ಅಮೂಲ್ಯ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು ಚೆಲುವಿನ ಚಿತ್ತಾರದ ಮೂಲಕ ನಾಯಕಿಯಾದ ಅವರು, ಅದರಲ್ಲಿನ ಪಾತ್ರಕ್ಕೆ ಅಪಾರ ಜನಪ್ರಿಯತೆ ಗಳಿಸಿದರು. ಸಣ್ಣ ವಯಸ್ಸಿನಲ್ಲಿಯೇ ಖ್ಯಾತ ತಾರೆಯರೊಂದಿಗೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಅವರದ್ದು. ಗಣೇಶ್, ಯಶ್, ಲವ್ಲೀ ಸ್ಟಾರ್ ಪ್ರೇಮ್, ಕೃಷ್ಣ ಅಜಯ್ ರಾವ್, ದುನಿಯಾ ವಿಜಯ್ ಮುಂತಾದ ಸ್ಟಾರ್ ಕಲಾವಿದರಿಗೆ ಅವರು ಜೋಡಿಯಾಗಿ ನಟಿಸಿದ್ದಾರೆ. ನಾನು ನನ್ನ ಕನಸು ಸಿನಿಮಾದಲ್ಲಿ ಬಹುಭಾಷಾ ಕಲಾವಿದ ಪ್ರಕಾಶ್ ರೈ ಜತೆ ತೆರೆಹಂಚಿಕೊಂಡು ಅಪಾರ ಮೆಚ್ಚುಗೆ ಗಳಿಸಿದರು. ಚಿತ್ರರಂಗದಲ್ಲಿ ಬೇಡಿಕೆ ಇರುವ ನಟಿಯಾಗಿ ಗುರುತಿಸಿಕೊಂಡಿದ್ದರು. ಅಮೂಲ್ಯ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್ ಜತೆ ಅಮೂಲ್ಯ ಮದುವೆ 2017ರಲ್ಲಿ ನೆರವೇರಿತು ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ ಖುಷಿಯಲ್ಲಿದ್ದಾರೆ.
ಇದೇ ವೇಳೆ ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯಾ, ಇನ್ಸ್ಟಾಗ್ರಾಮ್ನಲ್ಲಿ ಅಭಿನಂದನೆಗಳು ಎಂದು ಕಮೆಂಟ್ ಮಾಡಿದ್ದಾರೆ. ರಮ್ಯಾ ಅಮೂಲ್ಯ ಸೀಮಂತ ಕಾರ್ಯಕ್ರಮಕ್ಕೆ ಹೋಗಿ, ಶುಭ ಹಾರೈಸಿ ಬಂದಿದ್ದರು. ಇವರೊಂದಿಗೆ ಕನ್ನಡದ ನಟಿ ಆಶಿಕಾ ರಂಗನಾಥ್ ಕೂಡ ಅಮೂಲ್ಯ ಹಾಗೂ ಜಗದೀಶ್ ದಂಪತಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ ವಿಷಯವನ್ನು ಪತಿ ಜಗದೀಶ್ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದಂತೆ ಕನ್ನಡ ಚಿತ್ರರಂಗದ ನಟ ನಟಿಯರು ಶುಭಾಶಯ ತಿಳಿಸಿದ್ದರು. ಅಮೂಲ್ಯ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ನಡೆಸಲಾಯಿತು. ಸ್ಯಾಂಪಲ್ ವುಡ್ ನ ಗಣ್ಯರು ಹಾಗೂ ಆಪ್ತರಿಗೆ ಆಹ್ವಾನ ನೀಡಲಾಯಿತು. ಈ ಕಾರ್ಯಕ್ರಮ ಕನ್ನಡ ಚಿತ್ರರಂಗದ ನಟ ನಟಿಯರು ಭಾಗವಹಿಸಿದ್ದರು. ಗಣೇಶ್ ದಂಪತಿ, ಉಪೇಂದ್ರ ದಂಪತಿ, ಅನಿರುದ್ಧ್ ದಂಪತಿ, ರಾಧಿಕಾ ಪಂಡಿತ್, ಶ್ರುತಿ, ಸುಧಾರಾಣಿ, ಮಾಳವಿಕಾ ಸೇರಿದಂತೆ ಗಣ್ಯರು ಆಗಮಿಸಿದ್ದರು.
ಇದೇ ವೇಳೆ ನಟಿ ಅಮೂಲ್ಯ ಮಾಡಿಸಿದ್ದ ಬೇಬಿ ಬಂಪ್ ಫೋಟೋಶೂಟ್ ಅನ್ನು ನೋಡಿದ ಅಭಿಮಾನಿಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿ ಹಾರೈಸಿದ್ದರು. ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದ ಅಮೂಲ್ಯ ಮಗು ಜನಿಸುವುದಕ್ಕೆ ಕೆಲವೇ ದಿನಗಳು ಬಾಕಿ ಇವೆ ಎನ್ನುವಾಗ ಪ್ರೆಗ್ನೆನ್ಸಿ ಶೂಟ್ ಅನ್ನು ಹಂಚಿಕೊಂಡಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಅಭಿಮಾನಿಗಳಿಂದ ಅಭಿನಂದನೆಗಳು ಮಹಾಪೂರವೇ ಹರಿದು ಬಂದಿತ್ತು. ನಟಿ ಅಮೂಲ್ಯ ಅವರು ತಮ್ಮ ಮಕ್ಕಳ ಮುದ್ದಾದ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋಗಳನ್ನು ನೋಡಿದಂತಹ ಹಲವಾರು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಅಮೂಲ್ಯ ಅವರ ಮಕ್ಕಳು ತುಂಬಾ ಕ್ಯೂಟ್ ಆಗಿ ಇದ್ದು ಬಾಲಕೃಷ್ಣರಂತೆ ಕಾಣುತ್ತಾರೆ. ಇನ್ನು ಕೇವಲ ಮಕ್ಕಳ ಫೋಟೋ ಅಷ್ಟೇ ಅಲ್ಲದೆ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಅವರು ಸಹ ಮಕ್ಕಳ ಜೊತೆಯಲ್ಲಿ ತೆಗೆಸಿಕೊಂಡಿರುವಂತಹ ಫೋಟೋಗಳು ಎಲ್ಲಾ ಕಡೆ ವೈರಲ್ ಆಗುತ್ತಿವೆ. ಈ ಫೋಟೋಗಳನ್ನು ನೋಡುತ್ತಿರುವಂತಹ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ ಹಾಗೆಯೇ ಮುಂದಿನ ದಿನಗಳಲ್ಲಿ ಅಮೂಲ್ಯ ಮಕ್ಕಳು ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡಲಿದ್ದಾರೆ ಎಂದು ಸಹ ಆರೈಕೆಯನ್ನು ತಿಳಿಸುತ್ತಿದ್ದಾರೆ. ನಿಮಗೂ ಸಹ ಅಮೂಲ್ಯ ಅವರ ಮಕ್ಕಳ ಇಷ್ಟ ಆದರೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.