ನಾಳೆ ಏಪ್ರಿಲ್ 1 ರಿಂದ 4 ಹೊಸ ರೂಲ್ಸ್ ಜಾರಿ.!

 

WhatsApp Group Join Now
Telegram Group Join Now

ಏಪ್ರಿಲ್ 01 ರಂದು ಹೊಸ ಆರ್ಥಿಕ ವರ್ಷ (New Financial Year) ಆರಂಭವಾಗುತ್ತಿದೆ. ಇದು ಹೊಸ ತಿಂಗಳ ಆರಂಭ ಮತ್ತು ಹೊಸ ಆರ್ಥಿಕ ವರ್ಷದ ಆರಂಭವೂ ಆಗಿರುವುದರಿಂದ ದೇಶದಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತಿವೆ. ಇವೆಲ್ಲವೂ ಹೆಚ್ಚು ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟವು ಕೂಡ ಆಗಿದ್ದು ದೇಶದ ಆಡಳಿತ ಹಾಗೂ ಹಣಕಾಸಿಗೆ ಸಂಬಂಧಪಟ್ಟ ಹಾಗೆ ಏನೆಲ್ಲಾ ಬದಲಾವಣೆ ಆಗಿದೆ.

ಇದು ಮಧ್ಯಮ ವರ್ಗದವರ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಸಂಗತಿಗಳನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ಅದರಲ್ಲೂ ಮುಖ್ಯವಾಗಿ ಏಪ್ರಿಲ್ 01ರಿಂದ ಬದಲಾಗುತ್ತಿರುವ ಈ ನಾಲ್ಕು ನಿಯಮಗಳ ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಲೇಬೇಕು. ಹಾಗಾಗಿ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ಈ ಸುದ್ದಿ ಓದಿ:- ಈ ತಳಿ ಸೀಬೆ ಬೆಳೆದರೆ ಖರ್ಚು ಕಡಿಮೆ, 6 ಲಕ್ಷ ಆದಾಯ ಖಚಿತ.!

* ಒಂದು ವಿಚಾರದಲ್ಲಿ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ ಎಂದು ಹೇಳಬಹುದು. ಅದೇನೆಂದರೆ, ದೇಶದಲ್ಲಿ ಹೊಸ APL / BPL ಮತ್ತು AAY ರೇಷನ್ ಕಾರ್ಡ್ ಹಂಚಿಕೆಗೆ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ ಎನ್ನುವ ವಿಷಯವು ಬಲವಾದ ಮೂಲಗಳಿಂದ ತಿಳಿದು ಬಂದಿದೆ.

ಯಾರು ರೇಷನ್ ಕಾರ್ಡ್ ಹೊಂದಿಲ್ಲ ಅಥವಾ ಹೊಸದಾಗಿ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಪ್ರತ್ಯೇಕವಾಗಿ ರೇಷನ್ ಕಾರ್ಡ್ ಪಡೆಯಲು ಬಯಸುತ್ತಿದ್ದಾರೆ ಅವರಿಗೆ ಇದರಿಂದ ಅನುಕೂಲವಾಗುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆ 2023ರ ನೀತಿ ಸಂಹಿತೆ ಕಾರಣದಿಂದಾಗಿ ಅನುಮೋದನೆ ಯಾಗಿದ್ದರು, ವಿತರಣೆಯಾಗದೆ ಉಳಿದಿದ್ದ ರೇಷನ್ ಕಾರ್ಡ್ ಗಳ ವಿಲೇವಾರಿ ಕೂಡ ಶೀಘ್ರವೇ ನಡೆಯಲಿದೆ.

ಈ ಸುದ್ದಿ ಓದಿ:- LIC ನೇಮಕಾತಿ ಅಧಿಸೂಚನೆ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

* ಬ್ಯಾಂಕ್ ಗಳ ಪ್ರಕಾರವಾಗಿ ಕೂಡ ಏಪ್ರಿಲ್ 01 ರಿಂದ 2024-25ನೇ ಸಾಲಿನ ಹೊಸ ವರ್ಷ ಆರಂಭವಾಗಿದೆ. ಆದಕಾರಣ RBI ಈ ಹೊಸ ವರ್ಷದಲ್ಲಿ ಬರುವ ಬ್ಯಾಂಕ್ ರಜಾದಿನಗಳ ಘೋಷಣೆ ಕೂಡ ಮಾಡಿದೆ. ಆ ಪ್ರಕಾರವಾಗಿ ಏಪ್ರಿಲ್ ತಿಂಗಳಲ್ಲಿಯೇ 17 ದಿನಗಳು ಬ್ಯಾಂಕ್ ಮುಚ್ಚಲ್ಪಟ್ಟಿರುತ್ತದೆ.

* FAST TAG ಕುರಿತಾಗಿ ಒಂದು ಹೊಸ ನಿಯಮವನ್ನು ಬ್ಯಾಂಕ್ ಮಾಡಿದೆ. ನೀವು ಬ್ಯಾಂಕಿಗೆ ಹೋಗಿ ನಿಮ್ಮ ಫಾಸ್ಟ್ ಟ್ಯಾಗ್ ಇ-ಕೆವೈಸಿ (e-KYC) ನವೀಕರಣಗೊಳಿಸದೇ ಇದ್ದರೆ ಫಾಸ್ಟ್ ಟ್ಯಾಗ್ ಕುರಿತಾಗಿ ಕೂಡ ಸಮಸ್ಯೆಗಳು ಎದುರಾಗುತ್ತವೆ. ಇ-ಕೆವೈಸಿ ಆಗದ ಫಾಸ್ಟ್ ಟ್ಯಾಗ್ ಗಳು ನಿಷ್ಕ್ರಿಯಗೊಳ್ಳಲುಬಹುದು. ಹಾಗಾಗಿ ತಪ್ಪದೆ ಈ ಕಾರ್ಯ ಪೂರ್ತಿಗೊಳಿಸಿ.

ಈ ಸುದ್ದಿ ಓದಿ:- ಲವ್ ಮ್ಯಾರೇಜ್ ಮಾಡಿಕೊಳ್ಳುವ ಮೊದಲು ಈ ವಿಷಯಗಳನ್ನು ತಿಳಿದುಕೊಂಡಿರಿ.!

* NPS ನಿಯಮದಲ್ಲೂ ಕೂಡ ಕೊಂಚ ಬದಲಾವಣೆ ಆಗುತ್ತಿದೆ. ಏಪ್ರಿಲ್ ತಿಂಗಳಿನಿಂದ ಪಿಂಚಣಿ ನಿಧಿ ನಿಯಂತ್ರಕ ಅಂದರೆ PF RDA ಲಾಗಿನ್ ಪ್ರಕ್ರಿಯ ಬದಲಾಯಿಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಬದಲಾದ ಹೊಸ ನಿಯಮವು ಏಪ್ರಿಲ್ 01 ರಿಂದಲೇ ಅನ್ವಯವಾಗುತ್ತಿದೆ.

* ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (Pan Aadhar link) ಮಾಡುವ ಪ್ರಕ್ರಿಯೆಗೆ ಈಗಾಗಲೇ ಸಾಕಷ್ಟು ಕಾಲಾವಕಾಶವನ್ನು ನೀಡಲಾಗಿದೆ ಮತ್ತು ಮಾರ್ಚ್ 31, 2024 ಇದಕ್ಕೆ ಕೊನೆಯ ದಿನಾಂಕವಾಗಿದ್ದು, ಒಂದು ವೇಳೆ ನೀವು ಇನ್ನು ಈ ಪ್ರಕ್ರಿಯೆ ಪೂರ್ತಿಗೊಳಿಸದೆ ಇದ್ದರೆ ಏಪ್ರಿಲ್ 01, 2024 ರಿಂದ ಆರ್ಥಿಕ ಇಲಾಖೆ ನಿಮ್ಮ ಪ್ಯಾನ್ ಕಾರ್ಡನ್ನು ರದ್ದುಗೊಳಿಸಲಿದೆ(Cancel).

ಈ ಸುದ್ದಿ ಓದಿ:- ಕೊಟಕ್ ಸುರಕ್ಷಾ ವಿದ್ಯಾರ್ಥಿ ವೇತನ, 1 ಲಕ್ಷ ಸ್ಕಾಲರ್ಶಿಪ್ ಸಿಗಲಿದೆ ಈ ರೀತಿ ಅರ್ಜಿ ಸಲ್ಲಿಸಿ.!

* ಪ್ರತಿ ತಿಂಗಳು ಕೂಡ LPG ಸಿಲಿಂಡರ್ ತರ ಬದಲಾವಣೆ ಆಗುತ್ತದೆ ಎನ್ನುವುದು ತಿಳಿದೇ ಇದೆ 2024 ರಿಂದಲೂ ಕೂಡ ಹೊಸ LPG ದರ ನಿರ್ಧಾರವಾಗಲಿದೆ.
* ಅಂಚೆ ಕಚೇರಿ ಸೇರಿದಂತೆ ಇತರೆ ವಿವಿಧ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳು ತಮ್ಮ ವಿವಿಧ ಯೋಜನೆಗಳ ಬಡ್ಡಿದರವನ್ನು ಕೂಡ ಪರಿಷ್ಕೃತಗೊಳಿಸಲಿವೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now