ನಮ್ಮ ದೇಶದಲ್ಲಿ ಬಹುತೇಕರ ಮೊದಲ ಮೋಟರ್ ವೆಹಿಕಲ್ ಬೈಕ್ ಆಗಿರುತ್ತದೆ. ಇಂದು ಒಂದು ಸಾಧನ ಮಾತ್ರ ಅಲ್ಲದೆ ಸೆಂಟಿಮೆಂಟ್ ಕೂಡ ಆಗಿರುತ್ತದೆ. ಹಾಗೆಯೇ ಬೈಕ್ ತೆಗೆದುಕೊಳ್ಳುವುದು ಕೂಡ ಅಷ್ಟೇ ಜವಾಬ್ದಾರಿಯುತ ಕೆಲಸ ಆಗಿರುತ್ತದೆ. ಬೈಕ್ ತೆಗೆದುಕೊಳ್ಳುವಾಗ ಯಾವ ಉದ್ದೇಶಕ್ಕಾಗಿ ತೆಗೆದುಕೊಳ್ಳುತ್ತಿದ್ದೇವೆ ನಮ್ಮ ಬಜೆಟ್ ಎಷ್ಟಿದೆ? ಬೈಕ್ ಮಾಡಲ್ ಮೈಲೇಜ್ ಇನ್ನು ಮುಂತಾದ ವಿಷಯಗಳು ಮುಖ್ಯವಾಗುತ್ತದೆ.
ಆದರೆ ಅನೇಕರು ಕೊಂಡುಕೊಳ್ಳುವಾಗ ಉತ್ಸಾಹದಲ್ಲಿ ಯೋಚನೆ ಮಾಡದೆ ನಂತರ ಪಶ್ಚಾತಾಪ ಪಟ್ಟಿರುವುದು ಇದೆ. ಮಧ್ಯಮ ವರ್ಗದ ಜನರಿಗಂತೂ ಮೊಬೈಲ್ ಕೊಂಡುಕೊಂಡಷ್ಟು ಸಲೀಸಾದ ವಿಷಯ ಬೈಕ್ ಕೊಂಡುಕೊಳ್ಳುವುದು ಅಲ್ಲವೇ ಅಲ್ಲ. ಒಮ್ಮೆ ಬೈಕ್ ಕೊಂಡುಕೊಂಡರೆ ಕನಿಷ್ಠ 10-20 ವರ್ಷ ಆ ಮನೇಲಿ ಸದಸ್ಯನಾಗಿ ಇರುತ್ತದೆ ಅಷ್ಟಂತು ಬಾಳಿಕೆ ಬರಲೇಬೇಕು.
ಈ ಸುದ್ದಿ ಓದಿ:- ಕಂದಾಯ ಇಲಾಖೆ ನೇಮಕಾತಿ, PUC ಆಗಿದ್ರೆ ಸಾಕು ಅರ್ಜಿ ಸಲ್ಲಿಸಿ ವೇತನ 42,000/-
ಎಷ್ಟೋ ಮನೆಗಳಲ್ಲಿ ಮಕ್ಕಳಿಗೂ ಕೂಡ ಅದನ್ನೇ ಬಳುವಳಿಯಾಗಿ ಕೊಟ್ಟಿರುವ ಉದಾಹರಣೆಯು ಕೂಡ ಇದೆ. ಹಾಗಾಗಿ ಬೈಕ್ ಕೊಂಡುಕೊಳ್ಳುವಾಗ ಯಾವೆಲ್ಲ ವಿಷಯದ ಬಗ್ಗೆ ಗಮನ ಹರಿಸಬೇಕು ಎನ್ನುವ ಕೆಲ ಮುಖ್ಯ ವಿಚಾರವನ್ನು ಈ ಲೇಖನದಲ್ಲಿ ಹಂಚಿಕೊಳ್ಳಬಯಸುತ್ತಿದ್ದೇನೆ.
* ಬಜೆಟ್:- ಬೈಕ್ ಖರೀದಿ ಮಾಡುವಾಗ ಈ ಮೊದಲೇ ನಾನು ತಿಳಿಸಿದಂತೆ ಬಜೆಟ್ ಎನ್ನುವುದು ಕೂಡ ಒಂದು ಮುಖ್ಯ ವಿಷಯ. ಮಾರ್ಕೆಟ್ ನಲ್ಲಿ ರೂ.50,000 ದಿಂದ ಹಿಡಿದು ರೂ.5 ಕೋಟಿವರೆಗೂ ಕೂಡ ಬೈಕ್ ಇದೆ. ಶೋರೂಮ್ ಗೆ ಹೋದರೆ ಫೀಚರ್ಸ್ ಗಳನ್ನು ನೋಡಿ ಕನ್ಫ್ಯೂಸ್ ಆಗುವುದು ಕೂಡ ನಿಜ. ಹಾಗಾಗಿ ಮೊದಲೇ ನಾವು ನಮ್ಮ ಬಜೆಟ್ ರೆಡಿ ಮಾಡಿಕೊಂಡು ಅದಕ್ಕೆ ತಕ್ಕ ಹಾಗೆ ಬೈಕ್ ನೋಡುವುದು ಅತ್ಯುತ್ತಮ.
ಈ ಸುದ್ದಿ ಓದಿ:- ಲೋಕಸಭೆ ಚುನಾವಣೆ ಹಿನ್ನೆಲೆ LPG ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ವರ್ಷಕ್ಕೆ 3 ಸಿಲಿಂಡರ್ ಉಚಿತ.!
* ಶಕ್ತಿ ಮತ್ತು ಸಾಮರ್ಥ್ಯ:- ಬೈಕ್ ಬಗ್ಗೆ ಮಾತನಾಡುವಾಗ CC, ಟಾರ್ಕ್, RPM, HP ಈ ರೀತಿ ಶಬ್ದಗಳನ್ನು ಕೇಳಿರುತ್ತೀರಿ. ಇದು ಬೈಕ್ ಶಕ್ತಿ ಎಷ್ಟಿದೆ ಸಾಮರ್ಥ್ಯ ಎಷ್ಟಿದೆ ಎನ್ನುವುದನ್ನು ಸೂಚಿಸುವ ಪದಗಳಾಗಿವೆ. ಇವುಗಳಲ್ಲಿ ಹೆಚ್ಚು CC, ಟಾರ್ಕ್, RPM ಇದ್ದಷ್ಟು ಬೈಕ್ ಸಾಮರ್ಥ್ಯ ಉತ್ತಮವಾಗಿದೆ ಎಂದು ಅರ್ಥ. ಬೈಕ್ ಖರೀದಿಸುವಾಗ ಸಾಮರ್ಥ್ಯದ ಆಧಾರದ ಮೇಲೆ ಕೂಡ ಅವುಗಳ ಬೆಲೆಗಳಲ್ಲಿ ವ್ಯತ್ಯಾಸ ಆಗಬಹುದು. ಹಾಗಾಗಿ ಎಲ್ಲವನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಿ ಯಾವುದರಲ್ಲೂ ಕೂಡ ಕಾಂಪ್ರಮೈಸ್ ಆಗದೆ ಬುದ್ಧಿವಂತಿಕೆಯಿಂದ ಸೆಲೆಕ್ಟ್ ಮಾಡಬೇಕು.
* ಕೆಟಗರಿ:- ಬೈಕ್ ಕೊಂಡುಕೊಳ್ಳುವಾಗ ಈ ವಿಚಾರ ಕೂಡ ಮುಖ್ಯವಾಗುತ್ತದೆ. ಯಾಕೆಂದರೆ ಕಾಲೇಜಿಗೆ ಹೋಗುವ ಮಕ್ಕಳು ತಮ್ಮ ಕ್ರೇಜ್ ಗಾಗಿ ಲೇಟೆಸ್ಟ್ ಮಾಡೆಲ್ ಖರೀದಿಸಲು ಇಷ್ಟಪಡುತ್ತಾರೆ. ಇನ್ನು ಸ್ಪೋರ್ಟ್ಸ್ ನಲ್ಲಿ ಭಾಗವಹಿಸುವವರು ಅದಕ್ಕಾಗಿಯೇ ತಯಾರಾಗಿರುವ ಸ್ಪೋರ್ಟ್ಸ್ ಮಾದರಿಯ ಬೈಕ್ ಇಷ್ಟಪಡುತ್ತಾರೆ.
ಈ ಸುದ್ದಿ ಓದಿ:- ಬಡವರಿಗಾಗಿಯೇ ತಯಾರಾದ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ಕೇವಲ ರೂ.36,990 ಮಾತ್ರ.!
ಇನ್ನು ದೈನಂದಿನಿಕ ಜೀವನದಲ್ಲಿ ಹತ್ತಿರದ ಕಾಲೇಜಿಗೆ ಕಚೇರಿಗಳಿಗೆ ಹೋಗಲು ಬಯಸುವವರ ಆಯ್ಕೆ ಬೇರೆ ಇರುತ್ತದೆ ಮತ್ತು ಕೆಲವರು ಸಾಮಾನ್ಯವಾಗಿ ರೈತರು, ತರಕಾರಿ ಬೆಳೆಗಾರರು, ಹೂ ಮಾರಾಟ ಮಾಡುವವರು ಈ ರೀತಿ ತಮ್ಮ ದೈನಂದಿಕ ಕೆಲಸಗಳಲ್ಲಿ ಸಣ್ಣಪುಟ್ಟ ಸಾಮಾನುಗಳನ್ನು ಕಡಿದಾದ ಜಾಗಕ್ಕೆ ಸಾಗಿಸುವುದಕ್ಕೂ ಕೂಡ ಬೈಕ್ ಬಯಸುವವರು ಇರುತ್ತಾರೆ.
ಈ ರೀತಿ ಬಯಸುವವರಿಗೆ ಬೇರೆ ಆಪ್ಶನ್ ಇರುತ್ತದೆ, ಹೀಗೆ ಅವಶ್ಯಕತೆಗೆ ಮತ್ತು ಉದ್ದೇಶಕ್ಕೆ ಅನುಗುಣವಾಗಿ ಕೂಡ ಇದನ್ನು ಡಿಸೈಡ್ ಮಾಡಬೇಕಾಗುತ್ತದೆ. ಹೀಗೆ ಇತ್ಯಾದಿ ವಿಷಯಗಳು ಕೂಡ ವಾಹನ ಖರೀದಿಯಲ್ಲಿ ಮುಖ್ಯಪಾತ್ರ ವಹಿಸುತ್ತದೆ ಈ ವಿಚಾರವಾಗಿ ಇನ್ನಷ್ಟು ಡೀಟೇಲ್ ಬೇಕೆಂದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಇನ್ನು ಯಾವ ವಿಷಯಗಳ ಬಗ್ಗೆ ಗಮನ ಕೊಡಬೇಕು ಎನ್ನುವುದನ್ನು ಕಾಮೆಂಟ್ ಮಾಡಿ ತಿಳಿಸಿ.