ಕಾಂಗ್ರೆಸ್ ಸರ್ಕಾರದ ಭರವಸೆಯ ಗ್ಯಾರಂಟಿ ಯೋಜನೆಗಳಲ್ಲಿ (Guarantee Yojanas) ಗೃಹ ಜ್ಯೋತಿ ಯೋಜನೆ( Gruha Jyoti Yojane) ಕೂಡ ಒಂದು. ಕರ್ನಾಟಕದ ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ಬಳಕೆ ಉಚಿತ ವಿದ್ಯುತ್ (free Current) ನೀಡುವ ಧ್ಯೇಯದೊಂದಿಗೆ ಜಾರಿಗೆ ಬಂದ ಈ ಯೋಜನೆ ಎಂದು ಗೃಹಜ್ಯೋತಿ ಬಳಕೆಧಾರರಿಗೆ ಭಾರಿ ಶಾ’ಕ್ ನೀಡಿದೆ.
ಬೇಸಿಗೆ ಬಿಸಿಲ ಭೇಗೆಯಲ್ಲಿದ್ದ ಜನರಿಗೆ ಈ ಬಾರಿ ಬಂದಿರುವ ವಿದ್ಯುತ್ ಬಿಲ್ ಕೂಡ ಬೆವರಿಳಿಸಿದೆ ರಾಜ್ಯದ 20% ರಷ್ಟು ಜನತೆಗೆ ಈ ತಿಂಗಳ ಬಿಲ್ ನಲ್ಲಿ ಗೃಹ ಜ್ಯೋತಿ ಯೋಜನೆ ಅಡಿ ಶೂನ್ಯ ದರ ಬಿಲ್ ಬರುವುದರ ಬದಲು ಫುಲ್ ಬಿಲ್ (Electricity Bill) ತೋರಿಸುತ್ತಿದೆ. ಕಾರಣ ಏನು? ಸರ್ಕಾರದ ನಿಲುವೇನು ಇತ್ಯಾದಿ ಮಾಹಿತಿ ಹೀಗಿದೆ ನೋಡಿ.
ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ವಿಧಾನಸಭಾ ಚುನಾವಣೆ – 2023 (Karnataka Assembly Election – 2023) ರ ಕಾಂಗ್ರೆಸ್ ಪಕ್ಷದ (Congress Party) ಭರವಸೆಯಂತೆ ಅಧಿಕಾರ ಸ್ಥಾಪನೆಯಾದ ಮೇಲೆ ಜುಲೈ ತಿಂಗಳಿಂದಲೇ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ರಾಜ್ಯದ ಜನತೆಗೆ ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸಿರಗುವಂತೆ ಅವಕಾಶ ಮಾಡಿಕೊಡಲಾಗಿದೆ.
ಈ ಸುದ್ದಿ ಓದಿ:- ದಿನದ 24 ಘಂಟೆಯೂ ನೀರೆತ್ತುವ ಪಂಪ್, ಕರೆಂಟ್ ಇಲ್ಲ ಬ್ಯಾಟರಿ ಇಲ್ಲ ಕೆಲಸ ಮಾತ್ರ ನಿಲ್ಲುವುದಿಲ್ಲ.!
ಆದರೆ ಇದಕ್ಕೆ ಒಂದೇ ಕಂಡೀಶನ್ ಏನೆಂದರೆ, ಹಿಂದಿನ ಒಂದು ವರ್ಷದಿಂದ ಕುಟುಂಬವು ಸರಾಸರಿ ಎಷ್ಟು ವಿದ್ಯುತ್ ಬಳಕೆ ಮಾಡಿದೆ ಅದರ 10% ಮಾತ್ರ ಅಧಿಕವಾಗಿ ಸಿಗುತ್ತದೆ. ಈಗ ಒಟ್ಟಾರೆಯಾಗಿ ಅವರ ಸರಾಸರಿ ಬಳಕೆ ಮತ್ತು ಹೆಚ್ಚುವರಿ 10 ಯೂನಿಟ್ ಹೊರತುಪಡಿಸಿ ಇನ್ನು ಹೆಚ್ಚಿನ ಬಳಕೆ ಮಾಡಿದ್ದಲ್ಲಿ ಉಳಿದ ವಿದ್ಯುತ್ ಬಿಲ್ ಬಿಲ್ ಪಾವತಿ ಮಾಡಬೇಕಿತ್ತು.
ಒಂದು ವೇಳೆ 200 ಯೂನಿಟ್ ಗಡಿ ದಾಟಿದ್ದರೆ ಪೂರ್ತಿ ಬಿಲ್ ಪಾವತಿ ಮಾಡಬೇಕು ಎನ್ನುವ ಕಂಡೀಶನ್ ಇತ್ತು. ಇದನ್ನು ಪಾಲಿಸಿ ಈವರೆಗೂ ಕೂಡ ಇದೇ ರೀತಿ ಬಳಕೆ ಮಾಡಿ ಶೂನ್ಯ ದರ ಟಿಕೆಟ್ ಪಡೆಯುತ್ತಿದ್ದ ಕುಟುಂಬಗಳಿಗೆ ಈಗ ಹೆಚ್ಚುವರಿ ವಿದ್ಯುತ್ ಬಳಕೆಯಾಗಿದೆ ಎಂದು ಬಿಲ್ ಪಾವತಿ ಮಾಡುವಂತೆ ಕಳೆದ ತಿಂಗಳ ವಿದ್ಯುತ್ ಬಳಕೆ ವಿದ್ಯುತ್ ಬಿಲ್ ನಲ್ಲಿ ತೋರಿಸಲಾಗಿದೆ.
ಆದರೆ ಇದು ಯಾವುದೇ ತಾಂತ್ರಿಕ ದೋಷದಿಂದ ಕಾರಣದಿಂದ ಅಲ್ಲ ಬೇಸಿಗೆ ಕಾರಣದಿಂದಾಗಿ ಮನೆಗಳಲ್ಲಿ ಜನರು , AC ಫ್ಯಾನ್, ಕೂಲರ್(Cooler) ಬಳಕೆ ಹಾಗೂ ಬೇಸಿಗೆ ರಜೆ ಇರುವುದರಿಂದ ಮನೆಗಳಲ್ಲಿ ಟಿವಿ ಮತ್ತು ಇನ್ನಿತರ ಎಲೆಕ್ಟ್ರಿಕ್ ಉಪಕರಣಗಳ ಬಳಕೆ ಹೆಚ್ಚಾಗಿದೆ.
ಈ ಸುದ್ದಿ ಓದಿ:-ರಾಜ್ಯದ ಮಹಿಳೆಯರಿಗೆ ಪ್ರಮುಖ ಅಪ್ಡೇಟ್ ಗೃಹಲಕ್ಷ್ಮಿ 7ನೇ ಕಂತಿನ ಹಣದ ಕುರಿತು ಮಾಹಿತಿ ನೀಡಿದ ಸಚಿವೆ.!
ಇದೆಲ್ಲದರ ಕಾರಣದಿಂದ ಈ ತಿಂಗಳಿನಲ್ಲಿ ಅವರಿಗಿದ್ದ ಮೀಸಲು ವಿದ್ಯುತ್ ಬಳಕೆ ದಾಟಿ ಹೆಚ್ಚಿಗೆ ವಿದ್ಯುತ್ ಬಳಕೆ ಮಾಡಿದ ಪರಿಣಾಮ ರಾಜ್ಯದಲ್ಲಿ 20% ಗೃಹಜ್ಯೋತಿ ಗ್ರಾಹಕರು ಈಗ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಅನರ್ಹರಾಗಿದ್ದಾರೆ, ಇವರು ವಿಧಿಯಿಲ್ಲದೇ ಸಂಪೂರ್ಣ ಬಿಲ್ ಪಡೆಯಬೇಕಾಗಿದೆ. ಇದು ಕುಟುಂಬದ ಆರ್ಥಿಕ ಹೊರೆ ಹೆಚ್ಚಿಸಿದೆ.
ರಾಜ್ಯದಲ್ಲಿ 1.20 ಕೋಟಿ ಗ್ರಾಹಕರು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿದ್ದಾರೆ. ಆದರೆ ಇದರಲ್ಲಿ ಕಳೆದ ತಿಂಗಳೇ 20% ಗಿಂತ ಹೆಚ್ಚು ಜನರು ತಮ್ಮ ಉಚಿತ ವಿದ್ಯುತ್ ಪ್ರಯೋಜನ ಕಳೆದುಕೊಂಡಿದ್ದಾರೆ ಮತ್ತು ಇನ್ನು 2-3 ತಿಂಗಳವರೆಗೆ ವಾತಾವರಣದಲ್ಲಿ ಇದೇ ರೀತಿಯ ಪರಿಣಾಮ ಇರುವುದರಿಂದ ಇನ್ನಷ್ಟು ಕುಟುಂಬಗಳಿಗೆ ವಿದ್ಯುತ್ ಪಾವತಿ ಮಾಡಬೇಕಾದ ಸಂಕಷ್ಟ ಎದುರಾಗಬಹುದು. ಹಾಗಾಗಿ ಮಿತವಾಗಿ ವಿದ್ಯುತ್ ಬಳಸಿ, ವ್ಯಯ ಮಾಡಿ ಹಣ ಕಳೆದುಕೊಳ್ಳದಿರಿ ಎನ್ನುವುದಷ್ಟೇ ಈ ಅಂಕಣದ ಆಶಯ.