ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರದ ಹುದ್ದೆಗಳಿಗೆ ಆಯ್ಕೆ ಆಗುವ ಅದ್ಭುತಾವಕಾಶ ಸಿಗುತ್ತದೆ. ಅದರಲ್ಲೂ ಕಡಿಮೆ ವಿದ್ಯಾಭ್ಯಾಸ ಅಂದರೆ SSLC ಉತ್ತೀರ್ಣರಾಗಿದ್ದರು ಕೂಡ ಪ್ರಯತ್ನಿಸಬಹುದಾಗಿದೆ ಎನ್ನುವುದೇ ಸಂತಸದ ಸುದ್ದಿಯಾಗಿದೆ.
ಹೀಗಾಗಿ ರಾಜ್ಯದ ಬಹುತೇಕರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುವುದು. ಅಂಚೆ ಇಲಾಖೆಗೆ ನೋಟಿಫಿಕೇಶನ್ ಮಾಡಿರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತಿಳಿದುಕೊಳ್ಳಬೇಕಾದ ಮಾಹಿತಿ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.
ಯಾವ ಬಗೆಯ ಹುದ್ದೆ, ವೇತನ ಶ್ರೇಣಿ ಎಷ್ಟಿರುತ್ತದೆ? ಕರ್ನಾಟಕದ ಯಾವ ಭಾಗದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ? ವಿದ್ಯಾರ್ಹತೆ ಮತ್ತು ಇನ್ನಿತರ ಮಾನದಂಡಗಳು ಏನು? ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಎಂದು ಇತ್ಯಾದಿ ವಿವರಗಳು ಹೀಗಿದೆ ನೋಡಿ ಮತ್ತು ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- PF ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್, ವೇತನ ಮಿತಿ 15,000 ದಿಂದ 21,000ಕ್ಕೆ ಹೆಚ್ಚಳ.!
ನೇಮಕಾತಿ ಸಂಸ್ಥೆ:- ಭಾರತೀಯ ಅಂಚೆ ಇಲಾಖೆ
ಹುದ್ದೆ ಹೆಸರು:- ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 27 ಹುದ್ದೆಗಳು
ಉದ್ಯೋಗ ಸ್ಥಳ:- (ಕರ್ನಾಟಕದ ಈ ಕೆಳಗಿನ ಡಿವಿಷನ್ ಗಳಲ್ಲಿ)
* ಚಿಕ್ಕೋಡಿ
* ಕಲ್ಬುರ್ಗಿ
* ಹಾವೇರಿ
* ಕಾರವಾರ
* ಬೆಂಗಳೂರು
* ಮಂಡ್ಯ
* ಮೈಸೂರು
* ಪುತ್ತೂರು
* ಶಿವಮೊಗ್ಗ
* ಉಡುಪಿ
* ಕೋಲಾರ
ವೇತನ ಶ್ರೇಣಿ:- ಮಾಸಿಕವಾಗಿ ರೂ.19,900 ರಿಂದ ರೂ.63,200 ವೇತನ ಸಿಗುತ್ತದೆ ಇದರೊಂದಿಗೆ ಕೇಂದ್ರ ಸರ್ಕಾರದ ಹುದ್ದೆಗಳಿಗೆ ನೇಮಕವಾಗುವವರಿಗೆ ಇನ್ನಿತರ ಸರಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ.
ಈ ಸುದ್ದಿ ಓದಿ:-ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ FD ಇಟ್ಟರೆ ಎಷ್ಟು ಹಣ ಲಾಭ ಸಿಗುತ್ತದೆ ಗೊತ್ತಾ.? ನಿಮ್ಮ ಹಣ ದುಪ್ಪಟ್ಟು ಮಾಡಲು ಇದೇ ಬೆಸ್ಟ್
ಶೈಕ್ಷಣಿಕ ವಿದ್ಯಾರ್ಹತೆ:-
* ಮಾನ್ಯತೆ ಯಾವುದೇ ಮಂಡಳಿಯಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
* ಲಘು ಹಾಗೂ ಭಾರಿ ವಾಹನ ಚಾಲನ ಪರವಾನಗಿ ಹೊಂದಿರಬೇಕು
* ವಾಹನ ಚಾಲನೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 27 ವರ್ಷಗಳು
ವಯೋಮಿತಿ ಸಡಿಲಿಕೆ:-
* OBC ವರ್ಗದ ಅಭ್ಯರ್ಥಿಗಳಿಗೆ 03 ವರ್ಷಗಳು
* SC / ST ಅಭ್ಯರ್ಥಿಗಳಿಗೆ 05 ವರ್ಷಗಳು
ಈ ಸುದ್ದಿ ಓದಿ:-HSRP ಪ್ಲೇಟ್ ಜೊತೆ ಇನ್ಮುಂದೆ ಈ ದಾಖಲೆ ಕಡ್ಡಾಯವಾಗಿ ಇರಲೇಬೇಕು, ಇಲ್ಲದಿದ್ರೆ ಸ್ಥಳದಲ್ಲೇ ಗಾಡಿ ಸೀಜ್, ಹೊಸ ರೂಲ್ಸ್.!
ಅರ್ಜಿ ಸಲ್ಲಿಸುವ ವಿಧಾನ:-
* ಆಫ್ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು
* ಮೊದಲಿಗೆ ಅಭ್ಯರ್ಥಿಯು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಆ ಪ್ರಿಂಟ್ ಔಟ್ ಪಡೆದು ಅದರಲ್ಲಿ ವಿವರಗಳನ್ನು ಭರ್ತಿ ಮಾಡಿ ಪೂರಕ ದಾಖಲೆ ಪ್ರತಿಗಳ ಜೊತೆಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಡೆ ದಿನಾಂಕದೊಳಗೆ ತಲುಪಿಸಬೇಕು.
* ವಿಳಾಸ:-
ಮ್ಯಾನೇಜರ್,
ಮೇಲ್ ಮೋಟರ್ ಸರ್ವೀಸ್,
ಬೆಂಗಳೂರು – 560001.
ಈ ಸುದ್ದಿ ಓದಿ:-LIC ಈ ಸ್ಕೀಮ್ ನಲ್ಲಿ ಒಂದು ಬಾರಿ ಹೂಡಿಕೆ ಮಾಡಿದ್ರೆ ಸಾಕು, ಜೀವನ ಪರ್ಯಂತ ಪ್ರತಿ ತಿಂಗಳು 12,000 ಪಿಂಚಣಿ ಬರುತ್ತೆ.!
ಆಯ್ಕೆ ವಿಧಾನ:-
ಚಾಲನಾ ಪರೀಕ್ಷೆ ಮತ್ತು ಮೋಟರ್ ಮೆಕಾನಿಸಮ್ ಜ್ಞಾನದ ಆಧಾರದ ಮೇಲೆ ಇದಕ್ಕೆ ಸಂಬಂಧಪಟ್ಟ ಹಾಗೆ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಆದವರ ಸಂದರ್ಶನ ನಡೆಸಿ ಅವರ ದಾಖಲೆಗಳನ್ನು ಪರಿಶೀಲನೆ ಮಾಡಿ ಸೂಕ್ತ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:-
ಯಾವುದೇ ರೀತಿಯಾದ ಅರ್ಜಿ ಶುಲ್ಕ ಪಾವತಿ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 08 ಏಪ್ರಿಲ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15 ಮೇ, 2024.