ನಿಮಗೆ ಕೊಟ್ಟಿರುವ ಚೆಕ್ ಬೌನ್ಸ್ ಆದ್ರೆ ಏನು ಮಾಡಬೇಕು.? ಪಾರ್ಟಿ ಇಂದ ಹಣ ವಸೂಲಿ ಹೇಗೆ ಮಾಡಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ಇತ್ತೀಚೆಗೆ ವಿವಿಧ ಕಾರಣಕ್ಕಾಗಿ ಮತ್ತೊಬ್ಬರಿಂದ ಚೆಕ್ ಪಡೆಯುವುದು ವಾಡಿಕೆಯಾಗಿ ಹೋಗಿದೆ. ಸ್ನೇಹಿತರಿಗೆ ಅಥವಾ ಕುಟುಂಬಸ್ಥರಿಗೆ ಸಾಲ ಕೊಟ್ಟ ಕಾರಣಕ್ಕಾಗಿ ಅವರಿಂದ ಅದರ ವಾಪಸಾತಿಗೆ ಅಥವಾ ಶ್ಯೂರಿಟಿ ಕಾರಣಕ್ಕಾಗಿ ಚೆಕ್ ಪಡೆದಿರುತ್ತೇವೆ. ನಮ್ಮ ವ್ಯಾಪಾರ ವ್ಯವಹಾರ ಸಂಬಂಧಿತ ಕಾರಣಕ್ಕಾಗಿ ಕೂಡ ಚೆಕ್ ಪಡೆದಿರುತ್ತೇವೆ ಒಂದು ವೇಳೆ ನಮಗೆ ಬರಬೇಕಾದ ಹಣವನ್ನು ಕೂಡ ಚೆಕ್ ಕೊಟ್ಟು ಪಾವತಿ ಮಾಡಿರುತ್ತಾರೆ.

ಯಾವುದೇ ಚೆಕ್ ಕೊಟ್ಟಾಗ ಕೂಡ ಅದನ್ನು ವಿತ್ ಡ್ರಾ ಮಾಡಲು ಚೆಕ್ ಬರೆದ ದಿನದಿಂದ ಮೂರು ತಿಂಗಳವರೆಗೆ ಕಾಲಾವಕಾಶ ಇರುತ್ತದೆ. ಅಷ್ಟರ ಒಳಗೆ ಅದನ್ನು ಪಡೆದ ವ್ಯಕ್ತಿ ಬ್ಯಾಂಕಿಗೆ ಹಾಕಿ ಹಣ ಪಡೆದುಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿ ಚೆಕ್ ಕೊಟ್ಟು ಯಾಮಯಿಸುವವರು ಹೆಚ್ಚು, ಇಂತಹ ಚೆಕ್ ಬೌನ್ಸ್ ಪ್ರಕರಣಗಳನ್ನು ನಾವು ಹೆಚ್ಚು ಹೆಚ್ಚಾಗಿ ಕೇಳುತ್ತಿದ್ದೇವೆ.

ಸಾಮಾನ್ಯವಾಗಿ ಈ ರೀತಿ ಚೆಕ್ ಬೌನ್ಸ್ ಆದ ಸಮಯದಲ್ಲಿ ಅವರ ಮೇಲೆ ಕೇಸ್ ಹಾಕಬೇಕು ಎಂದು ಹೆಚ್ಚಿನವರು ಊಹಿಸಿಕೊಂಡಿರುತ್ತಾರೆ. ಆದರೆ ಅದನ್ನು ಮಾಡುವ ಮುನ್ನ ನೀವು ಸಹ ಕೆಲ ಕೆಲಸಗಳನ್ನು ಮಾಡಿರಬೇಕು. ಇಲ್ಲವಾದಲ್ಲಿ ನೆಗೋಷಿಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಕೆಳಗಡೆ ಈ ಚೆಕ್ ಬೌನ್ಸ್ ಪ್ರಕರಣದ ಬಗ್ಗೆ ಯಾವುದೇ ಆಕ್ಷನ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಚೆಕ್ ಬೌನ್ಸ್ ಆದ ಸಮಯದಲ್ಲಿ ಮೊದಲಿಗೆ ಈ ರೀತಿ ಮಾಡಿ.

ನಿಮಗೆ ಯಾವುದೇ ಚೆಕ್ ಬಂದಿದ್ದರು ಕೂಡ ನೀವು ಅದನ್ನು ಬ್ಯಾಂಕಿಗೆ ಹೋಗಿ ಹಾನರ್ ಮಾಡಿದ ಡೇಟ್ ಮುಖ್ಯ ಒಂದು ವೇಳೆ ಬ್ಯಾಂಕಿನವರು ಅದು ಡಿಸ್ ಹಾನರ್ ಆಗಿದೆ ಎಂದು ಹೇಳಿದಾಗ ಅದು ಯಾವ ಕಾರಣಕ್ಕೆ ಎನ್ನುವುದನ್ನು ಸಹ ತಿಳಿದುಕೊಳ್ಳಿ. ಬ್ಯಾಂಕಿನಲ್ಲಿ ಯಾವ ಕಾರಣ ಕೊಟ್ಟಿದ್ದರು ಕಾರಣವನ್ನು ಹೇಳಿ ನಿಮ್ಮ ಅಡ್ವೋಕೇಟ್ ಕಡೆಯಿಂದ ವ್ಯಕ್ತಿ ವಿಳಾಸಕ್ಕೆ ಒಂದು ನೋಟೀಸ್ ಕಳುಹಿಸಬೇಕು.

ಅದರಲ್ಲಿ ವಿವರವಾಗಿ ಅವರು ಕೊಟ್ಟಿದ್ದ ಚೆಕ್ ಬ್ಯಾಂಕ್ ಅಲ್ಲಿ ಡಿಸ್ ಹಾನರ್ ಮಾಡಿದ ದಿನ ಮತ್ತು ಅದು ಡಿಸ್ ಹಾನರ್ ಆಗಿರುವುದಕ್ಕೆ ಬ್ಯಾಂಕ್ ಸಿಬ್ಬಂದಿ ಕೊಟ್ಟ ಕಾರಣ ಇತ್ಯಾದಿಗಳನ್ನು ಬರೆದು ಆ ನೋಟಿಸ್ ಗೆ ಉತ್ತರ ಕೊಡಬೇಕು ಮತ್ತು ಇಂತಿಷ್ಟು ದಿನದೊಳಗೆ ಹಣ ಕೊಡಬೇಕು ಎನ್ನುವುದರ ಕುರಿತು ಕೂಡ ಮಾಹಿತಿ ತಿಳಿಸಿ ಅವರ ಅಡ್ರೆಸ್ಗೆ ಕಳುಹಿಸಬೇಕು.

ಈ ರೀತಿ ಅವರ ವಿಳಾಸಕ್ಕೆ ನೀವು ನೋಟಿಸ್ ಕಳಿಸುವ ಸಮಯದಲ್ಲಿ ಮತ್ತೊಂದು ವಿಷಯವನ್ನು ಗಮನದಲ್ಲಿಡಿ. ಆ ನೋಟಿಸ್ ಹೋಗಿ ಅವರ ವ್ಯಕ್ತಿಯ ಕೈ ಸೇರುವಂತೆ ನೀವು ಆ ನೋಟಿಸ್ ಕಳಿಸಬೇಕು. ಒಂದು ವೇಳೆ ಯಾವುದು ಹಳೆ ಅಡ್ರೆಸಿಗೆ ಅಥವಾ ತಪ್ಪಾದ ಅಡ್ರೆಸಿಗೆ ಕಳುಹಿಸಿದರೆ ಅವರಿಗೆ ಆ ಮಾಹಿತಿ ತಲುಪದೆ ಇದ್ದಾಗ ಅವರು ತಮಗೆ ನೋಟಿಸ್ ತಲುಪಿಲ್ಲ ಎಂದು ಡಿಲೆ ಮಾಡಬಹುದು.

ನೀವು ನಿಮ್ಮ ನೋಟಿಸ್ ಅಲ್ಲಿ ತಿಳಿಸಿದ ಅವಧಿ ಒಳಗೆ ಅವರು ಪ್ರತಿಕ್ರಿಯೆ ನೀಡಿಲ್ಲದಿದ್ದರೆ ನಂತರ 30 ದಿನದ ಒಳಗೆ ನೀವು ಸೆಕ್ಷನ್ 138 ಪ್ರಕಾರ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿ ನ್ಯಾಯ ಪಡೆಯಬಹುದು. ಈ ಅವಧಿಯಲ್ಲಿ ಸಮಯ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಚೆಕ್ ಡಿಸ್ ಹಾನರ್ ಅದ ಸಮಯ ನಂತರ ಅವರಿಗೆ ನೋಟಿಸ್ ಕೊಟ್ಟ ಅವಧಿ ನೋಟಿಸ್ ಅಲ್ಲಿ ತಿಳಿಸಿದ ಸಮಯ ಇತ್ಯಾದಿ ವಿವರಗಳು ಮುಖ್ಯವಾಗುತ್ತದೆ. ಎಲ್ಲ ಸರಿಯಾಗಿದ್ದ ಪಕ್ಷದಲ್ಲಿ ನ್ಯಾಯಾಲಯದಲ್ಲಿ ನಿಮಗೆ ನ್ಯಾಯ ಸಿಗಲಿದೆ. ಈ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now