ಒಬ್ಬ ಮನುಷ್ಯನಿಗೆ ಮನೆ ಎನ್ನುವುದು ಅವನ ಮೂಲಭೂತ ಅವಶ್ಯಕತೆ. ಹಾಗೆ ಒಬ್ಬ ರೈತನಿಗೆ ಕೃಷಿ ಭೂಮಿ ಎನ್ನುವುದು ಕೂಡ ಅದೇ ರೀತಿ ಅವನ ಮೂಲಭೂತ ಅವಶ್ಯಕತೆ. ಆದರೆ ಎಲ್ಲಾ ರೈತರಿಗೂ ಹಾಗೂ ಎಲ್ಲಾ ನಾಗರಿಕರಿಗೂ ಈ ವ್ಯವಸ್ಥೆ ಸಿಕ್ಕಿರುವುದಿಲ್ಲ. ಇನ್ನೂ ಸಹ ನಾವು ಹೋಗುವ ರಸ್ತೆಯಲ್ಲಿ ಹಳ್ಳಿಗಳಾಗಲಿ ಪಟ್ಟಣ ಪ್ರದೇಶದಲ್ಲೂ ರಸ್ತೆಯ ಪಕ್ಕದಲ್ಲಿ ಶೆಡ್ ಗಳಲ್ಲಿ ವಾಸಿಸುತ್ತಿರುವ ಎಷ್ಟೌ ಮಂದಿಯನ್ನು ಕಾಣುತ್ತೇವೆ.
ಇನ್ನು ಕೆಲವರು ವಾಸಿಸಲು ಜಾಗ ಇರದ ಕಾರಣ ಯಾರೋ ತೋರಿಸಿದ ಜಾಗದಲ್ಲಿ ಅಥವಾ ಯಾರು ಇಲ್ಲದ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದರು. ಆದರೆ ಇವು ಸಕ್ರಮ ಆಸ್ತಿಗಳಾಗಿರುವುದಿಲ್ಲ. ಯಾವಾಗ ಯಾವ ರೀತಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆಯೋ ಎಂದು ದಿನ ಭಯದಲ್ಲಿ ಬದುಕುವಂತೆ ಆಗಿರುತ್ತದೆ. ಇನ್ನು ಕೃಷಿ ಭೂಮಿಕರ ಪಾಲಿಗಂತೂ ಅದಕ್ಕಿಂತ ಹೆಚ್ಚಿನದೇ ಸಂಕಷ್ಟ.
ಯಾಕೆಂದರೆ ಸರ್ಕಾರದಿಂದ ಸಿಗುತ್ತಿದ್ದ ಯಾವುದೇ ಸಬ್ಸಿಡಿ ಲೋನ್ ಆಗಲಿ ಅಥವಾ ಬೆಳೆ ಪರಿಹಾರ ಹಣವೆ ಆಗಲಿ ಅಥವಾ ಕಿಸಾನ್ ಸಮ್ಮಾನ್ ಇನ್ನಿತರ ಯೋಜನೆಗಳ ಸಹಾಯಧನವಾಗಲಿ ಈ ರೀತಿ ಅಕ್ರಮ ಭೂಮಿಗಳಿಗೆ ಸಿಗುತ್ತಿರಲಿಲ್ಲ. ಹಾಗಾಗಿ ಇದೆಲ್ಲ ಒಂದು ಕಗ್ಗಂಟಾಗಿ ಎಲ್ಲರನ್ನು ಕಾಡುತ್ತಿತ್ತು. ಒಂದೇ ಬಾರಿಗೆ ಎಲ್ಲರನ್ನೂ ಅಕ್ರಮ ಜಾಗದಿಂದ ಖಾಲಿ ಮಾಡಿಸುವುದು ಕೂಡ ಸುಲಭದ ಮಾತಲ್ಲ.
ಯಾಕೆಂದರೆ ಇದರಲ್ಲಿ ಎಲ್ಲರೂ ಸಹ ದುರಾಸೆಯಿಂದ ಅಕ್ರಮ ಮಾಡಿಕೊಂಡವರಾಗಿರುವುದಿಲ್ಲ. ಎಷ್ಟೋ ಜನರಿಗೆ ಅವರ ಜೀವನ ಸಾಗಿಸಲು ಇರುವ ಚಿಕ್ಕ ನೆಲೆಯು ಅದಾಗಿರುತ್ತದೆ, ಹೀಗಾಗಿ ಕಣ್ಣು ಮುಚ್ಚಿಕೊಂಡು ಅವರ ಮೇಲೆ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಇಂತಹ ಸಮಸ್ಯೆಗಳನ್ನೆಲ್ಲ ಮನೆ ಗಂಡ ಸರ್ಕಾರವು ಅಕ್ರಮವನ್ನು ಸಕ್ರಮವಾಗಿಸುವ ಒಂದು ಹೊಸ ಯೋಜನೆಯನ್ನು ತಂದಿದೆ. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ನೀವು ಈಗ ನಿಮ್ಮ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಬಹುದು.
ಇದಕ್ಕಾಗಿ ಖಂಡಿತವಾಗಿ ಕೆಲವು ಅಗತ್ಯ ದಾಖಲೆಗಳು ಬೇಕೇ ಬೇಕು. ಮುಖ್ಯವಾಗಿ ಯಾರು ಸಕ್ರಮ ಮಾಡಿಕೊಳ್ಳಲು ಬಳಸುತ್ತಿದ್ದಾರೋ, ಅಕ್ರಮ ಜಮೀನು ಅಥವಾ ಅಕ್ರಮ ಮನೆಯಲ್ಲಿ ಯಾರು ವಾಸಿಸುತ್ತಿದ್ದಾರೋ ಅವರ ಆಧಾರ್ ಕಾರ್ಡ್ ಬೇಕು. ಇದರೊಂದಿಗೆ ಮನೆ ಅಥವಾ ಜಮೀನಿನ ನಕ್ಷೆ, ಮನೆಯ ಫೋಟೋ ಮನೆ ಕಚ್ಚಾ ಆಗಿರಲಿ ಅಥವಾ ಪಕ್ಕಾ ಮನೆ ಆಗಿರಲಿ ಇದರ ಫೋಟೋ ಖಂಡಿತ ಬೇಕು.
ಜೊತೆಗೆ ಮನೆ ಕಂದಾಯವನ್ನು ಕಟ್ಟಿದ ರಶೀದಿ ಬೇಕು, ನೀವು ಇದನ್ನು ಗ್ರಾಮ ಸಭೆ ಅಥವಾ ನಗರ ಸಭೆಗಳಲ್ಲಿ ಪಡೆಯಬಹುದು. ನೀವು ಇದುವರೆಗೆ ಆ ಮನೆಗೆ ಕಂದಾಯ ಕಟ್ಟಿಕೊಂಡು ಬಂದಿದ್ದರೆ ಅದು ಒಂದು ಪ್ರಮುಖ ದಾಖಲೆಯಾಗಿ ಇಲ್ಲಿ ಕೆಲಸ ಮಾಡುತ್ತದೆ ಮತ್ತು ಅಪರಿಚಿತಯಿಂದ ಮಾಡಿಸಿದ ಪಂಚನಾಮೆ ಸಹಿ ಸಹ ಬೇಕು ಇದೆಲ್ಲದರ ಜೊತೆಗೆ ನೀವು ನಿಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸಿಗುವ ನಮೂನೆ ಫಾರಂ ಗಳನ್ನು ಕೂಡ ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ರೆಡಿ ಮಾಡಿಕೊಂಡು ಲಗತ್ತಿಸಿ ಹತ್ತಿರದಲ್ಲಿರುವ ನೆಮ್ಮದಿ ಕೇಂದ್ರಕ್ಕೆ ಸಲ್ಲಿಸಬೇಕು.
ನಂತರ ಅವರು ಕೊಡುವ ಅಕ್ನೋಲೆಜ್ಮೆಂಟ್ ಪ್ರತಿಯನ್ನು ತಪ್ಪದೆ ಸ್ವೀಕರಿಸಬೇಕು. ಅದನ್ನು ಸಂಬಂಧ ಪಟ್ಟ ಅಧಿಕಾರಿಗಳು ವಿಲೇಜ್ ಅಕೌಂಟೆಂಟ್ ಬಳಿ ಸ್ಥಳ ಪರಿಶೀಲನೆಗಾಗಿ ಕಳಿಸುತ್ತಾರೆ. ನಂತರ ಕಂದಾಯ ಅಧಿಕಾರಿಗಳು ಹಾಗೂ ಶಾನುಭೋಗರು ಬಂದು ಸ್ಥಳ ಪರಿಶೀಲನೆ ಮಾಡಿ ಪಂಚನಾಮೆ ಸಹಿ ಹಾಕಿದವರ ಮತ್ತು ಅರ್ಜಿದಾರರ ಸಮ್ಮುಖದಲ್ಲಿ ನಕ್ಷೆ ಸಿದ್ಧಪಡಿಸುತ್ತಾರೆ ಈ ರೀತಿ ಎಲ್ಲಾ ಪ್ರಕ್ರಿಯೆಗಳು ಕ್ರಮವಾಗಿ ನಡೆದರೆ ನಿಮ್ಮ ಅಕ್ರಮ ಆಸ್ತಿ ಸಕ್ರಮ ಆಗುತ್ತದೆ. ಆ ಬಳಿಕ ಸರ್ಕಾರವು ಅವುಗಳಿಗೆ ಕೆಲವು ನಿಯಮಗಳನ್ನು ಹಾಕಿದೆ ಅದನ್ನು ಕೂಡ ತಪ್ಪದೆ ಪಾಲಿಸಬೇಕು.