ಎಲ್ಲಾ ವರ್ಗದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ-2023. ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ಕೊನೆ ದಿನಾಂಕ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 

WhatsApp Group Join Now
Telegram Group Join Now

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣ ಹಾಗೂ ಅವರನ್ನು ಆರ್ಥಿಕವಾಗಿ ಪ್ರಬಲರಾಗಿಸಿ ಸ್ವಾವಲಂಬಿಗಳನ್ನಾಗಿ ಮಾಡಲು ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇದೀಗ ಅದೇ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಉಚಿತ ಹೊಲಿಗೆ ಯಂತ್ರವನ್ನು ನೀಡುವ ಯೋಜನೆಗೆ ಅರ್ಹ ಮಹಿಳೆಯರಿಂದ ಅರ್ಜಿ ಹಾಕಲು ಕರೆ ನೀಡಿದೆ. ರಾಜ್ಯ ಸರ್ಕಾರವು ಬಡ ಮಹಿಳೆಯರನ್ನು ಉತ್ತೇಜಿಸಲು ಉಚಿತ ಹೊಲಿಗೆ ಯಂತ್ರಗಳನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.

ಟೈಲರಿಂಗ್ ನಲ್ಲಿ ಪ್ರತಿಭೆಯನ್ನು ಹೊಂದಿರುವಂತಹ ಅನೇಕ ಬಡ ಮಹಿಳೆಯರು ಇದ್ದು ಅವರಿಗೆ ಹೊಲಿಗೆ ಯಂತ್ರಗಳನ್ನು ಖರೀದಿಸುವ ಆರ್ಥಿಕ ಸಾಮರ್ಥ್ಯ ಇರುವುದಿಲ್ಲ ಅಂತಹ ಮಹಿಳೆಯರನ್ನು ಉತ್ತೇಜಿಸಲು ಸರ್ಕಾರವು ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸುವ ಮೂಲಕ ಬಡ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡುವಂತಹ ಉದ್ದೇಶವನ್ನು ಹೊಂದಿದೆ. ಈ ಯೋಜನೆಯು ಮಹಿಳೆಯರಿಗೆ ಮಾತ್ರ ಆಗಿದೆ.

ಈ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗ ಮತ್ತು ಕಾರ್ಮಿಕ ಮಹಿಳೆಯರಿಗೆ ಉದ್ಯೋಗ ಒದಗಿಸಲು ಹಾಗೂ ಮಹಿಳೆಯರನ್ನು ಸ್ವತಃ ಸಂಪಾದಿಸಲು ಮತ್ತು ಸ್ವತಂತ್ರರಾಗಲು ಪ್ರೇರೇಪಿಸುವ ಯೋಜನೆ ಆಗಿದ್ದು, ಮಹಿಳೆಯು ತಾನು ದುಡಿದು ಹಣ ಗಳಿಸಿದರೆ ಅವಳು ಸಹ ಸ್ವಾವಲಂಬಿ ಆಗುತ್ತಾಳೆ ಮತ್ತು ತನ್ನಷ್ಟಕ್ಕೆ ತಾನೇ ಬದುಕಬಲ್ಲಳು. ಇದಲ್ಲದೆ, ಮಹಿಳೆಯರು ಹೊರಗೆ ಕೆಲಸ ಮಾಡಲು ಸಾಧ್ಯವಿಲ್ಲ, ವೃತ್ತಿ ಜೀವನ ನಡೆಸಲು ಸಾಧ್ಯವಿಲ್ಲ ಅವರು ಮನೆಯ ಕೆಲಸವನ್ನು ಮಾತ್ರ ಮಾಡಬಹುದು ಎಂದು ಭಾವಿಸುವ ಸಂಕುಚಿತ ಚಿಂತನೆಯ ಜನರ ಮನಸ್ಥಿತಿಯನ್ನು ಸಹ ಇದು ಬದಲಾಯಿಸುತ್ತದೆ.

ಉಚಿತ ಹೊಲಿಗೆ ಪಡೆಯಲು ಇರಬೇಕಾದ ಅರ್ಹತೆಗಳು:

ಮೊದಲನೆಯದಾಗಿ, ಈ ಯೋಜನೆಯು ಮಹಿಳೆಯರಿಗೆ ಮಾತ್ರ ವಾಗಿದ್ದು, ಅರ್ಜಿದಾರರು ಖಾಯಂ ಕರ್ನಾಟಕದ ಪ್ರಜೆಯಾಗಿ ಇರಬೇಕು. ಅರ್ಹತಾ ಮಾನದಂಡಗಳ ಅಡಿಯಲ್ಲಿ ಬರುವ ಮಹಿಳೆಯರು ಮಾತ್ರ ಈ‌ ಯೋಜನೆಯ ಪ್ರಯೋಜನ ಪಡೆಯ ಬಹುದು. ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರು ಮಾತ್ರ ಈ ಯೋಜನೆಯಡಿ ಅರ್ಹರಾಗಿರುತ್ತಾರೆ. ಮಹಿಳಾ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹12,000 ಕ್ಕಿಂತ ಕಡಿಮೆ ಇರಬೇಕು.

ಮಹಿಳಾ ಅಭ್ಯರ್ಥಿಯು‌ ಬಡತನ ರೇಖೆಗಿಂತ ಕೆಳಗಿರಬೇಕು. ಮಹಿಳೆಯರು ದುಡಿಯುವ ವರ್ಗದಲ್ಲಿ ಸಮರ್ಥರಾಗಿಬೇಕು. ಈ ಯೋಜನೆಯಡಿಲ್ಲಿ ಮಹಿಳೆಯ ಕನಿಷ್ಠ ವಯಸ್ಸು 20 ಇರಬೇಕು ಹಾಗೂ ಗರಿಷ್ಠ ವಯಸ್ಸು 49. ಅಲ್ಲದೆ ಈ ಯೊಜನೆಯಡಿ ವಿಧವೆಯರು ಮತ್ತು ಅಂಗವಿಕಲ ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು.

ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಲ್ಲಿಸಬೇಕಾದ ಅಗತ್ಯ ದಾಖಲೆಗಳ ವಿವರ:
ಅಭ್ಯರ್ಥಿಯ ಆಧಾರ್ ಕಾರ್ಡ್ ನ ನಕಲು ಪ್ರತಿ, ಗುರುತಿನ ಚೀಟಿ, ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ ಛಾಯಾ ಪ್ರತಿ, ಜಾತಿ / ಸಮುದಾಯ ಪ್ರಮಾಣ ಪತ್ರ, ಅರ್ಜಿದಾರರ ಆದಾಯ ಪರಿಶೀಲನೆಗಾಗಿ ಆದಾಯ ಪ್ರಮಾಣ ಪತ್ರ, ಟೈಲರಿಂಗ್ ಮತ್ತು‌ ಕಟ್ಟಿಂಗ್ ಪ್ರಮಾಣ ಪತ್ರ, ಪಾಸ್ ಪೋರ್ಟ್ ಗಾತ್ರದ ಫೋಟೋ, ಮೊಬೈಲ್ ನಂಬರ, ಮಹಿಳೆಯು ಅಂಗವಿಕಲರಾಗಿದ್ದರೆ ಅಂಗವಿಕಲ ವೈದ್ಯಕೀಯ ಪ್ರಮಾಣಪತ್ರ, ಮಹಿಳೆ ವಿಧವೆಯಾಗಿದ್ದರೆ, ಆಕೆಯ ನಿರ್ಗತಿಕ ವಿಧವೆ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ಈ ಅರ್ಜಿಯನ್ನು ಆನ್ಲೈನ್ ನಲ್ಲಿಯೂ ಸಲ್ಲಿಸಬಹುದಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now