ಹಿರಿಯ ನಾಗರಿಕರಿಗೆ (Senior Citizena) ಸರ್ಕಾರ ಮತ್ತು ಸರ್ಕಾರೇತರವಾಗಿ ವಿವಿಧ ವಿಭಾಗಗಳಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಿ ಕೊಡಲಾಗಿದೆ. ಕೆಲವು ಕಡೆ ಹಿರಿಯ ನಾಗರಿಕರು ಎನ್ನುವ ಕಾರಣಕ್ಕಾಗಿ ಹಣಕಾಸಿನ ವಿಚಾರವಾಗಿ ಖರ್ಚು ವೆಚ್ಚಗಳಲ್ಲಿ ವಿನಾಯಿತಿ ಕೂಡ ಇರುತ್ತದೆ.
ಇನ್ನು ಸರ್ಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರ ಠೇವಣಿ ಮೇಲೆ ಸಾಮಾನ್ಯಕ್ಕಿಂತ 0.50% ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ. ಸರ್ಕಾರದ ಕಡೆಯಿಂದ ಜೀವನ ನಿರ್ವಹಣೆಗಾಗಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ವೃದ್ದಾಪ್ಯ ವೇತನ ಸಹ ನೀಡಲಾಗುತ್ತಿದೆ.
ಇದರ ಜೊತೆಗೆ ಖಾಸಗಿ ಹಾಗೂ ಸರ್ಕಾರಿ ಬಸ್ ಗಳಲ್ಲಿ ಹಿರಿಯ ನಾಗರಿಕರಿಗಾಗಿ ಕೆಲವು ಆಸನಗಳನ್ನು ಮೀಸಲಿಡಲಾಗಿದೆ ಎನ್ನುವ ವಿಚಾರವನ್ನು ಹಲವರು ಗಮನಿಸಿರಬಹುದು. ಇತ್ಯಾದಿಯಾಗಿ ಹಿರಿಯ ನಾಗರಿಕರಿಗೆ ಗೌರವ ಸೂಚಿಸುವ ಸಲುವಾಗಿ ಸರದಿ ಸಲಿನಲ್ಲಿ ಮೊದಲ ಆದ್ಯತೆ ನೀಡುವುದರಿಂದ ಹಿಡಿದು ಸರ್ಕಾರದ ಮಟ್ಟದವರೆಗೆ ಅನೇಕ ಸೌಲಭ್ಯಗಳು ಸಿಗುತ್ತವೆ.
ಈ ಸುದ್ದಿ ಓದಿ:-ಮನೆಗೆ ಪ್ಲಂಬಿಂಗ್ ಮಾಡಿಸುವಾಗ ಮುಖ್ಯವಾಗಿ ಈ ವಿಚಾರಗಳು ಗೊತ್ತಿರಲಿ, ಇಲ್ಲವಾದಲ್ಲಿ ನಂತರ ಪಶ್ಚಾತಾಪ ಪಡಬೇಕಾಗುತ್ತದೆ..
ಇದರ ಜೊತೆಗೆ ಹೊಸದಾಗಿ ಕರ್ನಾಟಕ ಸರ್ಕಾರದ ಕಡೆಯಿಂದ ಕೂಡ ಹಿರಿಯ ನಾಗರಿಕರ ಪ್ರಯಾಣವನ್ನು ಇನ್ನಷ್ಟು ಅಗ್ಗ ಗೊಳಿಸುವ ಉದ್ದೇಶದಿಂದ ಹೊಸ ಘೋಷಣೆಯಾಗಿದೆ. ಅದೇನೆಂದರೆ ಈಗಾಗಲೇ ರಾಜ್ಯದಾದ್ಯಂತ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಯಾಗಿ ಜಾರಿಯಲ್ಲಿರುವ ಶಕ್ತಿ ಯೋಜನೆ (Shakti Yojane) ಬಗ್ಗೆ ಎಲ್ಲರಿಗೂ ತಿಳಿದೇ ಇದೆ.
ಶಕ್ತಿ ಯೋಜನೆ ಮೂಲಕ ಕರ್ನಾಟಕದ ಗಡಿಯೊಳಗೆ ರಾಜ್ಯದ ನಿವಾಸಿಗಳಾಗಿರುವ ವಿದ್ಯಾರ್ಥಿನಿಯರನ್ನು ಒಳಗೊಂಡ ಎಲ್ಲಾ ಮಹಿಳೆಯರು ಕೂಡ ತಮ್ಮ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೋರಿಸಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಬಹುಮತ ಬೆಂಬಲದೊಂದಿಗೆ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನೀಡಿದ ಐದು ಭರವಸೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದಾಗಿತ್ತು ಮತ್ತು ಜಾರಿಯಾದ ಯೋಜನೆಗಳಲ್ಲಿ ಮೊದಲನೇ ಯೋಜನೆಯಾಗಿ ಇಂದಿಗೆ ಯಶಸ್ವಿಯಾಗಿ 9 ತಿಂಗಳನ್ನು ಪೂರೈಸಿದೆ.
ಈ ಸುದ್ದಿ ಓದಿ:-ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 25 ಲಕ್ಷ ನೆರವು.! ಆಸಕ್ತರು ಅರ್ಜಿ ಸಲ್ಲಿಸಿ.!
ಈ ಶಕ್ತಿ ಯೋಜನೆ ಆರಂಭದಲ್ಲಿ ಅನೇಕ ಪರ ಮತ್ತು ವಿರೋಧ ಅಭಿಪ್ರಾಯಗಳನ್ನು ಹೊಂದಿತ್ತು. ಉಚಿತ ಪ್ರಯಾಣ ಎನ್ನುವ ಸವಲತ್ತು ಮಹಿಳೆಯರ ಆರ್ಥಿಕ ಹೊರೆ ಕಡಿಮೆ ಮಾಡಿ ಸಾಮಾಜಿಕವಾಗಿ ಹೆಚ್ಚು ಭಾಗಿಯಾಗುವಂತೆ ಮಾಡಿದೆ ಎನ್ನುವ ಹೆಮ್ಮೆ ಹೊಂದಿದ್ದರೆ ಇದೇ ಸಂದರ್ಭದಲ್ಲಿ ಸುರಕ್ಷತೆ ದೃಷ್ಟಿಕೋನದಲ್ಲಿ ನೋಡುವುದಾದರೆ ಅನೇಕ ಎಡವಟ್ಟುಗಳು ಕೂಡ ಆಗಿದೆ ಎನ್ನುವುದನ್ನು ಮರೆಯುವಂತಿಲ್ಲ.
ಅಂತಿಮವಾಗಿ ಈಗ ಯೋಜನೆ ಈಗ ಒಂದು ಹಂತಕ್ಕೆ ತಲುಪಿದ್ದು ಮಾದರಿ ಯೋಜನೆ ಎನ್ನುವ ಖ್ಯಾತಿಗೂ ಒಳಗಾಗಿದೆ. ಕರ್ನಾಟಕದ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ ಕೂಡ ಚುನಾವಣಾ ಪ್ರಣಾಳಿಕೆಗಳಲ್ಲಿ ಶಕ್ತಿ ಯೋಜನೆ ಮಾದರಿ ಎನಿಸಿಕೊಂಡಿತ್ತು.
ಈಗ ವಿಚಾರ ಏನೆಂದರೆ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರಿಗೂ ಕೂಡ ಈ ಯೋಜನೆಯನ್ನು ವಿಸ್ತರಿಸಬೇಕು ಎನ್ನುವುದು ಸರ್ಕಾರಕ್ಕೆ ಮೊದಲಿನಿಂದಲೂ ಜನಸಾಮಾನ್ಯರ ಕೋರಿಕೆ ಈಗ ಅಂತಿಮವಾಗಿ ಸರ್ಕಾರ ಇದಕ್ಕೆ ಮನಸ್ಸು ಮಾಡಿದೆ.
ಈ ಸುದ್ದಿ ಓದಿ:-ಸೀತಾರಾಮ್ ಜಿಂದಾಲ್ ವಿದ್ಯಾರ್ಥಿ ವೇತನ, ಪ್ರತಿ ತಿಂಗಳು 3,200 ಸ್ಕಾಲರ್ಶಿಪ್ ಬರುತ್ತೆ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.!
ಆದರೆ ಕೆಲವು ಕಂಡಿಷನ್ ಗಳು ಇವೆ. ಪ್ರತಿ ವರ್ಷವೂ ಕೂಡ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರ ಸಬಲಿಕರಣ ಇಲಾಖೆ ವತಿಯಿಂದ ವಾರ್ಷಿಕ ಪಾಸ್ ಗಳನ್ನು (Yearly bus pass for Senior Citizens) ನೀಡಲಾಗುತ್ತದೆ. ಅದಕ್ಕಾಗಿ ಅರ್ಜಿ ಆಹ್ವಾನ ಮಾಡಲಾಗುತ್ತದೆ ಇದನ್ನು ಪಡೆದ ಹಿರಿಯ ನಾಗರಿಕರು ಕಡಿಮೆ ದರದಲ್ಲಿ ಬಸ್ ಪ್ರಯಾಣ ಮಾಡಬಹುದು.
ಯಾವ ಹಿರಿಯ ನಾಗರಿಕರು ಈ ಸೌಲಭ್ಯ ಪಡೆಯಲು ಬಯಸುತ್ತಾರೆ ಅವರು ಈ ಕೆಳಗಿನ ದಾಖಲೆಗಳೊಂದಿಗೆ ಹತ್ತಿರದಲ್ಲಿರುವ ಯಾವುದೇ ಗ್ರಾಮ ಒನ್ / ಕರ್ನಾಟಕ ಒನ್ / ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆದು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವ ಸಮಯದಲ್ಲಿ ಬೇಕಾಗುವುದು ದಾಖಲೆಗಳು:-
* ನಿವಾಸ ದೃಢೀಕರಣ ಪತ್ರ
* ಆಧಾರ್ ಕಾರ್ಡ್
* ಇತ್ತೀಚಿನ ಭಾವಚಿತ್ರ
* ವಯಸ್ಸಿನ ದೃಢೀಕರಣ ಪತ್ರ