ಕುಮಾರಣ್ಣ ಮನೆಯಲ್ಲಿ ಪ್ರೀತಿಯಿಂದ ರಾಧಿಕಾ ಮತ್ತು ಮಗಳನ್ನು ಯಾವ ಹೆಸರಿನಿಂದ ಕರೆಯುತ್ತಾರಂತೆ ಗೊತ್ತಾ.? ಈ ಹೆಸರನ್ನು ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ

ನಟಿ ರಾಧಿಕಾ ಕುಮಾರಸ್ವಾಮಿ ಅವರು ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಬಹು ಬೇಡಿಕೆ ನಟಿಯರ ಪಟ್ಟಿಯಲ್ಲಿದ್ದವರು ಅಂದಹಾಗೆ 9ನೇ ತರಗತಿ ಓದುತ್ತಿದ್ದ ಈ ಹುಡುಗಿ ರಾಧಿಕಾ ಅವರು ತೆರೆಯ ಮೇಲೆ ಕಾಣಿಸಿಕೊಂಡರು ಶಿವ ರಾಜ್‌ಕುಮಾರ್ ಅವರ ಜೊತೆಯಲ್ಲಿ ಮಾಡಿದ ತಂಗಿ ಪಾತ್ರದಲ್ಲೂ ಮಿಂಚಿದರು. ಅಷ್ಟೇ ಅಲ್ಲದೆ ಭಾವನಾತ್ಮಕ ಪಾತ್ರಗಳಿಗೆ ಜೀವ ತುಂಬಿ ನಟಿಸುತ್ತಿದ್ದರು. ರಾಧಿಕಾ ಕುಮಾರಸ್ವಾಮಿ ಅವರು ಪ್ರಾರಂಭದಲ್ಲಿ ನಿನಗಾಗಿ, ತವರಿಗೆ ಬಾ ತಂಗಿ, ಪ್ರೇಮ ಕೈದಿ, ಮಣಿ, ತಾಯಿ ಇಲ್ಲದ ತಬ್ಬಲಿ, ಮನೆಮಗಳು, ರಿಷಿ ಹಾಗೂ ಅಣ್ಣ ತಂಗಿ ಸೇರಿದಂತೆ ಅನೇಕ ಸಿನಿಮಾದಲ್ಲಿ ಬಣ್ಣ ಹಚ್ಚಿದರು ಹೌದು 2002ರಲ್ಲಿ ಬಿಡುಗಡೆಗೊಂಡ ನಿನಗಾಗಿ ಚಿತ್ರದ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟವರು ಮತ್ತೆ ಸಿನಿಮಾ ರಂಗದಿಂದ ದೂರ ಉಳಿದರು ಅದಾದ ಬಳಿಕ ರಾಧಿಕಾ ಕುಮಾರಸ್ವಾಮಿ ಅವರು ಸ್ವೀಟಿ ನನ್ನ ಜೋಡಿ ಸಿನಿಮಾದಲ್ಲಿ ನಟಿಸುವ ಮೂಲಕ ಕಾಣಿಸಿಕೊಂಡಿದ್ದರು.

WhatsApp Group Join Now
Telegram Group Join Now

ತದನಂತರ ಯಶ್ ಹಾಗೂ ರಮ್ಯಾ ಅಭಿನಯದ ಲಕ್ಕಿ ಸಿನಿಮಾವನ್ನು ನಿರ್ಮಾಣ ಮಾಡಿದರು ಅಂದಹಾಗೆ ರಾಧಿಕಾ ಕುಮಾರಸ್ವಾಮಿ ಅವರು ಶಮಿಕಾ ಎಂಟರ್ಪ್ರೈಸಸ್ ಮುನ್ನಡೆಸುತ್ತಿದ್ದಾರೆ ಹೀಗಾಗಿ ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಸಕ್ರಿಯ ರಾಗಿದ್ದಾರೆ ಇನ್ನು ವೈಯಕ್ತಿಕ ಬದುಕಿನತ್ತ ನೋಡುವುದಾದರೆ 14ನೇ ವಯಸ್ಸಿನಲ್ಲಿ ರಥನ್ ಕುಮಾರ್ ಎಂಬುವವರ ಜೊತೆಯಲ್ಲಿ ಇವರಿಗೆ ವಿವಾಹವಾಗುತ್ತದೆ, ಬದುಕು ಎಂದರೆ ಏನು ಎಂಬುದು ಗೊತ್ತಿಲ್ಲದ ವಯಸ್ಸಿನಲ್ಲಿ ಮದುವೆಯ ಬಂಧನಕ್ಕೆ ಒಳಗಾಗುತ್ತಾರೆ ಆದರೆ 2002ರಲ್ಲಿ ರಾಧಿಕಾ ಅವರ ಪತಿ ಹೃ’ದ’ಯಾ’ಘಾ’ತ’ದಿಂದ ಸಾ’ವ’ನ’ಪ್ಪು’ತ್ತಾರೆ ಇನ್ನು 2006ರಲ್ಲಿ ಕುಮಾರಸ್ವಾಮಿ ಅವರನ್ನು ಮದುವೆಯಾಗುತ್ತಾರೆ ಆದರೆ 2010ರಲ್ಲಿ ಕೋರ್ಟ್ ಇವರಿಬ್ಬರ ಮದುವೆಯನ್ನು ಅಸಿಂಧು ಎಂದು ಘೋಷಣೆ ಮಾಡುತ್ತಾರೆ.

ರಾಧಿಕಾ ಕುಮಾರಸ್ವಾಮಿ ಅವರ ಜೊತೆಗಿನ ಸಂಬಂಧದ ಕುರಿತು ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿದ್ದವು ಹೌದು ಕೋರ್ಟ್ ಇವರಿಬ್ಬರ ಮದುವೆಯನ್ನು ಅಸಿಂಧು ಎಂದೂ ಘೋಷಿಸಿದ ಮೇಲು ಒಳ್ಳೆಯ ಭಾಂದವ್ಯವನ್ನು ಇಟ್ಟುಕೊಂಡಿದ್ದರು. ಆದರೆ ಯಾವಾಗ ನಿಖಿಲ್ ತುಂಬಾ ದೊಡ್ಡವರಾಗುತ್ತಾ ಬಂದರೂ ಅನಿತಾ ಕುಮಾರಸ್ವಾಮಿ ಅವರು ಮತ್ತು ಕುಟುಂಬದವರು ರಾಧಿಕಾ ಅವರಿಂದ ದೂರ ಇರುವಂತೆ ಕುಮಾರಸ್ವಾಮಿ ಅವರಿಗೆ ಒತ್ತಡ ಹಾಕುತ್ತಾರೆ ಹೀಗಾಗಿ ರಾಧಿಕಾ ಕುಮಾರಸ್ವಾಮಿ ನಡುವಿನ ಭಾಂದವ್ಯವು ಸ್ವಲ್ಪ ಕಡಿಮೆಯಾಗುತ್ತಾ ಬರುತ್ತದೆ. ಇದೀಗಾ ರಾಧಿಕಾ ಸಂದರ್ಶನ ನೀಡಿರುವ ಒಂದು ವಿಡಿಯೋ ವೈರಲ್ ಆಗಿತ್ತು. ಕುಮಾರಸ್ವಾಮಿ ಅವರು ರಾಧಿಕಾ ಅವರನ್ನು ಮನೆಯಲ್ಲಿ ಏನೆಂದು ಕರೆಯುತ್ತಾರೆ ಎಂದು ಸ್ವತಹ ರಾಧಿಕಾ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು ಈ ಕುರಿತು ಮಾತನಾಡಿದ ರಾಧಿಕಾ ಅವರು ಕುಮಾರಸ್ವಾಮಿ ಅವರನ್ನು ರೀ ಎಂದು ಕರೆಯುವುದಾಗಿ ಹೇಳಿಕೊಂಡಿದ್ದರು.

ಇನ್ನು ಕುಮಾರಸ್ವಾಮಿ ಅವರು ಏನು ಕರೆಯುತ್ತಾರೆ ಎಂದು ಕೇಳಿದಾಗ ಹೇಳಲೇ ಬೇಕಾ ಎಂದು ನಾಚುತ್ತಾ ಚಿನ್ನು ಎಂದು ಕರೆಯುತ್ತಾರೆ ಎಂದಿದ್ದರು ಆದರೆ ಇದೀಗ ರಾಧಿಕಾ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಅವರು ಬೇರೆ ಬೇರೆಯಾಗಿದ್ದಾರೆ ಹೌದು ರಾಧಿಕಾ ಕುಮಾರಸ್ವಾಮಿ ತಮ್ಮ ಮಗಳು ಶಮಿಕಾಳೊಂದಿಗೆ ಜೀವನ ನಡೆಸುತ್ತಿದ್ದಾರೆ ಮಗಳನ್ನು ಚಿತ್ರರಂಗಕ್ಕೆ ಕರೆತರುವ ಪ್ರಯತ್ನದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಆಗಾಗ ವಿಡಿಯೋ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ ಕಳೆದ ವರ್ಷ ನವೆಂಬರ್ 12ರಂದು ಅದ್ದೂರಿಯಾಗಿ ತಮ್ಮ 35ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದರು. ಹುಟ್ಟು ಹಬ್ಬದ ಆಚರಣೆಯಲ್ಲಿ ಸ್ನೇಹಿತರು ಹಾಗೂ ಸಹೋದರರು ಭಾಗಿಯಾಗಿದ್ದರು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಹಾಜರಾಗಿದ್ದರು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now