ಮನೆ ಕಟ್ಟುವುದು ಎನ್ನುವುದು ಸುಲಭದ ಮಾತಲ್ಲ. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಇದು ಎಷ್ಟು ರಿಸ್ಕ್ ವಿಷಯ ಎನ್ನುವುದನ್ನು ಹೇಳುತ್ತದೆ. ಯಾಕೆಂದರೆ ಮನೆ ಎನ್ನುವುದು ನಮ್ಮ ಜೀವನದ ಬಹಳ ದೊಡ್ಡ ಜವಾಬ್ದಾರಿ ಹಾಗೂ ನಾವು ಬಾಲ್ಯದಿಂದ ಕಂಡ ಕನಸಾಗಿರುತ್ತದೆ.
ಯಾರದ್ದೋ ಮನೆ ನೋಡಿ ಅಥವಾ ನಮ್ಮ ಮನೆಯಲ್ಲಿ ಇರುವ ಅನಾನುಕೂಲತೆ ನೋಡಿ ನಾನು ಮುಂದೆ ಮನೆ ಕಟ್ಟಿದರೆ ನನ್ನ ಇಚ್ಛೆ ಪ್ರಕಾರವಾಗಿ ಇತ್ಯಾದಿ ಸೌಲಭ್ಯಗಳು ಇರುವ ಮನೆ ಕಟ್ಟಬೇಕು ಎಂದುಕೊಂಡಿರುತ್ತೇವೆ. ಆದರೆ ಬೆಳೆಯುತ್ತಾ ಹೋದಂತೆ ಮನೆ ಕಟ್ಟುವುದು ಎಷ್ಟು ದುಬಾರಿ ಎನ್ನುವ ವಿಷಯ ತಿಳಿಯುತ್ತದೆ ಆದರೂ ಇದು ಬದುಕಿಗೆ ಮೂಲಭೂತ ಅವಶ್ಯಕತೆ ಅಲ್ಲವೇ.
ಹಾಗಾಗಿ ಮನೆ ಕಟ್ಟುವ ಕನಸಿಗೆ ಸಹಕರಿಸಲು ಅದರ ಬಜೆಟ್ ಗಾತ್ರದ ಬಗ್ಗೆ ಕೆಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲು ಬಯಸುತಿದ್ದೇವೆ. 2024ರ ಈ ವರ್ಷದಲ್ಲಿ ನೀವೇನಾದರೂ ಮನೆ ಕಟ್ಟುವುದಾದರೆ ಈ ಮನೆ ನಿರ್ಮಾಣಕ್ಕೆ ಪೇಂಟ್ ವರೆಗೂ ಪ್ರತಿ ಹಂತದಲ್ಲೂ ಸಿವಿಲ್ ಕನ್ಸ್ಟ್ರಕ್ಷನ್ ಖರ್ಚು ಎಷ್ಟು ತಗಲುತ್ತದೆ ಎನ್ನುವ ವಿಚಾರವನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ ₹1,50,000 ಹೀಗೆ ಅರ್ಜಿ ಸಲ್ಲಿಸಿ.!
ಈಗಾಗಲೇ ನಿಮ್ಮ ಹೆಸರಿನಲ್ಲಿ ಸೈಟ್ ಇದ್ದರೆ ಅದರಲ್ಲಿ ಮನೆ ಕಟ್ಟುವ ಚಾರ್ಜಸ್ ಬಗ್ಗೆ ಮಾತ್ರ ಹೇಳುತ್ತಿದ್ದೇವೆ.ಇದರಲ್ಲಿ ಸಿಮೆಂಟ್ ಕಬ್ಬಿಣ ಇಟ್ಟಿಗೆ ಕೊಂಡುಕೊಳ್ಳುವ ಖರ್ಚಿನಿಂದ ಹಿಡಿದು ಪ್ಲಾಸ್ಟರಿಂಗ್, ಪೇಂಟಿಂಗ್ ಇತ್ಯಾದಿವರೆಗೆ ಪೂರ್ತಿ ಖರ್ಚನ್ನು ಸೇರಿಸಲಾಗಿರುತ್ತದೆ. ಆದರೆ ಇಂಟೀರಿಯರ್ ಡಿಸೈನ್ ಖರ್ಚನ್ನು ಕೈ ಬಿಡಲಾಗಿದೆ. ನಿಮಗೂ ಮನೆ ಕಟ್ಟುವ ಕನಸಿದ್ದರೆ ಅಂದಾಜು ಖರ್ಚಿನ ಬಗ್ಗೆ ತಿಳಿದುಕೊಳ್ಳಲು ಈ ಪಟ್ಟಿಯನ್ನು ನೋಡಿ.
* ಎಕ್ಸ್ಕಾವೇಷನ್ ಖರ್ಚು (Excavation cost) – Rs.80,000
* ಬ್ಯಾಕ್ ಫಿಲ್ಲಿಂಗ್ (Backfilling) – Rs.5,000
* ಗ್ರಾವೆಲ್ ಖರ್ಚು (per load 5000) – 5,000 * 5 = Rs.40,000
* ಸಿಮೆಂಟ್ ಪ್ರತಿ ಬ್ಯಾಗ್ ಗೆ ರೂ.400 ಲೆಕ್ಕದಲ್ಲಿ ಕನಿಷ್ಠ 450 ಬ್ಯಾಗ್ ಅವಶ್ಯಕತೆ ಇರುತ್ತದೆ – 450*400 = ರೂ.1,80,000
* ಕ್ಲೇ ಬ್ರಿಕ್ಸ್ (Clay Bricks) 15,000 ಅವಶ್ಯಕತೆ ಇರುತ್ತದೆ per Bricks Rs.9 ಇರುತ್ತದೆ. – 15000*9 = Rs.1,35,000
* ಸ್ಟೀಲ್ (Steel TMT per KG Rs.70) 1000 sq.ft ಮನೆಗೆ 2.5 ಟನ್ ಅವಶ್ಯಕತೆ ಇರುತ್ತದೆ – 2500*70 = ರೂ.1,75,000
* ಮರಳು (River Sand) – 3000 CFT*65 = ರೂ.1,95,000
* ಜಲ್ಲಿ 900 CFT (Cubic Feet) 1CFT ರೂ.40 ರಂತೆ 900*40 = ರೂ. 36,000
ಈ ಸುದ್ದಿ ಓದಿ:- ಮನೆ ಕಟ್ಟುವಾಗ ಎಷ್ಟೆಲ್ಲಾ ಮೋ’ಸಗಳು ನಡೆಯುತ್ತೆ ಗೊತ್ತಾ? ಮೊದಲೇ ತಿಳಿದುಕೊಂಡರೆ ನಂತರ ಶ್ರಮ ಪಡುವುದು ತಪ್ಪುತ್ತದೆ.!
* ಪ್ಲಂಬಿಂಗ್ (Plumbing Cost) – ಪೈಪ್ಸ್, ಫಿಟ್ಟಿಂಗ್ಸ್, ಟ್ಯಾಂಕ್ ಇತ್ಯಾದಿ ಖರ್ಚೆಲ್ಲವೂ ಸೇರಿ – ರೂ.80,000
* ಎಲೆಕ್ಟ್ರಿಕಲ್ ಪೈಪ್, ಕಂಡಕ್ಟ್, ವೈರಿಂಗ್, ಸ್ವಿಚಸ್ ಎಲ್ಲಾ ಸೇರಿ (Electrical Cost) – ರೂ.80,000
* ಟೈಲ್ಸ್ (Rs.40 ರಂತೆ ತೆಗೆದುಕೊಂಡರೂ ರೂ.60,000) ಮತ್ತು ಗ್ರಾನೆಟ್ ಖರ್ಚು – ರೂ.1,00,000
* ಪೇಂಟಿಂಗ್ (Normal Painting) – ರೂ.70,000
* ಡೋರ್ ಮತ್ತು ಫ್ರೇಮ್ (Door and Frame Cost) – ರೂ.70,000
* ವಿಂಡೋ (Window Cost) – ರೂ.40,000
* ಸಿವಿಲ್ ಲೇಬರ್ ಖರ್ಚು (Civil Labour Cost) – ರೂ.3 ಲಕ್ಷ
* ಪ್ಲಂಬರ್ ಲೇಬರ್ ಚಾರ್ಜ್ (Pluming Labour Chages) – ರೂ.22,000
* ಎಲೆಕ್ಟ್ರಿಕಲ್ ಲೇಬರ್ ಖರ್ಚು (Electrical Labour Charge) – ರೂ.25,000
* ಟೈಲ್ಸ್ ಮತ್ತು ಪೇಂಟಿಂಗ್‍ಗೆ ಲೇಬರ್ ಖರ್ಚು – ರೂ.60,000 (tiles) + ರೂ.35,000(Painting)
* ಹೆಚ್ಚುವರಿಯಾಗಿ – ರೂ.60,000
* ಒಟ್ಟಾರೆಯಾಗಿ ರೂ.18,00,000 (per sq.ft 1,80,000)