ನಮ್ಮ ಕರುನಾಡಿನ ಜನರು ಅಪ್ಪು ಅವರ ಕನಸಿನ ಚಿತ್ರ ವಾದಂತಹ ಗಂಧದ ಗುಡಿ ನೋಡಲೆಂದು ಕಾಯುತ್ತಾ ಕುಳಿತಿದ್ದಾರೆ, ಇನ್ನು ಗಂಧದ ಗುಡಿ ಸಿನಿಮಾ ಇಂದು ಅಂದರೆ 28 ರಂದು ರಿಲೀಸ್ ಆಗಲಿದ್ದು ಈಗಾಗಲೇ ಟಿಕೆಟ್ ಗಳು ಸಹ ಬುಕ್ ಆಗಿ ಹೋಗಿವೆ ಅಷ್ಟರ ಮಟ್ಟಿಗೆ ಅಭಿಮಾನಿಗಳು ಸಿನಿಮಾ ವೀಕ್ಷಣೆ ಮಾಡಲು ಕಾತುರದಿಂದ ಕಾಯುತ್ತಾ ಕುಳಿತಿದ್ದಾರೆ. ಇನ್ನು ಈ ಸಿನಿಮಾದ ಪ್ರೀ ರಿಲೀಸ್ ಗಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಪುನೀತ ಪರ್ವ ಎನ್ನುವಂತಹ ದೊಡ್ಡ ಕಾರ್ಯಕ್ರಮವನ್ನೇ ಹಮ್ಮಿಕೊಂಡಿದ್ದರು. ಈ ಒಂದು ಕಾರ್ಯಕ್ರಮಕ್ಕೆ ನಮ್ಮ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಆಗಮಿಸಿದ್ದರು ಅಷ್ಟೇ ಅಲ್ಲದೆ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ ಬಳಗವೆ ಕಾರ್ಯಕ್ರಮಕ್ಕೆ ಆಗಮಿಸಿ ಅಪ್ಪು ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಗಂಧದ ಗುಡಿ ಸಿನಿಮಾದ ಬಗ್ಗೆ ಅಶ್ವಿನಿ ಅವರು ಈ ರೀತಿಯಾಗಿ ಹೇಳಿದ್ದಾರೆ ಗಂಧದಗುಡಿ ಸಿನಿಮಾ ಅಪ್ಪಾಜಿ ಹಾಗೂ ಶಿವಣ್ಣ ಮಾಡಿದ್ದು ಅದರಲ್ಲಿ ಕಥೆ ಇತ್ತು. ಆದರೆ ಈ ಚಿತ್ರದಲ್ಲಿ ಜರ್ನಿನೇ ಕಥೆ ಎಂದು ಹೇಳಬಹುದಾಗಿದೆ ಒಂದು ಜರ್ನಿಯನ್ನೇ ಸಿನಿಮಾ ರೂಪದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ಅಪ್ಪು ಅವರು ಅವರಾಗಿಯೇ ಇದ್ದದ್ದು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ ನನ್ನ ಜೊತೆ ಟ್ರಕಿಂಗ್ ಮಾಡಬೇಕೆಂದು ಅಪ್ಪು ಅವರು ಕಾಲ್ ಮಾಡಿದರು ಆಗ ನಾನು ಬೇರೆ ಏನು ಯೋಚನೆ ಮಾಡದೆ ಅವರ ತಂಡದ ಜೊತೆಯಲ್ಲಿ ಟ್ರಕ್ಕಿಂಗ್ ಮಾಡಿದೆ. ಬಳಿಕ ಒಂದು ಸಣ್ಣ ಹಳ್ಳಿಯಲ್ಲಿ ಊಟ ಮಾಡಿಕೊಂಡು ಬಂದೆವು ಎಂದು ಗಂಧದ ಗುಡಿ ಚಿತ್ರದ ಸವಿವರವನ್ನು ಅಶ್ವಿನಿ ಮೆಲಕು ಹಾಕಿದ್ದಾರೆ.
ಅಪ್ಪು ಅವರ ಜೊತೆಯಲ್ಲಿ ಕಳೆದಿರುವಂತಹ ಈ ಒಂದು ಸಮಯವನ್ನು ಅಶ್ವಿನಿ ಅವರು ಮರೆಯಲಿಕ್ಕೆ ಸಾಧ್ಯವಿಲ್ಲ. ಇನ್ನು ಗಂಧದ ಗುಡಿ ಸಿನಿಮಾಾವು ನಮ್ಮ ಕರ್ನಾಟಕದ ಸೌಂದರ್ಯವನ್ನು ಎತ್ತಿ ಹಿಡಿಯುವಲ್ಲಿ ಎರಡು ಮಾತಿಲ್ಲ ನಮ್ಮ ಕನ್ನಡದ ಇಡೀ ಸೊಬಗನ್ನು ಇದರಲ್ಲಿ ಸವಿಸ್ತಾರವಾಗಿ ತಿಳಿಸಲಾಗಿದೆ, ಅಪ್ಪು ಅವರು ಈ ಒಂದು ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ತುಂಬಾ ಸರಳವಾಗಿ ಇದ್ದರು. ಚಿತ್ರತಂಡದವರೊಂದಿಗೆ ಮಾತನಾಡಿಕೊಂಡು ಟ್ರಕ್ಕಿಂಗ್ ಮಾಡಿರುವುದು ಈಗ ಈ ವಿಡಿಯೋ ವೈರಲ್ ಆಗುತ್ತಿದೆ ಹೌದು ಅಪ್ಪು ಅವರು ಈ ಸಿನಿಮಾದ ವೇಳೆ ಅಶ್ವಿನಿ ಅವರ ಜೊತೆಯಲ್ಲಿ ಟ್ರಕ್ಕಿಂಗ್ ಮಾಡಿರುವಂತಹ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಾವು ಪುನೀತ್ ರಾಜ್ಕುಮಾರ್ ಅವರ ಒಂದು ಕೊನೆಗೆ ವಿಡಿಯೋ ಎಂದೇ ಹೇಳಬಹುದು ಇದನ್ನು ನೋಡಿದರೆ ಒಂದು ಕಡೆ ಖುಷಿಯಾಗುತ್ತದೆ ಮತ್ತೊಂದು ಕಡೆ ಅಷ್ಟೇ ದುಃಖವು ಸಹ ಉಂಟಾಗುತ್ತದೆ. ಈ ರೀತಿಯಾದಂತಹ ಒಂದು ಅದ್ಭುತ ಪ್ರತಿಭೆ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ಅದ್ಭುತವಾದಂತಹ ವ್ಯಕ್ತಿತ್ವವುಳ್ಳ ಮನುಷ್ಯ ನಮ್ಮೆಲ್ಲರನ್ನು ಬಿಟ್ಟು ಹೋಗಿರುವುದೇ ನಮಗೆ ದುಃಖದ ವಿಷಯ. ಪುನೀತ್ ರಾಜ್ಕುಮಾರ್ ಅವರು ನಮ್ಮೊಟ್ಟಿಗೆ ಇದ್ದರೆ ನಮ್ಮ ಕನ್ನಡವನ್ನು ಪ್ರತಿಬಿಂಬಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಾ ಇದ್ದರು ಎಂದು ಹೇಳಿದರೆ ತಪ್ಪಾಗಲಾರದು. ಕನ್ನಡಿಗರೆಲ್ಲರೂ ಸಹ ಗಂಧದಗುಡಿ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿ ಬೆಂಬಲಿಸಬೇಕು. ಸಿನಿಮಾ ನೋಡುವುದಕ್ಕಿಂತ ಹೆಚ್ಚಾಗಿ ಅಪ್ಪು ಅವರನ್ನು ಕಣ್ತುಂಬಿಕೊಳ್ಳಲು ಖಂಡಿತವಾಗಿ ಒಂದು ಸಿನಿಮಾವನ್ನು ನೀವು ನೋಡಲೇಬೇಕು ಅಪ್ಪು ಅವರ ಈ ಒಂದು ಕೊನೆಯ ವಿಡಿಯೋ ನಿಮಗೆ ಏನನಿಸುತ್ತದೆ ಎಂದು ತಪ್ಪದೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.