ನಟಿ ಐಂದ್ರಿತಾ ಮೂಲತಃ ರಾಜಸ್ಥಾನದ ಉದಯ್ಪುರದವರು. ಬೆಂಗಾಲಿ ಕುಟುಂಬದಲ್ಲಿ ಜನಿಸಿದ ಐಂದ್ರಿತಾ, ಕನ್ನಡ ಸಿನಿಮಾ ಇಂಡಸ್ಟ್ರೀಗೆ ಕಾಲಿಟ್ಟ ಮೇಲೆ ಅಪ್ಪಟ ಕನ್ನಡತಿಯೇ ಆಗಿಬಿಟ್ಟಿದ್ದಾರೆ. ಕನ್ನಡ ಹುಡುಗನನ್ನೇ ಮದುವೆ ಆಗಿ ಇಲ್ಲಿಯೇ ಸೆಟ್ಲ್ ಆಗಿದ್ದಾರೆ ಕನ್ನಡ ಸಿನಿಮಾಗಳ ಜೊತೆ ಅಪರೂಪಕ್ಕೆ ಬೆಂಗಾಲಿ, ಹಿಂದಿ ಸಿನಿಮಾಗಳಲ್ಲೂ ಅವರು ನಟಿಸುತ್ತಾರೆ. ಒಂದು ಕಾಲದಲ್ಲಿ ಟಾಪ್ ನಟಿಯರ ಲಿಸ್ಟ್ ನಲ್ಲಿ ಇಂತಿದ್ದಂತಹ ಐಂದ್ರಿತಾ ರೇ ಅವರು ತದನಂತರ ಸಿನಿಮಾ ಆಫರ್ ಗಳು ಕಡಿಮೆಯಾಗುತ್ತಾ ಹೋದವು. ತಮ್ಮ ನಟನೆ ಹಾಗೂ ಚಾರ್ಮ್, ಸೌಂದರ್ಯದ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದನೆ ಮಾಡಿದಂತಹ ಐಂದ್ರಿತಾ ರೇ ಈಗ ಇವರಿಗೆ ಸಿನಿಮಾ ಆಫರ್ಗಳು ಕಡಿಮೆಯಾಗಲು ಆ ಕಾರಣಗಳು ಏನು ಎಂದು ನಮಗೆ ತಿಳಿಯುತ್ತಿಲ್ಲ.
ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿ ಹಾಗೂ ಬೆಂಗಾಲಿಯಲ್ಲಿ ನಟಿಸಿರುವಂತಹ ನಟಿ ಐಂದ್ರಿತಾ ರೇ ಅವರು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆಕ್ಟಿವ್ ಆಗಿ ಇರುತ್ತಾರೆ ಮದುವೆಯಾದ ನಂತರವೂ ಸಹ ಇವರು ತಮ್ಮ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ ಇವರ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗುತ್ತಾರೆ ಇಂದಿಗೂ ಸಹ ಇವರು ತಮ್ಮ ಚಾರ್ಮ್ ಅನ್ನು ಕಳೆದುಕೊಂಡಿಲ್ಲ ಹಾಗೂ ತಮ್ಮ ದೇಹ ಸೌಂದರ್ಯದಲ್ಲಿ ಯಾವುದೇ ಸಹ ಬದಲಾವಣೆ ಆಗಿಲ್ಲ, ಇನ್ನು ಸಹ ಚಿಕ್ಕ ಹುಡುಗಿಯಂತೆ ಕಾಣಿಸುವಂತಹ ಐಂದ್ರಿತಾ ರೇ ಅವರು ಇದೀಗ ಕನ್ನಡ ಚಿತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ತಿಮ್ಮಯ್ಯ ವರ್ಸಸ್ ತಿಮ್ಮಯ್ಯ ಎಂಬ ಸಿನಿಮಾದ ಮೂಲಕ ಮತ್ತೆ ಕನ್ನಡಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ ಈ ಒಂದು ಸಿನಿಮಾದಲ್ಲಿ ಇವರು ಪೂರ್ಣ ಪ್ರಮಾಣದ ಹೀರೋಯಿನ್ ಆಗಿ ನಟಿಸುತ್ತಿಲ್ಲ ಬದಲಿಗೆ ಒಂದು ಗೆಸ್ಟ್ ರೋಲ್ ಎಂದೆ ಹೇಳಬಹುದು.
ಈ ಒಂದು ಸಿನಿಮಾದ ಸಿನಿ ಚಿತ್ರಕ್ಕೆ ಸಂದರ್ಶನ ನೀಡುವಂತಹ ಸಂದರ್ಭದಲ್ಲಿ ಐಂದ್ರಿತಾರೇ ಅವರು ಈ ರೀತಿಯಾಗಿ ಹೇಳಿದ್ದಾರೆ ಮದುವೆಗೂ ಮುನ್ನ ನನಗೆ 35 ರಿಂದ 40 ಸಿನಿಮಾ ಆಫರ್ ಗಳು ಬರುತ್ತಿದ್ದವು. ಆದರೆ ಮದುವೆಯಾದ ನಂತರ ಒಂದು ಸಿನಿಮಾ ಆಫರ್ಗಳು ಸಹ ಬರುತ್ತಿಲ್ಲ ಬೇರೆ ಭಾಷೆಗಳಲ್ಲಿ ಈಗ ಮದುವೆಯಾದ ನಂತರವೂ ಸಹ ನಟಿಯರಿಗೆ ಎತೇಚ್ಚವಾದಂತಹ ಸಿನಿಮಾ ಆಫರ್ ಗಳು ಬರುತ್ತವೆ ಕನ್ನಡದಲ್ಲಿ ಸಹ ಇದು ಬದಲಾಗಬೇಕು ಕನ್ನಡ ನಟಿಯರಿಗೂ ಸಹ ಮದುವೆ ಆದ ನಂತರ ಸಿನಿಮಾ ಆಫರ್ ಗಳನ್ನು ಕೊಡಬೇಕು ಎಂದು ಸಂದರ್ಶನದಲ್ಲಿ ತಮ್ಮ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಮೆರವಣಿಗೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಅನ್ನು ಕೊಟ್ಟಿರುವಂತಹ ಐಂದ್ರಿತಾ ರೇ ಅವರು ನಂತರದಲ್ಲಿ ಜಂಗ್ಲಿ, ಮನಸಾರೆ, ಮುಂಗಾರು ಮಳೆ 2, ಭಜರಂಗಿ, ಪರಮಾತ್ಮ ಹೀಗೆ ಹಿಟ್ ಸಿನಿಮಾಗಳಲ್ಲಿ ನಟಿಸಿರುವಂತಹ ಐಂದ್ರಿತಾ ಸುದೀಪ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂತಹ ಸ್ಟಾರ್ ನಟರುಗಳ ಜೊತೆಯಲ್ಲಿ ತೆರೆಯನ್ನು ಹಂಚಿಕೊಂಡಿದ್ದಾರೆ ಒಂದು ಕಾಲದಲ್ಲಿ ಪೀಕ್ ನಲ್ಲಿ ಇದ್ದಂತಹ ಐಂದ್ರಿತಾ ರೇ ಅವರಿಗೆ ಇಂದು ಸಿನಿಮಾ ಆಫರ್ ಗಳು ಸಿಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಿಳಿಸಿ.