ರಾಗಿ ಬೆಳೆದ ರೈತರಿಗೆ ಗುಡ್ ನ್ಯೂಸ್ ರಾಗಿ ಕ್ವಿಂಟಾಲ್ ಗೆ 3486.ರೂ ಬೆಂಬಲ ಬೆಲೆ ನಿಗದಿ.!

 

WhatsApp Group Join Now
Telegram Group Join Now

ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಭೀಕರ ಬರಗಾಲದ ಪರಿಸ್ಥಿತಿ ಎಲ್ಲರಿಗೂ ತಿಳಿದೇ ಇದೆ. ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳ ಬಹುತೇಕ ತಾಲೂಕುಗಳು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆಯಾಗಿದೆ. ಕೆಲವು ಭಾಗಗಳಲ್ಲಿ ಕೃಷಿ ಸಂಪೂರ್ಣವಾಗಿ ನೆಲಕಚ್ಚಿದ್ದು ಅಲ್ಪ ಭಾಗಗಳಲ್ಲಿ ಮಾತ್ರ ಸಾಧಾರಣ ಮಟ್ಟದಲ್ಲಿದೆ.

ಇಷ್ಟೆಲ್ಲ ಸಂಕಷ್ಟಗಳ ನಡುವೆ ನೊಂ’ದಿರುವ ರೈತನಿಗೆ ಸರ್ಕಾರ ಬರ ಪರಿಹಾರದ ಹಣ ನೆರವು ಸಿಕ್ಕಿದ್ದು ಈಗಾಗಲೇ ರಾಜ್ಯ ಸರ್ಕಾರದ ಕಡೆಯಿಂದ ಮೊದಲನೇ ಕಂತಿನಲ್ಲಿ ರೂ.2,000 ಹಣ ವರ್ಗಾವಣೆ ಆಗಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ನೆರವಾಗುವ ಭರವಸೆಯನ್ನು ನೀಡಿದೆ.

ಇದರ ನಡುವೆ ರಾಗಿ ಬೆಳೆದ ರೈತರಿಗೆ ಸರ್ಕಾರ ಕಡೆಯಿಂದ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ರಾಗಿ ಬೆಂಬಲ ಬೆಲೆಯನ್ನು ಈ ಬಾರಿ ಸರಕಾರ ಮತ್ತೊಮ್ಮೆ ಹೆಚ್ಚಿಸಿದೆ ಈ ಕುರಿತಾದ ಮಾಹಿತಿ ಹೀಗಿದೆ 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ರಾಗಿ ಖರೀದಿ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 3,578 ರೂ. ನಿಗದಿ ಮಾಡಲಾಗಿತ್ತು.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಸಿಗದೇ ಇದ್ದವರು ಈ ರೀತಿ ಮಾಡಿ.! ಹಣ ಜಮೆ ಆಗುತ್ತೆ.!

ಈ ಬಾರಿ 2023-24ನೇ ಸಾಲಿನಲ್ಲಿ ರಾಗಿ ಬೆಂಬಲ ಬೆಲೆ ದರ ಹೆಚ್ಚಿಸಲಾಗಿದ್ದು, ಪ್ರತಿ ಕ್ವಿಂಟಾಲ್‌ ರಾಗಿಗೆ 3,846 ರೂ.ನಿಗದಿ ಪಡಿಸಲಾಗಿದೆ. ನಮ್ಮ ರಾಜ್ಯದ ಪ್ರಮುಖ ಬೆಳೆಗಳಲ್ಲಿ ರಾಗಿಯೂ ಕೂಡ ಒಂದು, ಸರ್ಕಾರದ ಈ ನಿಲುವಿನಿಂದಾಗಿ ರಾಜ್ಯದ ಹೆಚ್ಚಿನ ಸಂಖ್ಯೆಯ ರೈತರಿಗೆ ಅನುಕೂಲವಾಗಲಿದೆ ಮತ್ತು ರೈತರು ಖರೀದಿ ಕೇಂದ್ರಗಳಿಗೆ ರಾಗಿ ನೀಡುವ ಸಾಧ್ಯತೆ ಇದೆ ಎಂದು ಭಾವಿಸಲಾಗಿದೆ.

ಬರದ ನಡುವೆ ರಾಗಿಗೆ ಉತ್ತಮ ಬೆಲೆ ಸಿಕ್ಕಿರುವುದು ರೈತರ ಬದುಕಿಗೆ ಸಮಾಧಾನ ತಂದಿದೆ. ಈ ವಿಚಾರವನ್ನು ನೆನ್ನೆ ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದ APMC ಆವರಣದಲ್ಲಿ ನಡೆದ ರಾಗಿ ಮತ್ತು ಭತ್ತದ ಖರೀದಿ ಕೇಂದ್ರ ಉದ್ಘಾಟನೆ ಸಮಯದಲ್ಲಿ ಮಾತನಾಡಿದ ತಹಶೀಲ್ದಾರ್ ಬಸವರೆಡ್ಡಪ್ಪ ರೋಣರವರು ಕೂಡ ಪ್ರಸ್ತಾಪಿಸಿ ಸರ್ಕಾರವು ಬೆಂಬಲ ಬೆಲೆಯಲ್ಲಿ ರೈತರು ಬೆಳೆದ ರಾಗಿ ಹಾಗೂ ಭತ್ತವನ್ನು ಖರೀದಿಸುತ್ತಿದೆ.

ಕಳೆದ ಡಿಸೆಂಬರ್ 15ರಿಂದಲ್ಲೇ ನೋಂದಣಿ ಕಾರ್ಯ ಆರಂಭವಾಗಿದ್ದು ಮತ್ತು ಸರ್ಕಾರ ಎಲ್ಲೆಡೆ ರೈತರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಹೆಚ್ಚಿನ ಸಂಖ್ಯೆಗಳಲ್ಲಿ ಖರೀದಿ ಕೇಂದ್ರ ತೆರೆಯುತ್ತಿದೆ. ಎಲ್ಲ ರೈತರು ಕೂಡ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿ ಹೇಳಿದರು. ಇದುವರೆಗೆ ಒಟ್ಟಾರೆಯಾಗಿ 3,236 ರೈತರು ನೋಂದಾಯಿಸಿಕೊಂಡಿದ್ದಾರೆ ನೋಂದಣಿ ಆಗಿರುವ ಪ್ರಮಾಣ 70,358 ಕ್ವಿಂಟಾಲ್ ಆಗಿದೆ.

ಈ ಸುದ್ದಿ ಓದಿ:- ಮುಂದಿನ 5 ವರ್ಷ ಉಚಿತ ರೇಷನ್.! ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ.!

ಈ ನಿಟ್ಟಿನಲ್ಲಿ ಕಂಪೇರ್ ಮಾಡಿ ನೋಡುವುದಾದರೆ ಭತ್ತ ಮಾರಾಟ ಮಾಡಲು ರೈತರು ನೋಂದಾಯಿಸಿಕೊಳ್ಳುತ್ತಿರುವ ಸಂಖ್ಯೆ ಕಡಿಮೆ ಇದೆ. ಭತ್ತಕ್ಕೂ ಕೂಡ ಸಾಮಾನ್ಯ ಪತ್ರಿಕೆ ರೂ.2,183 ಎ ಗ್ರೇಡ್ ಭತ್ತಕ್ಕೆ ರೂ.2,203 ಇದೆ ಮಾರ್ಚ್ 31, 2024 ರವರೆಗೆ ಅವಕಾಶ ಮಾಡಿಕೊಡಲಾಗಿದೆ, ಅಗತ್ಯ ದಾಖಲೆಗಳನ್ನು ನೀಡಿ ನೋಂದಾಯಿಸಿಕೊಂಡು ರೈತರು ಇವುಗಳ ಪ್ರಯೋಜನ ಪಡೆಯಬೇಕು ಎಂದು ವಿವರಿಸಿ ಹೇಳಿದರು.

ಈ ಸಮಯದಲ್ಲಿ ಸ್ಥಳದಲ್ಲಿ ಆಹಾರ ಶಿರಸ್ತೇದಾರ್ L.B ಮಂಜು, ಖರೀದಿ ಅಧಿಕಾರಿ ಸಂತೋಷ್ ಕುಮಾರ್, ಜ್ಞಾನಮೂರ್ತಿ ಮತ್ತು ತಾಲೂಕು ರೈತ ಸಂಘದ ಮುಖಂಡ ಭುವನೇಶ್ ಮತ್ತು ಇತರರು ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿದ್ದರು. ರಾಜ್ಯದ ಹೆಚ್ಚಿನ ರೈತರು ಈ ಅನುಕೂಲತೆ ಪಡೆದುಕೊಳ್ಳಲಿ ಎನ್ನುವ ಉದ್ದೇಶದಿಂದ ಎಲ್ಲ ರೈತರಿಗೂ ಮಾಹಿತಿಯನ್ನು ಶೇರ್ ಮಾಡಿ.

ಈ ಸುದ್ದಿ ಓದಿ:- ಎಷ್ಟೇ ಶೆಕೆ ಇದ್ದರೂ ಕೂಲ್ ಮಾಡುತ್ತದೆ ಈ ಕೂಲಾರ್, ಕೇವಲ ರೂ.1250ಕ್ಕೆ ಸಿಗುತ್ತಿದೆ ಮಿನಿ ಏರ್ ಕೂಲರ್.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now