲ್ ಸಂಖ್ಯೆ
* ಇಮೇಲ್ ಐಡಿ
* ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಸುವ ವಿಧಾನ:-
ಈ ಯೋಜನೆಯ ಪ್ರಯೋಜನ ಪಡೆಯಲು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ಕೊಡಿ.