ಹೆಣ್ಣು ಮಕ್ಕಳಿಗೆ ಮದುವೆ ಸಮಯದಲ್ಲಿ ಖರ್ಚು ಮಾಡಿದ್ದು & ವರದಕ್ಷಿಣೆ ರೂಪದಲ್ಲಿ ನೀಡಿದ್ದನ್ನು ಆಸ್ತಿ ಭಾಗ ಮಾಡುವಾಗ ಸೇರಿಸಬಹುದಾ.?

 

WhatsApp Group Join Now
Telegram Group Join Now

ಹಿಂದೂ ಉತ್ತರಾಧಿಕಾರದ ಕಾಯ್ದೆಯಲ್ಲಿ ಒಂದು ಮಹತ್ತರದ ಸಂವಿಧಾನ ತಿದ್ದುಪಡಿಯು 2005ರಲ್ಲಿ ನಡೆಯಿತು. ಅದೇನೆಂದರೆ ಪಿತ್ರಾರ್ಜಿತವಾಗಿ ಬಂದ ತಂದೆ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳೂ ಕೂಡ ಅಧಿಕಾರ ಹೊಂದಿದ್ದಾರೆ, ಆಸ್ತಿ ವಿಭಜನೆಯ ಸಮಯದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಆಸ್ತಿ ಸಮಾನವಾಗಿ ವಿಭಾಗ ಆಗಬೇಕು ಎನ್ನುವ ತೀರ್ಪನ್ನು ಸಂವಿಧಾನ ಎತ್ತಿ ಹಿಡಿಯಿತು.

ಆ ಬಳಿಕ ಭಾರತದಾದ್ಯಂತ ಕುಟುಂಬಗಳ ನಡುವೆ ಸಾಕಷ್ಟು ಮನಸ್ತಾಪಗಳು ಎದುರಾದವು, ಪ್ರತಿ ಕುಟುಂಬದಲ್ಲೂ ಕೂಡ ಹೆಣ್ಣು ಮಕ್ಕಳು ಆಸ್ತಿ ಕೇಳಲು ತಂದೆಯ ಮನೆಗೆ ಹಿಂತಿರುಗುವುದು, ಭಾಗ ಕೇಳುವುದು, ಈ ಪರವಾಗಿ ನ್ಯಾಯಾಲಯಗಳಲ್ಲಿ ದಾವೆ ಊಡುವುದು ಇಂತಹ ಪ್ರಕರಣಗಳು ಹೆಚ್ಚಾದವು. ಅಂತೆಯೇ ಕೆಲ ಬಿಕ್ಕಟಿನ ಸಂದರ್ಭಗಳು ಕೂಡ ಉಂಟಾದವು.

ಯಾಕೆಂದರೆ ಈಗಾಗಲೇ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಮದುವೆಗಾಗಿ ಸಾಕಷ್ಟು ಖರ್ಚು ಮಾಡಲಾಗಿರುತ್ತದೆ. ಮಾತ್ರವಲ್ಲದೆ ಹೆಣ್ಣು ಮಕ್ಕಳಿಗೆ ಅದ್ದೂರಿ ಖರ್ಚಿನಲ್ಲಿ ಮದುವೆ ಮಾಡಿ ಕಳಿಸುವುದು ಮಾತ್ರವಲ್ಲದೆ ನಂತರದ ಜವಾಬ್ದಾರಿಗಳನ್ನು ಕೂಡ ಮಾಡಲಾಗಿರುತ್ತದೆ ಮತ್ತು ವಿವಾಹದ ಸಂದರ್ಭದಲ್ಲಿಯೇ ಉಡುಗೊರೆ ರೂಪದಲ್ಲಿ ಅಥವಾ ವರದಕ್ಷಿಣೆ ರೂಪದಲ್ಲಿ ಸಾಕಷ್ಟು ಆಸ್ತಿಗಳನ್ನು ಕೂಡ ಕೊಟ್ಟಿರಲಾಗುತ್ತದೆ.

ಅಂತಹ ಪ್ರಕರಣಗಳಲ್ಲೂ ಕೂಡ ಹೆಣ್ಣು ಮಕ್ಕಳು ಮತ್ತೆ ಆಸ್ತಿಗಾಗಿ ನ್ಯಾಯಗಳಲ್ಲಿ ದಾವೆ ಹೂಡುತ್ತಿದ್ದರೆ ಇಂತಹ ಸಮಯದಲ್ಲಿ ನ್ಯಾಯದ ತೀರ್ಪು ಏನಿರುತ್ತದೆ ಎನ್ನುವುದು ಅನೇಕರ ಪ್ರಶ್ನೆ. ಇಷ್ಟೆಲ್ಲಾ ಆಗಿದ್ದರೂ ಕೂಡ ಹೆಣ್ಣು ಮಕ್ಕಳು ಆಸ್ತಿಗೆ ಭಾಗ ಕೇಳಿದರೆ ಮತ್ತೆ ಆಸ್ತಿ ವಿಭಾಗ ಆಗುವ ಸಂದರ್ಭದಲ್ಲಿ ಅವರಿಗೆ ಭಾಗ ಕೊಡಬೇಕಾ ಎನ್ನುವ ಗೊಂದಲಗಳಿರುತ್ತದೆ ಆದರೆ ಕಾನೂನು ಇದರ ಪರವಾಗಿ ಏನು ಹೇಳುತ್ತದೆ ಎನ್ನುವ ಮಾಹಿತಿ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಲ್ಲಿ ಇಂಥಹದೇ ಒಂದು ಪ್ರಕರಣ ದಾಖಲಾಗಿತ್ತು. ಒಬ್ಬ ಸಹೋದರಿಯು ತನ್ನ ತಂದೆಯ ಆಸ್ತಿಯ ಭಾಗವನ್ನು ಕೋರಿ ಕೋರ್ಟ್ ಅಲ್ಲಿ ಧಾವೆ ಹೂಡಿದ್ದರು. ಆದರೆ ಸಹೋದರ ಮತ್ತು ತಂದೆ ಆಕೆಗೆ ವರದಕ್ಷಿಣೆ ರೂಪದಲ್ಲಿ ಮದುವೆ ಆದ ಸಂದರ್ಭದಲ್ಲಿಯೇ ಆಸ್ತಿಯನ್ನು ಭಾಗವಾಗಿ ನೀಡಿದ್ದರು. ಆದರೆ ಆ ಮಹಿಳೆಯು ಅದೆಲ್ಲ ತನ್ನ ತಂದೆ ಮತ್ತು ಗಂಡ ಸಂಪಾದನೆ ಮಾಡಿರುವ ಆಸ್ತಿ, ತಂದೆಯ ಕಡೆಯಿಂದ ತನಗೆ ಸಿಕ್ಕಿಲ್ಲ ಎಂದು ವಾದ ಮಾಡಿದ್ದರು.

ಸಿಟಿ ಸಿವಿಲ್ ಕೋರ್ಟ್ ಕೊಟ್ಟ ತೀರ್ಪು ಒಪ್ಪದೇ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಕೂಡ ಸಲ್ಲಿಸಿ ತಂದೆ ಆಸ್ತಿಯಲ್ಲಿ ಸಮಾನ ಪಾಲು ಕೇಳಿದ್ದರು. ಆದರೆ ಸಹೋದರನ ಪರವಾಗಿ ವಾದ ಮಾಡಿದ ವಕೀಲರು ಸಾಕ್ಷಿ ಸಮೇತ ಸಹೋದರ ಈಗಾಗಲೇ ಆಕೆಗೆ ಸಲ್ಲಬೇಕಾದ ಆಸ್ತಿಯನ್ನು ವರದಕ್ಷಿಣೆ ರೂಪದಲ್ಲಿ ಆಕೆ ಮದುವೆ ಸಂದರ್ಭದಲ್ಲಿಯೇ ನೀಡಿಯಾಗಿದೆ ಎನ್ನುವುದನ್ನು ಸಾಬೀತು ಮಾಡಿದರು.

ಹೈಕೋರ್ಟ್ ನ ಏಕ ಸದಸ್ಯಪೀಠ ಅಂದು ಸ್ಪಷ್ಟವಾಗಿ ಈ ವಿಚಾರ ತಿಳಿಸಿತು. ಈಗಾಗಲೇ ಮದುವೆ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ವರದಕ್ಷಿಣೆ ರೂಪದಲ್ಲಿ ಅಥವಾ ಉಡುಗೊರೆಯ ರೂಪದಲ್ಲಿ ಆಸ್ತಿ ಕೊಟ್ಟಿದ್ದರೆ, ಹೆಣ್ಣು ಮಕ್ಕಳು ಮತ್ತೆ ಆಸ್ತಿ ವಿಭಾಗ ಮಾಡುವ ಸಮಯದಲ್ಲಿ ಭಾಗ ಕೇಳಿದರೆ ಈಗಾಗಲೇ ನೀಡಲಾಗಿದ್ದ ಆ ಆಸ್ತಿಯನ್ನು ಕೂಡ ಒಟ್ಟಾರೆ ಆಸ್ತಿಯಾಗಿ ಸೇರಿಸಿಕೊಳ್ಳಬೇಕು.

ಒಂದು ವೇಳೆ ಆಕೆ ಏನಾದರೂ ಅದನ್ನು ತನ್ನ ಸ್ವಂತ ಸಂಪಾದನೆಯಿಂದ ಗಳಿಸಿದ್ದರೆ ಇದು ಅನ್ವಯವಾಗುವುದಿಲ್ಲ. ಇಲ್ಲವಾದಲ್ಲಿ ಅದು ಅವಿಭಕ್ತ ಕುಟುಂಬಕ್ಕೆ ಸೇರಿದ ಒಟ್ಟಾರೆ ಆಸ್ತಿ ಆಗಿರುತ್ತದೆ. ವಿಭಾಗ ಮಾಡುವ ಸಂದರ್ಭದಲ್ಲಿ ಅದನ್ನು ಸಹ ಸೇರಿಸಿ ಮತ್ತೆ ಆಸ್ತಿ ಭಾಗ ಮಾಡಿಕೊಳ್ಳಬೇಕು ಎಂದು ಹೇಳಿತು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now