ಎಲ್ಲರಿಗೂ ಗೊತ್ತಿರುವ ಹಾಗೆ ಕಿರಿಕ್ ಪಾರ್ಟಿ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ರಶ್ಮಿಕ ಮಂದಣ್ಣ ಅವರು ಎಂಟ್ರಿ ಕೊಡುತ್ತಾರೆ ಅಷ್ಟೇ ಅಲ್ಲದೆ ದೊಡ್ಡ ಬ್ರೇಕ್ ಸಹ ಈ ಒಂದು ಸಿನಿಮಾದಿಂದ ಸಿಗುತ್ತದೆ. ರಕ್ಷಿತ್ ಶೆಟ್ಟಿ ಅವರಿಗೂ ಸಹ ದೊಡ್ಡ ಬ್ರೇಕ್ ಕೊಟ್ಟಂತಹ ಸಿನಿಮಾ ಎಂದರೆ ಅದು ಕಿರಿಕ್ ಪಾರ್ಟಿ ಈ ಸಿನಿಮಾದಲ್ಲಿ ಇಬ್ಬರು ಸ್ಟಾರ್ ಗಳು ಮಿಂಚಿ ಜನರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತಾರೆ. ಮುಂದುವರೆದು ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ನಿಶ್ಚಿತಾರ್ಥವನ್ನು ಸಹ ಮಾಡಿಕೊಳ್ಳುತ್ತಾರೆ ಆದರೆ ಇವರ ಸಂಬಂಧ ಹಲವು ದಿನಗಳ ತನಕ ಉಳಿದುಕೊಳ್ಳುವುದಿಲ್ಲ ಕೆಲವೇ ದಿನಗಳಿಗೆ ನಿಶ್ಚಿತಾರ್ಥ ಮುರಿದುಬೀಳುತ್ತದೆ. ಎರಡು ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಂತಹ ಈ ಜೋಡಿ ಕೆಲವು ದಿನಗಳ ನಂತರ ನಿಶ್ಚಿತಾರ್ಥ ಮುರಿದು ಬೀಳುತ್ತದೆ.
ಇದಕ್ಕೆ ಹಲವಾರು ಜನರು ಹಲವಾರು ರೀತಿಯಾದಂತಹ ಕಾರಣವನ್ನು ಹೇಳುತ್ತಾರೆ ಇನ್ನು ತಮ್ಮ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ಈ ಜೋಡಿ ಒಟ್ಟಾಗಿ ಎಲ್ಲಿಯೂ ಸಹ ಹೆಚ್ಚಾಗಿ ಕಾಣಿಸಿಕೊಂಡಿಲ್ಲ, ರಕ್ಷಿತ್ ಶೆಟ್ಟಿ ಅವರು ತಮ್ಮ ಸಿನಿಮಾ ಬದುಕಿನ ಪಯಣದಲ್ಲಿ ಬಿಸಿಯಾಗಿದ್ದರೆ ಅಷ್ಟೇ ಅಲ್ಲದೆ ನ್ಯಾಷನಲ್ ಕ್ರಷ್ ಎಂದು ಕರೆಸಿಕೊಳ್ಳುವಂತಹ ರಶ್ಮಿಕ ಮಂದಣ್ಣ ಅವರು ಕನ್ನಡ ಭಾಷೆ ಅಲ್ಲದೆ ಇತರ ಭಾಷೆಗಳಲ್ಲಿಯೂ ಸಹ ತಮ್ಮ ಚಾಪನ್ನು ಮೂಡಿಸುತ್ತಾ ಹೋಗುತ್ತಿದ್ದಾರೆ ಇವರ ನಟನೆಯ ಗುಡ್ ಬೈ ಹಾಗೆ ಪುಷ್ಪ ಸಿನಿಮಾ ಎಲ್ಲವೂ ಸಹ ಅದ್ಭುತವಾದಂತಹ ಪ್ರದರ್ಶನ ಕಂಡಿದ್ದು ರಶ್ಮಿಕ ಮಂದಣ್ಣ ಅವರಿಗೆ ಒಳ್ಳೆಯ ಯಶಸ್ಸು ಎನ್ನುವಂತಹದ್ದು ಚಿತ್ರರಂಗದಲ್ಲಿ ಸಿಗುತ್ತಿದೆ.
ರಶ್ಮಿಕ ಮಂದಣ್ಣ ಅವರು ನಮ್ಮ ಚಂದನ ವನವನ್ನು ಮರೆತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ರಕ್ಷಿತ್ ಶೆಟ್ಟಿಯವರು ಸಿನಿಮಾ ಬಳಿಕ ತಮ್ಮ ಕರಿಯರ್ ನಲ್ಲಿ ತುಂಬಾ ಬಿಸಿಯಾಗಿದ್ದಾರೆ. ಇದೀಗ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕ ಮಂದಣ್ಣ ಅವರು ಜೊತೆಯಾಗಿ ಇರುವಂತಹ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ ಅದು ಯಾವ ವೇದಿಕೆಯಲ್ಲಿ ಎಂದು ನೋಡುವುದಾದರೆ ಸೈಮಾ ಕಾರ್ಯಕ್ರಮದಲ್ಲಿ ಬೆಸ್ಟ್ ಎಂಟರ್ಟೈನೆರ್ ಆಫ್ ದಿ ಇಯರ್ ಎನ್ನುವಂತಹ ಪ್ರಶಸ್ತಿಯನ್ನು ರಕ್ಷಿತ್ ಶೆಟ್ಟಿ ಅವರಿಗೆ ನೀಡಲಾಗುತ್ತದೆ ಈ ವೇಳೆ ರಶ್ಮಿಕ ಮಂದಣ್ಣ ಅವರನ್ನು ವೇದಿಕೆಯ ಮೇಲೆ ಅಕುಲ್ ಬಾಲಾಜಿ ಅವರು ಕರೆದಿರುತ್ತಾರೆ. ರಶ್ಮಿಕ ಮಂದಣ್ಣ ಹಾಗೂ ರಶ್ ಶೆಟ್ಟಿ ಇಬ್ಬರನ್ನು ನೋಡಿ ಎಲ್ಲಾ ಅಭಿಮಾನಿಗಳು ಸಹ ಖುಷಿಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ವಿಡಿಯೋ ವೈರಲ್ ಆಗುತ್ತಿದೆ ಸುಂದರ ಕ್ಷಣವನ್ನು ನಾವು ವಿಡಿಯೋದಲ್ಲಿ ನೋಡಬಹುದು.
ಇನ್ನು ಈ ಜೋಡಿಯನ್ನು ನೋಡಿದರೆ ತುಂಬಾ ಜನರು ಹಲವಾರು ರೀತಿಯಲ್ಲಿ ಕಾಮೆಂಟ್ ಮಾಡ್ತಾರೆ ಕೆಲವರು ಪಾಸಿಟಿವ್ ಆಗಿ ಕಮೆಂಟ್ ಮಾಡಿದರೆ ಇನ್ನು ಹಲವರು ನೆಗೆಟಿವ್ ಆಗಿ ಕಮೆಂಟ್ ಮಾಡುತ್ತಾರೆ. ಪ್ರತಿಯೊಬ್ಬರ ಜೀವನ ಅವರ ಕೈಯಲ್ಲಿ ಇರುತ್ತದೆ ರಶ್ಮಿಕ ಮಂದಣ್ಣ ಅವರು ತಮ್ಮ ಕರಿಯರ ನಲ್ಲಿ ಹೆಚ್ಚಿನ ಮಟ್ಟದಲ್ಲಿ ಯಶಸ್ಸನ್ನು ಕಾಣುವಂತಹ ದೃಷ್ಟಿಯಿಂದ ತಮ್ಮ ನಿಶ್ಚಿತಾರ್ಥವನ್ನು ಮುರಿದುಕೊಂಡರು ಎಂಬುವ ವಿಚಾರವನ್ನು ಅವರೇ ತಿಳಿಸಿದ್ದಾರೆ. ಆದ್ದರಿಂದ ರಕ್ಷಿತ್ ಶೆಟ್ಟಿ ಅವರು ಸಹ ತಮ್ಮ ಸಿನಿಮಾ ಜರ್ನಿಯಲ್ಲಿ ತಮ್ಮದೇ ಆದಂತಹ ಕೆಲವೊಂದು ದಾಖಲೆಯನ್ನು ಸೃಷ್ಟಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.