ಈಗಿನ ಕಾಲದಲ್ಲಿ ಮಕ್ಕಳನ್ನು ಅವರ ಪ್ರತಿಭೆಯಿಂದ ಅಳೆಯುವುದರ ಬದಲು ಅಂಕಗಳಿಂದಲೇ ಅಳೆಯಲಾಗುತ್ತಿದೆ. ನಿಮ್ಮ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿ ನೋಡಿ ಅಂಕಗಳ ಆಧಾರಿತವಾಗಿಯೇ ಎಲ್ಲ ಕೆಲಸಗಳು ನಿರ್ಧಾರ ಆಗಿದೆಯೇ? ಹಾಗಾದರೆ ಹೋಟೆಲ್ ನಲ್ಲಿ ಟೇಸ್ಟ್ ನೋಡುವ ವ್ಯಕ್ತಿಗೇಕೆ ಅಷ್ಟು ಸಂಬಳ ಇದೆ, ಕಾಸ್ಟ್ಟೂಮ್ ಡಿಸೈನರ್ ಹೇಗೆ ಒಂದು ಡಿಸೈನ್ ಗೆ ಅಷ್ಟು ಡಿಮ್ಯಾಂಡ್ ಮಾಡುತ್ತಾರೆ.
ಒಂದು ಪೇಂಟಿಂಗ್ ಗೆ ಯಾಕೆ ಅಷ್ಟು ಬಿಟ್ ಮಾಡಿ ಖರೀದಿಸುತ್ತಾರೆ, ಒಬ್ಬ ಸ್ಟಾರ್ ಹೀರೋಗೆ ಯಾಕೆ ಅಷ್ಟು ಕೋಟಿ ಹಣ ಸುರಿಯಲಾಗುತ್ತದೆ, ಒಬ್ಬ ಗಾಯಕನ ಹಾಡು ಕೇಳಬೇಕು ಎಂದು ಅಭಿಮಾನಿಗಳೇಕೆ ಅರ್ಧ ರಾತ್ರಿವರೆಗೂ ಕಾಯುತ್ತಾರೆ. ಅವರೆಲ್ಲರೂ ಪುಸ್ತಕ ಉರು ಒಡೆದು ಪಡೆದ ಅಂಕದಿಂದ ಯಶಸ್ವಿ ಆಗಿದ್ದಾರೆಯೇ? ಹಾಗಾದ್ರೆ ಪೋಷಕರಾಗಿ ನೀವೇಕೆ ನಿಮ್ಮ ಮಕ್ಕಳಿಗೆ ಅಷ್ಟು ಟೆನ್ಶನ್ ಕೊಡುತ್ತಿದ್ದೀರಾ?
ಒಮ್ಮೆ ನಿಮ್ಮ ಮಗುವಿಗೆ ಒಂದು ದಿನ ಹೋಂವರ್ಕ್ ಮಾಡುವುದು ಬೇಡ ಎಂದು ಹೇಳಿ ಆ ಮಗುವಿಗೆ ಆಗುವ ಆನಂದಕ್ಕೆ ಬೆಲೆ ಕಟ್ಟಲು ಆಗದು. ಹಾಗಾದರೆ ಶಿಸ್ತುನಿಂದ ಬೆಳೆಸಬಾರದೆ ಶಿಕ್ಷಣ ನಿರ್ಲಕ್ಷ ಮಾಡಬೇಕು ಎಂದಲ್ಲ ಅತಿಯಾದ ಒತ್ತಡವನ್ನು ಕೂಡ ಹಾಕಬಾರದು. ಪ್ರತಿ ವ್ಯಕ್ತಿಗೂ ತನ್ನದೇ ಆದ ಟ್ಯಾಲೆಂಟ್ ಇರುತ್ತದೆ ಆತನ ಆಸಕ್ತಿಯನ್ನು ಪ್ರೋತ್ಸಾಹಿಸಬೇಕು.
ಈ ಸುದ್ದಿ ಓದಿ:- ಹಳೆಯ ಸ್ಕೂಟರ್ ಹೈಬ್ರಿಡ್ ಮಾಡ್ತಾರೆ, ಪೆಟ್ರೋಲ್ ಮತ್ತು ಬ್ಯಾಟರಿ ಎರಡರಲ್ಲೂ ಚಲಿಸುತ್ತದೆ ಎಷ್ಟು ದೂರ ಬೇಕಾದರೂ ಹೋಗಬಹುದು.!
ಈಗಿನ ಕಾಲದಂತೆ ಶಿಕ್ಷಣ ಪದ್ಧತಿ ಹದಗೆಟ್ಟಿ ನಿಂತಿದೆ. ಮೆಕಾಲೆ ಶಿಕ್ಷಣ ನೀತಿ ಪ್ರಕಾರ ಮೀನು, ಆನೆಗಳು ಕೂಡ ಅಳಿಲಿನಂತೆ ಮರ ಏರಬೇಕು ಪೋಷಕರಾಗಿ ನೀವು ಕೂಡ ಅದನ್ನೇ ನಿರೀಕ್ಷಿಸುತ್ತಿದ್ದೀರಾ ಅಂದರೆ ತಪ್ಪಲ್ಲವೇ? ಮತ್ತು ಈ ಸೆಮಿಸ್ಟರ್ ಪದ್ಧತಿಯಂತೂ ಇನ್ನು ಸರ್ವನಾಶ ಮಾಡಿದೆ.
ಮೊದಲ ಸೆಮಿಸ್ಟರ್ ನಲ್ಲಿ ಕಲಿತ ಪಾಠವು ಮೂರನೇ ಸೆಮಿಸ್ಟರ್ ಗೆ ಅವಶ್ಯಕತೆ ಇಲ್ಲ ಎಂದು ಮರೆಯುವುದಾದರೆ ಅದನ್ನು ಜೀವನಕ್ಕೆ ಅಳವಡಿಸಿಕೊಳ್ಳುವುದಾದರೂ ಹೇಗೆ? ಅಷ್ಟು ಒತ್ತಡದಿಂದ ಅದನ್ನು ಕಲಿತಿದ್ದಾದರೂ ಯಾಕೆ ಮರೆಯುವುದಕ್ಕೆಂದೇ?? ಆದರೆ ನಮ್ಮ ಭಾರತೀಯ ಶಿಕ್ಷಣ ಪದ್ಧತಿ ಹೀಗಿರಲಿಲ್ಲ.
ಉದಾಹರಣೆಗೆ ನಳಂದ ವಿಶ್ವವಿದ್ಯಾಲಯದ ಬಗ್ಗೆ ಹೇಳುವುದಾದರೆ ಇದರ ಬಗ್ಗೆ ತಿಳಿದಿರುವ ಮಾಹಿತಿಯ ಪ್ರಕಾರವಾಗಿ 10,000 ವಿದ್ಯಾರ್ಥಿಗಳಿಗೆ 1,000 ಶಿಕ್ಷಕರು ಇರುತ್ತಿದ್ದರು ಮತ್ತು ನಳಂದ ವಿಶ್ವವಿದ್ಯಾಲಯದಲ್ಲಿ ಡೀನ್ ಸ್ಥಾನ ಏರುವ ವ್ಯಕ್ತಿಗೆ ಕನಿಷ್ಠ ನೂರಕ್ಕಿಂತ ಹೆಚ್ಚು ವಿಷಯಗಳಲ್ಲಿ ಪರಿಣಿತಿ ಇರುತ್ತಿತ್ತು.
ಈ ಸುದ್ದಿ ಓದಿ:- ಹೆಣ್ಣು ಮಕ್ಕಳ ಪಾಲನ್ನು ಅಣ್ಣತಮ್ಮಂದಿರು ಕೊಡದೇ ಇದ್ದರೆ ಅಥವಾ ಹಕ್ಕು ಖುಲಾಸೆ ಪತ್ರ ಬರೆಸಿ ಮೋಸ ಮಾಡಿದ್ದರೆ ಏನು ಮಾಡಬೇಕು ಗೊತ್ತಾ.?
ಆದರೆ ಈಗ ನಾವು ಅಳವಡಿಸಿಕೊಂಡಿರುವ ಬ್ರಿಟಿಷರು ಬಳುವಳಿಯಾಗಿ ಕೊಟ್ಟು ಹೋದ ಮೆಕಾಲೆ ಶಿಕ್ಷಣ ಪದ್ಧತಿಯು ನಮ್ಮನ್ನು ಗಟ್ಟು ಹೊಡೆದು ಒಪ್ಪಿಸಿ ಅಂಕ ಪಡೆದು ಕಚೇರಿಯೊಂದರಲ್ಲಿ ಕೆಲಸ ಹಿಡಿಯುವುದಕ್ಕೆ ಓಡುವಂತಹ ಮನಸ್ಥಿತಿಗೆ ತಂದು ಬಿಟ್ಟಿದೆ.
ಈಗಿನ ಕಾಲದಲ್ಲಿ ಸರಸ್ವತಿ ಪೂಜೆ ಆಚರಣೆ ಅನೇಕ ಶಾಲೆಗಳಲ್ಲಿ ಇಲ್ಲ ಯಾಕೆಂದರೆ ಅದನ್ನು ಧರ್ಮದ ಆಧಾರದ ಮೇಲೆ ನೋಡಲಾಗುತ್ತದೆ. ಇಡೀ ಪ್ರಪಂಚಕ್ಕೆ ಭೂಮಿ ಒಂದೇ ಎಂದ ಮೇಲೆ ದೇವರು ಕೂಡ ಒಂದೇ ಆದರೆ ಅದರ ಕಲ್ಪನೆ ಹಿಂದಿರುವ ಶಕ್ತಿಯನ್ನು ಮತ್ತು ಅರ್ಥವನ್ನು ಅರಿಯುವುದರಲ್ಲಿ ಎಡವಿದ್ದೇವೆ ಅಷ್ಟೇ.
ಸರಸ್ವತಿಯನ್ನು ಕಣ್ಣು ಮುಚ್ಚಿ ಒಮ್ಮೆ ನೆನೆಯಿರಿ ಕಲ್ಲು ಬಂಡೆ ಮೇಲೆ ಕೂತು ಒಂದು ಕೈಯಲ್ಲಿ ಪುಸ್ತಕ, ಮತ್ತೊಂದು ಕೈನಲ್ಲಿ ಜಪಮಣಿ, ಎರಡು ಕೈಗಳಲ್ಲಿ ವೀಣೆ ಪಕ್ಕದಲ್ಲಿ ಹಂಸ. ನೋಡಿದವರಿಗೆ 108 ಪ್ರಶ್ನೆ ಹಂಸವೇ ಯಾಕೆ ಇರಬೇಕು? ಬೇರೆ ಪಕ್ಷಿ ಇರಬಾರದೇ? ಜಪಮಣಿಯೇ ಯಾಕೆ ಉತ್ತರ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಕಂದಾಯ ಇಲಾಖೆ ನೇಮಕಾತಿ, PUC ಆಗಿದ್ರೆ ಸಾಕು ಅರ್ಜಿ ಸಲ್ಲಿಸಿ ವೇತನ 42,000/-
ಸರಸ್ವತಿಯನ್ನು ವಿದ್ಯೆಗೆ ದೇವತೆ ಎಂದು ಕರೆಯಲಾಗುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಯ ಆಕೆಯನ್ನು ತಾಯಿಯ ಸ್ಥಾನದಲ್ಲಿ ನೋಡುತ್ತಾನೆ. ಹೇಗೆ ತಾಯಿಯು ತನ್ನ ಮಗುವನ್ನು ಪ್ರೌಢಾವಸ್ಥೆ ಬರುವವರೆಗೂ ಕೂಡ ಜೋಪಾನ ಮಾಡುತ್ತಾಳೆ. ವಿದ್ಯೆ ಎನ್ನುವುದು ಕೂಡ ಹಾಗೆ ಆ ವ್ಯಕ್ತಿ ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಆತನ ಸಾಮರ್ಥ್ಯದ ಅರಿತು ವಿಷಯದಲ್ಲಿ ಆತ ಪರಿಣಿತ ಆಗುವವರೆಗೂ ಕೂಡ ಪ್ರತಿನಿತ್ಯವೂ ತಾಯಿ ಮಡಿಲಲ್ಲಿ ಮಗು ಆಡುವಂತೆ ಸಮಯ ಕೊಟ್ಟು ಕಲಿಯಲೇಬೇಕು.
ಪುಸ್ತಕ ಈ ರೀತಿ ಕಲಿಯುವುದು ಎನ್ನುವುದನ್ನು ತಿಳಿಸಿದರೆ ಜಪ ಮಣಿಯು ಕಲಿತ್ತಿದ್ದನ್ನು ಮನನ ಮಾಡು, ಅದರ ಪ್ರಯೋಜನ ಪಡೆದುಕೋ ಎನ್ನುವುದನ್ನು ಸೂಚಿಸುತ್ತದೆ. ಕೈಯಲ್ಲಿರುವ ವೀಣೆಯು ಸುಮಧುರ ಸ್ವರವನ್ನು ಮೀಟುವಂತೆ ತರಂಗದಲ್ಲಿ ಎಲ್ಲಾ ಕಡೆ ತಲುಪಿಸುವಂತೆ ನಿನಗೆ ಅರ್ಥ ಆದ ಅಪಾರಜ್ಞಾನವು ಇಡಿ ವಿಶ್ವಕ್ಕೆ ಪ್ರಸರವಾಗಲಿ ಎನ್ನುವುದನ್ನು ಸೂಚಿಸುತ್ತದೆ.
ಮತ್ತು ಇದೆ ಸ್ಥಾನದಲ್ಲಿ ಇದು ಕಲೆ ಬಗ್ಗೆ ಕೂಡ ಹೇಳುತ್ತದೆ ಯಾಕೆಂದರೆ ಭಾಷೆಯ ಮೂಲಕ ತಿಳಿಸಲು ಆಗದದ್ದನ್ನು ಅಭಿನಯದ ಮೂಲಕ ಅದು ಅರ್ಥ ವಾಗದಿದ್ದರೆ ಪೇಂಟಿಂಗ್, ನೃತ್ಯ ಸಂಗೀತ ವಿಷಯವನ್ನು ಅರ್ಥ ಮಾಡಿಸುತ್ತದೆ. ಹಂಸವು ಹಾಲು ನೀರಿನಲ್ಲಿ ಹಾಲನ್ನು ಮಾತ್ರ ಹೀರುವಂತೆ ನಾವು ಕೂಡ ನಮಗೆ ಅರಿವಾದ ಕ್ಷಣದಲ್ಲಿ ಉತ್ತಮವಾದದ್ದನ್ನು ಮಾತ್ರ ಪ್ರಪಂಚಕ್ಕೆ ಅನುಕೂಲವಾಗಲಿ ಎಂದು ಹಂಚಬೇಕು ಎನ್ನುವುದನ್ನು ಅರ್ಥ ಮಾಡಿಸುತ್ತದೆ.
ಈ ಸುದ್ದಿ ಓದಿ:- ಲೋಕಸಭೆ ಚುನಾವಣೆ ಹಿನ್ನೆಲೆ LPG ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ವರ್ಷಕ್ಕೆ 3 ಸಿಲಿಂಡರ್ ಉಚಿತ.!
ಆಕೆ ಕಲ್ಲು ಬಂಡೆ ಮೇಲೆ ಯಾಕೆ ಕುಳಿತಿರುತ್ತಾರೆ ಎಂದರೆ ಕಷ್ಟ ಸುಖ ನೋವು ನಲಿವು ಎಲ್ಲದರಲ್ಲೂ ಎಷ್ಟೇ ಕಷ್ಟವಾದರೂ ಸ್ಥಿರ ಎನ್ನುವುದನ್ನು ಸೂಚಿಸುತ್ತದೆ. ವಿದ್ಯೆಯು ಹಾಗೆ ಜೀವನದಲ್ಲಿ ಯಾರು ಯಾವ ಸಮಯದಲ್ಲಿ ಬೇಕಾದರೂ ಬಿಟ್ಟು ಹೋಗಬಹುದು ಆದರೆ ಕಲಿತ ವಿದ್ಯೆ ಎಂದಿಗೂ ಹೋಗುವುದಿಲ್ಲ.
ಆದರೆ ಈಗ ನಾವು ಕಲಿಯುತ್ತಿರುವ ಗಟ್ಟು ಹೊಡೆಯುವ ಪದ್ಧತಿ, ಅಂಕಗಳ ಮೇಲೆ ಆಧಾರವಾಗುವ ಪುಸ್ತಕದ ಹುಳುವಿನ ಪದ್ಧತಿ ಇದನೆಲ್ಲ ಕಲಿಸಲಾರದು. ಹಾಗಾದರೆ ಮೊದಲೆಲ್ಲ ಈ ರೀತಿ ಕಂಠಪಾಠ ಮಾಡುವ ರೂಢಿ ಇರಲಿಲ್ಲವೇ ಎಂದರೆ ಖಂಡಿತವಾಗಿಯೂ ಇತ್ತು ಅಂಕಗಳಿಗೆ ಅಲ್ಲ ಮತ್ತು ಅಸಂಬದ್ಧವಾಗಿ ಅಲ್ಲ ಪ್ರಾಕ್ಟಿಕಲ್ ಆಗಿ ಜೀವನಪೂರ್ತಿ ಅನುಕೂಲಕ್ಕೆ ಬರುವ ಹಾಗೆ ಇರುತ್ತಿತ್ತು.
ಉದಾಹರಣೆಗೆ ಮಂತ್ರಘೋಷದಿಂದ ಉಂಟಾಗುವ ಶಬ್ದ ತರಂಗಕ್ಕೆ ಮಳೆ ತರುವ ಅಗ್ನಿ ಹೊತ್ತಿಸುವ ಶಕ್ತಿ ಇತ್ತಂತೆ. ಆದರೆ ಈಗ ಈ ವಿಚಾರ ಮಾತನಾಡಿದರೆ ಆನೇಕರಿಗೆ ಒಪ್ಪಲು ಧರ್ಮ ಎನ್ನುವ ಅಂಶ ಅಡ್ಡಿ ಬರುತ್ತದೆ. ವಿದ್ಯೆ ಎನ್ನುವುದು ಯಾವುದೋ ಒಂದು ಧರ್ಮಕ್ಕೆ ಮೀಸಲಾದ ವಿಚಾರ ಖಂಡಿತ ಅಲ್ಲ ಅದನ್ನು ನಾವು ತಪ್ಪಾಗಿ ತಿಳಿದುಕೊಂಡಿದ್ದೇವೆ.
ಈ ಸುದ್ದಿ ಓದಿ:- ಬಡವರಿಗಾಗಿಯೇ ತಯಾರಾದ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ಕೇವಲ ರೂ.36,990 ಮಾತ್ರ.!
ಈಗಲೂ ನೀವು ಪ್ರಾಕ್ಟಿಕಲ್ ಆಗಿ ಚೆಕ್ ಮಾಡಿ ನೋಡಿ ನಿಮಗೆ ಬಹಳ ನೀರಿನ ದಾಹ ಆಗಿದ್ದಾಗ ಲ ಲ ಲ ಲ ಲ ಎನ್ನುವ ಅಕ್ಷರವನ್ನು ಕೇಳಿಕೊಳ್ಳುತ್ತಾ ಬನ್ನಿ ಇದು ಬಹಳ ಸಣ್ಣದರಲ್ಲಿ ಸಣ್ಣ ವಿಚಾರ ನಿಮ್ಮ ನೀರಿನ ತಹ ಇಂಗುತ್ತದೆ ಯಾವುದೇ ಧರ್ಮದ ವ್ಯಕ್ತಿ ಈ ರೀತಿ ಮಾಡಿದರು ಆತನ ನೀರಿನ ದಾಹ ತೀರುತ್ತದೆ.
ಇಂತಹದೇ ಅನೇಕ ವಿಚಾರಗಳು ಯಾರಿಗೂ ತಲುಪದೇ ಸುಟ್ಟು ಬೂದಿ ಆಗಿದೆ. ನಳಂದ ವಿಶ್ವವಿದ್ಯಾಲಯದಲ್ಲಿ ಮೂರು ತಿಂಗಳು ಕಾಲ ಉರಿದ ಮೂರು ಮಿಲಿಯನ್ ಪುಸ್ತಕಗಳಲ್ಲಿ ಇದಕ್ಕಿಂತ ಎಷ್ಟೋ ಸಾವಿರ ಪಟ್ಟು ಉತ್ತಮ ವಿಷಯಗಳು ಇದ್ದಿರಬಹುದು.
ಪುಸ್ತಕ ಸುಟ್ಟರೆ ಶಿಕ್ಷಕರು ಬೋಧಿಸಬಹುದು ಎಂದು ಅವರ ರುಂಡಗಳನ್ನು ಕೂಡ ಕಡಿಯಲಾಗಿತ್ತು. 80 ದೇಶಗಳಿಂದ ಇಲ್ಲಿಗೆ ಕಲಿಯಲು ಬರುತ್ತಿದ್ದರು. ಈ ದು’ರಂ’ತ ನಡೆಯುವುದಕ್ಕೂ ಮುನ್ನ ಇಲ್ಲಿರುವ ಸಂಗತಿಗಳನ್ನು ಓದಿ ಬೇರೆ ದೇಶಗಳ ಭಾಷೆಗಳಿಗೆ ತರ್ಜುಮೆ ಮಾಡಲಾಗಿತ್ತು.
ಈ ಸುದ್ದಿ ಓದಿ:- ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಿ.! ಪ್ರತಿ ತಿಂಗಳು ಸರ್ಕಾರದಿಂದ 1200 ಹಣ ಪಡೆಯಿರಿ.!
ಇಂದು ನಮ್ಮಲ್ಲಿ ಆಧಾರ ಇಲ್ಲದ ಕಾರಣ ಅವೆಲ್ಲವೂ ಆ ದೇಶಗಳ ವಿದ್ಯೆಗಳೇ ಎಂದು ಕರೆಸಿಕೊಂಡು ಮಾರ್ಕೆಟ್ ನಲ್ಲಿ ರಾರಾಜಿಸುತ್ತಿವೆ. ಮತ್ತು ಈ ರೀತಿ ವಿಚಾರ ಬಂದಾಗ ಈ ಮೊದಲೇ ಹೇಳಿದಂತೆ ಜಾತಿ ಎನ್ನುವ ಧರ್ಮ ಎನ್ನುವ ಸೂಕ್ಷ್ಮ ವಿಚಾರವನ್ನು ತೆಗೆದು ನಮ್ಮ ನಮ್ಮಲ್ಲಿ ಒಗ್ಗಟ್ಟು ಮುರಿಯುವ ಕೆಲಸ ಆಗುತ್ತಿದೆ. ಒಡೆದು ಆಳುವ ನೀತಿ ಬ್ರಿಟಿಷರಿಗೆ ಹೊಸದೇನಲ್ಲ ಆದರೆ ಅದನ್ನು ಅರಿಯದ ನಮ್ಮದೇ ತಪ್ಪು ಎಂದು ಒಪ್ಪಿಕೊಳ್ಳಲೇಬೇಕು.
ಉದಾಹರಣೆಗೆ ನಮ್ಮ ಮನೆ ಮಗ ಅಥವಾ ಮಗಳು ಅಂತರ್ಜಾತಿಯ ವಿವಾಹವಾಗಿ ಬಂದರೆ ಅಕ್ಕ ಪಕ್ಕದವರು ನೆಂಟರಿಷ್ಟರಿಗೆ ಹೆದರಿ ನಾವು ಒಪ್ಪುವುದಿಲ್ಲ, ನಮ್ಮ ಪಾಲಿಗೆ ಇನ್ನು ಮಕ್ಕಳು ಇಲ್ಲವೇ ಇಲ್ಲ ಎಂದುಕೊಂಡು ಬಿಡುತ್ತೇವೆ ಈ ರೀತಿ ಮಾಡಿದರೆ ನಷ್ಟವಾಗುವುದು ನಮ್ಮ ಮನೆಗೆ ಹೊರತು ಪಕ್ಕದ ಮನೆಯವರಿಗೆಲ್ಲ.
ಪೋಷಕರು ಇದೊಂದು ವಿಚಾರ ಮಾತ್ರ ಅಲ್ಲದೆ ಪ್ರತಿಯೊಂದು ವಿಚಾರದಲ್ಲೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಯಾಕೆಂದರೆ ಮಕ್ಕಳು ನೀವು ಹೇಳಿದ್ದನ್ನು ಕಲಿಯುವುದಕ್ಕಿಂತ ಮಾಡಿದ್ದನ್ನು ನೋಡಿ ಕಲಿಯುತ್ತಾರೆ. ಪೋಷಕರು ಒಳ್ಳೆಯ ಮಾತನಾಡುತ್ತಿದ್ದರೆ, ಒಳ್ಳೆಯ ಕೆಲಸ ಮಾಡುತ್ತಿದ್ದರೆ ಮಕ್ಕಳು ಕೂಡ ಅದೇ ಗುಣಗಳನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ಶಾಲೆಗಳಲ್ಲಿ ಶಿಕ್ಷಕರ ಮೇಲೆ ಎಲ್ಲಾ ಭಾರವನ್ನು ಹಾಕುವ ಬದಲು ಪೋಷಕಲು ಕೂಡ ಜವಾಬ್ದಾರಿ ಹೊತ್ತುಕೊಳ್ಳಬೇಕು.
ಈ ಸುದ್ದಿ ಓದಿ:- ಮಹಿಳೆಯರಿಗೆ ಉಚಿತ ಸ್ಟವ್ ವಿತರಣೆ ಆಸಕ್ತರು ರೀತಿ ಅರ್ಜಿ ಸಲ್ಲಿಸಿ.!
ಹಿಂದೆ ಹೆತ್ತವರಿಗಿಂತ ಗುರುಗಳಿಗೆ ತಮ್ಮ ಶಿಷ್ಯನ ಮೇಲೆ ಹೆಚ್ಚು ಅಭಿಮಾನ ಹಾಗೂ ಹಕ್ಕು ಇರುತ್ತಿತ್ತು ಅವರು ದಂಡಿಸಿದರು ಶಿ’ಕ್ಷಿಸಿದರು ಪೋಷಕರು ಗೌರವಿಸುತ್ತಿದ್ದರು. ಆದರೆ ಈಗ ಸರ್ಕಾರವೇ 108 ಕಾನೂನು ತಂದಿದೆ ಮತ್ತು ತಮ್ಮ ಮಕ್ಕಳನ್ನು ಪಾಸ್ ಮಾಡಲೇಬೇಕು ಎಂದು ಪೋಷಕರೇ ಒತ್ತಡ ತರುತ್ತಾರೆ.
ನೀವು ನಿಮ್ಮ ಮಕ್ಕಳಿಗೆ ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಮುಂದಿರುತ್ತೀರಿ, ಜೀವನ ಕಲಿಸುವುದು ಮುಖ್ಯ ಎನ್ನುವುದನ್ನು ಮರೆಯಬೇಡಿ. ನಾವು ದಿನವೊಂದನ್ನು ಕಳೆಯುತ್ತಿದ್ದಂತೆ 100 ರುಪಾಯಿಯಲ್ಲಿ 10 ರುಪಾಯಿ ಕಳೆದರೆ 90 ರೂಪಾಯಿ ಮಾತ್ರ ಉಳಿಯುವಂತೆ ನಮ್ಮ ಆಯುಷ್ಯ ದಿನೇ ದಿನೇ ಕ್ಷೀಣಿಸುತ್ತಿದೆ ಇನ್ನಾದರೂ ಜೀವನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸಾರ್ಥಕವಾಗಿ ಬದುಕೋಣ, ನಮ್ಮ ಮಕ್ಕಳಿಗೂ ಕೂಡ ಸರಿಯಾಗಿ ಪೇರೆಂಟಿಂಗ್ ಮಾಡೋಣ.