ಮನುಷ್ಯನಿಗೆ ದುಡಿಮೆ ಇದ್ದರೂ ಕೂಡ ಸಾಲ ಮಾಡುವುದು ಮಾತ್ರ ತಪ್ಪುವುದಿಲ್ಲ. ತನ್ನ ವೈಯಕ್ತಿಕ ಖರ್ಚು-ವೆಚ್ಚಕ್ಕಾಗಿ, ಮಕ್ಕಳ ವಿದ್ಯಾಭ್ಯಾಸ, ಸೈಟ್ ಹಾಗೂ ಮನೆ ಖರೀದಿ, ಅನಾರೋಗ್ಯ ಸಂಧರ್ಭ ಹೀಗೆ ನಾನಾ ಕಾರಣಗಳಿಗಾಗಿ ಸಾಲ ಮಾಡುತ್ತಾ ಬದುಕುತ್ತಿದ್ದೇವೆ.
ಇದರಲ್ಲಿ ಎಜುಕೇಶನ್ ಲೋನ್ ಪ್ರಾಪರ್ಟಿ ಲೋನ್, ಹೆಲ್ತ್ ಇನ್ಸೂರೆನ್ಸ್ ಇತ್ಯಾದಿ ಸವಲತ್ತು ಇದ್ದರೂ ಸದ್ಯಕ್ಕೆ ತಕ್ಷಣ ಸಿಗುವುದು ವೈಯಕ್ತಿಕ ಸಾಲವಾದ ಕಾರಣ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಜನ ಇಚ್ಚಿಸುತ್ತಾರೆ. ಈಗಂತೂ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಬಹಳ ಸರಳವಾಗಿದೆ. ನೀವು ಕೂಡ ವೈಯಕ್ತಿಕ ಸಾಲವನ್ನು ಪಡೆಯುವ ಯೋಜನೆಯಲ್ಲಿದ್ದರೆ ಈ ಮಾಹಿತಿ ನಿಮಗೆ ಅನುಕೂಲವಾಗಬಹುದು.
ಈ ಸುದ್ದಿ ಓದಿ:- LPG ಗ್ಯಾಸ್ ಬಳಸುವವರಿಗೆ ಪ್ರಮುಖ ಸುದ್ದಿ.! ಈ ರೀತಿ ಸಿಲಿಂಡರ್ ಬಳಸುವ ಮುನ್ನ ಎಚ್ಚರ.!
ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸುವವರಿಗೆ HDFC ಒಂದು ಭರ್ಜರಿ ಅವಕಾಶ ನೀಡುತ್ತಿದೆ. ಈ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿ ದರಕ್ಕೆ ಸುಲಭ ಕಂತುಗಳಲ್ಲಿ ಕಟ್ಟಬಹುದಾದ ಹೆಚ್ಚಿನ ಕಂಡೀಷನ್ ಗಳು ಹಾಗೂ ಅಧಿಕ ದಾಖಲೆ ಪತ್ರ ಇಲ್ಲದೇ ವೈಯಕ್ತಿಕ ಲೋನ್ ಸಿಗುತ್ತಿದೆ.
ದೇಶದ ಪ್ರತಿಷ್ಠಿತ ಬ್ಯಾಂಕ್ ಗಳ ಪಟ್ಟಿಯಲ್ಲಿ ಮುನ್ನೆಲೆಯಲ್ಲಿ ಇರುವಂತಹ ಬ್ಯಾಂಕ್ ಗಳಲ್ಲಿ ಒಂದಾದ HDFC ಬ್ಯಾಂಕಿನಲ್ಲಿ ಕಷ್ಟವಿಲ್ಲದೆ ಕೇವಲ 10 ನಿಮಿಷಗಳಲ್ಲಿ 10 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ.
ಈ ಸುದ್ದಿ ಓದಿ:- ಕೇವಲ 14 ಲಕ್ಷದಲ್ಲಿ ಕಟ್ಟಿರೋ ಹಳ್ಳಿ ಶೈಲಿಯ ಟ್ರೆಂಡಿಂಗ್ ತೊಟ್ಟಿ ಮನೆ.! ಆರೋಗ್ಯಕ್ಕೂ ಹಿತ ಖರ್ಚಿನಲ್ಲೂ ಮಿತ.! ಕಡಿಮೆ ಬಡ್ಜೆಟ್ ನಲ್ಲಿ ಸುಂದರವಾದ ಮನೆ
HDFC ಬ್ಯಾಂಕ್ ನಲ್ಲಿ ಸಿಗುತ್ತಿರುವ ಈ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಇರುವ ಕಂಡೀಶನ್ ಗಳೇನು? ಬೇಕಾಗುವ ದಾಖಲೆ ಪತ್ರಗಳೇನು? ಈ ವಿಧಾನ ಹೇಗಿರುತ್ತದೆ? ಮತ್ತು ಇತರ ಬ್ಯಾಂಕ್ ಗಳಿಗೆ ಹೋಲಿಸಿ ನೋಡುವುದಾದರೆ HDFC ಬ್ಯಾಂಕಿನ ಪರ್ಸನಲ್ ಲೋನ್ ಗೆ ಇರುವ ವ್ಯತ್ಯಾಸವೇನು? ವಿವರ ಹೀಗಿದೆ ನೋಡಿ.
ಅನುಕೂಲತೆಗಳು:-
* HDFC ಬ್ಯಾಂಕ್ ನೀಡುವ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರಗಳು ಏರಿಳಿತಗೊಳ್ಳುತ್ತಲೇ ಇರುತ್ತವೆ.
* ಪ್ರಸ್ತುತವಾಗಿ ವೈಯಕ್ತಿಕ ಸಾಲದ ಮೇಲೆ 10% – 14% ಬಡ್ಡಿಯನ್ನು HDFC ಬ್ಯಾಂಕ್ ವಿಧಿಸುತ್ತಿದೆ. ಈ ಏರಿಳಿತಗಳು ಬ್ಯಾಂಕ್ ನ ರೆಪೋ ದರವನ್ನು ಅವಲಂಬಿಸಿದೆ.
* HDFC ಬ್ಯಾಂಕ್ ನಲ್ಲಿ ಕನಿಷ್ಠ ರೂ.50 ಸಾವಿರದಿಂದ ಗರಿಷ್ಠ ರೂ.10 ಲಕ್ಷದವರೆಗೆ ಸಾಲ ಸಿಗುತ್ತದೆ
* ಸಾಲಕ್ಕೆ ನೀವು ಅರ್ಜಿ ಸಲ್ಲಿಸಿದ ನಂತರ ಸರಳ ಪ್ರಕ್ರಿಯೆಗಳೊಂದಿಗೆ ಕಡಿಮೆ ಸಮಯದಲ್ಲಿ ತ್ವರಿತವಾಗಿ ಸಾಲ ಸಿಗುತ್ತದೆ.
HDFC ಪರ್ಸನಲ್ ಲೋನ್ ಪಡೆಯಲು ಕಂಡಿಷನ್ ಗಳು:-
* HDFC ಪರ್ಸನಲ್ ಲೋನ್ ತೆಗೆದುಕೊಳ್ಳಲು ಅರ್ಜಿದಾರನ ವಯಸ್ಸು 21 ವರ್ಷದಿಂದ 60 ವರ್ಷಗಳ ನಡುವೆ ಇರಬೇಕು.
* ನೀವು ಕನಿಷ್ಟ 2 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು. ಇದಕ್ಕೆ ದಾಖಲೆಗಳನ್ನು ಒದಗಿಸಬೇಕಾಗುತ್ತದೆ
* ನೀವು ನಗರದಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಮಾಸಿಕ ವೇತನ ರೂ. 15 ಸಾವಿರದ ಮೇಲಿರಬೇಕು. ಕನಿಷ್ಠ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ 2 ವರ್ಷಗಳ ITR ಸಲ್ಲಿಕೆ ವರದಿ ದಾಖಲೆ ಒದಗಿಸಬೇಕು
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ಡ್ರೈವಿಂಗ್ ಲೈಸೆನ್ಸ್
* ಗುರುತಿನ ಚೀಟಿ
* ಇತ್ಯಾದಿ ದಾಖಲೆಗಳು
HDFC ಬ್ಯಾಂಕ್ ನಲ್ಲಿ ಲೋನ್ ಪಡೆಯುವ ವಿಧಾನ:-
* ಮೊದಲು HDFC Bank ನ ಅಧಿಕೃತ ಅಪ್ಲಿಕೇಶನ್ ನ್ನು ಡೌನ್ಲೋಡ್
* ವೈಯಕ್ತಿಕ ಸಾಲದ ವಿಭಾಗ ಸರ್ಚ್ ಮಾಡಿ, ಕೆಳಗೆ ಆನ್ ಲೈನ್ ನಲ್ಲಿ ಅಪ್ಲಿಕೇಶನ್ ಹಾಕಲು ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ಕೇಳಲಾಗುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
* ಇದಾದ ನಂತರ ನೀವು eKYC ಸಲ್ಲಿಸುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಷ್ಟಾದರೆ ಅರ್ಜಿ ಸಲ್ಲಿಕೆ ಯಶಸ್ವಿ ಆಗುತ್ತದೆ ಬ್ಯಾಂಕ್ ಸಿಬ್ಬಂದಿಗಳ ಕಡೆಯಿಂದ ಅನುಮೋದನೆ ಆದರೆ ಸಾಲದ ಮೊತ್ತವು ನಿಮ್ಮ HDFC ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ. ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಹತ್ತಿರದ HDFC ಬ್ಯಾಂಕ್ ಶಾಖೆಗೆ ಭೇಟಿ ಕೊಡಿ.