ಈ ಗಿಡದ ಒಂದು ಎಲೆ ತಿಂದ್ರೆ ಸಾಕು ಕಿಡ್ನಿ ಸ್ಟೋನ್ 3 ದಿನದಲ್ಲಿ ಮಾಯವಾಗುತ್ತದೆ.!

ಕಾಡು ಬಸಳೆ ಸೊಪ್ಪನ್ನು ಸಾಮಾನ್ಯವಾಗಿ ಎಲ್ಲರೂ ಸಹ ನೋಡಿರುತ್ತಾರೆ. ಈ ಗಿಡದ ಇಂಗ್ಲಿಷ್ ಹೆಸರು ಬ್ರಿಯೋ ಫಿಲಂ. ಇದು ನಮ್ಮ ಮನೆಯ ಹಿತ್ತಲಲ್ಲಿ ವಿಸ್ತಾರವಾಗಿ ಹರಡಿಕೊಂಡಿರುತ್ತದೆ. ಕಡಿಮೆ ನೀರು ಇರುವ ಜಾಗದಲ್ಲಿ ಕೂಡ ಬೆಳೆಯುವ ಸಸ್ಯ ಇದಾಗಿದೆ, ಈ ಗಿಡ ಬೆಳೆಯುವುದಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಕಾಂಡ ಬಹಳ ತೆಳುವಾಗಿದ್ದು, ಗಿಡದ ತುಂಬೆಲ್ಲಾ ಎಲೆಗಳು ತುಂಬಿಕೊಂಡಿರುತ್ತದೆ.

WhatsApp Group Join Now
Telegram Group Join Now

ಈ ಗಿಡದ ಶಕ್ತಿಯೇ ಎಲೆಗಳು ಎನ್ನಬಹುದು. ಯಾಕೆಂದರೆ ಒಂದು ಎಲೆ 20ರಿಂದ 30 ಗಿಡಗಳ ಹುಟ್ಟಿಗೆ ಕಾರಣವಾಗಿರುತ್ತದೆ. ದಟ್ಟವಾದ ಹಸಿರು ಬಣ್ಣ ಹೊಂದಿರುವ ಅಗಲವಾದ ಈ ಎಲೆಗಳು ಹೆಚ್ಚು ರಸವನ್ನು ಹೊಂದಿರುತ್ತದೆ ಒಂದು ಎಲೆ ಹಿಂಡಿದರೆ ಮೂರರಿಂದ ನಾಲ್ಕು ಚಮಚಗಳಷ್ಟು ರಸವನ್ನು ತೆಗೆಯಬಹುದು.

ಆಯುರ್ವೇದದಲ್ಲಿ ಕಾಡು ಬಸಳೆ ಸೊಪ್ಪಿಗೆ ಬಹಳ ಮಹತ್ವವಾದ ಸ್ಥಾನ ಇದೆ. ಹಲವು ಔಷಧಿಯ ಗುಣಗಳನ್ನು ಹೊಂದಿರುವ ಕಾರಣ ಇದನ್ನು ಔಷಧಿ ಗಿಡಗಳ ರಾಜ ಎಂದು ಕೂಡ ಕರೆಯುತ್ತಾರೆ. ಈ ಕಾಡು ಬಸಳೆ ಸೊಪ್ಪಿಗೆ ಕಿಡ್ನಿ ಕಲ್ಲನ್ನು ಕರಗಿಸುವ ಶಕ್ತಿ ಇದೆ. ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಶಸ್ತ್ರಚಿಕಿತ್ಸೆಗೆ ಹೆದರುತ್ತಿದ್ದರೆ ಯಾವುದೇ ಚಿಕಿತ್ಸೆ ಇಲ್ಲದೆ ಯಾವುದೇ ಅಡ್ಡ ಪರಿಣಾಮಗಳು ಕೂಡ ಇಲ್ಲದೆ ಈ ಸೊಪ್ಪನ್ನು ಸರಿಯಾದ ವಿಧಾನದಲ್ಲಿ ಸೇವಿಸುವುದರಿಂದ ಪರಿಹಾರ ಮಾಡಿಕೊಳ್ಳಬಹುದು.

ಸ್ವಲ್ಪ ಹುಳಿ ಸ್ವಲ್ಪ ಒಗರು ರುಚಿಯನ್ನು ಹೊಂದಿರುವ ಈ ಎಲೆಗಳನ್ನು 15 ದಿನಗಳವರೆಗೆ ಎರಡು ದಿನಕ್ಕೊಮ್ಮೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಮಾಯವಾಗುತ್ತದೆ. ಕಿಡ್ನಿಯಲ್ಲಿರುವ ಕಲ್ಮಶಗಳು ಕೂಡ ಕರಗಿ ಆಚೆ ಬರುತ್ತದೆ. ಇನ್ನೊಂದು ವಿಧಾನದಲ್ಲೂ ಕೂಡ ಈ ಎಲೆಗಳನ್ನು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಇರುವವರು ಸೇವಿಸಬಹುದು.

ಇದನ್ನು ಕಷಾಯದ ರೀತಿ ಮಾಡಿಕೊಂಡು ಕುಡಿಯಬಹುದು. ಅಂದರೆ ಒಂದು ಲೋಟ ನೀರಿಗೆ ಎರಡರಿಂದ ಮೂರು ಕಾಡುಬಸಳೆ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಅದನ್ನು ಶೋಧಿಸಿಕೊಂಡು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ದಿನಕ್ಕೊಂದು ಸೇವಿಸುತ್ತಾ ಬಂದರೆ 10 ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಪರಿಹಾರ ಆಗಿ ಬಿಡುತ್ತದೆ.

ಆದರೆ ಈ ರೀತಿ ಕಾಡು ಬಸಳೇಸೊಪ್ಪನ್ನು ಔಷಧಿಯಾಗಿ ಸೇವಿಸುವಷ್ಟು ದಿನ ಯಾವುದೇ ರೀತಿಯ ಹಾಲು, ಮೊಸರು, ತುಪ್ಪ ಈ ರೀತಿಯ ಹಾಲಿನ ಉತ್ಪನ್ನಗಳನ್ನು ಸೇವಿಸಬಾರದು. ಈ ಉತ್ಪನ್ನಗಳ ಪಥ್ಯೆ ಇದ್ದರೆ ಸಾಕು ಕಾಡುಬಸಳೆ ಸೊಪ್ಪು ತನ್ನ ಪ್ರಭಾವವನ್ನು ಬೀರಿ ದೇಹದ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ಮಾತ್ರ ಅಲ್ಲದೆ PCOD ಸಮಸ್ಯೆ, ಹೈಪರ್ ಟೆನ್ಶನ್, ಅಸಿಡಿಟಿ, ಅಲರ್ಜಿಯನ್ನೂ ಕೂಡ ಇದು ಪರಿಹಾರ ಮಾಡುತ್ತದೆ. ಇದರ ರಸವನ್ನು ಹಣೆಗೆ ಹಚ್ಚಿಕೊಂಡರೆ ತಲೆನೋವು ಶೀಘ್ರವಾಗಿ ಕಡಿಮೆ ಆಗುತ್ತದೆ.

ಶುಗರ್, ಕೊಲೆಸ್ಟ್ರಾಲ್,  ಹೊಟ್ಟೆಯ ಬೊಜ್ಜು, ಕಣ್ಣಿನ ಸಮಸ್ಯೆ, ಹೃದಯದ ಸಮಸ್ಯೆ ಎಲ್ಲವನ್ನು ಕೂಡ ನಿವಾರಣೆ ಮಾಡುವ ಶಕ್ತಿ ಈ ಕಾಡು ಬಸಳೇ ಸೊಪ್ಪಿಗಿದೆ. ದೇಹದ ಸುಸ್ತು ಆಯಾಸವನ್ನೆಲ್ಲ ಕಡಿಮೆ ಮಾಡಿ ದೇಹಕ್ಕೆ ಹೊಸ ಚೈತನ್ಯವನ್ನು ಕೂಡ ತುಂಬುತ್ತದೆ. ಇದನ್ನು ಚಟ್ನಿ ಮಾಡಿಕೊಂಡು, ಪಲ್ಯ ಮಾಡಿಕೊಂಡು ಕೂಡ ಸೇವಿಸಬಹುದು. ದೇಹಕ್ಕೆ ಗಾಯಗಳಾದಾಗ ಇದರ ರಸವನ್ನು ಹಚ್ಚುವುದರಿಂದ ಬೇಗ ಗುಣವಾಗುತ್ತದೆ. ಇಷ್ಟು ಉಪಯೋಗ ಇರುವ ಈ ಕಾಡು ಬಸಳೆ ಸೊಪ್ಪನ್ನು ತಪ್ಪದೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now