ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಹಗಲಿ ಇನ್ನೇನು ಒಂದು ವರ್ಷ ಕಳೆಯುತ್ತಾ ಬಂದಿದ್ದರು ಸಹ ಅಭಿಮಾನಿಗಳು ನೋವನ್ನು ಮರೆಯಲು ಸಾಧ್ಯವಿಲ್ಲ. ಅಭಿಮಾನಿಗಳಿಗೆ ಅಷ್ಟೇ ಅಲ್ಲದೆ ಪುನೀತ್ ರಾಜ್ಕುಮಾರ್ ಅವರ ಕುಟುಂಬದವರಿಗೆ ಇದು ನುಂಗಲಾರದಂತಹ ತುತ್ತು ಎಂದೇ ಹೇಳಬಹುದು. ಅಪ್ಪು ಅವರ ಪತ್ನಿ ಮತ್ತು ಮಕ್ಕಳಿಗೆ ಇದು ಜೀವನ ಪರ್ಯಂತ ನೋವನ್ನು ಕೊಡುವಂತಹ ವಿಷಯ. ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಕೇಳಿ ಬರುತ್ತಿರುವಂತಹ ಒಂದು ವಿಷಯ ಎಂದರೆ ಅದು ಅಪ್ಪು ಅವರು ಸ್ಮಗ್ಲಿಂಗ್ ಬಿಸಿನೆಸ್ ಮಾಡುತ್ತಿದ್ದರು, ಅವರು ಒಬ್ಬರು ಸ್ಮಗ್ಲರ್ ಎನ್ನುವಂತಹ ರೂಮರ್ಸ್ ಈಗ ಎಲ್ಲೆಡೆ ಹರಿದಾಡುತ್ತಿದೆ ಹೌದು ಈ ಒಂದು ವಿಚಾರದ ಬಗ್ಗೆ ಸಾಕಷ್ಟು ಜನರಲ್ಲಿ ಗೊಂದಲವೂ ಇದೆ.
ಇನ್ನು ಪುನೀತ್ ರಾಜ್ಕುಮಾರ್ ಅವರು ತುಂಬಾ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದರು ಪ್ರೇಮದ ಕಾಣಿಕೆ ಎಂಬ ಸಿನಿಮಾದ ನಂತರ ಪುರುಷುರಾಮ ಸಿನಿಮಾದ ವರೆಗೂ ಸಹ ಸಾಕಷ್ಟು ಸಿನಿಮಾಗಳನ್ನು ಬಾಲ ನಟನಾಗಿ ನಿರ್ವಹಿಸಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡರು. ಅಷ್ಟು ಚಿಕ್ಕ ವಯಸ್ಸಿಗೆ ಇಷ್ಟು ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದು ತುಂಬಾ ವಿಶೇಷ. ಡಾಕ್ಟರ್ ರಾಜ್ಕುಮಾರ್ ಅವರು ಚಿತ್ರರಂಗದಲ್ಲಿ ಇದ್ದ ಕಾರಣ ಇವರಿಗೆ ಸಿನಿಮಾರಂಗಕ್ಕೆ ಬರಲು ಕಷ್ಟವಾಗಲಿಲ್ಲ ತದನಂತರ ಇವರು ಚಿತ್ರರಂಗದಿಂದ ಸ್ವಲ್ಪ ಬ್ರೇಕ್ ಪಡೆದುಕೊಂಡರು ಕಾರಣ ಇವರ ತಂದೆ ಹಾಗೂ ಇವರ ಅಣ್ಣಂದಿರು ಚಿತ್ರರಂಗದಲ್ಲಿ ಇದ್ದಿದ್ದರಿಂದ ತಾವು ಬೇರೆ ಕೆಲಸವನ್ನು ಮಾಡಬೇಕು ಎನ್ನುವಂತಹ ಉದ್ದೇಶದಿಂದ ಸ್ವಲ್ಪ ಚಿತ್ರರಂಗದಿಂದ ದೂರ ಉಳಿದರು. ನಂತರ ಇವರು ಸ್ನೇಹಿತರೊಂದಿಗೆ ಗ್ರಾನೈಟ್ ಬಿಸಿನೆಸ್ ಮಾಡಲು ಮುಂದಾಗುತ್ತಾರೆ ಇದಕ್ಕೆ ಇವರ ಕುಟುಂಬದವರು ಸಹ ಸಹಾಯವನ್ನು ಮಾಡುತ್ತಾರೆ.
ಪುನೀತ್ ರಾಜ್ಕುಮಾರ್ ಅವರಿಗೆ ಪಾರ್ವತಮ್ಮ ಅವರು ಹಣವನ್ನು ನೀಡಿ ಒಂದು ಬಿಸಿನೆಸ್ ಮಾಡಲು ಪ್ರೋತ್ಸಾಹ ನೀಡುತ್ತಾರೆ. ಪುನೀತ್ ರಾಜ್ಕುಮಾರ್ ಸ್ನೇಹಿತರು ಈ ಒಂದು ಬಿಸಿನೆಸ್ ಮಾಡಲು ಮುಂದಾದಾಗ ಅಪ್ಪು ಅವರ ಹೆಸರು ಮತ್ತೆ ರಾಜ್ಕುಮಾರ ಅವರ ಹೆಸರನ್ನು ತೆಗೆದುಕೊಂಡು ಇಲ್ಲೀಗಲ್ ಕೆಲಸ ಮಾಡಲು ಪ್ರಾರಂಭಿಸುತ್ತಾರೆ ಇದು ಯಾವುದೇ ವಿಷಯಗಳು ಪುನೀತ್ ರಾಜ್ಕುಮಾರ್ ಅವರಿಗೆ ಹಾಗು ಅವರ ಕುಟುಂಬಸ್ಥರಿಗೆ ತಿಳಿದಿರುವುದಿಲ್ಲ ಕಾಲ ನಂತರದಲ್ಲಿ ಪುನೀತ್ ರಾಜ್ಕುಮಾರ್ ಅವರು ಇಲ್ಲೀಗಲ್ ಬಿಸಿನೆಸ್ ಮಾಡುತ್ತಿದ್ದಾರೆ ಎನ್ನುವಂತಹ ವಿಚಾರ ಎಲ್ಲೆಡೆ ಹರಿದಾಡತೊಡಗಿರುತ್ತದೆ. ಅಷ್ಟೇ ಅಲ್ಲದೆ ಡಾಕ್ಟರ್ ರಾಜ್ಕುಮಾರ್ ಅವರು ಕಿಡ್ನಾಪ್ ಆದಂತಹ ಸಂದರ್ಭದಲ್ಲಿ ಈ ಒಂದು ಸ್ಮಗ್ಲಿಂಗ್ ವಿಷಯದಿಂದಾಗಿ ಡಾಕ್ಟರ್ ರಾಜ್ಕುಮಾರ್ ಅವರು ಕಿಡ್ನಾಪ್ ಆಗಿದ್ದಾರೆ ಎಂದು ಹಲವಾರು ಸಿದ್ದಿ ಹಬ್ಬಿಬಿಡುತ್ತದೆ ಅಂತಹ ಸಂದರ್ಭದಲ್ಲಿ ಅಪ್ಪು ಅವರು ತುಂಬಾನೇ ನೋವನ್ನು ಅನುಭವಿಸುತ್ತಾರೆ.
ಆದರೆ ಅಪ್ಪು ಅವರ ಮನಸ್ಸಿನಲ್ಲಿ ಸ್ಮಗ್ಲಿಮಗ್ ಮಾಡುವಮತಹ ಯಾವುದೇ ಉದ್ದೇಶ ಇರುವುದಿಲ್ಲ, ಇವರು ಹಣವನ್ನು ಹೂಡಿಕೆ ಮಾಡಿದ್ದರು ಹೊರತು ಅದಕ್ಕೆ ಸಂಬಂಧಪಟ್ಟ ಯಾವುದೇ ರೀತಿಯ ವಿಷಯಗಳನ್ನು ಸಹ ತಿಳಿದುಕೊಂಡಿರಲಿಲ್ಲ ಆದರೆ ಅಪ್ಪು ಅವರ ಜೊತೆಗೆ ಗ್ರಾನೆಟ್ ಕೆಲಸ ಮಾಡುತ್ತಿದ್ದಂತಹವರು ಇವರ ಹೆಸರನ್ನು ಉಪಯೋಗಿಸಿಕೊಂಡು ಹಣ ಮಾಡಲು ಮುಂದಾಗುತ್ತಾರೆ. ಈ ವಿಷಯ ತಿಳಿದ ನಂತರ ಅಪ್ಪು ಅವರ ಕುಟುಂಬಸ್ಥರು ಗ್ರಾನೈಟ್ ಬಿಸಿನೆಸ್ ಅನ್ನು ಮಾಡಬಾರದು ಎಂದು ಹೇಳಿ ಈ ಕೆಲಸದಿಂದ ದೂರ ಉಳಿದುಕೊಳ್ಳುತ್ತಾರೆ. ಈ ಒಂದು ವಿಷಯವೂ ಪುನೀತ್ ರಾಜ್ಕುಮಾರ್ ಅವರ ಜೀವನದಲ್ಲಿ ಕಪ್ಪು ಚುಕ್ಕೆ ಎಂದೇ ಹೇಳಬಹುದು ಜೀವನದ ಉದ್ದಕ್ಕೂ ಸಹ ಯಾವುದೇ ಒಂದು ರಿಮಾರ್ಕ್ ಅಥವಾ ಕಾಂಟ್ರವರ್ಸಿಯನ್ನು ಮಾಡಿಕೊಳ್ಳದ ಪುನೀತ್ ರಾಜ್ಕುಮಾರ್ ಅವರಿಗೆ ಇದು ಒಂದು ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿತು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಕಮೆಂಟ್ಸ್ ಮೂಲಕ ತಿಳಿಸಿ.