ಶ್ರೀ ಗುರು ರಾಘವೇಂದ್ರ ಸ್ವಾಮಿ.
ಮಂತ್ರಾಲಯ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಯ ಭಾಗದಲ್ಲಿರುವಂತಹ ಪವಿತ್ರವಾದ ಕ್ಷೇತ್ರ. ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರು ರಾಯರನ್ನು ನೆನೆದರೆ, ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಆಂಧ್ರ ಪ್ರದೇಶದಲ್ಲಿರುವ ಮಂತ್ರಾಲಯವು ಬಹಳ ಪ್ರಸಿದ್ಧಿಯನ್ನು ಹೊಂದಿರುವ ದೇವಾಲಯವಾಗಿದೆ.
ಈ ದೇವಾಲಯದ ವಿಶೇಷತೆಗಳ ಬಗ್ಗೆ ತಿಳಿಯೋಣ. ಇಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನಂ ಇದೆ. ಶ್ರೀ ಗುರು ರಾಘವೇಂದ್ರ ಸ್ವಾಮಿ ಹಿಂದೂ ಧರ್ಮದಲ್ಲಿ ಪ್ರಭಾವಿ ಸಂತರಾಗಿದ್ದರು. ಅವರು ವೈಷ್ಣವ ಧರ್ಮವನ್ನು ಮತ್ತು ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ತತ್ವಶಾಸ್ತ್ರವನ್ನು ಪ್ರತಿಪಾದಿಸಿದರು. ಅವರನ್ನು ನರಸಿಂಹ ಅವತಾರದಲ್ಲಿ ವಿಷ್ಣುವಿನಿಂದ ರಕ್ಷಿಸಲ್ಪಟ್ಟ ಭಕ್ತ ಪ್ರಹಲ್ಲಾದನ ಪುನರ್ಜನ್ಮವೆಂದು ಪರಿಗಣಿಸಲಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿ ತಮ್ಮ ಜೀವಿತಾವಧಿಯಲ್ಲಿ ಅನೇಕ ಅದ್ಭುತಗಳನ್ನು ಮಾಡಿದ್ದಾರೆ. ಇಂದಿಗೂ ತಮ್ಮ ಭಕ್ತರನ್ನು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. ಮಂತ್ರಾಲಯವು ಗುರು ರಾಘವೇಂದ್ರ ಸ್ವಾಮಿಗೆ ಸಮರ್ಪಿತವಾಗಿದೆ. ಅವರು ಮಧ್ವಾ ಸಂತರಾಗಿದ್ದರು, ಅವರನ್ನು ಪ್ರಹ್ಲಾದರ ಪುನರ್ಜನ್ಮವೆಂದು ಪರಿಗಣಿಸಲಾಗುತ್ತದೆ.
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2ಗಂಟೆಯ ವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ದೇವಾಲಯ ತೆರೆದಿರುತ್ತದೆ. ಸಾಂಪ್ರದಾಯಿಕ ಉಡುಗೆ ಧರಿಸುವುದು ಗೌರವವನ್ನು ತೋರಿಸುತ್ತದೆ. ಧಾರ್ಮಿಕ ಪ್ರದೇಶಗಳಿಗೆ ಪ್ರವೇಶಿಸಲು ಪುರುಷರು ಧೋತಿ , ಮಹಿಳೆಯರು ಸೀರೆ ಅಥವಾ ಸಲ್ವಾರ್ ಕಮೀಜ್ ಅನ್ನು ಧರಿಸಬೇಕು. ಇಲ್ಲಿಗೆ ಬರುವ ಪ್ರತಿಯೊಬ್ಬರು ಪ್ರದಕ್ಷಿಣೆ ಹಾಕುತ್ತರೆ. ಹೆಜ್ಜೆ ಸೇವೆಯನ್ನೂ ಮಾಡುತ್ತಾರೆ.
ಮಠದ ಗರ್ಭಗುಡಿಗೆ ಪ್ರವೇಶಿಸುವ ಮೊದಲು, ತುಂಗಭದ್ರಾ ನದಿಯ ದಡದಲ್ಲಿ, ಅಥವಾ ಮಠದ ಮುಂಭಾಗದ ಟ್ಯಾಪ್‌ನಲ್ಲಿ ಸ್ನಾನ ಮಾಡಿ ಅಥವಾ ಕನಿಷ್ಠ ನಿಮ್ಮ ಪಾದಗಳನ್ನು ತೊಳೆಯಿರಿ. ಶ್ರೀ ರಾಘವೇಂದ್ರ ಸ್ವಾಮಿಯ ವೃಂದಾವನಕ್ಕೆ ಸ್ಥಳವನ್ನು ಆಶೀರ್ವದಿಸಿದ ದೇವತೆ ಮಂಚಲಮ್ಮ ದರ್ಶನ ಪಡೆಯಿರಿ. ಮಠದ ಗರ್ಭಗುಡಿಗೆ ಪ್ರವೇಶಿಸುವ ಮೊದಲು, ತುಂಗಭದ್ರಾ ನದಿಯ ದಡದಲ್ಲಿ, ಅಥವಾ ಮಠದ ಮುಂಭಾಗದ ಟ್ಯಾಪ್‌ನಲ್ಲಿ ಸ್ನಾನ ಮಾಡಿ ಅಥವಾ ಕನಿಷ್ಠ ನಿಮ್ಮ ಪಾದಗಳನ್ನು ತೊಳೆಯಿರಿ.
ಶ್ರೀ ರಾಘವೇಂದ್ರ ಸ್ವಾಮಿಯ ವೃಂದಾವನಕ್ಕೆ ಸ್ಥಳವನ್ನು ಆಶೀರ್ವದಿಸಿದ ದೇವತೆ ಮಂಚಲಮ್ಮ ದರ್ಶನ ಪಡೆಯಿರಿ. ಮೊದಲಿಗೆ ಬೆಂಗಳೂರಿನಿಂದ ಮಂತ್ರಾಲಯ ರಸ್ತೆಗೆ ರೈಲ್ವೆ ಮಾರ್ಗವು ಇದೆ ಬಜೆಟ್ ನ ಪ್ರಕಾರ ಸ್ಲೀಪರ್ ಕೋಚ್ ಆದಲ್ಲಿ 250 ರೂಗಳು ಆಗುತ್ತದೆ ಬದಲಿಗೆ ಸಿಟ್ಟಿಂಗ್ ಕೋಚ್ಗಳು 150 ರೂಗಳು ಇದೆ. ಹಾಗಾಗಿ ಎರಡು ಕಡೆಯಿಂದಲೂ 300 ರೂಗಳು ಆಗಬಹುದು ಇನ್ನು ಮಂತ್ರಾಲಯ ರೈಲ್ವೆ ಸ್ಟೇಷನ್ ನಿಂದ ದೇವಸ್ಥಾನಕ್ಕೆ ಸುಮಾರು ಅರ್ಧ ಗಂಟೆ ಅಷ್ಟು ಪ್ರಯಾಣ ಹಿಡಿದರು 50 ರೂಗಳಷ್ಟು ಆಟೋಗಳಿಗೆ ವೆಚ್ಚವಾಗುತ್ತದೆ.
ಇನ್ನು ಈ ಮಂತ್ರಾಲಯದಲ್ಲಿ ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿಗೆ ಉಳಿದುಕೊಳ್ಳಲು ರೂಂಗಳನ್ನು ಒದಗಿಸುವುದಿಲ್ಲ ಹಾಗಾಗಿ ತುಂಗಭದ್ರ ನದಿಯಲ್ಲಿ ಸ್ನಾನ ಮಾಡುವುದು ಉತ್ತಮ ಬದಲಿಗೆ ನೀವೇನಾದರೂ ಒಬ್ಬರಿಗಿಂತ ಹೆಚ್ಚು ಜನರಿದ್ದಲ್ಲಿ ಮೊದಲೇ ರೂಮುಗಳನ್ನು ಬುಕ್ಕಿಂಗ್ ಮಾಡಿಕೊಳ್ಳುವುದು ಒಳಿತು. ಬೆಳಿಗ್ಗೆ 11 ರಿಂದ 3ರವರೆಗೂ ಮಠದ ಕಡೆಯಿಂದ ಊಟದ ವ್ಯವಸ್ಥೆ ಇರುತ್ತದೆ ಜೊತೆಗೆ ಸಂಜೆ ಏಳರಿಂದ ರಾತ್ರಿ 9 ರವರೆಗೂ ಊಟದ ವ್ಯವಸ್ಥೆಯು ಇರುತ್ತದೆ.
ಹಾಗಾಗಿ ಬಜೆಟ್ ನ ಪ್ರಕಾರ ಸುಮಾರು ಎರಡು ಕಡೆಯಿಂದಲೂ 400 ರೂಗಳು ಆಗಬಹುದು. ಇದರ ಜೊತೆಗೆ ಪ್ರಸಾದ ಎಂದಲ್ಲಿ ಇನ್ನು 50 ರುಗಳು ಆಗಬಹುದು. ಒಟ್ಟಲ್ಲಿ 450ಗಳು ನಮ್ಮ ಬಳಿ ಇದ್ದರೆ ಮಂತ್ರಾಲಯದಲ್ಲಿ ರಾಯರ ದರ್ಶನವನ್ನು ಸುಲಭವಾಗಿ ಮಾಡಬಹುದಾಗಿದೆ.