LPG ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ, ಸಿಲಿಂಡರ್ ಬೆಲೆ ಇಳಿಕೆ.!

 

WhatsApp Group Join Now
Telegram Group Join Now

ಪ್ರತಿ ತಿಂಗಳ ಆರಂಭದಲ್ಲಿ ಕ್ಯಾಲೆಂಡರ್ ಬದಲಾಗುವುದು ಮಾತ್ರವಲ್ಲ ಇದರೊಂದಿಗೆ ಸಾಕಷ್ಟು ಸಂಗತಿಗಳನ್ನು ಬದಲಾಗುತ್ತವೆ. ಇವುಗಳಲ್ಲಿ ಒಂದು LPG ಅನಿಲ ದರ ಪರೀಷ್ಕೃತವಾಗುವುದು. ಈ ಬಗ್ಗೆ ಜನಸಾಮಾನ್ಯರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅಂತೆಯೇ ಈ ಬಾರಿ ಲೋಕಸಭಾ ಚುನಾವಣೆ ಭಾರಿ ಅಬ್ಬರದ ನಡೆಯುವ ಚುನಾವಣೆ ಫಲಿತಾಂಶ ಬರುವುದಕ್ಕೆ ಮುನ್ನವೇ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ.

ಅದೇನೆಂದರೆ, ಒಂದೇ ಬಾರಿಗೆ 72 ರುಪಾಯಿ ಸಿಲಿಂಡರ್ ಬೆಲೆ ಇಳಿಸಲಾಗಿದೆ. ಈ ಮಾಹಿತಿ ಸ್ವತಃ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್ಸೈಟ್ ಮೂಲಕವೇ ಹೊರ ಬಿದ್ದಿದ್ದು ಯಾರಿಗೆಲ್ಲ ಇದರ ಲಾಭ ಸಿಗುತ್ತದೆ ಎನ್ನುವುದರ ವಿವರ ಹೀಗಿದೆ.

IOCL ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಎಲ್ಲಾ ಡೊಮೆಸ್ಟಿಕ್ ಬಳಕೆಯ ಅಂದರೆ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುವ ಸಿಲಿಂಡರ್ ಬೆಲೆಯನ್ನು ಚೆನ್ನೈನಿಂದ ದೆಹಲಿಯವರೆಗೆ ರೂ.72ರವರೆಗೆ ಇಳಿಕೆ ಮಾಡಲಾಗಿದೆ. ವಾಣಿಜ್ಯ ಉದ್ದೇಶದ ಸಿಲಿಂಡರ್ ಗಳ ಬೆಲೆ ಇಳಿಕೆ ಮಾಡುವುದರಿಂದ ಜನಸಾಮಾನ್ಯರಿಗೆ ಏನು ಪ್ರಯೋಜನ ಎಂದು ಬೇಸರಿಸಿಕೊಳ್ಳುವ ಅಗತ್ಯ ಇಲ್ಲ.

ಈ ಸುದ್ದಿ ಓದಿ:- ತಿಂಗಳಿಗೆ 3 ಬಾರಿ ಜೇನುತುಪ್ಪ, ಒಂದು ಪೆಟ್ಟಿಗೆಯಲ್ಲಿ 15KG ಜೇನು, ಜೇನು ಸಾಕಾಣಿಕೆ ಮಾಡಿ ತಿಂಗಳಿಗೆ 4 ಲಕ್ಷ ಆದಾಯ ಗಳಿಸುತ್ತಿರುವ ಯುವಕ

ಯಾಕೆಂದರೆ ವಾಣಿಜ್ಯ ಉದ್ದೇಶದ ಸಿಲಿಂಡರ್ ಗಳನ್ನು ಹೋಟೆಲ್ ರೆಸ್ಟೋರೆಂಟ್ ಮತ್ತು ವಾಹನಗಳ ಅಳವಡಿಕೆಗೆ ಬಳಸಲಾಗುತ್ತದೆ. ಈ ಬೆಲೆಗಳು ಇಳಿಕೆ ಆಗಿರುವುದರಿಂದ ಹೋಟೆಲ್ ಗಳಲ್ಲಿ ಕಾಫಿ ತಿಂಡಿ ದರ ಮತ್ತು ಆಟೋ ಚಾರ್ಜ್ ಗಳು ಕಡಿಮೆ ಆಗಬಹುದು ಎಂದು ನಿರೀಕ್ಷಿಸಬಹುದಾಗಿದೆ.

ಈ ಕುರಿತಾದ ಒಂದು ಸಿಹಿ ವಿಚಾರ ಏನೆಂದರೆ ಈ ತಿಂಗಳು ಮಾತ್ರವಲ್ಲ ಸತತವಾಗಿ ಕಳೆದ ಮೂರು ತಿಂಗಳಿನಿಂದಲೂ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿನಲ್ಲಿ ವಾಣಿಜ್ಯ ಉದ್ದೇಶದ ಸಿಲಿಂಡರ್ ಗಳ ಬೆಲೆ ಕಡಿಮೆ ಆಗಲಿದೆ. ಹಾಗಾದರೆ ಪರೀಷ್ಕರಣೆಯಾಗಿರುವ ಶುಲ್ಕದ ಪ್ರಕಾರವಾಗಿ ದೇಶದ ಯಾವ ಭಾಗಗಳಲ್ಲಿ ಸಿಲಿಂಡರ್ ಬೆಲೆ ಎಷ್ಟಿದೆ ಎಂದು ನೋಡುವುದಾದರೆ.

ಜೂನ್ 1, 2024ರಿಂದ 19KG ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯು ದೆಹಲಿಯಲ್ಲಿ 69.50 ಇಳಿಕೆಯಾಗಿ ಈಗ ರೂ.676 ಕ್ಕೆ, ಕೊಲ್ಕತ್ತಾದಲ್ಲಿ ರೂ.72 ಇಳಿಕೆಯಾಗಿ ರೂ.787 ಕ್ಕೆ, ಮಂಬೈನಲ್ಲಿ ರೂ.69.50 ಇಳಿಕೆಯಾಗಿ ರೂ.629 ಕ್ಕೆ, ಚೆನ್ನೈ ನಲ್ಲಿ ರೂ.70.50 ಅಗ್ಗವಾಗಿ ರೂ.840ಕ್ಕೆ ಸಿಗುತ್ತಿದೆ. ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಹೀಗೆ ಸಿಲಿಂಡರ್ ಬೆಲೆ ಇಳಿಕೆ ಆಗಿರುವುದರಿಂದ ಚುನಾವಣೆ ಮುಗಿದ ನಂತರವೂ ಮತ್ತೊಂದು ಬಾರಿ ಈ ಬಗ್ಗೆ ಸಿಹಿ ಸುದ್ದಿ ಸಿಗಲಿದೆ ಎಂದು ನಿರೀಕ್ಷೆಯು ಹೆಚ್ಚಾಗಿದೆ.

ಈ ಸುದ್ದಿ ಓದಿ:- ನೀವು ಇರುವ ಜಾಗದಲ್ಲಿ ಕೆಲಸ, ತಿಂಗಳಿಗೆ 22,000 ಸಂಬಳ, ಯಾವುದೇ ಹಣ ಕಟ್ಟಬೇಕಾಗಿಲ್ಲ ಯಾರು ಬೇಕಾದರೂ ಸೇರಬಹುದು ಇಲ್ಲಿದೆ ನೋಡಿ ಡೀಟೇಲ್ಸ್.!

ಅದೇ ರೀತಿ ಗೃಹಬಳಕೆಯ ಸಿಲಿಂಡರ್ ಬೆಲೆ ಇಳಿಕೆ ಆಗುತ್ತದೆಯೇ ಎಂದು ಕಾಯುತ್ತಿರುವ ಗ್ರಹಿಣಿಯರು ಕೂಡ ನಿರೀಕ್ಷಿಸುತ್ತಿದ್ದಾರೆ. ಆದರೆ ಈಗಾಗಲೇ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಿಲಿಂಡರ್ ಖರೀದಿಸಿರುವ ಗೃಹಿಣಿಯರಿಗೆ ಒಟ್ಟು ರೂ.300 ಸಬ್ಸಿಡಿ ಸಿಗುತ್ತಿದೆ.

14KG ಗೃಹಬಳಕೆಯ ಸಿಲಿಂಡರ್ ಬೆಳೆಯು ಸದ್ಯಕ್ಕೀಗ ದೆಹಲಿಯಲ್ಲಿ ರೂ.803, ಕೊಲ್ಕತ್ತದಲ್ಲಿ ರೂ.829, ಮುಂಬೈನಲ್ಲಿ 802.50 ಮತ್ತು ಚೆನ್ನೈನಲ್ಲಿ 818.50 ರೂಪಾಯಿಗೆ ಲಭ್ಯವಿದೆ. ಕಳೆದ ವರ್ಷ ಮಹಿಳೆಯರ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿಗಳು ಘೋಷಿಸಿದ ರೂ.100 ಸಬ್ಸಿಡಿ ಸೇರಿಸಿ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಗ್ಯಾಸ್ ಸಿಲಿಂಡರ್ ಪಡೆದವರ ಖಾತೆಗೆ ಒಟ್ಟು ರೂ.300 ಸಬ್ಸಿಡಿ ಹಣವು ಜಮೆ ಆಗುತ್ತಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now