ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲ ರೈತರಿಗೆ ರಾಜ್ಯದ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ ರೈತರಿಂದ ಮತ್ತೆ ಹೊಸದಾಗಿ ಬಗರ್ ಹುಕುಂ ಅರ್ಜಿಯನ್ನು ಸಲ್ಲಿಸಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಇದರ ಬಗ್ಗೆ ರಾಜ್ಯದ ಕಂದಾಯ ಸಚಿವರಾದ ಆರ್ ಅಶೋಕ್ ಅವರು ರೈತರಿಗೆ ಬಂಪರ್ ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಸರ್ಕಾರಿ ಜಾಗದಲ್ಲಿ ಅಥವಾ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡಲು ಸ್ವಂತ ಜಮೀನು ಇಲ್ಲದೆ ಸರ್ಕಾರಿ ಆಸ್ತಿಯಲ್ಲಿ ಉಳುಮೆ ಮಾಡುತ್ತಿದ್ದು ಅದರಿಂದ ಜೀವನ ಸಾಗಿಸುತ್ತಿರುವಂತಹ ಬಡ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು ಜೊತೆಗೆ ನಿಮ್ಮ ಸ್ವಂತ ಆಸ್ತಿ ಇದ್ದರೂ. ತಾತ ಅಥವಾ ಮುತ್ತಾತನ ಹೆಸರಿನಲ್ಲಿ ಜಮೀನಿನ ಪಹಣಿಯಾಗಿದ್ದರೆ ಅದನ್ನು ನೇರವಾಗಿ ಪ್ರಸ್ತುತ ಉಳುಮೆ ಮಾಡುತ್ತಿರುವ ರೈತನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಸಾಕಷ್ಟು ದಾಖಲೆಗಳ ಅಗತ್ಯ ಇರುತ್ತದೆ.
ಜೊತೆಗೆ ಆಫೀಸ್ ನಿಂದ ಆಫೀಸ್ ಗೆ ಕಚೇರಿಗಳಿಂದ ಅಧಿಕಾರಿಗಳ ವರೆಗೆ ಅಲೆದಾಡಬೇಕಾದ ಸುತ್ತುವಂತಹ ಅಗತ್ಯಗಳು ಇರುತ್ತದೆ ಆದರೆ ಈ ವಿಷಯದ ಬಗ್ಗೆ ಹೆಚ್ಚು ಗಮನವನ್ನು ಹರಿಸಿದಂತಹ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಇಂದಿನ ಕಾಲ ಅಜ್ಜ ಅಜ್ಜಿಯರ ಜನನ ಪ್ರಮಾಣ ಪತ್ರ ಹಾಗೂ ಅವರ ಆಧಾರ್ ದಾಖಲೆ ಪತ್ರಗಳು ದೊರೆಯದೆ ಇರುವುದರ ಕಾರಣಕ್ಕಾಗಿ ಉಳುವವನೇ ಭೂಮಿಯ ಒಡೆಯ ಎನ್ನುವ ನಿಯಮಾನುಸಾರ ಪ್ರಸ್ತುತ ರೈತನ ಹೆಸರಿಗೆ ಜಮೀನನ್ನು ನೇರವಾಗಿ ವರ್ಗಾವಣೆ ಮಾಡಲು.
ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಜೊತೆಗೆ ಕಂದಾಯ ಸಚಿವರು ಬಗರ್ ಹುಕುಂ ಸಾಗುವಳಿಗಾಗಿ ಅರ್ಜಿಯನ್ನು ಹಾಕಲು ಬಯಸುವ ರೈತರಿಗೆ ದಿನಾಂಕವನ್ನು ಹೊರಡಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಪೌತಿ ಖಾತೆ ಚಾಲ್ತಿಯಲ್ಲಿದ್ದು ಹಿರಿಯರ ಆಸ್ತಿ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ತೊಂದರೆ ಅನುಭವಿಸುತ್ತಿರುವಂತಹ ರೈತರಿಗಾಗಿ ರಾಜ್ಯ ಸರ್ಕಾರದಿಂದ ಪೌತಿ ಖಾತೆ ಜಾರಿಗೆ ತರಲಾಗಿದೆ.
ಈ ಯೋಜನೆಯ ಅಡಿಯಲ್ಲಿ ನೇರವಾಗಿ ಉಳುವವನೇ ಈ ಭೂಮಿಯ ಒಡೆಯ ಎನ್ನುವ ಯೋಜನೆಯ ಮೂಲಕ ನೇರವಾಗಿ ಗ್ರಾಮ ಲೆಕ್ಕಾಧಿಕಾರಿಗಳು ಪ್ರಸ್ತುತ ರೈತನ ಎಲ್ಲ ದಾಖಲೆ ಪ್ರಮಾಣ ಪತ್ರಗಳನ್ನು ಪಡೆದು ಲಭ್ಯವಿರುವ ಇತರೆ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ನೇರವಾಗಿ ಈಗಿರುವ ರೈತರ ಹೆಸರಿಗೆ ವರ್ಗಾವಣೆ ಮಾಡಿಕೊಡಲಾಗುತ್ತದೆ. ಬಗರ್ ಹುಕುಂ ಅಡಿಯಲ್ಲಿ ಭೂಮಿಯನ್ನು ಉಳುಮೆ ಮಾಡುತ್ತಿರುವವರು.
ಭೂಮಿಯ ಮಾಲೀಕತ್ವವನ್ನು ಪಡೆಯಲು ಅರ್ಜಿ ಸಲ್ಲಿಸುವ ಅವಧಿ ಮುಗಿದಿದೆ ರಾಜ್ಯದಲ್ಲಿ ಹಲವು ಜನರು ಅರ್ಜಿ ಸಲ್ಲಿಸುವುದು ಬಾಕಿ ಇದೆ ಇದಕ್ಕೆ ಅವಕಾಶ ಮಾಡಿಕೊಡುವಂತೆ ಸಹೋದರ ಹಾಗೂ ಸಚಿವ ಶ್ರೀರಾಮುಲು ಅವರು ಮನವಿಯನ್ನು ಮಾಡಿದ್ದಾರೆ. ಅವರ ಮನವಿಗೆ ಸ್ಪಂದಿಸಿ ಬಗರ್ ಹುಕುಂ ಅರ್ಜಿಯನ್ನು ಒಂದು ವರ್ಷಗಳ ವರೆಗೆ ವಿಸ್ತರಿಸಲಾಗುವುದು ಈ ಕುರಿತು ಬರುವ ಅಧಿವೇಶನದಲ್ಲಿ ಕಾಯ್ದೆ ಮಂಡನೆ ಮಾಡಲಾಗುವುದು.
ಅರ್ಹ ಪ್ರತಿಯೊಬ್ಬರೂ ಅರ್ಜಿ ಸಲ್ಲಿಸುವಂತೆ ಕಂದಾಯ ಸಚಿವ ಆರ್ ಅಶೋಕ್ ಅವರು ಹೇಳಿದರು ಜನರಿಗೆ ಭೂಮಿ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಯಾವುದೇ ಹಣವನ್ನು ಕಟ್ಟಿಸಿಕೊಳ್ಳದೆ ಉಚಿತವಾಗಿ ಜಾಗದ ಹಕ್ಕು ನೀಡಿ ನೋಂದಣಿ ಮಾಡಿಕೊಡಲಾಗು ವುದು ಬಹುಜನರ ಮನೆಯಲ್ಲಿ ಹಿರಿಯರು ಆಸ್ತಿ ಹಕ್ಕು ಲಭಿಸದೆ ಜಮೀನು ಹಾಗೂ ಮನೆಗಳನ್ನು ಹಾಗೆ ಬಿಟ್ಟು ಸಾಯುವ ಪರಿಸ್ಥಿತಿ ಇತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.